ಸ್ಕಾರ್ಪಿಯೋ ಕಾರಿನಲ್ಲೇ 41 ದೇಶ ಸುತ್ತಿದ ಪುತ್ತೂರು ಯುವಕ; ಸಾಹಸಿ ಸಿನಾನ್‍‌ಗೊಂದು ಸಲಾಂ

Published : Mar 09, 2024, 02:55 PM IST
ಸ್ಕಾರ್ಪಿಯೋ ಕಾರಿನಲ್ಲೇ 41 ದೇಶ ಸುತ್ತಿದ ಪುತ್ತೂರು ಯುವಕ; ಸಾಹಸಿ ಸಿನಾನ್‍‌ಗೊಂದು ಸಲಾಂ

ಸಾರಾಂಶ

ವಿಶ್ವ ಸುತ್ತೋ ಆಸೆ ಯಾರಿಗೆ ತಾನೇ ಇರೋಲ್ಲ? ಖರ್ಚುವೆಚ್ಚ, ಕೆಲಸ ಇತ್ಯಾದಿ ಕಾರಣಗಳು ಬಹುತೇಕರ ಅಡ್ಡಿ ಆತಂಕಗಳು. ಆದರೆ, ಕರ್ನಾಟಕದ ಈ ಯುವಕ ಅದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮನಸ್ಸಿದ್ದರೆ ಮಾರ್ಗ ಎಂದು ತಮ್ಮ ಸ್ಕಾರ್ಪಿಯೋ ಹತ್ತಿ 75 ದೇಶಗಳನ್ನು ಸುತ್ತುವ ಕನಸನ್ನು ಬೆಂಬತ್ತಿದ್ದಾರೆ.

ವಿಶ್ವ ಸುತ್ತೋ ಆಸೆ ಯಾರಿಗೆ ತಾನೇ ಇರೋಲ್ಲ? ಖರ್ಚುವೆಚ್ಚ, ಕೆಲಸ ಇತ್ಯಾದಿ ಕಾರಣಗಳು ಬಹುತೇಕರ ಅಡ್ಡಿ ಆತಂಕಗಳು. ಆದರೆ, ಕರ್ನಾಟಕದ ಈ ಯುವಕ ಅದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮನಸ್ಸಿದ್ದರೆ ಮಾರ್ಗ ಎಂದು ತಮ್ಮ ಸ್ಕಾರ್ಪಿಯೋ ಹತ್ತಿ 75 ದೇಶಗಳನ್ನು ಸುತ್ತುವ ಕನಸನ್ನು ಬೆಂಬತ್ತಿದ್ದಾರೆ.

ಪುತ್ತೂರಿನ ದರ್ಬೆ ಮೂಲದ ಮಹಮ್ಮದ್ ಸಿನಾನ್ (29) ಈ ಪ್ರಯಾಣ ಕೈಗೊಂಡ ಕನಸಿಗ. ಎರಡು ವರ್ಷಗಳ ಕಾಲ ಮೂರು ಖಂಡಗಳಲ್ಲಿ 75 ದೇಶಗಳಲ್ಲಿ ಒಂದು ಲಕ್ಷ ಕಿಲೋಮೀಟರ್ ಪ್ರಯಾಣಿಸುವ ಗುರಿ ಹೊಂದಿರುವ ಸಿನಾನ್ ಈಗಾಗಲೇ 50 ದೇಶಗಳನ್ನು ನೋಡಿ 41,000 ಕಿಮೀ ಕ್ರಮಿಸಿದ್ದಾರೆ. 

ಜಗತ್ತಿನ 50 ಬೆಸ್ಟ್ ಸ್ವೀಟ್‌ಗಳಲ್ಲಿ ಸ್ಥಾನ ಪಡೆದವು ಈ ಎರಡೇ ಭಾರತೀಯ ಸಿಹಿಗಳು..!
 

ಸಧ್ಯ ಅಮೆರಿಕ ತಲುಪಿರುವ ಸಿನಾನ್ ಪ್ರಯಾಣದ ಬಗ್ಗೆ ಸದಾನಂದಗೌಡರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, 'ಕನ್ನಡದ ಹುಡುಗ ಸಿನಾನ್ (United wander), ತನ್ನ ಸ್ಕಾರ್ಪಿಯೋ ಗಾಡಿಯಲ್ಲಿ ವಿಶ್ವದ ಹಲವು ದೇಶಗಳನ್ನು ಸುತ್ತಾಡಿ ಈಗ ಅಮೆರಿಕಾ ತಲುಪಿದ್ದಾನೆ. ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸು ಹೇಗಿದೆ ಅಂದರೆ ಕಬ್ಬಿಣದ ಮುಚ್ಚಳದಿಂದ ಹಿಡಿದು ಕೀಮೋಥೆರಪಿ ಮಾತ್ರಗಳ ತನಕ ಎಲ್ಲವೂ ಮೇಕ್ ಇನ್ ಇಂಡಿಯಾ !! ನಿಮ್ಮ ಕೋರಿಕೆಯನ್ನು ಪ್ರಧಾನಿ Narendra Modi ಅವರಿಗೆ ತಲುಪಿಸುತ್ತೇನೆ' ಎಂದಿದ್ದಾರೆ. 

