ಕೊಲ್ಲಿ ರಾಷ್ಟ್ರಗಳಿಗೆ ಚಾರ್ಟೆಡ್ ವಿಮಾನ ಸೇವೆ ವಿಫಲವಾದ ನಂತರ, ಕೇರಳ ಸರ್ಕಾರವು ಹಡಗು ಸೇವೆ ಆರಂಭಿಸಲು ಚಿಂತಿಸುತ್ತಿದೆ. ನಾಲ್ಕು ಹಡಗು ಕಂಪನಿಗಳು ಈ ಯೋಜನೆಯಲ್ಲಿ ಆಸಕ್ತಿ ತೋರಿಸಿವೆ.
ತಿರುವನಂತಪುರ: ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ಚಾರ್ಟೆಡ್ ವಿಮಾನ ಸೇವೆ ಆರಂಭಿಸುವ ಯೋಜನೆ ವಿಫಲವಾದ ಬೆನ್ನಲ್ಲೇ ಅದೇ ಮಾರ್ಗವಾಗಿ ಹಡಗು ಸೇವೆ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.
ಈ ಯೋಜನೆಯಲ್ಲಿ 4 ಹಡಗು ಕಂಪನಿಗಳು ಆಸಕ್ತಿ ತೋರಿವೆ. ಈ ಸಂಬಂಧ ಹಡಗುಗಳ ಮಾಹಿತಿಯನ್ನು ಒಳಗೊಂಡಂತೆ ಒದಗಿಸಲಾಗುವ ಸೇವೆಗಳ ಕುರಿತು ಮಾಹಿತಿ ನೀಡಿ ಶಿಪ್ಪಿಂಗ್ ನಿರ್ದೇಶನಾಲಯದಿಂದ ಒಪ್ಪಿಗೆ ಪಡೆಯಲು ಸರ್ಕಾರ ಸೂಚಿಸಿದ್ದು, ಇದಕ್ಕಾಗಿ ಕಂಪನಿಗಳು ಸಮಯಾವಕಾಶ ಕೇಳಿವೆ. ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ಹೋಗುವ ವಿಮಾನಗಳ ದರ ಅಧಿಕವಾದ ಕಾರಣ, ಬಾಡಿಗೆ (ಚಾರ್ಟೆಡ್) ವಿಮಾನ ಸೇವೆ ಪ್ರಾರಂಭಿಸುವ ಬಗ್ಗೆ ಅನಿವಾಸಿ ಕೇರಳ ಜನರಿಗೆ ಸಂಬಂಧಿಸಿದ ರಾಜ್ಯ ಸರ್ಕಾರದ ಸಂಸ್ಥೆ ಕೇಂದ್ರ ವಿಮಾನಯಾನ ಸಚಿವಾಲಯದೊಂದಿಗೆ ಮಾತುಕತೆ ನಡೆಸಿತ್ತು. 2023-24ರ ರಾಜ್ಯ ಬಜೆಟ್‌ನಲ್ಲಿ ಇದಕ್ಕಾಗಿ 15 ಕೋಟಿ ರು. ಮೀಸಲಿಡಲಾಗಿತ್ತು. ಆದರೆ ಇದಕ್ಕೆ ಕೇಂದ್ರದ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಬಾಡಿಗೆ ವಿಮಾನದ ಯೋಜನೆಯನ್ನು ಕೈಬಿಡಲಾಗಿತ್ತು.
