ಲಕ್ಷದ್ವೀಪದಂತೆ ಕಾಜಿರಂಗ ಉದ್ಯಾನಕ್ಕೆ ಮೋದಿ ಸಖತ್ ಪ್ರಮೋಷನ್‌: ಸಾಲು ಸಾಲು ಸುಂದರ ಫೋಟೋ ಶೇರ್‌

By Anusha KbFirst Published Mar 9, 2024, 3:21 PM IST
Highlights

ಪ್ರಧಾನಿ ಅವರು ನೀಡಿದ ಈ ಪ್ರಚಾರದಿಂದ ಕಾಜಿರಂಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಪ್ರಧಾನಿ ಯಾವ ಪ್ರದೇಶಕ್ಕೆ ಭೇಟಿ ನೀಡಿದರು ಆ ಪ್ರದೇಶದ ಸುಂದರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಆ ಪ್ರದೇಶಕ್ಕೆ ಉತ್ತಮ ಪ್ರಚಾರ ನೀಡುತ್ತಾರೆ. 

ಗುವಾಹಟಿ: ಪ್ರಧಾನಿ ಯಾವ ಪ್ರದೇಶಕ್ಕೆ ಹೋಗುತ್ತಾರೋ ಆ ಪ್ರದೇಶವನ್ನು ತಮ್ಮದೇ ರೀತಿಯಲ್ಲಿ ಪ್ರಮೋಷನ್ ಮಾಡುತ್ತಿರುತ್ತಾರೆ. ಮೋದಿ ಹೋದಲೆಲ್ಲಾ  ಪ್ರವಾಸೋದ್ಯಮ ಚಿಗುರಿ ನಿಲ್ಲುತ್ತದೆ. ಇದಕ್ಕೆ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೆ ದೊಡ್ಡ ಸಾಕ್ಷಿ. ಪ್ರಧಾನಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಅನೇಕ ಸೆಲೆಬ್ರಿಟಿಗಳು ಸಿನಿಮಾ ತಾರೆಯರು ಕ್ರಿಕೆಟಿಗರು ಉದ್ಯಮಿಗಳು ಲಕ್ಷದ್ವೀಪ ಪ್ರವಾಸೋದ್ಯಮವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದರು ಜೊತೆಗೆ ಮಲೇಷ್ಯಾ, ಥಾಯ್ಲೆಂಡ್, ಮಾಲ್ಡೀವ್ಸ್ ಹೋಗುವ ಬದಲು ತಾವು ತಮ್ಮದೇ ದೇಶದ ಲಕ್ಷದ್ವೀಪಕ್ಕೆ ಭೇಟಿ ನೀಡುತ್ತೇವೆ ಎನ್ನುವ ಮಾತನಾಡಿದರು.  ಇದು ಲಕ್ಷದ್ವೀಪದ ಆರ್ಥಿಕತೆಗೆ  ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆ ನೀಡುತ್ತಿರುವುದು ಸುಳ್ಳಲ್ಲ,  ಹೀಗಿರುವಾಗ ಇಂದು ಪ್ರಧಾನಿ ನರೇಂದ್ರ ಮೋದಿ  ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ಅಸ್ಸಾಂ ಪ್ರವಾಸಕ್ಕೆ ನಿನ್ನೆ ಸಂಜೆ ಅಸ್ಸಾಂಗೆ ಬಂದಿಳಿದಿದ್ದು, ಇಂದು ಮುಂಜಾನೆ ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಸಫಾರಿ ನಡೆಸಿದರು. ಜೊತೆಗೆ ಉದ್ಯಾನವನದ ಸಫಾರಿ ಜೀಪ್‌ಲ್ಲಿ ರಾಷ್ಟ್ರೀಯ ಪಾರ್ಕ್‌ನಲ್ಲಿ ಸುತ್ತಿದ್ದ ಪ್ರಧಾನಿ ಇಲ್ಲಿನ ಪ್ರಕೃತಿ ರಮಣೀಯ ದೃಶ್ಯದ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಪ್ರದೇಶ ತುಂಬಾ ಚೆನ್ನಾಗಿದ್ದು, ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಂತೆ ಪ್ರವಾಸಿಗರಿಗೆ, ದೇಶದ ಜನರಿಗೆ ಪ್ರಧಾನಿ ಕರೆ ನೀಡಿದ್ದಾರೆ.  ಪ್ರಧಾನಿಯವರ ಈ ಭೇಟಿ ಅಸ್ಸಾಂನ ಪ್ರವಾಸೋದ್ಯಮಕ್ಕೆ ಒಳ್ಳೆ ಕೊಡುಗೆ ನೀಡಬಹುದು ಎಂದು ಊಹಿಸಲಾಗುತ್ತಿದೆ. 

I would urge you all to visit Kaziranga National Park and experience the unparalleled beauty of its landscapes and the warmth of the people of Assam. It's a place where every visit enriches the soul and connects you deeply with the heart of Assam. pic.twitter.com/MFCg9oeFm3

— Narendra Modi (@narendramodi)

73ರ ಹರೆಯದಲ್ಲೂ ಪ್ರಧಾನಿ ಉತ್ಸಾಹದ ಚಿಲುಮೆಯಾಗಿದ್ದು, ಇಂದು ಬೆಳ್ಳಂಬೆಳಗ್ಗೆ ಕಾಜಿರಂಗ ಪಾರ್ಕ್‌ನಲ್ಲಿ ತಮ್ಮ ಸಫಾರಿ ವೀಡಿಯೋ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಪ್ರದೇಶಕ್ಕೆ ಭೇಟಿ ನೀಡುವಂತೆ ಜನರಿಗೆ ಕರೆ ನೀಡಿದ್ದಾರೆ. ಇದರ ಜೊತೆಗೆ ಅಸ್ಸಾಂನ ಪ್ರಸಿದ್ಧ ಚಹಾತೋಟಗಳಿಗೂ ಪ್ರಧಾನಿ ಭೇಟಿ ನೀಡಿದ್ದು,  ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಯಸ್ಸು ಜಸ್ಟ್‌ ನಂಬರ್: ಬೆಳ್ಳಂಬೆಳಗ್ಗೆ ಕಾಜಿರಂಗದಲ್ಲಿ ಗಜ ಸವಾರಿ ಮಾಡಿದ ಮೋದಿ: ಫೋಟೋಸ್

ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಈ ತಾಣಕ್ಕೆ ಚೊಚ್ಚಲ ಭೇಟಿ ನೀಡಿದ ಪ್ರಧಾನಿ ಮೋದಿ, ಮೊದಲು ಉದ್ಯಾನವನದ ಸೆಂಟ್ರಲ್ ಕೊಹೊರಾ ಶ್ರೇಣಿಯ ಮಿಹಿಮುಖ್ ಪ್ರದೇಶದಲ್ಲಿ ಆನೆ ಸಫಾರಿ ಮಾಡಿದರು ನಂತರ ಅದೇ ವ್ಯಾಪ್ತಿಯಲ್ಲಿ ಜೀಪ್ ಸಫಾರಿ ನಡೆಸಿದರು. ನಿನ್ನೆ ಸಂಜೆಯೇ ಪ್ರಧಾನಿ 2 ದಿನಗಳ ಪ್ರವಾಸಕ್ಕಾಗಿ ಅಸ್ಸಾಂಗೆ ಬಂದಿಳಿದಿದ್ದರು. ಇಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರಧಾನಿ ಜೀಪ್‌ನಲ್ಲಿ ಸಫಾರಿ ಮಾಡಿದ್ದಾರೆ.  ಪ್ರಧಾನಿ ಮೋದಿಗೆ ಉದ್ಯಾನವನದ ನಿರ್ದೇಶಕಿ ಸೋನಾಲಿ ಘೋಷ್ ಹಾಗೂ ಇತರ ಅರಣ್ಯ ಸಿಬ್ಬಂದಿ ಸಾಥ್ ನೀಡಿದ್ದಾರೆ. 

ತಾಯಿ ಆನೆಯೊಂದು ಮರಿಯಾನೆಗೆ ತಿನಿಸುವ ಸುಂದರ ವಿಡಿಯೋ...

ಇದರ ಜೊತೆಗೆ ಪ್ರಧಾನಿ ಕಾಜಿರಂಗದಲ್ಲಿರುವ ಆನೆಗಳಾದ ಲಖಿಮೈ, ಪ್ರದ್ಯುಮ್ನ ಹಾಗೂ ಫೂಲ್‌ಮೈ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕಬ್ಬಿನ ಜಲ್ಲೆಗಳನ್ನು ತಿನ್ನಿಸಿದರು.ಈ ಫೋಟೋಗಳನ್ನು ಪ್ರಧಾನಿ ಮೋದಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಾಜಿರಂಗ ಉದ್ಯಾನವನವೂ ಘೇಂಡಾಮೃಗಗಳಿಗೆ ಪ್ರಸಿದ್ಧಿ ಪಡೆದಿದ್ದರು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಆನೆಗಳು ಇವೆ ಎಂದು ಪ್ರಧಾನಿ ಹೇಳಿದ್ದಾರೆ. ಲಖಿಮೈ, ಪ್ರದ್ಯುಮ್ನ ಹಾಗೂ ಫೂಲ್‌ಮೈ ಆನೆಗಳಿಗೆ ಕಬ್ಬಿನ ಜಲ್ಲೆ ತಿನ್ನಿಸಿದೆ. ಘೇಂಡಾಮೃಗಗಳಲ್ಲದೇ ಇಲ್ಲಿ ಆನೆಗಳು ಬಹಳಷ್ಟಿದ್ದು ಇದರ ಜೊತೆಗೆ ಬೇರೆ ಬೇರೆ ಪ್ರಭೇದಗಳ ಹಲವು ಪ್ರಾಣಿಗಳು ಇವೆ ಎಂದು ಪ್ರಧಾನಿ ಹೇಳಿದ್ದಾರೆ. 

Feeding sugar cane to Lakhimai, Pradyumna and Phoolmai. Kaziranga is known for the rhinos but there are also large number of elephants there, along with several other species. pic.twitter.com/VgY9EWlbCE

— Narendra Modi (@narendramodi)

 

ಪ್ರಧಾನಿ ಅವರು ನೀಡಿದ ಈ ಪ್ರಚಾರದಿಂದ ಕಾಜಿರಂಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಪ್ರಧಾನಿ ಯಾವ ಪ್ರದೇಶಕ್ಕೆ ಭೇಟಿ ನೀಡಿದರು ಆ ಪ್ರದೇಶದ ಸುಂದರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಆ ಪ್ರದೇಶಕ್ಕೆ ಉತ್ತಮ ಪ್ರಚಾರ ನೀಡುತ್ತಾರೆ. ಹೀಗಾಗಿ ಪ್ರಧಾನಿಯವನ್ನು  ಪ್ರವಾಸೋದ್ಯಮದ ಅದ್ಭುತ ರಾಯಭಾರಿ ಎಂದರೆ ತಪ್ಪಾಗಲಾರದು. 

Assam is known for its splendid tea gardens, and Assam Tea has made its way all over the world.

I would like to laud the remarkable tea garden community, which is working hard and enhancing Assam’s prestige all over the world.

I also urge tourists to visit these tea gardens… pic.twitter.com/lCMSyQCPZg

— Narendra Modi (@narendramodi)

 

click me!