
ಪ್ರವಾಸೋದ್ಯಮ ಎಂದಾಕ್ಷಣ, ಬೇರೆ ಬೇರೆ ಭಾಗಗಳ ಜನರು ಅಲ್ಲಿಯ ಸ್ಥಳಗಳ ಸೌಂದರ್ಯ ಸವಿಯಲು ಬರುತ್ತಾರೆ ಎನ್ನುವುದು ಸಹಜವಾದ ಮಾತು. ಆದರೆ ಗರ್ಭ ಧರಿಸುವುದಕ್ಕಾಗಿಯೇ ವಿದೇಶಗಳಿಂದಲೂ ಭಾರತದ ಒಂದು ವಿಶೇಷ ಸ್ಥಳಕ್ಕೆ ಬರುತ್ತಾರೆ ಎನ್ನುವ ಬಗ್ಗೆ ನಿಮಗೆ ಗೊತ್ತಾ? ಹಾಗೆಂದು ಅವರು ತಮ್ಮ ಸಂಗಾತಿಯ ಜೊತೆಗೆ ಬರುವುದಿಲ್ಲ, ಬದಲಿಗೆ ಇದೇ ಪ್ರದೇಶದಲ್ಲಿ ಇದ್ದಾರೆ ಎನ್ನಲಾಗುವ ಶುದ್ಧ ಆರ್ಯರಿಂದ ಮಗುವನ್ನು ಪಡೆದುಕೊಳ್ಳಲು ಅವರು ಬರುತ್ತಾರೆ. ಇಲ್ಲಿಯ ಜನರಿಗೆ ಗರ್ಭ ಧರಿಸಿ ವಾಪಸ್ ಹೋಗುತ್ತಾರೆ. ಈ ಮಾತನ್ನು ನಂಬುವುದು ಸ್ವಲ್ಪ ಕಷ್ಟ ಎನಿಸಿದರೂ, ತಲೆ ತಲಾಂತರಗಳಿಂದ ಇಂಥದ್ದೊಂದು ಪ್ರವಾಸೋದ್ಯಮ ನಡೆಯುತ್ತಿದೆ ಎನ್ನಲಾಗಿದೆ. ಇದೇ ಗರ್ಭಧಾರಣೆ ಪ್ರವಾಸೋದ್ಯಮ ಅರ್ಥಾತ್ ಪ್ರೆಗ್ನೆನ್ಸಿ ಟೂರಿಸಂ (Pregnancy Tourism). ಇದು ಎಲ್ಲಿದೆ? ಯಾರೀ ಶುದ್ಧ ಆರ್ಯರು? ಯಾಕೆ ಇವರಿಂದ ಮಗು ಬೇಕು? ಸಂಪೂರ್ಣ ಡಿಟೇಲ್ಸ್ ಇಲ್ಲಿದೆ...
ಅಂದಹಾಗೆ ಈ ಪ್ರದೇಶ ಇರುವುದು ಲಡಾಖ್ನಲ್ಲಿ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಸುತ್ತುವರೆದಿರುವ ಈ ಜಾಗ ಪ್ರವಾಸಿಗರಿಗೆ ಸ್ವರ್ಗವೇ ಸರಿ. ಇಲ್ಲಿ ಪ್ರತಿವರ್ಷ ಪ್ರವಾಸಕ್ಕಾಗಿ ಸಹಸ್ರಾರು ಮಂದಿ ಬರುತ್ತಾರೆ. ಆದರೆ ಇಲ್ಲಿರುವ, ಆರ್ಯನ್ ಕಣಿವೆ ಗ್ರಾಮದ ಕೌತುಕ ಒಂದಿದೆ. ಇಲ್ಲಿ ಮಹಿಳೆಯರು ಅದರಲ್ಲಿಯೂ ವಿದೇಶಗಳಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ, ಗರ್ಭ ಧರಿಸಲು. ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರದ ಶುದ್ಧ ಆರ್ಯರು ಇಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಅವರನ್ನು ಅಲೆಕ್ಸಾಂಡರ್ ವಂಶಸ್ಥರು ಎಂದು ಪರಿಗಣಿಸಲಾಗಿದೆ. ಆರ್ಯನ್ನರು ಎಂದರೆ, ಬಲಶಾಲಿಗಳು ಬುದ್ಧಿವಂತರು, ಧೈರ್ಯವಂತರು. ಇದೇ ಕಾರಣಕ್ಕೆ ಅವರಂಥ ಮಗು ತಮಗೆ ಬೇಕು ಎನ್ನುವ ಕಾರಣಕ್ಕೆ ಇಲ್ಲಿ ಮಹಿಳೆಯರು ಗರ್ಭ ಧರಿಸಲು ಬರುತ್ತಾರೆ ಎಂದೇ ಹೇಳಲಾಗುತ್ತಿದೆ.
