ಬೇಸಿಗೆ ರಜೆಗೆ ವಿಶೇಷ ರೈಲುಗಳು: ವಿಜಯಪುರ, ಬೆಳಗಾವಿ, ಬೆಂಗಳೂರಿಗೆ ಸ್ಪೆಷಲ್ ಟ್ರೈನ್ಸ್

Published : Apr 28, 2025, 05:21 PM ISTUpdated : Apr 28, 2025, 05:24 PM IST
ಬೇಸಿಗೆ ರಜೆಗೆ ವಿಶೇಷ ರೈಲುಗಳು: ವಿಜಯಪುರ, ಬೆಳಗಾವಿ, ಬೆಂಗಳೂರಿಗೆ ಸ್ಪೆಷಲ್ ಟ್ರೈನ್ಸ್

ಸಾರಾಂಶ

ಬೇಸಿಗೆ ರಜೆಗೆ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಘೋಷಿಸಿದೆ. ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ (ಎರಡು ಟ್ರಿಪ್), ಯಶವಂತಪುರ-ವಿಜಯಪುರ ಮತ್ತು ಎಸ್‌ಎಂವಿಟಿ ಬೆಂಗಳೂರು-ಮಧುರೈ (ತಲಾ ಒಂದು ಟ್ರಿಪ್) ರೈಲುಗಳು ಏಪ್ರಿಲ್ ೩೦ ಮತ್ತು ಮೇ ಆರಂಭದಲ್ಲಿ ಓಡಲಿವೆ. ವೇಳಾಪಟ್ಟಿ ಮತ್ತು ನಿಲುಗಡೆಗಳ ಮಾಹಿತಿಗಾಗಿ ರೈಲ್ವೆ ಜಾಲತಾಣ ಅಥವಾ ಬುಕಿಂಗ್ ಕೌಂಟರ್‌ಗಳನ್ನು ಸಂಪರ್ಕಿಸಿ.

ಬೆಂಗಳೂರು: ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಈ ಕೆಳಗಿನ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಅದರಂತೆ, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಬೆಳಗಾವಿ ನಡುವೆ ಎರಡು ಟ್ರಿಪ್ಗಳು, ಯಶವಂತಪುರ-ವಿಜಯಪುರ ಮತ್ತು ಎಸ್ಎಂವಿಟಿ ಬೆಂಗಳೂರು-ಮಧುರೈ ನಡುವೆ ತಲಾ ಒಂದು ಟ್ರಿಪ್ ಸೇರಿವೆ. ಈ ವಿಶೇಷ ರೈಲುಗಳ ವಿವರ ಈ ಕೆಳಗಿನಂತಿದೆ:

1.ಎಸ್ಎಂವಿಟಿ ಬೆಂಗಳೂರು–ಬೆಳಗಾವಿ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (06551/06552) ರೈಲು ಸಂಚಾರ:

ರೈಲು ಸಂಖ್ಯೆ 06551 ಎಸ್ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ವಿಶೇಷ ಎಕ್ಸ್ ಪ್ರೆಸ್  ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ  ಏಪ್ರಿಲ್ 30 ಮತ್ತು ಮೇ 2, 2025 ರಂದು ಸಂಜೆ 7:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 07:30 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ.

ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 06552 ಬೆಳಗಾವಿ– ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್  ಬೆಳಗಾವಿಯಿಂದ ಮೇ 1 ಮತ್ತು 3, 2025 ರಂದು ಸಂಜೆ 05:30 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ  04:30 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರನ್ನು ತಲುಪಲಿದೆ.

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸಿಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ. ಹಾವೇರಿ, ಎಸ್ಎಸ್ಎಸ್. ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ರೈಲಿನಲ್ಲಿ 1 ಎಸಿ-ಟು ಟೈರ್, 01 ಎಸಿ-ತ್ರಿ ಟೈರ್, 08 ಸ್ಲೀಪರ್ ಕ್ಲಾಸ್, 04 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 02 ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ ಒಟ್ಟು 16 ಬೋಗಿಗಳು ಇರಲಿವೆ.

