ಗಂಡ ಬರದಿದ್ದರೆ ಅಷ್ಟೇ, ಅಮ್ಮ-ಮಕ್ಕಳ ಹೊಸ ಟ್ರಾವೆಲ್ ಈಗ ಟ್ರೆಂಡ್!

By Suvarna News  |  First Published Dec 4, 2023, 3:29 PM IST

ಹೊಸ ಜಾಗ ನೋಡ್ಬೇಕು ಎನ್ನುವ ಆಸೆ ಇದೆ. ಆದ್ರೆ ಯಜಮಾನರಿಗೆ ಪುರುಸೊತ್ ಆಗ್ತಿಲ್ಲ ಅಂತಾ ಬೇಸರಪಟ್ಟುಕೊಳ್ಳುವ ಅಮ್ಮಂದಿರು ನೀವಾಗಿದ್ರೆ ಚಿಂತೆ ಬೇಡ. ಮಕ್ಕಳ ಜೊತೆ ಬ್ಯಾಗ್ ಪ್ಯಾಕ್ ಮಾಡಿ ಹೊರಡ್ತಾ ಇರಿ. ಈ ಸಂಸ್ಥೆ ನಿಮಗೊಂದು ಅಧ್ಬುತ ಟ್ರಿಪ್ ಅನುಭವ ನೀಡ್ತಿದೆ.
 


ಮಕ್ಕಳಾದ್ಮೇಲೆ ಮಾರುಕಟ್ಟೆಗೆ ಹೋಗೋದೇ ಕಷ್ಟ. ಇನ್ನು ಪ್ರವಾಸಕ್ಕಾ ಅಂತಾ ಅನೇಕರು ಪ್ರಶ್ನೆ ಮಾಡ್ತಾರೆ. ಮಕ್ಕಳು ಚಿಕ್ಕವರಿರುವಾಗ ಅವರ ಆರೋಗ್ಯ, ಆಹಾರದ ಬಗ್ಗೆ ಹೆಚ್ಚು ಗಮನ ನೀಡ್ಬೇಕಾಗುತ್ತದೆ. ಅವರು ದೊಡ್ಡವರಾಗ್ತಿದ್ದಂತೆ ಅವರ ಶಿಕ್ಷಣದ ಮೇಲೆ ಗಮನ ಹೋಗುತ್ತದೆ. ಪತಿ ಕೆಲಸದಲ್ಲಿ ಬ್ಯುಸಿ ಇರುವ ಕಾರಣ ಮಕ್ಕಳ ಜೊತೆ ತಾಯಂದಿರುವ ಮಾತ್ರ ಪ್ರವಾಸಕ್ಕೆ ಹೋಗೋದು ಅಪರೂಪದಲ್ಲಿ ಅಪರೂಪ. ದೂರದ ಊರಿಗೆ ಪ್ರವಾಸಕ್ಕೆ ಹೋಗಬೇಕೆಂದ್ರೆ ಸಾಕಷ್ಟು ತಯಾರಿ ಬೇಕು. ಮಕ್ಕಳನ್ನು ಸಂಭಾಳಿಸೋದು ಅಷ್ಟು ಸುಲಭವೂ ಅಲ್ಲ. ಮಹಿಳೆ ಒಬ್ಬಳೇ ಮಕ್ಕಳ ಜೊತೆ ಪ್ರವಾಸಕ್ಕೆ ಹೋದ್ರೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪುರುಷರಿಗೆ ಎಲ್ಲ ಸಂದರ್ಭದಲ್ಲೂ ಮಕ್ಕಳು, ಪತ್ನಿ ಜೊತೆ ಪ್ರವಾಸಕ್ಕೆ ಬರೋದು ಸಾಧ್ಯವಾಗೋದಿಲ್ಲ. ಪತಿ ಜೊತೆಗೆ ಬರಲ್ಲ, ಮಕ್ಕಳನ್ನು ಸಂಭಾಳಿಸೋಕೆ ಆಗಲ್ಲ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಆಸಕ್ತಿ ಇದ್ರೂ ಪ್ರವಾಸದ ಆಲೋಚನೆ ಬಿಡ್ತಾರೆ. ಆದ್ರೆ ಈಗ ಕಾಲ ಸ್ವಲ್ಪ ಬದಲಾಗಿದೆ. ಮಕ್ಕಳ ಜೊತೆ ಪ್ರವಾಸಕ್ಕೆ ಹೋಗುವ ಅಮ್ಮಂದಿರ ಟ್ರೆಂಡ್ ಶುರುವಾಗಿದೆ. 

