ಬ್ರೆಜಿಲ್‌ ಬುಡಕಟ್ಟಿನ ಕೊನೆ ಪುರುಷನ ಸಾವು, ಜನಾಂಗ ಉಳಿಸಲು ಹೆಣ್ಮಕ್ಕಳ ಪ್ರಯತ್ನ!

By Suvarna News  |  First Published Dec 5, 2023, 2:49 PM IST

ವಿಶ್ವದಾದ್ಯಂತ ಅನೇಕ ಬುಡಕಟ್ಟು ಜನಾಂಗವಿದೆ. ಕೆಲವೊಂದರ ಹೆಸರು ಮಾತ್ರ ಇದ್ದು, ಜನಾಂಗದಲ್ಲಿ ಜನರಿಲ್ಲ. ಈಗ ಮತ್ತೊಂದು ಜನಾಂಗದ ಸ್ಥಿತಿಯೂ ಅದೇ ರೀತಿ ಇದ್ದು, ತಮ್ಮ ಪದ್ಧತಿ ಉಳಿಸಲು ಹೆಣ್ಮಕ್ಕಳು ಟೊಂಕಕಟ್ಟಿ ನಿಂತಿದ್ದಾರೆ. 
 


ನಾವು ಪ್ರತಿ ದಿನ ಹೊಸ ಹೊಸ ಪ್ರಪಂಚಕ್ಕೆ ತೆರೆದುಕೊಳ್ತಿದ್ದೇವೆ. ತಂತ್ರಜ್ಞಾನ ಮುಂದುವರೆದಿದೆ. ಆಧುನೀಕ ಸೌಲಭ್ಯಗಳು ಹೆಚ್ಚಾಗಿವೆ. ದೂರದಲ್ಲಿರುವ ಜನರನ್ನು ಆರಾಮವಾಗಿ ಸಂಪರ್ಕಿಸಿ ನಾವು ಮಾತನಾಡಬಹುದಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ಆಗಿದ್ದು, ದೊಡ್ಡ ದೊಡ್ಡ ಖಾಯಿಲೆಗಳನ್ನು ಗುಣಪಡಿಸಲಾಗ್ತಿದೆ. ಒಂದ್ಕಡೆ ಇಷ್ಟೊಂದು ಮುಂದುವರೆದ ಜಗತ್ತಿದ್ರೆ ಮತ್ತೊಂದು ಕಡೆ ಈ ಎಲ್ಲ ತಂತ್ರಜ್ಞಾನದಿಂದ, ಜನರಿಂದ ದೂರ, ಕಾಡಿನಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗ ಈಗ್ಲೂ ಹಿಂದಿನಂತೆ ಇದೆ. ವಿಶ್ವದಾದ್ಯಂತ ಅನೇಕ ಬುಡಕಟ್ಟು ಜನಾಂಗವಿದೆ. ಕೆಲವರ ಬಗ್ಗೆ ನಮಗೆ ಈಗ್ಲೂ ಸರಿಯಾದ ಮಾಹಿತಿ ಇಲ್ಲ. ಮತ್ತೆ ಕೆಲ ಬುಡಕಟ್ಟು ಜನಾಂಗ ತನ್ನ ಕೆಲ ವಿಚಿತ್ರ ಪದ್ಧತಿಗಳಿಂದ ಸುದ್ದಿಯಲ್ಲಿರುತ್ತದೆ.

ಅವರು ಆಧುನಿಕ ಯುಗದಿಂದ ಸಂಪೂರ್ಣ ದೂರವಿರುವ ಕಾರಣ ಹಾಗೂ ನಗರ, ಹಳ್ಳಿಗಳ ಜನರ ಜೊತೆ ಸಂಪರ್ಕ ಇಟ್ಟುಕೊಳ್ಳದ ಕಾರಣ ಅವರಿಗೆ ಬರುವ ರೋಗ (Disease) ಗಳ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ. ಅದಕ್ಕೆ ಸೂಕ್ತ ಚಿಕಿತ್ಸೆ (Treatment) ಯೂ ಸಿಗೋದಿಲ್ಲ. ಇದೇ ಕಾರಣಕ್ಕೆ ಬುಡಕಟ್ಟು (Tribe) ಜನಾಂಗದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು. ಅನೇಕ ಬುಡಕಟ್ಟು ಜನಾಂಗ ಇದೇ ಸಾಂಕ್ರಾಮಿಕ ರೋಗದಿಂದ ಸಂಪೂರ್ಣ ನಶಿಸಿಹೋಗಿದೆ. ಕೆಲ ಬುಡಕಟ್ಟು ಜನಾಂಗದ ಹೆಸರಿದೆ ಹೊರತು ಅದನ್ನು ಮುಂದುವರೆಸಲು ಜನರಿಲ್ಲ.

