ಪ್ರತಿ ಬಾರಿ ಹೊಸ ಸ್ಥಳ, ಹೊಸ ದೇಶ ನೋಡ್ಬೇಕು, ಆದ್ರೆ ಕಡಿಮೆ ಖರ್ಚಿನಲ್ಲಿ ಎನ್ನುವವರು ಫುಕೆಟ್ ಪ್ಲಾನ್ ಮಾಡ್ಬಹುದು. ಗೋವಾ, ಮಾಲ್ಡೀವ್ಸ್ ನಷ್ಟೆ ಸುಂದರವಾಗಿರುವ ಇಲ್ಲಿ ರಜಾ ಕಳೆಯಲು ಸಾಕಷ್ಟು ಅವಕಾಶವಿದೆ.
ನಾಲ್ಕೈದು ದಿನ ರಜಾ ಸಿಕ್ಕರೆ ಪ್ರವಾಸದ ಪ್ಲಾನ್ ಮಾಡೋರೇ ಹೆಚ್ಚು. ಸಾಮಾನ್ಯವಾಗಿ ಪ್ರವಾಸ ಎಂದ ತಕ್ಷಣ ನೆನಪಾಗೋದು ಗೋವಾ. ವಿದೇಶದಲ್ಲಿ ಮಾಲ್ಡೀವ್ಸ್. ಗೋವಾ ಹಾಗೂ ಮಾಲ್ಡೀವ್ಸ್ ನೋಡಿಯಾಗಿದೆ, ಹೊಸ ಜಾಗಕ್ಕೆ ಹೋಗ್ಬೇಕು ಅಂತಿದ್ರೆ ನೀವು ಥಾಯ್ಲೆಂಡ್‌ನ ಫುಕೆಟ್ ಟ್ರಿಪ್ ಪ್ಲಾನ್ ಮಾಡಬಹುದು. ಇದು ಕೂಡ ನಿಮಗೆ ಅಧ್ಬುತ ಅನುಭವವನ್ನು ನೀಡುತ್ತದೆ. ಬುದ್ಧನ ದೇವಾಲಯಗಳು ಮತ್ತು ಪುರಾತನ ಸ್ಮಾರಕಗಳು ನಮ್ಮ ಪ್ರವಾಸವನ್ನು ಸಾರ್ಥಕಗೊಳಿಸುತ್ತವೆ. ನೀವು ಬಜೆಟ್ ಬಗ್ಗೆ ಚಿಂತಿಸಬೇಕಾಗಿಲ್ಲ. ಕಡಿಮೆ ಬಜೆಟ್ ನಲ್ಲಿ ನೀವು ಫುಕೆಟ್ ಸುತ್ತಿ ಬರಬಹುದು. ನಾವಿಂದು ಫುಕೆಟ್ ಪ್ರವಾಸದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
ಟಿಕೆಟ್ (Ticket) ಬುಕಿಂಗ್ ಹೀಗಿರಲಿ : ನಾಳೆ ಫುಕೆಟ್ (Phuket) ಗೆ ಪ್ರಯಾಣ ಬೆಳೆಸಬೇಕೆಂದ್ರೆ ನೀವು ಇಂದು ಟಿಕೆಟ್ ಬುಕ್ಕಿಂಗ್ ಮಾಡೋದು ಅಸಾಧ್ಯ. ಒಂದು ತಿಂಗಳ ಹಿಂದೆ ಟಿಕೆಟ್ ಬುಕ್ಕಿಂಗ್ ಮಾಡಿದ್ರೂ ನೀವು ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ. ಮೂರು ತಿಂಗಳ ಮೊದಲೇ ನೀವು ಫುಕೆಟ್ ಗೆ ಟಿಕೆಟ್ ಬುಕ್ಕಿಂಗ್ ಮಾಡಿದ್ರೆ ಬೆಸ್ಟ್. ಸಾಮಾನ್ಯವಾಗಿ ದೆಹಲಿಯಿಂದ ಫುಕೆಟ್ ಗೆ ನೀವು ಪ್ರಯಾಣ ಬೆಳೆಸಲು ಕನಿಷ್ಟ 17 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ಬೆಲೆ ಬದಲಾಗುತ್ತಿರುತ್ತದೆ. ಕಡಿಮೆ ದರದಲ್ಲಿ ಪ್ರಯಾಣ ಬೆಳೆಸಬೇಕೆಂದ್ರೆ ನೀವು ಮೊದಲೇ ಟಿಕೆಟ್ ಕಾಯ್ದಿರಿಸಬೇಕು.
ಉಳಿಯುವ ಸ್ಥಳ ಹೀಗಿರಲಿ : ಸಾಮಾನ್ಯವಾಗಿ ಪ್ರವಾಸಿ ಸ್ಥಳಗಳ ಹೊಟೇಲ್ ದರ ಹೆಚ್ಚಿರುತ್ತದೆ. ಹಾಗಾಗಿ ನೀವು ಹೊಟೇಲ್ ನಲ್ಲಿ ರೂಮ್ ಬುಕ್ ಮಾಡುವ ಬದಲು ಹೋಮ್ ಸ್ಟೇ ಇಲ್ಲವೆ ಹಾಸ್ಟೆಲ್ ಪ್ಲಾನ್ ಮಾಡಬಹುದು. ಫುಕೆಟ್ ನಲ್ಲಿ ಸಾಕಷ್ಟು ಹೋಮ್ ಸ್ಟೇ ಲಭ್ಯವಿದೆ. ಇಲ್ಲಿ ಬಾಡಿಗೆ ಕೂಡ ಕಡಿಮೆ ಇರುತ್ತದೆ. ಇಲ್ಲಿ ಹಾಸ್ಟೆಲ್ ಬಾಡಿಗೆ 1000 ರೂಪಾಯಿ ಇದ್ದರೆ ಆಗಿದ್ದರೆ ಹೋಂಸ್ಟೆ (Home Stay) ಸುಮಾರು 1700 ರೂಪಾಯಿಗೆ ಲಭ್ಯವಿದೆ. ಬುಕಿಂಗ್ ಮಾಡುವಾಗ ಉಪಹಾರ ಆಯ್ಕೆಯನ್ನು ಆರಿಸಲು ಮರೆಯದಿರಿ.
