ರೋಬೋಟ್ ಕೆಲಸ ಕಿತ್ಕೊಂಡು, ಹಾಗೆಯೇ ಕೆಲಸ ಮಾಡೋ ಈ ಹೆಣ್ಣಿನ ಜಾಣ್ಮೆಗೆ ಏನನ್ನೋದು?

By Suvarna News  |  First Published Dec 4, 2023, 4:56 PM IST

ಪ್ರತಿಯೊಬ್ಬರಲ್ಲೂ ಒಂದೊಂದು ಟ್ಯಾಲೆಂಟ್ ಇದ್ದೇ ಇದೆ. ಅದನ್ನು ಪತ್ತೆ ಮಾಡಿ, ಅದಕ್ಕೆ ಹೊರ ರೂಪ ನೀಡಬೇಕು. ಆಗ ಮಾತ್ರ ಹಣದ ಜೊತೆ ಪ್ರಸಿದ್ಧಿ ಸಿಗಲು ಸಾಧ್ಯ. ಈ ಹುಡುಗಿ ಕೂಡ ತನ್ನ ಕಲೆಗೆ ಬ್ಯುಸಿನೆಸ್ ರೂಪ ನೀಡಿದ್ದಾಳೆ.
 


ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಹಾಗಾಗಿ ಮನುಷ್ಯನ ಕೆಲಸ ಬಹಳ ಕಡಿಮೆ ಆಗಿದೆ. ಇದೇ ಅನೇಕರ ಹೊಟ್ಟೆ ಮೇಲೆ ಹೊಡೆದಿದೆ. ಮನುಷ್ಯ ಮಾಡ್ತಿದ್ದ ಕೆಲಸಗಳನ್ನು ಯಂತ್ರ ಮಾಡುವ ಕಾರಣ ಅನೇಕರಿಗೆ ಕೆಲಸ ಇಲ್ಲದಂತಾಗಿದೆ. ವಿಶ್ವದ ಅನೇಕ ಕಂಪನಿಗಳು ಮನುಷ್ಯನಿಗೆ ಕೆಲಸ ನೀಡುವ ಬದಲಾಗಿ ಎಐನಿಂದ ಕೆಲಸ ಮಾಡಿಸ್ತಿದೆ. ಈ ತಂತ್ರಜ್ಞಾನ ಹೆಚ್ಚು ಆಕರ್ಷಕವಾಗಿದ್ದು, ಲಾಭಕರ ಎಂಬುದು ಅನೇಕರ ಅಭಿಪ್ರಾಯ. ಕೆಲ ಹೊಟೇಲ್, ಕಂಪನಿಗಳಲ್ಲಿ ನೀವು ರೊಬೋಟ್ ಗಳನ್ನು ನೋಡಬಹುದು. ರೊಬೋಟ್ ಸರ್ವ್ ಮಾಡೋದನ್ನು ನೋಡಲು ಗ್ರಾಹಕರು ಈ ಹೊಟೇಲ್ ಗಳಿಗೆ ಬರ್ತಾರೆ. ಹಾಗೆ ಸಿಬ್ಬಂದಿಗೆ ಕೊಡುವ ಸಂಬಳ ಕೂಡ ಉಳಿಯುತ್ತೆ ಎನ್ನುವುದು ಈ ಕಂಪನಿಗಳ ಪ್ಲಾನ್. ರೊಬೋಟ್, ತಂತ್ರಜ್ಞಾನ ಜನರಿಗೆ ಕೆಲಸ ಇಲ್ಲದಂತೆ ಮಾಡಿದ್ದು ಎಷ್ಟು ಸತ್ಯವೋ ಈ ಹುಡುಗಿ ರೊಬೋಟ್ ಗೆ ಕೆಲಸ ಇಲ್ಲದಂತೆ ಮಾಡಿದ್ದಾಳೆ ಎಂಬುದು ಅಷ್ಟೇ ಸತ್ಯ. ಆಕೆ ಅಂಥದ್ದೇನು ಮಾಡಿದ್ದಾಳೆ ಎಂಬ ವಿವರ ಇಲ್ಲಿದೆ. 

