ರುಚಿ ಆಹಾರ ಸಿಗುತ್ತೆ ಅಂದ್ರೆ ವೀಕೆಂಡ್ ನಲ್ಲಿ 200 ಕಿಲೋಮೀಟರ್ ಪ್ರಯಾಣ ಬೆಳೆಸುವ ಆಹಾರ ಪ್ರೇಮಿಗಳಿಗೆ ಇಲ್ಲೊಂದು ಮಾಹಿತಿ ಇದೆ. ಹೆದ್ದಾರಿ ಪಕ್ಕ ಸಿಗುವ ಕೆಲ ಹೊಟೇಲ್ ಲೀಸ್ಟ್ ಇಲ್ಲಿದೆ. ಆ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ತಪ್ಪದೆ ಈ ಹೊಟೇಲ್ ಗೆ ಭೇಟಿ ನೀಡಿ
ಪ್ರಯಾಣದ ಮಧ್ಯೆ ಹಸಿವಾಗೋದು ಹೆಚ್ಚು. ಹೆದ್ದಾರಿ ಮಧ್ಯೆ ಸಾಕಷ್ಟು ಹೊಟೇಲ್ ಗಳು ಸಿಗುತ್ವೆ. ನಮ್ಮ ಕರ್ನಾಟಕದಲ್ಲಂತೂ ಹೊಟೇಲ್ ಗೆ ಬರವಿಲ್ಲ. ಹೆದ್ದಾರಿಗಳಲ್ಲಿ ಒಂದೊಂದು ಮಾರಿಗೆ ಒಂದೊಂದು ಹೊಟೇಲ್ ಇದೆ. ಆದ್ರೆ ಎಲ್ಲ ಹೊಟೇಲ್ ಗಳು ರುಚಿಯಾದ ಆಹಾರವನ್ನು ಉಣಬಡಿಸೋದಿಲ್ಲ. ಕೆಲ ಹೊಟೇಲ್ ಗಳಲ್ಲಿ ನೀವು ದುಬಾರಿ ಹಣ ನೀಡಿದ್ರೂ ಬಾಯಿ ಚಪ್ಪರಿಸಿ ತಿನ್ನುವಂತಹ ಆಹಾರ ನಿಮಗೆ ಸಿಗೋದಿಲ್ಲ. ಮತ್ತೆ ಕೆಲ ಹೊಟೇಲ್ ಗಳಲ್ಲಿ ಹಣ ಕಡಿಮೆ ಇದ್ರೂ ಇನ್ನಷ್ಟು, ಮತ್ತಷ್ಟು ಆಹಾರ ತಿನ್ನಬೇಕೆನ್ನುವಷ್ಟು ರುಚಿಯಾಗಿರುತ್ತದೆ. ಒಮ್ಮೆ ಬಂದವರು ಮತ್ತೆ ಮತ್ತೆ ಆ ಹೊಟೇಲ್ ಹುಡುಕಿಕೊಂಡು ಬರ್ತಾರೆ. ನಾವಿಂದು ಕರ್ನಾಟದಕ ಹೆದ್ದಾರಿಯಲ್ಲಿ ಸಿಗುವ ಕೆಲ ಹೊಟೇಲ್ ಗಳ ಮಾಹಿತಿಯನ್ನು ನಿಮಗೆ ನೀಡ್ತೇವೆ. ನೀವೂ ಒಮ್ಮೆ ಅಲ್ಲಿಗೆ ಭೇಟಿ ನೀಡಿ ರುಚಿಯಾದ ಖಾದ್ಯಗಳ ಸವಿ ಸವಿಯಿರಿ.