ಸುತ್ತಾಡಲು ಕಾರ್ ಬೇಡ, ಟುಕ್ ಟುಕ್ ಬಳಸಿ : ಫುಕೆಟ್ ನ ಸುತ್ತಮುತ್ತಲಿನ ಪ್ರವಾಸಿ ಸ್ಥಳ, ಮಾರುಕಟ್ಟೆ ಸುತ್ತಾಡಲು ನೀವು ಟ್ಯಾಕ್ಸಿ ಬುಕ್ ಮಾಡಬೇಡಿ. ನೀವು ಮೂರು ಗಾಲಿಯ ವಾಹನ ಟುಕ್ ಟುಕ್ ನಲ್ಲಿ ಪ್ರಯಾಣ ಬೆಳೆಸಿ. ಇದ್ರಿಂದ ನಿಮ್ಮ ಸಮಯದ ಜೊತೆ ಹಣ ಕೂಡ ಉಳಿಯುತ್ತದೆ.
ವೈಷ್ಟೋದೇವಿಯಿಂದ… ತಿರುವನಂತಪುರದವರೆಗೂ ನೀವು ನೋಡಲೇಬೇಕು ಈ ದೇಗುಲಗಳನ್ನು
ಫುಕೆಟ್ ನಲ್ಲಿದೆ ಈ ಎಲ್ಲ ಪ್ರವಾಸಿ ತಾಣ : ಫುಕೆಟ್‌ನಲ್ಲಿ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಹಾಗೆಯೇ ಮನರಂಜನೆಗೆ ಅವಕಾಶವಿದೆ. ನೀವು ಫಿ ಫಿ ಐಲ್ಯಾಂಡ್ ಟೂರ್, ಸಿಮಿಲಾನ್ ದ್ವೀಪಗಳ ಸ್ಪೀಡ್ ಬೋಟ್ ಟೂರ್, ಸೈಮನ್ ಕ್ಯಾಬರೆ ಶೋ ಆನಂದವನ್ನು ಪಡೆಯಬಹುದು. ಫುಕೆಟ್ ಡಾಲ್ಫಿನ್ ಶೋ ಜೊತೆಗೆ ಪ್ರಸಿದ್ಧ ಸ್ಪಾ ಮಸಾಜ್ ಸಹ ಆನಂದಿಸಬಹುದು. ಅಲ್ಲದೆ ಅಲ್ಲಿರುವ 140 ಅಡಿ ಎತ್ತರದ ಬುದ್ಧನ ಪ್ರತಿಮೆಯನ್ನು ನೋಡಬಹುದು. ಪ್ಯಾಕೇಜ್ ನಲ್ಲಿ ನೀವು ಪ್ಲಾನ್ ಮಾಡಿದ್ರೆ ಹಣ ಉಳಿಸಬಹುದು. ಫುಕೆಟ್‌ನಲ್ಲಿ ಬಿಗ್ ಬುದ್ಧ ಜಂಗಲ್ ಟ್ರೆಕ್ಕಿಂಗ್ ಮತ್ತು ಊಟದ ಪ್ಯಾಕೇಜ್ ಸುಮಾರು 3000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ನಾಲ್ಕೈದು ಪ್ಯಾಕೇಜ್ ಬೆಲೆ ನೋಡಿ ನಂತ್ರ ನೀವು ಕಡಿಮೆ ಬೆಲೆ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು.
Free Travel : ಈ 5 ಪ್ರಸಿದ್ಧ ಸ್ಥಳಗಳಲ್ಲಿ ನೀವು ಫ್ರೀ ಆಗಿ ಆಹಾರ, ವಸತಿ ಪಡೆಯಬಹುದು
ಸಸ್ಯಾಹಾರಕ್ಕೆ ಬೆಲೆ ಜಾಸ್ತಿ : ಫುಕೆಟ್ ನಲ್ಲಿ ಸಸ್ಯಾಹಾರಕ್ಕೆ ಬೆಲೆ ಜಾಸ್ತಿ. ಸಮುದ್ರಾಹಾರಗಳು ನಿಮಗೆ ಸುಲಭವಾಗಿ ಸಿಗುತ್ತವೆ. ದಾರಿ ಬದಿಯಲ್ಲಿ ನೀವು 65 ರೂಪಾಯಿಗೆ ಆಹಾರ ಸೇವನೆ ಮಾಡಬಹುದು. ಎರಡರಿಂದ ಮೂರು ದಿನ ಫುಕೆಟ್ ನಲ್ಲಿ ನೀವು ಉಳಿತಿರಿ ಎಂದಾದ್ರೆ ಸುಮಾರು 50 ಸಾವಿರ ಖರ್ಚು ಮಾಡ್ಬೇಕಾಗುತ್ತದೆ.