ಆಕೆ ಚೀನಾ (China) ದ ಹುಡುಗಿ. ಈಕೆಯ ವಿಶೇಷತೆ ರೋಬೋಟ್ (Robot) ನಂತೆ ಕೆಲಸ ಮಾಡೋದು. ಚೀನಾದ ಚಾಂಗ್‌ಕಿಂಗ್‌ನಲ್ಲಿರುವ ಹಾಟ್‌ಪಾಟ್  ರೆಸ್ಟೋರೆಂಟ್‌ (Restaurant) ನಲ್ಲಿ ಆಂಡ್ರಾಯ್ಡ್ ಪರಿಚಾರಿಕೆ ಅಂದ್ರೆ ರೋಬೋಟ್ ಕೆಲಸ ಮಾಡ್ತಿದೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಹರಿದಾಡ್ತಾ ಇತ್ತು. ಇದನ್ನು ಕೇಳಿದ ಜನರು ಹಾಟ್ ಪಾಟ್ ನತ್ತ ಬಂದಿದ್ದರು. ಮನುಷ್ಯರನ್ನು ಹೆಚ್ಚು ಹೋಲುವ ರೋಬೋಟ್ ನೋಡಿ ದಂಗಾಗಿದ್ದರು. ರೆಸ್ಟೋರೆಂಟ್ ನಲ್ಲಿ ಗ್ರಾಹಕರನ್ನು ಸ್ವಾಗತಿಸೋದ್ರಿಂದ ಹಿಡಿದು, ಗ್ರಾಹಕರಿಗೆ ಸರ್ವಿಸ್ ನೀಡುವವರೆಗೆ ಎಲ್ಲ ಕೆಲಸವನ್ನು ಈ ರೋಬೋಟ್ ಅಚ್ಚುಕಟ್ಟಾಗಿ ಮಾಡ್ತಾ ಇತ್ತು. ಇದನ್ನು ನೋಡಿ ಗ್ರಾಹಕರು ಚಕಿತಗೊಂಡಿದ್ದರು. 

Tap to resize

Latest Videos

ಎಲಾನ್‌ ಮಸ್ಕ್‌ಗೆ ಸ್ಪರ್ಧೆ ನೀಡುವಂಥಾ 1300 ಕೋಟಿಯ ಬೃಹತ್‌ ಕಂಪೆನಿ ಆರಂಭಿಸಿದ ಇಸ್ರೋ ಮಾಜಿ ಉದ್ಯೋಗಿ!

 ಅಕ್ಕಪಕ್ಕದ ರೆಸ್ಟೋರೆಂಟ್ ನವರು ರೋಬೋಟ್ ಬಗ್ಗೆ ಮಾಹಿತಿ ಪಡೆಯಲು ಈ ರೆಸ್ಟೋರೆಂಟ್ ಗೆ ಬಂದಿದ್ದಾರೆ.  ರೋಬೋಟ್ ನ್ನು ಸರಿಯಾಗಿ ಪರಿಶೀಲಿಸಿದಾಗ ಅದು ರೋಬೋಟ್ ಅಲ್ಲ, ರೋಬೋಟ್ನಂತೆ ವರ್ತಿಸುತ್ತಿರುವ ಹುಡುಗಿ ಎಂಬುದು ಗೊತ್ತಾಗಿದೆ. ರೋಬೋಟ್ನಾಚುವಂತೆ ಈ ಹುಡುಗಿ ಕೆಲಸ ಮಾಡ್ತಾಳೆ. ತನ್ನ ಬುದ್ಧಿವಂತಿಕೆಯಿಂದ ರೋಬೋಟ್ ರೀತಿಯಲ್ಲೇ ವರ್ತಿಸುತ್ತಾಳೆ. ಸರಿಯಾಗಿ ವಿಚಾರಿಸಿದಾಗ ಆಕೆ 26 ವರ್ಷದ ಕಿನ್ ಥಿ ಎನ್ನುವುದು ಗೊತ್ತಾಗಿದೆ. ಆಕೆಯೇ ಈ ಹಾಟ್ ಪಾಟ್ ರೆಸ್ಟೋರೆಂಟ್ ಮಾಲೀಕೆ. ರೋಬೋಟಿಕ್ ಡಾನ್ಸ್ ಮಾಡೋದ್ರಲ್ಲಿ ಕಿನ್ ಥಿ ಪ್ರಸಿದ್ಧಿಪಡೆದಿದ್ದಾಳೆ. 