ತ್ರಿವೇಣಿ ಸಂಗಮದ ದಡದಲ್ಲೇ ಇದೆ ರಾಜ ಅಕ್ಬರನ ಕೋಟೆ: ಸಂಪೂರ್ಣ ಪರಿಚಯಿಸಿದ ಡಾ.ಬ್ರೋ
ಲೇಹ್‌ನಿಂದ ಸುಮಾರು 160 ಕಿ.ಮೀ ದೂರದಲ್ಲಿ ಬಿಯಾಮಾ, ದಹ್, ಹನು, ಗಾರ್ಕಾನ್, ಡಾರ್ಚಿಕ್‌ನಂತಹ ಗ್ರಾಮಗಳಿವೆ, ಇವು ಒಟ್ಟಾಗಿ ಆರ್ಯನ್ ಕಣಿವೆಯನ್ನು ರೂಪಿಸುತ್ತವೆ. ಇಲ್ಲಿ ಬ್ರೋಕ್ಪಾ ಸಮುದಾಯದ ಜನರು ವಾಸಿಸುತ್ತಿದ್ದು, ಅವರನ್ನು ಶುದ್ಧ ಆರ್ಯರು ಎಂದು ನಂಬಲಾಗಿದೆ. ಇಲ್ಲಿ ಕೆಲವು ಮಹಿಳೆಯರು ಗರ್ಭಧಾರಣೆಗೆ ಬಂದಿರುವುದಾಗಿ ವರದಿಯಾಗಿದೆ. ಇದು ನಿಜವಲ್ಲ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಇಲ್ಲಿ ಮಹಿಳೆಯರು ಬಂದು ಗರ್ಭ ಧರಿಸಿ ಹೋಗುವ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಲೇ ಇದ್ದಾರೆ. ಕೆಲವು ಮಾಧ್ಯಮ ಸಂಸ್ಥೆಗಳು ಇದರ ಅಸಲಿಯತ್ತು ಬೇಧಿಸಲು ಹೋದಾಗಲೂ ಕೆಲವರು ಇದು ನಿಜ ಎಂದೇ ಹೇಳುತ್ತಾ ಬಂದಿದ್ದಾರೆ.
ಕಳೆದ ವರ್ಷ, ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಕೆಲವು ಯುರೋಪಿಯನ್ ಯುವತಿಯರು ತಾವು ಇಲ್ಲಿಗೆ ಬಂದು ಗರ್ಭಧರಿಸಿ ಹೋಗಿರುವುದಾಗಿ ಖುಲ್ಲಂ ಖುಲ್ಲಾ ರಿವೀಲ್ ಮಾಡಿದಾಗ, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಇದರ ಬಗ್ಗೆ ಇದಾಗಲೇ ಒಂದು ಸಾಕ್ಷ್ಯಚಿತ್ರ ಕೂಡ ಬಿಡುಗಡೆಯಾಗಿದೆ. ವಿದೇಶಿ ಮಹಿಳೆಯರು, ವಿಶೇಷವಾಗಿ ಜರ್ಮನ್ ಮಹಿಳೆಯರು, ಬ್ರೋಕ್ಪಾ ಸಮುದಾಯದ ಪುರುಷರಿಂದ ಗರ್ಭಿಣಿಯಾಗಲು ಇಲ್ಲಿಗೆ ಬರುತ್ತಿರುವುದಾಗಿ ಈ ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ. ಆದರೆ ಬಹುತೇಕ ಮಂದಿ ಕದ್ದುಮುಚ್ಚಿ ಇಲ್ಲಿಗೆ ಬರುವ ಕಾರಣ, ಅವರು ಯಾವಾಗ ಬರುತ್ತಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಒಟ್ಟಿನಲ್ಲಿ, ಖುದ್ದು ಮಹಿಳೆಯರೇ ಈ ಬಗ್ಗೆ ಮಾತನಾಡಿರುವ ಹಿನ್ನೆಲೆಯಲ್ಲಿ, ಇದಾಗಲೇ ಹಲವಾರು ಮಂದಿ ಶುದ್ಧ ಆರ್ಯರಿಂದ ಮಗುವಿಗಾಗಿ ಬಂದು ಹೋಗಿರುವುದು ತಿಳಿದುಬಂದಿದೆ.
ವಿದೇಶಿಗರಿಗೂ ಅಣ್ಣಮ್ಮದೇವಿಯ ಡಾನ್ಸ್ ಹೇಳಿಕೊಟ್ಟ ಡಾ.ಬ್ರೊ: ಕತ್ತೆ ಕಿರುಬವನ್ನೂ ಬಿಟ್ಟಿಲ್ಲ ಗಗನ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.