ಇಂಡೋನೇಷ್ಯಾದ ಪಪುವಾ ಕಾಡಿನಲ್ಲಿ ಮಹಿಳೆಯರು ಮಾತ್ರ ಪ್ರವೇಶಿಸಬಹುದಾದ ಒಂದು ವಿಶಿಷ್ಟ ಸ್ಥಳವಿದೆ. ಈ 'ಪವಿತ್ರ ಕಾಡು' ಎಂದು ಕರೆಯಲ್ಪಡುವ ಸ್ಥಳದಲ್ಲಿ ಮಹಿಳೆಯರು ಬೆತ್ತಲೆಯಾಗಿ ಸ್ವಾತಂತ್ರ್ಯ ಮತ್ತು ಮುಕ್ತತೆಯನ್ನು ಅನುಭವಿಸುತ್ತಾರೆ.
ಈ ಕಾಡಿನ ಒಳಗೆ ಹೋಗುವ ಎಲ್ಲ ಮಹಿಳೆಯರು ತನ್ನ ಬಟ್ಟೆಗಳನ್ನು ಪೂರ್ತಿ ತೆಗೆದು ಬದಿಗಿಟ್ಟು ಒಳಗೆ ಹೋಗಬೇಕು. ಇಲ್ಲಿ ಹೆಣ್ಣುಮಕ್ಕಳು ಬಿಡುಬೀಸಾಗಿ ಇರುತ್ತಾರೆ. ಪೂರ್ಣಪ್ರಮಾಣದ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಸ್ತ್ರೀಯರು ತಮ್ಮ ಬರಿಯ ಬತ್ತಲೆ ಮೈಯನ್ನು ಮರಳ ತೀರದ ನೊರೆಯಂತಹ ತಿಳಿಬಿಳಿ ಮರಳ ಮೇಲೆ ಒಣಹಾಕಿ ಬಿಡುತ್ತಾರೆ. ಹಾಗೆ ಸ್ವಲ್ಪ ಹೊತ್ತು ಮಲಗಿದ್ದು, ಬೆನ್ನು ಬಿಸಿಯಾಗಲು ಪ್ರಾರಂಭವಾಗುತ್ತಿದ್ದಂತೆ, ಕಾಡಿನ ಒಳಗೆ ಮತ್ತೊಂದು ತಣ್ಣಗಿನ ಜಾಗಕ್ಕಾಗಿ ಅಲೆದಾಡುತ್ತಾರೆ. ಬೇಕಾದಂತೆ ನಿರ್ಭಿಢೆಯಿಂದ ವಿಹರಿಸುತ್ತಾರೆ.
ಯಾಕೆಂದರೆ ಅದೊಂದು ಕಾಡು ಕೇವಲ ಮಹಿಳೆಯರ ಪ್ರವೇಶಕಷ್ಟೆ ಸೀಮಿತ. ಅಲ್ಲಿ ಪುರುಷರು ಪ್ರವೇಶಿಸುವುದು ಪೂರ್ತಿ ನಿಷಿದ್ಧ. ಆ ಕಾಡನ್ನು ಪ್ರವೇಶಿಸುವ ಮುನ್ನ ಮಹಿಳೆಯರು ಪೂರ್ತಿ ನಗ್ನರಾಗಿಯೇ ಕಾಡಿನೊಳಕ್ಕೆ ಅಡಿಯಿಡಬೇಕು. ಬತ್ತಲೆಯಾಗದ ಸ್ತ್ರೀಯರಿಗೂ ಅಲ್ಲಿ ಪ್ರವೇಶವಿಲ್ಲ. ಇದೆಲ್ಲಿದೆ ಅಂತ ಕೇಳ್ತೀರಾ? ಅಲ್ಲಿನ ಜನಸಮುದಾಯ ‘ಪವಿತ್ರ ಕಾಡು‘ ಎಂದು ಕರೆಯುವ ಈ ಬತ್ತಲೆ ಕಾಡು ಇರುವುದು ಇಂಡೋನೇಷ್ಯಾದಲ್ಲಿ. ಪಪುವಾ ಕಾಡು ಎಂದು ಕರೆಯಲ್ಪಡುವ ಈ ಕಾಡು ಇರುವುದು ಅಲ್ಲಿನ ಜಯಪುರ ಎಂಬ ಭಾರತೀಯ ಹೆಸರಿನ ಪಟ್ಟಣದ ವ್ಯಾಪ್ತಿಯಲ್ಲಿ.