2.ಯಶವಂತಪುರ–ವಿಜಯಪುರ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (06561/06562) ರೈಲು ಸಂಚಾರ:

 ರೈಲು ಸಂಖ್ಯೆ 06561 ಯಶವಂತಪುರ – ವಿಜಯಪುರ ವಿಶೇಷ ಎಕ್ಸ್ ಪ್ರೆಸ್ ಯಶವಂತಪುರದಿಂದ ಏಪ್ರಿಲ್ 30, 2025 ರಂದು ರಾತ್ರಿ 10:00 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 02:05 ಗಂಟೆಗೆ ವಿಜಯಪುರವನ್ನು ತಲುಪಲಿದೆ.

ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 06562 ವಿಜಯಪುರ–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ವಿಜಯಪುರದಿಂದ ಮೇ 1, 2025 ರಂದು ಸಂಜೆ 7:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 11:15 ಗಂಟೆಗೆ ಯಶವಂತಪುರವನ್ನು ತಲುಪಲಿದೆ.

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸಿಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ರೈಲಿನಲ್ಲಿ 02 ಎಸಿ-ಟು ಟೈರ್, 06 ಎಸಿ-ತ್ರಿ ಟೈರ್, 07 ಸ್ಲೀಪರ್ ಕ್ಲಾಸ್, 04 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 02 ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ಗಳು ಸೇರಿದಂತೆ ಒಟ್ಟು 21 ಬೋಗಿಗಳು ಇರಲಿವೆ.

3.ಎಸ್ಎಂವಿಟಿ ಬೆಂಗಳೂರು–ಮಧುರೈ  ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (06521/06522) ರೈಲು ಸಂಚಾರ:

ರೈಲು ಸಂಖ್ಯೆ 06521 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮಧುರೈ ವಿಶೇಷ ಎಕ್ಸ್ ಪ್ರೆಸ್  ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಏಪ್ರಿಲ್ 30, 2025 ರಂದು ಸಂಜೆ 07:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 06:15 ಗಂಟೆಗೆ ಮಧುರೈಯನ್ನು ತಲುಪಲಿದೆ.

ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 06522 ಮಧುರೈ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವಿಶೇಷ ಎಕ್ಸ್ ಪ್ರೆಸ್  ಮಧುರೈಯಿಂದ ಮೇ 1, 2025 ರಂದು ಬೆಳಿಗ್ಗೆ 09:10 ಗಂಟೆಗೆ ಹೊರಟು, ಅದೇ ದಿನ ಸಂಜೆ 07:50 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರನ್ನು ತಲುಪಲಿದೆ.

ಇದನ್ನೂ ಓದಿ: ಕರ್ನಾಟಕ ಟು ಕಾಶ್ಮೀರ ವಿಮಾನ ದರ ₹40 ಸಾವಿರದಿಂದ ₹8 ಸಾವಿರಕ್ಕೆ ಕುಸಿತ!

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರು, ದಿಂಡಿಗುಲ್ ಮತ್ತು ಕೊಡೈಕೆನಾಲ್ ರೋಡ್  ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ. ಈ ರೈಲಿನಲ್ಲಿ 2 ಎಸಿ-ಟು ಟೈರ್, 16 ಎಸಿ-ತ್ರಿ ಟೈರ್ ಮತ್ತು 2 ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ಗಳು ಸೇರಿದಂತೆ ಒಟ್ಟು 20 ಬೋಗಿಗಳು ಇರಲಿವೆ.

ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿಯನ್ನು ತಿಳಿಯಲು ಭಾರತೀಯ ರೈಲ್ವೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು ಅಥವಾ ನಿಮ್ಮ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್’ಗಳನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ಸಿಬ್ಬಂದಿ ಹೇಳಲ್ಲ, ಹೆಚ್ಚಿನವರಿಗೆ ತಿಳಿದಿಲ್ಲ; ವಿಮಾನ ಪ್ರಯಾಣದಲ್ಲಿದೆ 7 ಉಚಿತ ಸೌಲಭ್ಯ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಗ್ಗದ ದರದರಲ್ಲಿ ವಿದೇಶ ಪ್ರವಾಸಕ್ಕೆ Flight Book ಮಾಡೋದು ಹೇಗೆ?
Tatkal Ticket: ತತ್ಕಾಲ್ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ದುಡ್ಡು ವಾಪಸ್ ಸಿಗುತ್ತಾ? ರೈಲ್ವೆ ರೂಲ್ಸ್ ಏನು ಹೇಳುತ್ತೆ?