ಮಕ್ಕಳ ಜೊತೆ ನಾವೊಬ್ಬರೇ ಪ್ರವಾಸ (Trip) ಕ್ಕೆ ಹೋಗೋದು ಹೇಗಪ್ಪ ಅಂತಾ ಚಿಂತೆ ಮಾಡ್ಬೇಕಾಗಿಲ್ಲ. ಮಕ್ಕಳ ಜೊತೆ ನೀವೂ ಹೊಸ ಹೊಸ ಜಾಗಗಳನ್ನು ನೋಡ್ಬೇಕು, ಪ್ರವಾಸವನ್ನು ಎಂಜಾಯ್ ಮಾಡ್ಬೇಕು ಅಂದ್ರೆ ಇಂದೇ ಪ್ಯಾಕಿಂಗ್ (packing) ಶುರು ಮಾಡಿ. ನಿಮ್ಮ ಕಷ್ಟವನ್ನು ನೋಡಿದ  ಡಾ. ನಿಕಿತಾ ಮಾಥುರ್ ಮತ್ತು ಡಾ. ಸಾಕ್ಷಿ ಗುಲಾಟಿ ನಿಮ್ಮ ಆಸೆ ಈಡೇರಿಸಲು ಮುಂದಾಗಿದ್ದಾರೆ.

ಆಫ್ರಿಕಾ ಟ್ರಿಪ್‌ನಲ್ಲಿ ಬೀಫ್‌ & ಪೋರ್ಕ್‌ ಫುಡ್‌ ಇಷ್ಟ ಆಯ್ತು ಎಂದ ನಟಿ, ಇದೆಂಥಾ ಕರ್ಮ ಎಂದ ನೆಟ್ಟಿಗರು!

Tap to resize

Latest Videos

ಪ್ಯಾಕ್ ವಿತ್ ಮಾಮ್ (BWM) - ಟ್ರಾವೆಲ್ ವಿತ್ ಕಿಡ್ಸ್ :  ಡಾ. ನಿಕಿತಾ ಮಾಥುರ್ ಮತ್ತು ಡಾ. ಸಾಕ್ಷಿ ಗುಲಾಟಿ  ಅವರು ಬ್ಯಾಕ್ ಪ್ಯಾಕ್ ವಿತ್ ಮಾಮ್ (BWM) ಮತ್ತು ಟ್ರಾವೆಲ್ ವಿತ್ ಕಿಡ್ಸ್ (TWK) ಹೆಸರಿನ ಎರಡು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅನೇಕ ತಾಯಂದಿರು ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಆದರೆ ಮಕ್ಕಳ ಜವಾಬ್ದಾರಿ ಅವರ ಮೇಲಿರುವ ಕಾರಣ ಅವರಿಗೆ ಪ್ರವಾಸಕ್ಕೆ ಹೋಗುವ ಅವಕಾಶವೇ ಸಿಗೋದಿಲ್ಲ. ಅಂತಹ ತಾಯಂದಿರು ನಮ್ಮ ಸಂಸ್ಥೆಯ ಮೂಲಕ ಆರಾಮಾಗಿ ಪ್ರವಾಸ ಮಾಡಬಹುದು ಎಂದು ಈ ಸಂಸ್ಥೆಯ ಸ್ಥಾಪಕರು ಹೇಳುತ್ತಾರೆ.