Tap to resize

Latest Videos

ರೋಬೋಟ್ ಕೆಲಸ ಕಿತ್ಕೊಂಡು, ಹಾಗೆಯೇ ಕೆಲಸ ಮಾಡೋ ಈ ಹೆಣ್ಣಿನ ಜಾಣ್ಮೆಗೆ ಏನನ್ನೋದು?

ಈಗ ಬ್ರೆಜಿಲ್ ನ ಜುಮಾ ಬುಡಕಟ್ಟು ಕುಟುಂಬ ಸುದ್ದಿ ಮಾಡಿದೆ. ಬ್ರೆಜಿಲ್ ನ ಕಾಡುಗಳಲ್ಲಿ ನೀವು ಅನೇಕ ಬುಡಕಟ್ಟು ಜನಾಂಗವನ್ನು ನೋಡಬಹುದು. ಅವರು ಕೂಡ ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೊರೊನಾ ಅನೇಕ ಬುಡಕಟ್ಟು ಜನರನ್ನು ಬಲಿಪಡೆದಿದೆ. ಜುಮಾ ಬುಡಕಟ್ಟು ಜನಾಂಗ ಕೂಡ ಕೊರೊನಾ ಸಂದರ್ಭದಲ್ಲಿ ಸಂಪೂರ್ಣ ನಾಶವಾಗಿದೆ ಎನ್ನುವ ಮಾತಿದೆ. 

ಜುಮಾ ಬುಡಕಟ್ಟು ಜನಾಂಗದ ಕೊನೆಯ ವ್ಯಕ್ತಿ 90 ವರ್ಷದ ಅರುಕ ಜುಮಾ ಕೊರೊನಾ ಸಮಯದಲ್ಲಿ ಸಾವನ್ನಪ್ಪಿದ್ದರು. ಅವರನ್ನು ಬೋಟ್ ಮೂಲಕ ಆಸ್ಪತ್ರೆಗೆ ತರುವ ಪ್ರಯತ್ನ ನಡೆದಿತ್ತು. ಸತತ ಎರಡು ಗಂಟೆಗಳ ಕಾಲ ಬೋಟ್ ನಲ್ಲಿ ಪ್ರಯಾಣ ಮಾಡಿ, ಆಸ್ಪತ್ರೆಗೆ ಸೇರಿಸಬೇಕು ಎನ್ನುವಷ್ಟರಲ್ಲಿ ಅರುಕ ಜುಮಾ ಸಾವನ್ನಪ್ಪಿದ್ದರು. ಅರುಕ ಜುಮಾ ನಂತ್ರ ಜುಮಾ ಬುಡಕಟ್ಟು ಜನಾಂಗದಲ್ಲಿ ಯಾವುದೇ ವ್ಯಕ್ತಿ ಬದುಕಿಲ್ಲ ಎಂದು ಭಾವಿಸಲಾಗಿತ್ತು. ಆದ್ರೀಗ ಖುಷಿ ಸುದ್ದಿಯೊಂದು ಸಿಕ್ಕಿದೆ. ಜುಮಾ ಬುಡಕಟ್ಟು ಕುಟುಂಬದಲ್ಲಿ ಇನ್ನೂ ಮೂವರು ಮಹಿಳೆಯರು ಬದುಕುಳಿದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 

ಗಂಡ ಬರದಿದ್ದರೆ ಅಷ್ಟೇ, ಅಮ್ಮ-ಮಕ್ಕಳ ಹೊಸ ಟ್ರಾವೆಲ್ ಈಗ ಟ್ರೆಂಡ್!

