ದೀಪಾವಳಿಗೆ ಹುಬ್ಬಳ್ಳಿ, ಕಲಬುರಗಿಯಿಂದ ಬೆಂಗಳೂರಿಗೆ ಸ್ಪೆಷಲ್ ರೈಲು- ಈ ಟ್ರೈನ್‌ಗಳಿಗೆ ಹೆಚ್ಚುವರಿ ಬೋಗಿ ಜೋಡಣೆ

By Mahmad Rafik  |  First Published Oct 29, 2024, 4:15 PM IST

ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಜನದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆ ಹುಬ್ಬಳ್ಳಿ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ವಿಶೇಷ ರೈಲುಗಳನ್ನು ಘೋಷಿಸಿದೆ. ಈ ಮಾರ್ಗಗಳಲ್ಲಿ ಸಂಚರಿಸುವ ಹಾಲಿ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸಹ ಜೋಡಿಸಲಾಗುವುದು.


ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜನದಟ್ಟಣೆ ಹೆಚ್ಚಾಗುವ ಹಿನ್ನೆಲೆ ನೈಋತ್ಯ ರೈಲ್ಚೆ ಸ್ಪೆಷಲ್ ಟ್ರೈನ್ ಅನೌನ್ಸ್ ಮಾಡಿದೆ. ಹುಬ್ಬಳ್ಳಿ-ಯಶವಂತಪುರ ಮತ್ತು ಕಲಬುರಗಿ-ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ ನಿಲ್ದಾಣಗಳ ನಡುವೆ ಸ್ಪೆಷಲ್ ರೈಲು ಸಂಚರಿಸಲಿವೆ. ಇದರ ಜೊತೆಯಲ್ಲಿ ಹಾಲಿ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ರೈಲು ಸಂಖ್ಯೆ 07323 ಹುಬ್ಬಳ್ಳಿಯಿಂದ ಯಶವಂತಪುರ ನಡುವೆ ಸಂಚರಿಸಲಿದೆ. 30ನೇ ಅಕ್ಟೋಬರ್ 2024ರಂದು ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 3.45ಕ್ಕೆ ಅದೇ ದಿನ ತಲುಪಲಿದೆ. ಹಾವೇರಿ, ರಾಣೇಬೆನ್ನೂರು, ದಾವಣಗೆರೆ, ಬಿರೂರು, ಅರಸಿಕೆರೆ ಮತ್ತು ತುಮಕೂರಿನಲ್ಲಿ ನಿಲುಗಡೆಯಾಗಲಿದೆ. ಈ ಸ್ಪೆಷಲ್ ರೈಲು  ಒಟ್ಟು 21 ಕೋಚ್ ಹೊಂದಿದ್ದು,  https://www.irctc.co.in/nget/train-search ಲಿಂಕ್ ಬಳಸಿ ಟಿಕೆಟ್ ಬುಕ್ ಮಾಡಬಹುದು.

Tap to resize

Latest Videos

ನೈಋತ್ಯ ರೈಲ್ವೆಯು ಸರ್ ಎಂ ವಿಶ್ವೇಶ್ವರಯ ಟರ್ಮಿನಲ್ ಬೆಂಗಳೂರು ಮತ್ತು ಕಲಬುರಗಿ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್, ಎಕ್ಸ್ ಪ್ರೆಸ್ ರೈಲುಗಳ ರೈಲು ಸಂಖ್ಯೆ 06231/06232 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಕಲಬುರಗಿ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ (ಒಂದು ಟ್ರಿಪ್ ರೈಲು ಸಂಖ್ಯೆ 06231 ಅಕ್ಟೋಬರ್ 29 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು, ಅದೇ ದಿನ ಕೆಲಬುರಗಿ ನಿಲ್ದಾಣ ರಾತ್ರಿ 10:15 ಗಂಟೆಗೆ ತಲುಪಲಿದೆ. 

ರೈಲು ಸಂಖ್ಯೆ 06232 ಅಕ್ಟೋಬರ್ 29 ರಂದು ಕಲಬುರಗಿಯಿಂದ ರಾತ್ರಿ 11:30 ಗಂಟೆಗೆ ಹೊರಟು, ಮರುದಿನ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಕ್ಕೆ ಬೆಳಿಗ್ಗೆ 11:15 ಗಂಟೆಗೆ ತಲುಪಲಿದೆ. 

ನಿಲುಗಡೆಗಳು: ಈ ರೈಲು ಎರಡೂ ಮಾರ್ಗದಲ್ಲಿ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ ಮತ್ತು ಶಹಬಾದ್ ನಿಲ್ದಾಣಗಳಲ್ಲಿ ನಿಲ್ಲಲಿದೆ. 