 

ಕರ್ನಾಟಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ತಾವು ಈ ಪ್ರಯಾಣ ಕೈಗೊಂಡಿರುವುದಾಗಿ ಸಿನಾನ್ ಹೇಳುತ್ತಾರೆ. 

ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ 30 ವರ್ಷದ ಸಿನಾನ್ ಸಾಹಸ ಮತ್ತು ಕನಸುಗಳ ಅನ್ವೇಷಣೆಯ ಮನೋಭಾವ ಅವರಿಗೆ ಅನನ್ಯ ಅನುಭವ ತಂದಿದೆ. ಯುಕೆನಲ್ಲಿ ಬಿಸ್ನೆಸ್ ಹೊಂದಿರುವ ಸಿನಾನ್ ರಸ್ತೆಯ ಮೂಲಕ 75 ದೇಶಗಳನ್ನು ಪ್ರಯಾಣಿಸುವ ಉದ್ದೇಶ ಈಡೇರುತ್ತಿದೆ. ಯುನೈಟೆಡ್. ವಾಂಡರ್ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೆಸರು ಕೊಟ್ಟುಕೊಂಡಿರುವ ಸಿನಾನ್, 2023ರಲ್ಲಿ  ಈ ಪಯಣ ಆರಂಭಿಸಿದ್ದಾರೆ. 

'ರಾಜ್‌ಗಿಂತ ಶ್ರೀಮಂತರು ನನ್ನ ಹಿಂದೆ..' ಹಣಕ್ಕಾಗಿ ರಾಜ್ ಕುಂದ್ರಾ ಮದುವೆಯಾದ್ರು ಅನ್ನೋರಿಗೆ ತಿರುಗೇಟು ಕೊಟ್ಟ ಶಿಲ್ಪಾ ಶೆಟ್ಟಿ
 

 1 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ, ಈ ಪ್ರಯಾಣವು ಸಿನಾನ್ ಅವರ ಕನಸಿನಲ್ಲಿ ಮಾಡಿದ ಹೂಡಿಕೆಯಾಗಿದೆ. ಬಜೆಟ್‌ನ ಸವಾಲುಗಳು ಮತ್ತು ರಸ್ತೆಯ ಏಕಾಂತತೆಯ ಹೊರತಾಗಿಯೂ, ಸಿನಾನ್‌ನ ಉತ್ಸಾಹವು ಎಲ್ಲವನ್ನೂ ಸಾಧ್ಯವಾಗಿಸುತ್ತಿದೆ. ಇವರು ತಮ್ಮ ಸ್ಕಾರ್ಪಿಯೋ ಕಾರಿನ ಮೇಲೆ ಜಗತ್ತಿನ ಭೂಪಟದೊಂದಿಗೆ ದೇಶಗಳ ಚಿತ್ರ ಹಾಕಿಸಿಕೊಂಡಿದ್ದಾರೆ. ಜೊತೆಗೆ ಭಾರತೀಯ ಧ್ವಜದ ಚಿತ್ರವನ್ನೂ ಹಾಕಿಸಿದ್ದಾರೆ. ಕನ್ನಡಿಗ ಎಂದು ಬರೆಸಿಕೊಂಡಿದ್ದಾರೆ. ಮೇಲೆ ಭಾರತದ ಧ್ವಜ ಹಾರಿಸಿದ್ದಾರೆ. United.wander ಎಂದು ತಮ್ಮ ಇನ್ಸ್ಟಾ ಖಾತೆಯ ಹೆಸರನ್ನು, ಜೊತೆಗೆ ಕರ್ನಾಟಕದಿಂದ ಲಂಡನ್‌ಗೆ ಪಯಣ ಎಂಬುದನ್ನು ಹಾಕಿಸಿಕೊಂಡಿದ್ದಾರೆ. 

ದುಬೈಗೆ ಹಡಗಿನ ಮೂಲಕ ಕಾರನ್ನು ಕಳಿಸಿಕೊಂಡ ಅವರು ದುಬೈನಿಂದ ಪ್ರಯಾಣ ಆರಂಭಿಸಿದ್ದರು. ಕೆನಡ, ಇಂಗ್ಲೆಂಡ್, ಅಮೆರಿಕ, ಗ್ರೀಸ್, ಇರಾನ್ ಸೇರಿದಂತೆ 44 ದೇಶಗಳನ್ನು ಈಗ ಸುತ್ತಿದ್ದಾರೆ. 

 

ಈ ಪ್ರಯಾಣದ ಮೂಲಕ ಭಾರತೀಯ ಆಟೋಮೊಬೈಲ್‌ಗಳ ಬಾಳಿಕೆಯನ್ನು ಪ್ರದರ್ಶಿಸುವುದು ಹಾಗೂ ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಉದ್ದೇಶಿಸಿದ್ದಾರೆ. ದಾರಿಯುದ್ದಕ್ಕೂ ತಮ್ಮ ಕನ್ನಡ ಪ್ರೀತಿಯನ್ನು ಸಾರುತ್ತಿರುವ, ರಾಜ್ಯದ ಹೆಸರನ್ನು ಎತ್ತಿ ಹಿಡಿಯುತ್ತರುವ ಸಿನಾನ್‌ಗೊಂದು ಸಲಾಂ ಹೇಳೋಣ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್