ಅಲ್ಲಿ ಕೇವಲ ಮಹಿಳೆಯರು ಮಾತ್ರ ಪ್ರವೇಶ ಮಾಡಬಹುದಾದ ಕಾರಣ ಸ್ತ್ರೀಯರು ಸಂಪೂರ್ಣ ಮುಕ್ತತೆ ಅನುಭವಿಸುತ್ತಾರೆ. ಬತ್ತಲೆ ಕೂತು ಪರಸ್ಪರ ಮಾತಾಡುತ್ತಾರೆ. ಒಬ್ಬರ ಕಥೆಗೆ ಮತ್ತೊಬ್ಬರು ಕಿವಿಯಾಗುತ್ತಾರೆ. ಮಾತಾಡುತ್ತಲೇ ಮರಳ ಕೆಳಗೆ ಬೆಚ್ಚಗೆ ಮಲಗಿರುವ ‘ಕ್ಲಾಂಸ್‘ ಎಂಬ ಹೆಸರಿನ ಮೃದ್ವಂಗಿಗಳನ್ನು ಹುಡುಕುತ್ತಾರೆ. ಇದು ಚಿಪ್ಪಿನ ಒಳಗೆ ಜೀವಿಸುವ ಮೃದ್ವಂಗಿ ಜೀವಿ. ಇದನ್ನ ಬೇಯಿಸಿ ಆಸ್ವಾದಿಸಬಹುದು. ಈ ಹಿಂದೆಲ್ಲಾ ಒಂದು ಮಧ್ಯಾಹ್ನದ ಒಳಗೆ ತಾವು ಸಾಗಿದ ಬೋಟಿನ ತುಂಬಾ ಕ್ಲಾಂಸ್ ತುಂಬಿಕೊಂಡು ವಾಪಸ್ಸು ಬರಬಹುದಿತ್ತು. ಇದೀಗ ಈ ಮೃದ್ವಂಗಿಗಳ ಸಂಖ್ಯೆ ಕೂಡ ಕುಗ್ಗಿದೆ. ಈಗ ಇಡೀ ದಿನ ಚಿಪ್ಪು ಹೆಕ್ಕಿದರೂ ಅರ್ಧ ಬೋಟು ತುಂಬುವುದಿಲ್ಲ ಎನ್ನುತ್ತಾರೆ ಅಲ್ಲಿನ ಬೆತ್ತಲೆ ಕಾಡಿಗೆ ಆಗಾಗ ಭೇಟಿಯಾಗುವ ಮಹಿಳೆಯರು.
ಒಂದು ಕಾಲದಲ್ಲಿ ಪರಿಶುದ್ಧವಾಗಿದ್ದ ಕಾಡಿನಲ್ಲಿ ಇದೀಗ ಪ್ಲಾಸ್ಟಿಕ್ ತನ್ನ ಹಾಜರಿ ಹಾಕಿದೆ. ಆದರೂ ನಗ್ನ ಕಾಡು ಇನ್ನೂ ಸ್ತ್ರೀಯರನ್ನು ಆಕರ್ಷಿಸುತ್ತಿದೆ. ಈ ಕಾಡು ಒಟ್ಟು 8 ಹೆಕ್ಟೇರ್ ವ್ಯಾಪ್ತಿ ಹೊಂದಿದ್ದು ಸಾಕಷ್ಟು ದಟ್ಟವಾಗಿಯೇ ಇದೆ. ಈ ಕಾಡಿಗೆ ಪುರುಷರ ಪ್ರವೇಶ ನಿಷೇಧವಿದ್ದರೂ ಅಲ್ಲಲ್ಲಿ ಕೆಲವರು ಕಾಡು ಪ್ರವೇಶಿಸುವುದುಂಟು. ಕೆಲವರು ಕುತೂಹಲದ ಪುರುಷರು ಹಾಗೆ ಕಾಡು ಸೇರಿದರೆ, ಅವರನ್ನು ಅಲ್ಲಿನ ಆದಿವಾಸಿ ಸಮುದಾಯದ ಮುಂದೆ ತಂದು ನಿಲ್ಲಿಸಲಾಗುತ್ತದೆ. ಅವರಿಗೆ ದುಬಾರಿ ಮೊತ್ತದ ಫೈನ್ ಕೂಡ ಹಾಕಲಾಗುತ್ತದೆ. ಅಲ್ಲಿನ ಇಂಡೋನೇಷಿಯಾದ ‘ ರುಪಯ‘ ದಲ್ಲಿ ಬರೋಬ್ಬರಿ 10 ಲಕ್ಷ ಮೊತ್ತದ ಫೈನ್.
ಫೈನ್‌ನ ಮೇಲಿನ ಹೆದರಿಕೆಯಿಂದ ಅಲ್ಲ, ಸಾಮಾನ್ಯವಾಗಿ ದಾರಿ ತಪ್ಪಿ ಮಾತ್ರ ಪುರುಷರು ಅತ್ತ ಹೋಗುವುದು. ಬೆತ್ತಲೆ ಸ್ತ್ರೀಯರನ್ನು ಕದ್ದು ನೋಡುವ ಮಂದಿ ಅಲ್ಲಿ ಇಲ್ಲ. ಸಾಕಷ್ಟು ಪ್ರಚಾರಕ್ಕೆ ಬರದೇ ಗುಪ್ತವಾಗಿದ್ದ ಈ ಕಾಡು, ಬಿಬಿಸಿ ಪ್ರಕಟ ಮಾಡಿದ ಡಾಕ್ಯುಮೆಂಟರಿ ಒಂದರ ನಂತರ ಸುದ್ದಿಮಾಧ್ಯಮಗಳಲ್ಲಿ ಜೋರಾಗಿ ಸುದ್ದಿಯಾಗುತ್ತಿದೆ.
ಇತ್ತೀಚೆಗೆ ಆಧುನಿಕ ಮೆಟ್ರೋ ನಗರಗಳಲ್ಲಿ ಕೆಲವು ಅತ್ಯಾಧುನಿಕ ಮನಸ್ಥಿತಿಯ ಕ್ಲಬ್‌ಗಳು ನ್ಯೂಡಿಸ್ಟ್ ರೂಢಿ ಆರಂಭಿಸುತ್ತಿದ್ದಾರೆ. ಒಂದು ನಿರ್ದಿಷ್ಟ ದಿನದಂದು ಆ ಕ್ಲಬ್ಬಿನ ಎಲ್ಲರೂ ನಗ್ನರಾಗಿ ಅಲ್ಲಿನ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳುವುದು. ಇತ್ತೀಚೆಗೆ ಇದು ಆರಂಭವಾಗುವುದಕ್ಕೆ ಮೊದಲೇ ಪಪುವಾದ ಈ ದ್ವೀಪದಲ್ಲಿ ಅದು ಸಾಧ್ಯವಾಗಿತ್ತು ಅನ್ನುವುದು ವಿಶೇಷ.