ಮಾಡಬಾರದ ಕೆಲಸ ಮಾಡಿದ ರೈಲ್ವೆ ಉದ್ಯೋಗಿ: ವೀಡಿಯೋ ವೈರಲ್

Published : Mar 06, 2025, 02:56 PM ISTUpdated : Mar 06, 2025, 04:56 PM IST
ಮಾಡಬಾರದ ಕೆಲಸ ಮಾಡಿದ ರೈಲ್ವೆ ಉದ್ಯೋಗಿ: ವೀಡಿಯೋ ವೈರಲ್

ಸಾರಾಂಶ

ರೈಲ್ವೆ ಉದ್ಯೋಗಿಯೊಬ್ಬರು ಚಲಿಸುತ್ತಿರುವ ರೈಲಿನಿಂದ ಕಸ ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

ಭಾರತೀಯ ರೈಲ್ವೆ ಉದ್ಯೋಗಿ ಕಸವನ್ನು  ರೈಲಿನಿಂದ  ಹೊರಗೆ ಎಸೆಯುತ್ತಿರುವ ವೀಡಿಯೋವೋಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ರೈಲ್ವೆ ಇಲಾಖೆಯೂ ಪ್ರತಿಕ್ರಿಯೆ ನೀಡಿದ್ದು, ಈ ಉದ್ಯೋಗಿ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವುದಕ್ಕಾಗಿ ಸ್ವಚ್ಛತೆಯ ದೊಡ್ಡ ಅಂದೋಲನವನ್ನೇ ಮಾಡಿದ್ದು, ಇದಕ್ಕಾಗಿಯೇ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಆದರೂ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ, ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಕರು ತಾವು ಆಹಾರ ತಿಂದ ನಂತರ ಕಸವನ್ನು ಕಿಟಕಿಗಳ ಮೂಲಕ ಹೊರಗೆಸೆಯುತ್ತಾರೆ. ಆದರೆ ಇಲ್ಲೊಂದು ಕಡೆ ಜನರಿಗೆ ಸ್ವಚ್ಚತೆಯ ಪಾಠ ಮಾಡಬೇಕಾದ ಉದ್ಯೋಗಿಯೇ ರೈಲ್ವೆಯ ಕಸವನ್ನು ಚಲಿಸುತ್ತಿರುವ ರೈಲಿನಿಂದ ಕೆಳಕ್ಕೆಸೆದಿದ್ದಾರೆ. ಪ್ರಯಾಣಿಕರೊಬ್ಬರು ಈ ಬಗ್ಗೆ ಹೇಳಿದರೂ ಕ್ಯಾರೇ ಅನ್ನದ ರೈಲ್ವೆ ಉದ್ಯೋಗಿ ಕಸವನ್ನು ಹೊರಗೆಸೆಯುವ ಕಾರ್ಯವನ್ನು ಮುಂದುವರೆಸಿದ್ದಾರೆ. 

