ರೈಲಿನಲ್ಲಿ ಕಾರ್, ಬೈಕ್ ಕಳುಹಿಸಲು ಎಷ್ಟು ಚಾರ್ಜ್ ಮಾಡಲಾಗುತ್ತೆ?

By Mahmad Rafik  |  First Published Oct 28, 2024, 12:49 PM IST

ಭಾರತೀಯ ರೈಲ್ವೆಯಲ್ಲಿ ಬೈಕ್ ಮತ್ತು ಕಾರುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ನಿಗದಿತ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚಿನ ದೂರಕ್ಕೆ ಶುಲ್ಕ ಹೆಚ್ಚಾಗುತ್ತದೆ ಮತ್ತು ಪ್ಯಾಕಿಂಗ್‌ಗೆ ಪ್ರತ್ಯೇಕ ಶುಲ್ಕವಿರುತ್ತದೆ.


ನವದೆಹಲಿ: ಭಾರತೀಯ ರೈಲಿನಲ್ಲಿ ಪ್ರೆತನಿತ್ಯ ಕೋಟ್ಯಂತರ ಜನರು ಪ್ರಯಾಣಿಸುತ್ತಾರೆ ಮತ್ತು ಲಕ್ಷಾಂತರ ರೈಲುಗಳು ಸಂಚರಿಸುತ್ತವೆ. ದೂರದ ಪ್ರಯಾಣವಿದ್ರೆ ಜನರು ರೈಲ್ವೆ ಸಾರಿಗೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಬಹುತೇಕರು ರೈಲಿನಲ್ಲಿಯೇ ಪ್ರಯಾಣಿಸಲ ಇಷ್ಟಪಡುತ್ತಾರೆ. ಇದೆಲ್ಲದರ ಜೊತೆಗೆ ರೈಲುಗಳ ಮೂಲಕ ಸರಕು ಸಾಗಾಣೆಯನ್ನು ಸಹ ಮಾಡಲಾಗುತ್ತದೆ. ಜನರು ನೇರವಾಗಿ ತಮ್ಮ ವಸ್ತುಗಳನ್ನು ರೈಲುಗಳ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಬಹುದು. ಇಷ್ಟು ಮಾತ್ರವಲ್ಲ ಬೈಕ್ ಮತ್ತು ಕಾರುಗಳನ್ನು ರೈಲುಗಳ ಮೂಲಕ ಕಳುಹಿಸಬಹುದಾಗಿದೆ. 

ರೈಲು ಪ್ರಯಾಣ ದರ ಇತರೆ ಸಾರಿಗೆಗಳಿಂತ ಕಡಿಮೆಯಾಗಿರುತ್ತದೆ. ಅದೇ ರೀತಿ ಸರಕು ಸಾಗಣೆಗೂ ರೈಲ್ವೆ ತನ್ನದೇ ಆದ ದರಗಳನ್ನು ನಿಗದಿ ಮಾಡುತ್ತಾರೆ. ಒಂದು ಕಾರ್ ಅಥವಾ ಬೈಕ್‌ನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಭಾರತೀಯ ರೈಲ್ವೆ ಎಷ್ಟು ಚಾರ್ಜ್ ಮಾಡುತ್ತೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. 

Tap to resize

Latest Videos

ರೈಲು ಪ್ರಯಾಣ ಸಂದರ್ಭದಲ್ಲಿ ನಿಮ್ಮ ಬೈಕ್‌ನ್ನು ಸಹ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಅವಕಾಶವನ್ನು ರೈಲ್ವೆ ಕಲ್ಪಿಸುತ್ತದೆ. ನೀವು ಪ್ರಯಾಣಿಸುವ ರೈಲಿನಲ್ಲಿಯೇ ಲಗೇಜ್ ಕೋಚ್ ಸಹ ಇರುತ್ತದೆ. ಈ ಕೋಚ್‌ನಲ್ಲಿ ನಿಮ್ಮ ಬೈಕ್ ಪಾರ್ಸೆಲ್ ಮಾಡಲಾಗುತ್ತದೆ. ನಿಮ್ಮ ಗಮ್ಯ ಸ್ಥಾನ ತಲುಪಿದ ಬಳಿಕ ರೈಲ್ವೆ ಇಲಾಖೆಯಿಂದ ನಿಮ್ಮ ಬೈಕ್ ಪಡೆದುಕೊಂಡು ಹೋಗಬಹುದು. ಇದಕ್ಕಾಗಿ ನೀವು ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಬೈಕ್ ತಲುಪುವ ಸಮಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಬೈಕ್‌ನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸುವಾಗ ನಿಗಧಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ: 1 ಕಿಲೋಮೀಟರ್ ಚಲಿಸಲು ರೈಲಿಗೆ ಎಷ್ಟು ಲೀಟರ್ ಇಂಧನ ಬೇಕು?

ನೀವು ಆಟೋಮೊಬೈಲ್ ಕ್ಯಾರಿಯಿಂಗ್ ವೆಹಿಕಲ್ ಮೂಲಕ ಕಾರನ್ನು ಕಳುಹಿಸಬಹುದು. ನೀವು ಅದನ್ನು ಪಾರ್ಸೆಲ್ ಆಗಿ ಬುಕ್ ಮಾಡಬೇಕು. ಈ ಮೂಲಕ ನಿಮ್ಮ ಕಾರ್‌ನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಬಹುದು. ಕಾರ್‌ಗಳನ್ನು ರವಾನಿಸಲು ವಿಶೇಷ ರೈಲುಗಳಿರುತ್ತವೆ. ಪ್ರಯಾಣದ ಸಂದರ್ಭದಲ್ಲಿ ಕಾರ್‌ಗಳನ್ನು ಸಾಗಿಸುವ ಗೂಡ್ಸ್ ರೈಲುಗಳನ್ನು ನೀವು ಗಮನಿಸಿರಬಹುದು. ಎಷ್ಟು ದೂರ ನಿಮ್ಮ ವಾಹನ ಕಳುಹಿಸುತ್ತೀರಿ ಎಂಬುದರ ಮೇಲೆ ಶುಲ್ಕ ನಿಗಧಿ ಮಾಡಲಾಗುತ್ತದೆ. ನಿಮ್ಮ ವಾಹನ ಹೆಚ್ಚು ದೂರ ಹೋದಂತೆ ಶುಲ್ಕವೂ ಏರಿಕೆಯಾಗುತ್ತದೆ.

ಬೈಕ್‌ನ್ನು 500 ಕಿಮೀ ದೂರದವರೆಗೆ ಕಳುಹಿಸುತ್ತಿದ್ದರೆ ಅಂದಾಜು 2,000 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇನ್ನು ಕಾರ್‌ ನ್ನು 500 ಕಿಮೀವರೆಗೆ ಕಳುಹಿಸುತ್ತಿದ್ದರೆ 8,000 ರೂಪಾಯಿವರೆಗೆ ಚಾರ್ಜ್ ಮಾಡಲಾಗುತ್ತದೆ. ಪ್ಯಾಕಿಂಗ್‌ಗಾಗಿ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ನಾಲ್ಕು ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು- ಕರ್ನಾಟಕದ ಈ ಭಾಗಕ್ಕೂ ಬರಲಿದೆ ಟ್ರೈನ್

click me!