ಶೇ.90 ರಷ್ಟು ಮುಸ್ಲಿಮರಿದ್ರೂ ಪ್ರತಿ ಮನೆಯಲ್ಲಿ ನಡೆಯುತ್ತೆ ರಾಮಾಯಣ ಪಠಣ

Published : Jan 09, 2024, 03:53 PM IST
ಶೇ.90 ರಷ್ಟು ಮುಸ್ಲಿಮರಿದ್ರೂ ಪ್ರತಿ ಮನೆಯಲ್ಲಿ ನಡೆಯುತ್ತೆ ರಾಮಾಯಣ ಪಠಣ

ಸಾರಾಂಶ

ರಾಮ, ಲಕ್ಷಣ, ಹನುಮಂತ ಬರೀ ನಮಗೆ ಸೀಮಿತವಲ್ಲ. ವಿದೇಶದಲ್ಲೂ ಇವರ ಭಕ್ತರಿದ್ದಾರೆ. ರಾಮಾಯಣವನ್ನು ಪೂಜೆ ಮಾಡುವ ಜನರಿದ್ದಾರೆ. ರಾಮ ಹಾಗೂ ರಾಮಾಯಣ ಧರ್ಮಕ್ಕೆ ಸಂಬಂಧಿಸಿದ್ದಲ್ಲ.. ಇದು  ಎಲ್ಲವನ್ನೂ ಮೀರಿದ್ದು.   

ಹಿಂದುಗಳ ದೇಶ ಹಿಂದೂಸ್ತಾನ. ನಮ್ಮ ಭಾರತ ಎಂಬುದು ಎಲ್ಲರಿಗೂ ಗೊತ್ತು. ಭಾರತ ಬಿಟ್ಟು ಬೇರೆ ದೇಶಗಳಲ್ಲೂ ಹಿಂದುಗಳು ನೆಲೆ ನಿಂತಿದ್ದಾರೆ. ನಮ್ಮ ನೆರೆಯ ದೇಶಗಳಲ್ಲಿ ಮಾತ್ರವಲ್ಲ ಏಷ್ಯಾದ ಅನೇಕ ದೇಶಗಳು ಹಿಂದೆ ಹಿಂದೂ ದೇಶಗಳಾಗಿದ್ದವು ಎನ್ನಲಾಗುತ್ತದೆ. ಇದ್ರಲ್ಲಿ ಇಂಡೋನೇಷ್ಯಾ ಕೂಡ ಸೇರಿದೆ. ನೀವು ಇಂಡೋನೇಷ್ಯಾದಲ್ಲಿ ಹಿಂದು ಸಂಸ್ಕೃತಿಯನ್ನು ನೀವು ನೋಡ್ಬಹುದು. ಇಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ. ಆದ್ರೆ ಇಂಡೋನೇಷ್ಯಾದಲ್ಲಿರುವ ಹಿಂದುಗಳು ಮಾತ್ರವಲ್ಲ ಮುಸ್ಲಿಮರು ಕೂಡ ರಾಮನ ಭಕ್ತರು. ಅವರು ರಾಮಾಯಣ ಓದುತ್ತಾರೆ. ರಾಮಲೀಲಾದಲ್ಲಿ ಅವರು ಪಾಲ್ಗೊಳ್ಳುತ್ತಾರೆ. ನಾವಿಂದು ಮುಸ್ಲಿಮರು ಹೆಚ್ಚಿರುವ ಇಂಡೋನೇಷ್ಯಾದಲ್ಲಿ ರಾಮನ ಪ್ರೀತಿ ಹೇಗಿದೆ ಎಂಬುದನ್ನು ಹೇಳ್ತೇವೆ.