ಚಲಿಸುವ ರೈಲಿನಿಂದ ಕಸವನ್ನು ಹೊರಗೆಸೆದ ರೈಲ್ವೆ ಉದ್ಯೋಗಿ

ಆದರೆ ಪ್ರಯಾಣಿಕರೊಬ್ಬರು ಈ ವೀಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ ರೈಲ್ವೆ ಇಲಾಖೆಯೂ ಎಚ್ಚೆತ್ತಿದ್ದು, ಈ ರೀತಿ ಬೇಜವಾಬ್ದಾರಿ ತೋರಿದ ರೈಲ್ವೆಯ ಉದ್ಯೋಗಿಯ ಮೇಲೆ ಶಿಸ್ತು ಕ್ರಮ ಕೈಗೊಂಡಿದೆ.  ಟ್ವಿಟ್ಟರ್‌ನಲ್ಲಿ ಸ್ಕಿನ್ ಡಾಕ್ಟರ್ ಎಂಬ ಪೇಜ್‌ನಿಂದ ಈ 49 ಸೆಕೆಂಡ್‌ಗಳ ವೀಡಿಯೋ ಪೋಸ್ಟ್ ಮಾಡಿದ್ದು ಇದು ಸಾಕಷ್ಟು ವೈರಲ್ ಆಗಿತ್ತು.  ವೀಡಿಯೋದಲ್ಲಿ ವೀಡಿಯೊದಲ್ಲಿ, ಪ್ರಯಾಣಿಕರೊಬ್ಬರು 'ಯೇ ಅಂಕಲ್ ಸಾರಾ ಕಚ್ರಾ ಬಾಹರ್ ಫೆಂಕ್ ರಹೇ ಹೈ ಟ್ರ್ಯಾಕ್ಸ್ ಪೆ. ಯೇ ಹೈ ಇಂಡಿಯನ್ ರೈಲ್ವೇಸ್ ಕಿ ಹಾಲತ್. ಸೀನಿಯರ್ ಎಂಪ್ಲಾಯ್ ಕಸವನ್ನು ಹೊರಗೆ ಎಸೆಯುತ್ತಿದ್ದಾರೆ' ಎಂದು ಹಿಂದಿಯಲ್ಲಿ ಹೇಳುತ್ತಿರುವುದು ಕೇಳಿಸುತ್ತಿದೆ. (ಅದರರ್ಥ ಈ ಅಂಕಲ್ ರೈಲಿನಿಂದ ಕಸವನ್ನು ಹಳಿಗಳಿಗೆ ಎಸೆಯುತ್ತಿದ್ದಾನೆ. ಇದು ಭಾರತೀಯ ರೈಲ್ವೆಯ ಸ್ಥಿತಿ. ಅವರು ಹಿರಿಯ ಉದ್ಯೋಗಿ)

ಈ ವೀಡಿಯೋ ಮಾಡುತ್ತಿದ್ದಾಗಲೇ ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಈ ರೀತಿ ಮಾಡಬೇಡಿ ಎಂದು ಆ ರೈಲ್ವೆ ಉದ್ಯೋಗಿಗೆ ಹೇಳುತ್ತಾರೆ. ಆದರೆ ಅದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಆ ಉದ್ಯೋಗಿ ಈ ಕಸವನ್ನು ಹೇಗೆ ಖಾಲಿ ಮಾಡಲಿ ಎಂದು ಹೇಳುವ ಮೂಲಕ ಕಸವನ್ನು ಎಸೆಯುವುದಕ್ಕೆ ಬೇರೆ ದಾರಿ ಇಲ್ಲ ಎಂಬಂತೆ ಮಾತನಾಡುತ್ತಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ  ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಉದ್ಯೋಗಿಗೆ ಮೊಬೈಲ್ ರೆಕಾರ್ಡಿಂಗ್ ಆಗುತ್ತಿರುವ ವಿಚಾರವೂ ಕೂಡ ಗೊತ್ತು. ಅಲ್ಲದೇ ಜನರು ಆತನಿಗೆ ಹೀಗೆ ಮಾಡದಂತೆ ಹೇಳುತ್ತಾರೆ. ಹಾಗಿದ್ದೂ ಆತನಿಗೆ ಈ ರೀತಿ ಕೆಲಸ ಮಾಡುವುದಕ್ಕೆ ಧೈರ್ಯ ಎಲ್ಲಿಂದ ಬಂತು ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. 