ಕಿನ್ ಥಿಗೆ ಡಾನ್ಸ್ ಅಂದ್ರೆ ತುಂಬಾ ಇಷ್ಟ. ಅದ್ರಲ್ಲೂ ರೋಬೋಟ್ ಡಾನ್ಸ್ ಆಕೆಯ ಫೆವರೆಟ್. ಮೂರು ವರ್ಷಗಳ ಹಿಂದೆ ಕಿನ್ ಥಿ, ಹಾಟ್ ಪಾಟ್ ಹೆಸರಿನ ರೆಸ್ಟೋರೆಂಟ್ ಶುರು ಮಾಡಿದಾಗ ಹೊಸದೇನಾದ್ರೂ ಮಾಡಬೇಕು ಎಂದು ಆಕೆ ಮತ್ತು ಆಕೆ ಸ್ನೇಹಿತರು ಆಲೋಚನೆ ಮಾಡಿದ್ದರಂತೆ. ಜನರಿಗೆ ಸಂಪೂರ್ಣ ಮನರಂಜನೆ ನೀಡುವ ಮೂಲಕ ಅವರನ್ನು ಸೆಳೆಯುವುದು ಇವರ ಗುರಿಯಾಗಿತ್ತು. 

ಅತೀ ಕಿರಿಯ ವಯಸ್ಸಲ್ಲಿ ಬರೋಬ್ಬರಿ 2602 ಕೋಟಿ ಸಂಸ್ಥೆಯ ಒಡತಿ ಅವನಿ ದಾವ್ಡಾ; ಟಾಟಾ ಜೊತೆ ಇರೋ ಸಂಬಂಧವೇನು?

ಕಿನ್ ಥಿ ಕಲೆಯಲ್ಲಿ ತುಂಬಾ ಸೂಕ್ಷ್ಮತೆಯಿದೆ. ನೀವು ದೂರದಿಂದ ನೋಡಿದ್ರೆ ಅಥವಾ ಹತ್ತಿರದಿಂದ ಕಿನ್ ಥಿ ಮಾತನಾಡಿಸಿದಾಗ್ಲೂ ಅದು ರೋಬೋಟ್ ಅಲ್ಲ, ಮನುಷ್ಯಳು ಎಂಬುದನ್ನು ಪತ್ತೆ ಮಾಡೋದು ಕಷ್ಟ. ರೋಬೋಟ್ ಅಂತೆ ಕಿನ್ ಥಿ ನಡೆಯುತ್ತಾಳೆ. ಅಲ್ಲದೆ ಅದರಂತೆ ಮೇಕಪ್ ಮಾಡಿಕೊಳ್ತಾಳೆ. ರೋಬೋಟ್ ನಂತೆ ಆಕೆ ಪ್ರತಿಕ್ರಿಯೆ ನೀಡುವ ಕಾರಣ, ಇದು ರೋಬೋಟ್ ಅಲ್ಲ ಎನ್ನಲು ಸಾಧ್ಯವೆ ಇಲ್ಲ. ಹಾಟ್ ಪಾಟ್ ಗೆ ಜನರು ಬರೀ ಆಹಾರ ಸೇವನೆಗೆ ಬರೋದಿಲ್ಲ. ಕಿನ್ ಥಿ ಟ್ಯಾಲೆಂಟನ್ನು ಜನರು ಮೆಚ್ಚಿದ್ದಾರೆ. ಹಾಗಾಗಿ ಆಕೆ ಜೊತೆ ಮಾತನಾಡಲು ಗ್ರಾಹಕರು ಬರ್ತಿರುತ್ತಾರೆ.  
 

click me!