ಇಂಡೋನೇಷ್ಯಾ (Indonesia) ಆಗ್ನೇಯ ಏಷ್ಯಾದಲ್ಲಿ ನೆಲೆಗೊಂಡಿದೆ. ಇಲ್ಲಿ ಸುಮಾರು 23 ಕೋಟಿ ಜನರಿದ್ದಾರೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶಗಳ ಪಟ್ಟಿಯಲ್ಲಿ ಇಂಡೋನೇಷ್ಯಾ ನಾಲ್ಕನೇ ಸ್ಥಾನದಲ್ಲಿದೆ. ಅಲ್ಲದೆ ಅತಿ ಹೆಚ್ಚು ಮುಸ್ಲಿಮರ (Muslims) ನ್ನು ಹೊಂದಿರುವ ದೇಶ ಇದು. ಮುಸ್ಲಿಮರ ಧರ್ಮ ಬೇರೆ. ಹಾಗಾಗಿ ಅವರು ರಾಮಾಯಣ (Ramayana), ಮಹಾಭಾರತದಂತಹ ಹಿಂದುಗಳಿಗೆ ಸಂಬಂಧಿಸಿದ ಪುಸ್ತಕವನ್ನು ಓದೋದಿಲ್ಲ ಎಂದು ನಾವು ಭಾವಿಸಿದ್ದೇವೆ. ಇಂಡೋನೇಷ್ಯಾ ವಿಷ್ಯದಲ್ಲಿ ನಮ್ಮ ನಂಬಿಕೆ ಸಂಪೂರ್ಣ ತಪ್ಪು. ಇಂಡೋನೇಷ್ಯಾದ ಪ್ರತಿಯೊಬ್ಬರ ಮನೆಯಲ್ಲಿ, ವಿಶೇಷವಾಗಿ ಮುಸ್ಲಿಮರ ಮನೆಯಲ್ಲೂ ನೀವು ರಾಮಾಯಣದ ಪುಸ್ತಕವನ್ನು ನೋಡಬಹುದು. ಅಲ್ಲದೆ ಇಲ್ಲಿನ ಪ್ರತಿಯೊಬ್ಬರೂ ರಾಮಾಯಣ ಓದುತ್ತಾರೆ. ರಾಮಾಯಣ ನಮ್ಮ ಜೊತೆ ನಂಟು ಹೊಂದಿದೆ ಎಂದು ಅವರು ನಂಬಿದ್ದಾರೆ. ಹಾಗಾಗಿಯೇ ಇಲ್ಲಿನ ಮುಸ್ಲಿಮರು ರಾಮಲೀಲಾ ಬಗ್ಗೆ ತಿಳಿದಿದ್ದು, ಅದ್ರಲ್ಲಿ ಸಂತೋಷದಿಂದ ಪಾಲ್ಗೊಳ್ಳುತ್ತಾರೆ. ಇಂಡೋನೇಷ್ಯಾ ರಾಮಾಯಣದ ಜೊತೆ ಆಳವಾದ ಪ್ರಭಾವ ಹೊಂದಿದೆ. ಇಲ್ಲಿನ ಅನೇಕ ಭಾಗಗಳಲ್ಲಿ ನೀವು ರಾಮಾಯಣಕ್ಕೆ ಸಂಬಂಧಿಸಿದ ಅವಶೇಷ, ಕಲ್ಲಿನ ಕೆತ್ತನೆಗಳನ್ನು ಕಾಣಬಹುದು. 

ಹಿಂದೂಗಳ ಊರಾಗಿದ್ದ ಲಕ್ಷದ್ವೀಪ ಸಂಪೂರ್ಣ ಮುಸ್ಲಿಮರ ಪಾಲಾಗಿದ್ದು ಹೇಗೆ?