ಬೋಗಿ ಜೋಡಣೆ: ಈ ರೈಲು 18 ಬೋಗಿಗಳನ್ನು ಹೊಂದಿರುತ್ತದೆ, ಅವುಗಳೆಂದರೆ: 02 ಎಸಿ -3 ಟೈರ್, 10 ಕ್ಲೀಪರ್ ಕ್ಲಾಸ್, 04 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 02 ಎಸ್‌ಎಲ್‌ಆರ್/ಡಿ

ಹೆಚ್ಚುವರಿ ಬೋಗಿಗಳ ತಾತ್ಕಾಲಿಕ ಜೋಡಣೆ
ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕೆಳಗಿನ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲು "ನೈಋತ್ಯ ರೈಲ್ವೆಯು ನಿರ್ಧರಿಸಿದೆ.

ನವೆಂಬರ್ 3 ಮತ್ತು 4 ರಂದು ರೈಲು ಸಂಖ್ಯೆ 17309 ಯಶವಂತಪುರ- ವಾಸೋ ಡ ಗಾಮಾ ಡೈಲಿ ಎಕ್ಸ್‌ಪ್ರೆಸ್ ಮತ್ತು ನವೆಂಬರ್ 2 ಮತ್ತು 3 ರಂದು ರೈಲು ಸಂಖ್ಯೆ 17310 ವಾಸೋ ಡ ಗಾಮಾ - ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ಹೆಚ್ಚುವರಿ ತಲಾ ಒಂದು ಎಸಿ-3 ಟೈರ್ ಬೋಗಿಯನ್ನು ಜೋಡಣೆ ಮಾಡಲಾಗುತ್ತಿದೆ. ನವೆಂಬರ್ 3 ರಂದು ರೈಲು ಸಂಖ್ಯೆ 07339 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ಮತ್ತು ರೈಲು ಸಂಖ್ಯೆ 17392 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ಹೆಚ್ಚುವರಿ ತಲಾ ಒಂದು ಸ್ಟೇಪರ್ ಕ್ಲಾಸ್ ಬೋಗಿಯನ್ನು ಜೋಡಣೆ ಮಾಡಲಾಗುತ್ತಿದೆ. 

ಇದನ್ನೂ ಓದಿ:ರೈಲಿನಲ್ಲಿ ಕಾರ್, ಬೈಕ್ ಕಳುಹಿಸಲು ಎಷ್ಟು ಚಾರ್ಜ್ ಮಾಡಲಾಗುತ್ತೆ?

ನವೆಂಬರ್ 4 ರಂದು ರೈಲು ಸಂಖ್ಯೆ 07340 ಕೆಎಸ್‌ಆರ್ ಬೆಂಗಳೂರು - ಎಸ್‌ಎಸ್‌ಎಸ್‌ ಹುಬ್ಬಳ್ಳಿ ಡೈಲಿ ಎಕ್ಸ್‌ ಪ್ರೆಸ್ ಸ್ಪೆಷಲ್, ರೈಲು ಸಂಖ್ಯೆ 06243 ಕೆಎಸ್‌ಆರ್ ಬೆಂಗಳೂರು ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ಮತ್ತು ರೈಲು ಸಂಖ್ಯೆ 06245 ಹೊಸಪೇಟೆ - ಹರಿಹರ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳಿಗೆ ಹೆಚ್ಚುವರಿ ತಲಾ ಒಂದು ಸ್ವೀಪರ್ ಕ್ಲಾಸ್ ಬೋಗಿಯನ್ನು ಜೋಡಿಸಲಾಗುತ್ತಿದೆ. 

ನವೆಂಬರ್ 5 ರಂದು ರೈಲು ಸಂಖ್ಯೆ 06244 ಹೊಸಪೇಟೆ - ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ಮತ್ತು ರೈಲು ಸಂಖ್ಯೆ 06246 ಹರಿಹರ-ಹೊಸಪೇಟೆ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳಿಗೆ ಹೆಚ್ಚುವರಿ ತಲಾ ಒಂದು ಸ್ವೀಪರ್ ಕ್ಲಾಸ್ ಬೋಗಿಯನ್ನು ಜೋಡಿಸಲಾಗುತ್ತಿದೆ. ನವೆಂಬ‌ರ್ 6 ರಂದು ರೈಲು ಸಂಖ್ಯೆ 17391 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲಿಪ‌ರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.

ಇದನ್ನೂ ಓದಿ: ರಿಸರ್ವೇಷನ್ ಮಾಡಿದ ಸೀಟ್‌ನಲ್ಲಿ ಬೇರೆ ಯಾರಾದ್ರು ಕುಳಿತು ಸೀಟ್ ಬಿಟ್ಟುಕೊಡದಿದ್ರೆ ಏನ್ ಮಾಡಬೇಕು?

click me!