ವಯನಾಡಲ್ಲಿ ಪ್ರಿಯಾಂಕಾ ಮಿಂಚು
ವಯನಾಡು: ವಯನಾಡು ಉಪ ಚುನಾವಣೆಯಲ್ಲಿ ಕಣಕ್ಕೆ ಇಳಿದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಸೋಮವಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಪ್ರಿಯಾಂಕಾ ' ಕೇಂದ್ರದಲ್ಲಿರುವ ಬಿಜೆಪಿ ಸಮುದಾಯಗಳ ನಡುವೆ ಭಯ, ಕೋಪ, ಅಗೌರವವನ್ನು ಬಿತ್ತುತ್ತಿದೆ. ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ನೀವು ನೋಡಿದ್ದೀರಿ. ಮಣಿಪುರದ ಹಿಂಸಾಚಾರ ನೋಡಿದ್ದೀರಿ. ನೀವು ಯೋಜಿತ ರೀತಿಯಲ್ಲಿ ಮತ್ತೇ ಮತ್ತೇ ಕೋಪ, ದ್ವೇಷವನ್ನು ನೋಡುತ್ತಿದ್ದೀರಿ. ಇಂದು ನಾವು ದೊಡ್ಡ ಯುದ್ಧವನ್ನು ನಡೆಸುತ್ತಿದ್ದೇವೆ. ನಾವೆಲ್ಲರೂ ದೇಶವನ್ನು ಕಟ್ಟಿರುವ ಮೌಲ್ಯಗಳಿಗಾಗಿ ಹೋರಾಡುತ್ತಿದ್ದೇವೆ. ಸಂವಿಧಾನದ ಮೌಲ್ಯಗಳಿಗೆ, ಪ್ರಜಾಪ್ರಭುತ್ವಕ್ಕಾಗಿ, ಸಮಾನತೆಗಾಗಿ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನೀವೆಲ್ಲರೂ ಯೋಧರಾಗಿದ್ದೀರಿ' ಎಂದರು.
ಸಿಎಂ ಶಿಂಧೆ, ಡಿಸಿಎಂ ಅಜಿತ್ ನಾಮಪತ್ರ ಸಲ್ಲಿಕೆ
ಥಾಣೆ: ನ.29ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಿಎಂ ಏಕನಾಥ ಶಿಂಧೆ ಕೊಪ್ರಿ-ಪಚಪಾಖಡಿ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮೊದಲು ಶಿಂಧೆ ತಮ್ಮ ರಾಜಕೀಯ ಗುರು ಜನಂದ ಲಫ್ ಅವರಿಗೆ ಗೌರವ ಅರ್ಪಿಸಿದರು. ವಿಪರ್ಯಾಸವೆಂದರೆ ಈ ಚುನಾವಣೆಯಲ್ಲಿ ಇವರು ಆನಂದ್ ವಿಫ್ ಸಂಬಂಧಿ ಕೇದಾರ್ ದಿಫ್ ಅವರ ವಿರುದ್ಧ ಸೆಣೆಸಲಿದ್ದಾರೆ. ಅತ್ತ ಎನ್ ಸಿಪಿ ಮುಖ್ಯಸ್ಥ ಡಿಸಿಎಂ ಆಜಿತ್ ಪವಾರ್ ಕೂಡ ಬಾರಾಮತಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ಫಡ್ನವೀಸ್ ಆಪ್ತಗೆ ಬಿಜೆಪಿ, ಬಿಜೆಪಿ ವಕ್ತಾರೆ ಶೈನಾಗೆ ಶಿವಸೇನೆ ಟಿಕೆಟ್
ಮುಂಬೈ: ಮಹಾರಾಷ್ಟ್ರ ಬಿಜೆಪಿ ತನ್ನ 25 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿ ರಾಜ್ಯಸಭೆ ಸದಸ್ಯರಾಗಿದ್ದ ಜಿತೇಶ್ ಅಂತಾವುರಕರ್ ಮತ್ತು ಲೋಕಸಭೆಯ ಮಾಜಿ ಸ್ಪೀಕರ್ ಶಿವರಾಜ್ ಪಾಟೀಲ್ ಸೊಸೆ ಅರ್ಚನಾಗೆ ಟಿಕೆಟ್ ನೀಡಲಾಗಿದೆ. ಇನ್ನೊಂದೆಡೆ ಡಿಸಿಎಂ ಫಡ್ನವೀಸ್‌ರ ಸಹಾಯಕನಾಗಿದ್ದ ಸುಮಿತ್ ವಾಂಖೆಡೆ ಅರ್ವಿಯಲ್ಲಿ ಸ್ಪರ್ಧಿಸಲಿದ್ದಾರೆ. ಈ ನಡುವೆ ಬಿಜೆಪಿ ವಕ್ತಾರೆ ಕೈನಾಗೆ ಶಿಂಧೆ ಬಣದ ಶಿವಸೇನೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