ಭಾರತದ ರಾಮಾಯಣಕ್ಕೂ ಇಂಡೋನೇಷ್ಯಾ ರಾಮಾಯಣಕ್ಕೂ ಇದೆ ವ್ಯತ್ಯಾಸ : ನಾವು ಓದುವ ರಾಮಾಯಣಕ್ಕೂ ಇಂಡೋನೇಷ್ಯಾದ ಜನ ಓದುವ ರಾಮಾಯಣಕ್ಕೂ ವ್ಯತ್ಯಾಸವಿದೆ. ನಾವು ರಾಮನ ನಗರ ಅಯೋಧ್ಯೆ ಎಂದು ನಂಬುತ್ತೇವೆ. ಅವರ ರಾಮಾಯಣದಲ್ಲಿ ರಾಮನ ನಗರ ಯೋಗ್ಯ ಎಂದಿದೆ. ಅವರು ಕಕಾವೀನ್ ರಾಮಾಯಣ ಎಂದು ರಾಮಾಯಣವನ್ನು ಕರೆಯುತ್ತಾರೆ. ವಾಲ್ಮೀಕಿ ಋಷಿ ರಾಮಾಯಣ ಬರೆದರು ಎಂದು ನಾವು ನಂಬುತ್ತೇವೆ. ಆದ್ರೆ ಇಂಡೋನೇಷ್ಯಾದಲ್ಲಿ ರಾಮಾಯಣ ಬರೆದವರು ಕವಿ ಯೋಗೇಶ್ವರ್ ಎಂದು ನಂಬಲಾಗುತ್ತದೆ. ಇಂಡೋನೇಷ್ಯಾ ರಾಮಾಯಣ 26 ಅಧ್ಯಾಯಗಳ ಬೃಹತ್ ಪಠ್ಯವಾಗಿದೆ. ಇಲ್ಲಿ ದಶರಥನನ್ನು ವಿಶ್ವರಂಜನ್ ಎಂದು ಕರೆಯಲಾಗುತ್ತದೆ. ದಶರಥನನ್ನು ಶೈವ ಎಂದು ಪರಿಗಣಿಸಲಾಗಿದೆ. ಅಂದ್ರೆ ಶಿವನ ಆರಾಧಕ ಎಂದರ್ಥ. ಲಕ್ಷಣನನ್ನು ನೌಕಾಪಡೆಯ ಅಧ್ಯಕ್ಷ ಎಂದು ಪರಿಗಣಿಸಲಾಗುತ್ತದೆ. ಸೀತೆಯನ್ನು ಸಿಂತಾ ಎಂದು ಕರೆಯಲಾಗುತ್ತದೆ. ಇಂಡೋನೇಷ್ಯಾ ರಾಮಾಯಣದಲ್ಲಿ ಹನುಮಂತನಿದ್ದಾನೆ. ಹನುಮಂತನಿಗೆ ಇಲ್ಲಿ ಮಹತ್ವದ ಪಾತ್ರವಿದೆ. ಇಂಡೋನೇಷ್ಯಾದಲ್ಲಿ ಹನುಮಂತನನ್ನು ಅನೋಮನ್ ಎಂದು ಕರೆಯುತ್ತಾರೆ. ಇಲ್ಲಿನ ಜನರು ತಮ್ಮ ಸ್ವಾತಂತ್ರ್ಯದ ದಿನ ಅಂದ್ರೆ ಡಿಸೆಂಬರ್ 27ರಂದು ಬೀದಿ ಬೀದಿಯಲ್ಲಿ ಹನುಮಂತನ ವೇಷ ಧರಿಸಿ ಸಂಚರಿಸುತ್ತಾರೆ.

ರಾಮ ಸೀತೆ ವಾಸಿಸಿದ್ದ ಕನಕ ಮಹಲ್‌ನಲ್ಲಿ ಡಾ ಬ್ರೋ! ಇನ್ನೂ ಇದೆ ದೇವರ ಕಾಲಿನ ಧೂಳಿನ ಘಮ

ಅಂತರಾಷ್ಟ್ರೀಯ ರಾಮಾಯಣ ಸಮ್ಮೇಳನ : 1973ರಲ್ಲಿ ಇಂಡೋನೇಷ್ಯಾದಲ್ಲಿ ಅಂತರಾಷ್ಟ್ರೀಯ ರಾಮಾಯಣ ಸಮ್ಮೇಳನವನ್ನೂ ಸರ್ಕಾರ ಆಯೋಜಿಸಿತ್ತು. ಮೊದಲ ಬಾರಿಗೆ ಮುಸ್ಲಿಂ ರಾಷ್ಟ್ರ ಮತ್ತೊಂದು ಧರ್ಮಗ್ರಂಥವನ್ನು ಗೌರವಿಸಿದ ಕಾರ್ಯಕ್ರಮ ಇದಾಗಿತ್ತು. ಈಗ್ಲೂ ಇಲ್ಲಿನ ಜನರು ರಾಮಾಯಣವನ್ನು ಭಕ್ತಿಯಿಂದ ಓದುತ್ತಾರೆ. ಭಾರತದ ಅನೇಕ ಕಡೆ ಇಂಡೋನೇಷ್ಯಾ ರಾಮಾಯಣವನ್ನು ಪ್ರದರ್ಶಿಸುವ ಆಸೆಯನ್ನು ಅಲ್ಲಿನ ಸರ್ಕಾರ ಹೊಂದಿದೆ. ಹಿಂದಿನ ವರ್ಷ ಇಂಡೋನೇಷ್ಯಾದ ಶಿಕ್ಷಣ ಮತ್ತು ಸಂಸ್ಕೃತಿ ಸಚಿವ ಅನೀಸ್ ಬಸ್ವೇದನ್ ಭಾರತಕ್ಕೆ ಬಂದಾಗ ಈ ವಿಷ್ಯವನ್ನು ಪ್ರಸ್ತಾಪಿಸಿದ್ದರು. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿವೃತ್ತಿ ನಂತ್ರವೂ ಪರದಾಡಬೇಕಾಗಿಲ್ಲ, ನೆಮ್ಮದಿ ಜೀವನಕ್ಕೆ ಈ ದೇಶಗಳು ಬೆಸ್ಟ್
ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​