ಕಾಮತ್ ಲೋಕರುಚಿ : ಹೆದ್ದಾರಿಗಳಲ್ಲಿ ಸಿಗುವ ಪ್ರಸಿದ್ಧ ಹೊಟೇಲ್ (Hotel) ಗಳ ಬಗ್ಗೆ ಮಾತನಾಡುವಾಗ ಕಾಮತ್ ಲೋಕರುಚಿ ಬಗ್ಗೆ ಮರೆಯಲು ಸಾಧ್ಯವಿಲ್ಲ. ಶತಮಾನಗಳಿಂದ ಬೆಂಗಳೂರಿಗರನ್ನು ಆಕರ್ಷಿಸುತ್ತಿರುವ ಕಾಮತ್ ಮಂಗಳೂರು ಬನ್ಸ್ (Mangalore Buns) ಮತ್ತು ಗೋಲಿ ಭಜ್ಜಿಗೆ ಫೇಮಸ್. ಅಲ್ಲದೆ ಅಲ್ಲಿನ ಪಾತ್ರೋಡ್ ಮತ್ತು ನೀರ್ ದೋಸೆ ಆಹಾರ ಪ್ರೇಮಿಗಳನ್ನು ಸೆಳೆಯುತ್ತದೆ. ಕರ್ನಾಟಕದ ತಿಂಡಿಗಳಿಗೆ ಹೆಸರುವಾಸಿಯಾಗಿರುವ ಈ ಹೊಟೇಲ್ ಮೆನು ದೊಡ್ಡದಿದೆ. ಸ್ಟೀಮ್ ಇಡ್ಲಿ ಇಲ್ಲಿ ಪ್ರಸಿದ್ಧಿ ಪಡೆದಿದೆ. ಸಿಹಿ ತಿನ್ನುವವರಿಗೆ ಮೈಸೂರು ಪಾಕ್, ಧಾರವಾಡ ಪೇಡಾ ಮತ್ತು ರಾಗಿ ಮತ್ತು ಬೇಸನ್ ಲಡ್ಡು ಸೇರಿದಂತೆ ಅನೇಕ ಆಯ್ಕೆಗಳಿವೆ.
ಸನಾತನ ಧರ್ಮದ ಉತ್ತೇಜನ, ಯುವ ಜನಾಂಗ ತಿರುಪತಿಗೆ ತೆರಳುವುದು ಇನ್ನಷ್ಟು ಸುಲಭ
ಕಾಮತ್ ಲೋಕರುಚಿ, ಜನಪದ ಲೋಕ, ಅರ್ಚಕರಹಳ್ಳಿ ಹತ್ತಿರ, ರಾಮನಗರದಲ್ಲಿದೆ. ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ. ಆಹಾರದ ಬೆಲೆ 50 ರೂಪಾಯಿಯಿಂದ ಶುರುವಾಗುತ್ತದೆ. ನೀವು ಈ 9513778220 ನಂಬರ್ ಗೆ ಕರೆ ಮಾಡಿದ್ರೆ ಎಲ್ಲ ಮಾಹಿತಿ ನಿಮಗೆ ಸಿಗುತ್ತೆ.
ವೈಶಾಲಿ : ಹೆದ್ದಾರಿಯಲ್ಲಿ ವೆಜ್ ಹಾಗೂ ನಾನ್ ವೆಜ್ ಎರಡೂ ಆಹಾರ ಪ್ರೇಮಿಗಳಿಗೆ ಇಷ್ಟವಾಗುವ ಆಹಾರ ಸಿಗುತ್ತದೆ. ನಾನ್ ವೆಜ್ ಪ್ರೇಮಿಗಳಿಗೆ ಬೆಂಗಳೂರಿನ ಹೊರವಲಯದಲ್ಲಿರುವ ವೈಶಾಲಿ ಸ್ವರ್ಗ. ದಕ್ಷಿಣ ಭಾರತದ ಆಹಾರ ಮತ್ತು ಮಟನ್ ಇಲ್ಲಿನ ಪ್ರಮುಖ ಭಕ್ಷ್ಯ. ಮಟನ್ ಕೀಮಾ ಗೊಜ್ಜು ಮತ್ತು ಕೀಮಾ ದೋಸೆ ಜೊತೆಗೆ ಮಸಾಲಾ ಅಕ್ಕಿ ರೋಟಿ ಇಲ್ಲಿನ ಸ್ಪೇಷಲ್. ಇದಲ್ಲದೆ ಈ ಹೊಟೇಲ್ ವಾಸ್ತುಶಿಲ್ಪ ಸಾಂಪ್ರದಾಯಿಕವಾಗಿದೆ. ಎಲ್ಲರನ್ನು ಸೆಳೆಯುತ್ತದೆ. ನೀವು ವೈಶಾಲಿಗೆ ಹೋಗ್ಬೇಕೆಂದ್ರೆ ಮುದುಗೆರೆಗೆ ಹೋಗ್ಬೇಕು. SH 17 ಕಾಮತ್ ಉಪಚಾರ್ ಹತ್ತಿರವಿದೆ. ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ ಇದು ತೆರೆದಿರುತ್ತದೆ. ಇಲ್ಲಿನ ಫುಡ್ 200 ರೂಪಾಯಿಯಿಂದ ಶುರುವಾಗುತ್ತದೆ. ನೀವು 9060000900 ನಂಬರ್ ಗೆ ಸಂಪರ್ಕಿಸಿದ್ರೆ ಹೊಟೇಲ್ ಮಾಹಿತಿ ಲಭ್ಯವಾಗಲಿದೆ.
