
ಹೈದರಾಬಾದ್ (ಮೇ 16,2023): ವಿಶೇಷ ಚೇತನ ವ್ಯಕ್ತಿಗಳನ್ನು ಯಾರೂ ಕಡೆಗಣಿಸುವಂತಿಲ್ಲ. ಅನೇಕ ವಿಶೇಷ ಚೇತನರು ಏನಾದ್ರೂ ಸಾಧನೆಗಳನ್ನು ಮಾಡಿರುತ್ತಾರೆ. ಕೆಲವರು ಸಾಮಾನ್ಯ ಜನರಿಗಿಂತ ದೊಡ್ಡ ದೊಡ್ಡ ಸಾಧನೆಗಳನ್ನೇ ಮಾಡ್ತಾರೆ. ಇದೇ ರೀತಿ, ಹೈದರಾಬಾದ್‌ನ ವಿಶೇಷ ಚೇತನ ವ್ಯಕ್ತಿಯಾಗಿರುವ ಪ್ರಸನ್ನ ಕುಮಾರ್ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೇವಲ ನಾಲ್ಕು ದಿನಗಳಲ್ಲಿ ಸುಮಾರು 3,700 ಕಿಮೀ ದೂರವನ್ನು ಬೈಕ್ ಸವಾರಿ ಮಾಡಿದ್ದಾರೆ. ಅದೂ, ಏಕಾಂಗಿಯಾಗಿ. ಕಣ್ಣಿಲ್ಲದಿದ್ದರೂ ಇವರು ಬೈಕ್ ಸವಾರಿ ಮಾಡಿದ್ದಾರೆ.
ಹೌದು, ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪ್ರಸನ್ನ ಕುಮಾರ್, ಬೆಳಗಿನ ಉಪಾಹಾರದ ಸಮಯದಲ್ಲಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ವಾಹನ ಚಲಾಯಿಸುವ ಆಲೋಚನೆ ಬಂತು ಎಂದು ಹೇಳಿದ್ದಾರೆ. ಅಲ್ಲದೆ, ತಮ್ಮ ಗೆಳೆಯರಿಗೆ ಹೋಲಿಸಿದರೆ ತಾನು ಚಿಕ್ಕ ಬೈಕನ್ನು ಹೊಂದಿದ್ದರಿಂದ ಬೈಕ್ ರೈಡ್ ಮಾಡಲು ಯೋಜಿಸುತ್ತಿದ್ದ ಸ್ನೇಹಿತರ ಜೊತೆ ಹೋಗಲು ಸಾಧ್ಯವಾಗಿರಲಿಲ್ಲ ಎಂದೂ ವಿಶೇಷ ಚೇತನ ವ್ಯಕ್ತಿ ಪ್ರಸನ್ನ ಕುಮಾರ್ ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಯೂಟ್ಯೂಬ್ ವ್ಯೂಸ್‌ಗಾಗಿ ವಿಮಾನವನ್ನೇ ಪತನಗೊಳಿಸಿದ ಭೂಪ: 20 ವರ್ಷ ಜೈಲು ಶಿಕ್ಷೆಗೆ ಗುರಿ!
ಆದರೂ ತನ್ನ ಕನಸನ್ನು ಬಿಡಬಾರದೆಂದು ಯೋಚಿಸಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ವಂತ ಬೈಕ್‌ನಲ್ಲಿ ಸವಾರಿ ಮಾಡುತ್ತಾ ಮುಂದೆ ಸಾಗಿದೆ ಎಂದಿದ್ದಾರೆ. “ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ಸವಾರಿ ಪ್ರತಿಯೊಬ್ಬರ ಕನಸು. ಆದ್ದರಿಂದ, ನಾನು ಏಕಾಂಗಿಯಾಗಿ ಸವಾರಿ ಮಾಡಲು ನಿರ್ಧರಿಸಿದೆ ಮತ್ತು ಬೈಕ್ ಮುಖ್ಯವಲ್ಲ ಎಂದು ಸಾಬೀತುಪಡಿಸಲು ನಿರ್ಧರಿಸಿದೆ ಎಂದೂ ಪ್ರಸನ್ನ ಕುಮಾರ್ ಹೇಳಿದ್ದಾರೆ.
"ನಾನು ಈ ಸಾಧನೆಯನ್ನು ಮೊದಲು ಪೂರ್ಣಗೊಳಿಸಿದ ಜನರನ್ನು ಸಂಪರ್ಕಿಸಿದೆ. ಆರಂಭಿಕ ಯೋಜನೆಯಲ್ಲಿ, ನಾನು ಅದನ್ನು ತ್ವರಿತವಾಗಿ ಮುಗಿಸಬೇಕೆಂದು ಭಾವಿಸಿರಲಿಲ್ಲ. ನಾನು ನನ್ನ ಎಂದಿನ ವೇಗದಲ್ಲಿ ಸವಾರಿಯನ್ನು ಪ್ಲ್ಯಾನ್ ಮಾಡಿದ್ದೆ". ಹಾಗೆ, ‘’ನಾನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಸುಮಾರು 3,700 ಕಿ.ಮೀ. ಸವಾರಿಯನ್ನು ಸುಮಾರು ನಾಲ್ಕೂವರೆ ದಿನಗಳಲ್ಲಿ ಪೂರೈಸಿದೆ’’ ಎಂದೂ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಗೋ ಫಸ್ಟ್ ವಿಮಾನ ಸೇವೆ ದಿವಾಳಿ ಎಫೆಕ್ಟ್: ದೇಶದಲ್ಲಿ ವಿಮಾನ ಟಿಕೆಟ್ ದರ 4 - 6 ಪಟ್ಟು ಹೆಚ್ಚಳ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಏಕಾಂಗಿಯಾಗಿ ಬೈಕ್ ಸವಾರಿ ಮಾಡಿದವರ ಬಗ್ಗೆ ಹಲವಾರು ಮಾಧ್ಯಮ ವರದಿಗಳು ಇವೆ. ಆದರೆ ಪ್ರಸನ್ನಕುಮಾರ್ ಅವರಂತಹ ಪ್ರಕರಣಗಳು ತೀರಾ ವಿರಳ. ಲೇಹ್‌ನಿಂದ ಕನ್ಯಾಕುಮಾರಿಯವರೆಗೆ ವಾಹನ ಚಲಾಯಿಸಿದ್ದ ಎರಿಕ್ ಪಾಲ್ ಎಂಬ ಪಾರ್ಶ್ವವಾಯು ಪೀಡಿತನ ಬಗ್ಗೆ ಈ ಹಿಂದಿನ ವರದಿಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದವು. 29ರ ಹರೆಯದ ಅವರು ಕೇವಲ 159 ಗಂಟೆ 59 ನಿಮಿಷಗಳಲ್ಲಿ 3,917 ಕಿ.ಮೀ ದೂರವನ್ನು ಕ್ರಮಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದ್ದರು.
ಇದನ್ನೂ ಓದಿ: ಒಂಟಿ ಯುವತಿಯರೇ ಎಚ್ಚರ: ಟ್ರಿಪ್‌ಗೆ ಹೋದ ಅಪ್ರಾಪ್ತೆಯನ್ನು ‘ವಧು’ ಎಂದು 2 ಬಾರಿ ಮಾರಾಟ ಮಾಡಿದ ಕೀಚಕರು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.