ವಿಶ್ವದ ಬಲು ದುಬಾರಿ ದೇಶಗಳಿವು… ಇಲ್ಲಿ ಹೋಗೊ ಮುನ್ನ 100 ಬಾರಿ ಯೋಚ್ನೆ ಮಾಡ್ಬೇಕು

ಈ ಎರಡು ಕಂಪನಿ ಮೂಲಕ ಅನೇಕ ತಾಯಂದಿರಿಗೆ ಪ್ರವಾಸದ ಭಾಗ್ಯ  : ಪ್ಯಾಕ್ ವಿತ್ ಮಾಮ್ - ಟ್ರಾವೆಲ್ ವಿತ್ ಕಿಡ್ಸ್ ಈ ಟ್ರಾವೆಲ್ ಎರಡು ಸಂಸ್ಥೆ ಕಳೆದ ಎರಡು ವರ್ಷದಿಂದ ಸೇವೆ ಸಲ್ಲಿಸುತ್ತಿದೆ. ಈ ಎರಡು ವರ್ಷಗಳಲ್ಲಿ ದೇಶದಲ್ಲಿ ಈ ಸಂಸ್ಥೆ ಸುಮಾರು 25 ಯಾತ್ರೆಗಳನ್ನು ಪೂರೈಸಿದೆ. ಪ್ರತಿ ಬಾರಿಯೂ ಸುಮಾರು 8ರಿಂದ 10 ತಾಯಂದಿರು ತಮ್ಮ ಮಕ್ಕಳ ಜೊತೆ ಪ್ರವಾಸ ಕೈಗೊಂಡಿದ್ದಾರೆ.

ಮಕ್ಕಳಿಗೆ ಎಂಜಾಯ್ – ಅಮ್ಮಂದಿರಿಗೆ ರಿಲೀಫ್ :  ಈ ಟ್ರಾವೆಲ್ ವಿತ್ ಕಿಡ್ ನಲ್ಲಿ ಮಕ್ಕಳು ಹೆಚ್ಚು ಎಂಜಾಯ್ ಮಾಡುತ್ತಾರೆ. ತಮ್ಮ ವಯಸ್ಸಿನ ಮಕ್ಕಳ ಜೊತೆ ಬೆರೆತು ಹೊಸದನ್ನು ಕಲಿಯಲು ಮಕ್ಕಳಿಗೆ ಅವಕಾಶ ಸಿಗುತ್ತದೆ. ತಂದೆ – ತಾಯಿ ಜೊತೆ ಪ್ರವಾಸಕ್ಕೆ ಹೋಗುವ ಮಕ್ಕಳಿಗಿಂತ ಮಕ್ಕಳ ಜೊತೆ ಮಕ್ಕಳು ಪ್ರವಾಸಕ್ಕೆ ಹೋದಾಗ ಕಲಿಯೋದು ಹೆಚ್ಚು. ಎಲ್ಲ ಮಕ್ಕಳೂ ಒಂದಾಗಿ ಆಟವಾಡುತ್ತ, ಕುಣಿಯುತ್ತ ಪ್ರವಾಸದ ಮಜವನ್ನು ಅನುಭವಿಸುತ್ತಾರೆ. ಮಕ್ಕಳು ಹೀಗೆ ಬೇರೆ ಮಕ್ಕಳೊಂದಿಗೆ ಬರೆಯುವುದರಿಂದ ಅವರಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡುತ್ತದೆ ಮತ್ತು ಅವರಿಗೆ ಹೊಸ ಸ್ನೇಹಿತರು ಸಿಗುತ್ತಾರೆ. ತಾಯಂದಿರಿಗೂ ಈ ಟ್ರಾವೆಲ್ ಕಂಪನಿ ನೆರವಾಗಿದೆ. ಭದ್ರತೆ, ಮಕ್ಕಳ ಆರೈಕೆ ಸೇರಿದಂತೆ ಯಾವುದೇ ಟೆನ್ಷನ್ ಇಲ್ಲದೆ ಪ್ರವಾಸ ಮಾಡಬಹುದು. ಮನೆಯ ಕೆಲಸ, ಮಕ್ಕಳ ಆರೈಕೆ ಮಧ್ಯೆ ಸಣ್ಣ ರಿಲ್ಯಾಕ್ಸ್ ಇಲ್ಲಿ ಸಿಗುತ್ತದೆ. 
 

click me!