ಗಂಡ್ಮಕ್ಕಳಿಗೂ ಕಾಟ, ರೈಲಿನಲ್ಲಿ ಮಲಗಿದ್ದವನಿಗೆ ಮುತ್ತಿಕ್ಕಿ ರೊಮ್ಯಾನ್ಸ್‌ಗಿಳಿದ ವ್ಯಕ್ತಿ

ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ರೈಲ್ವೆ
ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ಅಧಿಕೃತ ರೈಲ್ವೆ ಸೇವಾ ಖಾತೆಯಿಂದ ಈ ವೀಡಿಯೋಗೆ ಪ್ರತಿಕ್ರಿಯಿಸಿದ ರೈಲ್ವೆ ಇಲಾಖೆಯೂ, ಭಾರತೀಯ ರೈಲ್ವೆಯಲ್ಲಿ ಸುಸ್ಥಾಪಿತವಾದ ಕಸ ವಿಲೇವಾರಿ ಕಾರ್ಯವಿಧಾನವಿದೆ. ಆದರೆ ಅದರ ಉಲ್ಲಂಘನೆಗೆ ಕಾರಣರಾದ ಆನ್-ಬೋರ್ಡ್ ಹೌಸ್‌ಕೀಪಿಂಗ್ ಸರ್ವೀಸಸ್ (OBHS) ಸಿಬ್ಬಂದಿಯನ್ನು ತೆಗೆದು ಹಾಕಲಾಗಿದೆ ಮತ್ತು ಅವರಿಗೆ ಭಾರೀ ದಂಡ ವಿಧಿಸಲಾಗಿದೆ ಎಂದು ಅದು ಹೇಳಿದೆ. 

ಭಾರತೀಯರನೇಕರಿಗೆ ನಮ್ಮ ನೆಲ ಜಲ, ಸೇರಿದಂತೆ ಸಾರ್ವಜನಿಕ ಆಸ್ತಿಗಳಾದ ಸಾರಿಗೆ, ಆಸ್ಪತ್ರೆ ರೈಲ್ವೆಯ ಬಗ್ಗೆ ಅದು ನಮ್ಮದು ಎಂಬ ಭಾವನೆಯೇ ಇಲ್ಲ ಸಾರ್ವಜನಿಕ ಆಸ್ತಿ ಸರ್ಕಾರದ್ದ, ಆಸ್ಪತ್ರೆ ಸರ್ಕಾರದ್ದು ಅಂತ ಒಳ್ಳೆಯ ಸೌಲಭ್ಯ ನೀಡಿದ್ದರೂ ಅದನ್ನು ಅಷ್ಟೇ ಬೇಗ ಹಾಳು ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಗಳು, ಕಾಲೇಜುಗಳಿಗೆ ಎಷ್ಟೇ ಒಳ್ಳೆಯ ಸೌಲಭ್ಯ ನೀಡಿದರು ಅದು ಕೆಲ ಸಮಯ ಮಾತ್ರ ಅದು ಸರ್ಕಾರದ್ದು ಎಂಬ ಭಾವನೆ ಇದಕ್ಕೆ ಕಾರಣ. ಅದೇ ರೀತಿ ಇಲ್ಲಿ ರೈಲ್ವೆಯ ಉದ್ಯೋಗಿಗೆ ರೈಲ್ವೆ ಸಾಗುವ ಭೂಮಿ ನಮ್ಮದು ಕಸ ಎಸೆದರೆ ಪರಿಸರಕ್ಕೆ ಹಾನಿ ಮುಂದಿನ ಪೀಳಿಗೆಗೆ ಹಾನಿಯಾಗುತ್ತದೆ ಎಂಬ ಬೇಜವಾಬ್ದಾರಿ ಇಲ್ಲದೇ ವರ್ತಿಸಿದ್ದು, ರೈಲ್ವೆಯ ಉದ್ಯೋಗಿ ಎಂಬ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಹೀಗೆ ಮಾಡಿದರೆ ಇನ್ನು ಜನಸಾಮಾನ್ಯರಿಗೆ ಹೇಳುವವರು ಯಾರು?

ವೀಡಿಯೋಗಾಗಿ ಕಿಟಕಿ ಬದಿ ಕುಳಿತು ಪ್ರಯಾಣಿಸುತ್ತಿದ್ದವನ ಕೆನ್ನೆಗೆ ಬಾರಿಸಿದ ಯೂಟ್ಯೂಬರ್‌ ಅರೆಸ್ಟ್

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್