ಕ್ರಮೇಣ ನಶಿಸಿದ ಜುಮಾ ಬುಡಕಟ್ಟು ಜನಾಂಗ : ಅಮೆಜಾನ್ ಕಾಡಿನಲ್ಲಿ ಮೀನುಗಾರಿಕೆ, ಬೇಟೆ ಮತ್ತು ಬೇಸಾಯದಲ್ಲಿ ತೊಡಗಿರುವ ಬುಡಕಟ್ಟು ಜನಾಂಗ ಇದು.  20 ನೇ ಶತಮಾನದ ಆರಂಭದಲ್ಲಿ, ಜುಮಾ ಗುಂಪಿನ ಸದಸ್ಯರ ಸಂಖ್ಯೆ ಸುಮಾರು ಹದಿನೈದು ಸಾವಿರ ಆಗಿತ್ತು. ಇದು 1990 ರ ದಶಕದಲ್ಲಿ ಕೇವಲ ಆರಕ್ಕೆ ಇಳಿಯಿತು. ಜುಮಾ ಸಮುದಾಯವು ರಬ್ಬರ್ ಕಳ್ಳಸಾಗಣೆದಾರರಿಂದ ಹತ್ಯಾಕಾಂಡವನ್ನು ಎದುರಿಸಿತು. ಸಮುದಾಯವು ಕೆಲವು ಮಾರಣಾಂತಿಕ ರೋಗಗಳಿಗೆ ಒಳಗಾಯಿತು. ಕೊನೆಯಲ್ಲಿ ಒಂದು ಜುಮಾ ಕುಟುಂಬ ಮಾತ್ರ ಉಳಿದುಕೊಂಡಿತ್ತು. ಜುಮಾದ ಕೊನೆ ಪುರುಷ ಅರುಕಾಗೆ ಮೂವರು ಹೆಣ್ಣು ಮಕ್ಕಳಿದ್ದರು. ಅವರೇ ಈಗ ಬದುಕುಳಿದಿದ್ದಾರೆ. ಆದ್ರೆ ಆ ಹೆಣ್ಣು ಮಕ್ಕಳಿಗೆ ಜುಮಾ ಬುಡಕಟ್ಟು ಜನಾಂಗದ ಪುರುಷರನ್ನು ಮದುವೆಯಾಗುವ ಅವಕಾಶ ಇರಲಿಲ್ಲ. ಹಾಗಾಗಿ ಅವರು ಮತ್ತೊಂದು ಬುಡಕಟ್ಟು ಸಮುದಾಯದವರನ್ನು ಮದುವೆಯಾಗಿದ್ದಾರೆ.  ಈ ಸಮುದಾಯಗಳ ಪಿತೃಪ್ರಭುತ್ವದ ವ್ಯವಸ್ಥೆಯ ಪ್ರಕಾರ, ಅರುಕನ ಮೊಮ್ಮಕ್ಕಳು ಮತ್ತು ಅವರ ಮರಿಮಕ್ಕಳು ಮಾತ್ರ ಅವರ ಹೆಸರನ್ನು ತಮ್ಮ ಹೆಸರಿನೊಂದಿಗೆ ಬಳಸಬಹುದು. ಇದರರ್ಥ ಅವರನ್ನು ಮಾತ್ರ ಜುಮಾ ಸಮುದಾಯದ ಭಾಗವೆಂದು ಪರಿಗಣಿಸಲಾಗುತ್ತದೆ. ಅವರ ತಾಯಿಯ ಕುಟುಂಬವನ್ನಲ್ಲ. ಆದ್ರೆ ಅರುಕನ ಹೆಣ್ಮಕ್ಕಳು ಬೇರೆ ಕುಟುಂಬಕ್ಕೆ ಸೇರಿದ್ರೂ ತಮ್ಮ ಮಕ್ಕಳಿಗೆ ಜುಮಾ ಕುಟುಂಬದ ಬಗ್ಗೆ ಮಾಹಿತಿ ನೀಡಿ, ಅದನ್ನು ಉಳಿಸುವ ಪ್ರಯತ್ನ ನಡೆಸ್ತಿದ್ದಾರೆ. 
 

click me!