ಈ ಗ್ರಾಮದ ಯುವಕರಿಗೆ ಮದುವೆಯಾಗೋ ಭಾಗ್ಯ ಇಲ್ಲ… ಇದು ಅವಿವಾಹಿತರ ಗ್ರಾಮ !
ಆನಂದ್ ದಮ್ ಬಿರಿಯಾನಿ : ಪ್ರಯಾಣದ ವೇಳೆ ಬಿರಿಯಾನಿ ಸಿಕ್ಕಿದ್ರೆ ಅದರ ಮಜವೇ ಬೇರೆ. ಬಿರಿಯಾನಿ ಪ್ರೇಮಿಗಳು ಹೊಸಕೋಟೆಯ ಮಟನ್ ಬಿರಿಯಾನಿಗೆ ಭೇಟಿ ನೀಡಬಹುದು. ಅನಿಯಮಿತ ರೈತಾ, ಸೌತೆಕಾಯಿ, ನಿಂಬೆ ತುಂಡು ಮತ್ತು ಮಟನ್ ಫೀಸ್ ಇಲ್ಲಿ ಸಿಗುತ್ತದೆ. ಆನಂದ್ ದಮ್ ಬಿರಿಯಾನಿ ಪ್ರತಿದಿನ 1,400 ಪ್ಲೇಟ್‌ಗಳಷ್ಟು ಬಿರಿಯಾನಿಗಳನ್ನು ತಯಾರಿಸುತ್ತದೆ. ಹೊಸಕೋಟೆಯ ಕೆಎಚ್‌ಬಿ ಕಾಲೋನಿಯ ಸ್ವಾಮಿ ವಿವೇಕಾನಂದ ನಗರದ ಚೆನ್ನಬೈರೇಗೌಡ ಕ್ರೀಡಾಂಗಣದ ಎದುರಿನಲ್ಲಿದೆ. ಬೆಳಿಗ್ಗೆ 11 ರಿಂದ ರಾತ್ರಿ 11 ರವರೆಗೆ ಇದು ತೆರೆದಿರುತ್ತದೆ. ಸಂಪರ್ಕಕ್ಕಾಗಿ ನೀವು ಈ 9742500103 ನಂಬರ್ ಡಯಲ್ ಮಾಡಿ.
ವಾಸು ಹೋಟೆಲ್ : ಕನಕಪುರ ರಸ್ತೆಯಲ್ಲಿ ಕೇವಲ 60 ಕಿಲೋಮೀಟರ್ ದೂರದಲ್ಲಿರುವ ಹೋಟೆಲ್ ವಾಸು ಹೊಟೇಲ್. ಮಸಾಲಾ ದೋಸೆಯನ್ನು ಪ್ರೀತಿಸುವ ಪ್ರತಿಯೊಬ್ಬರೂ ಇ;ಲ್ಲಿಗೆ ಅವಶ್ಯವಾಗಿ ಭೇಟಿ ನೀಡಿ. ಮಸಾಲೆ ದೋಸೆ ಜೊತೆ ಸರ್ವ್ ಮಾಡುವ ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ತುಂಬಾ ಸಮಯ ನೆನಪಿನಲ್ಲುಳಿಯುತ್ತದೆ. ಕನಕಪುರ ರಸ್ತೆಯಲ್ಲಿರುವ ಈ ಹೊಟೇಲ್ ಬೆಳಗ್ಗೆ 5.30 ರಿಂದ ಸಂಜೆ 7.40ರವರೆಗೆ ಓಪನ್ ಇರುತ್ತದೆ. ನೀವು 8861102505 ನಂಬರ್ ಗೆ ಕರೆ ಮಾಡಿದ್ರೆ ಮಾಹಿತಿ ಲಬ್ಯವಚಾಗುತ್ತದೆ.
ಶ್ರೀರೇಣುಕಾಂಬಾ ಹೊಟೇಲ್ : ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಟ್ಟೆ ಇಡ್ಲಿಗಾಗಿ ಇಲ್ಲಿ ನಿಲ್ಲುತ್ತಾರೆ. ತಟ್ಟೆ ಇಡ್ಲಿಗಳಿಗೆ ಇದು ಹೆಸರುವಾಸಿಯಾಗಿದೆ. ಇಡ್ಲಿಗೆ ಹಾಕುವ ಬೆಣ್ಣೆ, ಇಡ್ಲಿ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಬಿಡದಿಯಲ್ಲಿ ಈ ಹೊಟೇಲ್ ಇದ್ದು, ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ. ನೀವು ಇಲ್ಲಿ 50 ರೂಪಾಯಿಗೂ ಇಡ್ಲಿ ರುಚಿ ಸವಿಯಬಹುದು. ಅಲ್ಲಿನ ನಂಬರ್ 98450 61490.