ಅಪ್ಪಿ ತಪ್ಪಿಯೂ ಏರ್‌ಪೋರ್ಟ್‌ನಲ್ಲಿ ಈ ಪದಗಳನ್ನ ಹೇಳಬೇಡಿ.. ಮಾತಾಡಿದ್ರೆ ಅರೆಸ್ಟ್ ಆಗೋದು ಪಕ್ಕಾ. ಆ ಪದಗಳು ಯಾವವು ಎಂಬುದನ್ನು ಭದ್ರತಾ ಸಿಬ್ಬಂದಿ ಹೇಳಿದ್ದಾರೆ.
ಬೆಂಗಳೂರು: ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು. ವಿಮಾನ ನಿಲ್ದಾಣದಲ್ಲಿ ಕೆಲವು ಪದಗಳನ್ನು ಹೇಳಿದ್ರೆ ಬಂಧನ ಆಗೋದು ಖಂಡಿತ. ಈ ರೀತಿಯ ಪದಗಳನ್ನು ಬಳಸಿದ್ದಕ್ಕೆ ದೆಹಲಿ ಮತ್ತು ಕೊಚ್ಚಿಯಲ್ಲಿ ಮೂವರ ಬಂಧನವಾಗಿದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಹಾಗಾಗಿ ಮಾತನಾಡುವಾಗ ನಾವು ಯಾವ ಪದಗಳನ್ನು ಬಳಕೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಜಾಗೃತೆ ಇರಬೇಕು.
ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಪ್ರಕಾರ, ಕೆಲವೊಮ್ಮೆ ಪ್ರಯಾಣಿಕರು ಒತ್ತಡದಲ್ಲಿದ್ದಾಗ ಇಂತಹ ಮಾತುಗಳನ್ನಾಡುತ್ತಾರೆ. ನಂತರ ತಮ್ಮ ಮಾತಿನಿಂದಲೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಉದಾಹರಣೆಗೆ ಚೆಕ್ ಇನ್ ಆಗುವ ಸಂದರ್ಭದಲ್ಲಿ, ಬ್ಯಾಗ್ ಪರಿಶೀಲನೆ ವೇಳೆ ಕೆಲ ಪ್ರಯಾಣಿಕರು ಕೋಪಗೊಳ್ಳುತ್ತಾರೆ. ಬ್ಯಾಗ್ ಸ್ಕ್ಯಾನಿಂಗ್ ಸಮಯದಲ್ಲಿ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದ್ರೆ ಬ್ಯಾಗ್ ತೆರೆದು ತೋರಿಸುವಂತೆ ಕೇಳುತ್ತಾರೆ. ಆ ವೇಳೆ ಸಿಐಎಸ್‌ಎಫ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾರೆ. ಕೋಪಗೊಂಡ ಪ್ರಯಾಣಿಕರು, ಬ್ಯಾಗ್‌ನಲ್ಲಿ ಬಾಂಬ್ ಏನಾದ್ರು ಇದೆಯಾ ಅಂತ ನೋಡಿಕೊಳ್ಳಿ ಎಂದು ಜೋರಾಗಿಯೇ ಹೇಳುತ್ತಾರೆ. ಬಾಂಬ್ ಎಂಬ ಪದ ಆತಂಕದ ವಾತಾವರಣ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.
undefined
ವಿಮಾನಯಾನ ಸುರಕ್ಷತೆಯು ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ, ಏರ್‌ಪೋರ್ಟ್‌ನಲ್ಲಿ ಬಾಂಬ್ ನಿಷೇಧಿತ ಶಬ್ದವಾಗಿದೆ. ಯಾವುದೇ ಪ್ರಯಾಣಿಕ ಬಾಂಬ್ ಪದ ಬಳಕೆ ಮಾಡಿದ್ತೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ವಿಮಾನ ಹಾಗೂ ಪ್ರಯಾಣಿಕರ ಸುರಕ್ಷತೆ ಹಿನ್ನೆಲೆ ಅಧಿಕಾರಿಗಳು ಈ ವಿಷಯದಲ್ಲಿ ಕೊಂಚವೂ ನಿರ್ಲಕ್ಷ್ಯ ತೋರಲ್ಲ. ಆರೋಪಿ ಪ್ರಯಾಣಿಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಏರ್‌ಪೋರ್ಟ್ ಭದ್ರತೆಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಂಬ್ ಸೇರಿದಂತೆ ಕೆಲವು ಪದಗಳನ್ನು ಹೇಳುವುದು ವಿಮಾನ ನಿಲ್ದಾಣದಲ್ಲಿ ನಿಷೇಧಿಸಲಾಗಿದೆ. ಈ ರೀತಿಯ ಪದಗಳನ್ನು ಹೇಳುವ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಳ್ಳುವುದು ಫಿಕ್ಸ್. ನಂತರ ಅವರು ಕಾನೂನು ಪ್ರಕಾರವೇ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಬೇಕು. ಟೆರಿರಿಸ್ಟ್, ಬಾಂಬ್, ಮಿಸೈಲ್,ಗನ್ ಅಥವಾ ಮಾರಕಾಸ್ತ್ರಗಳ ಹೆಸರನ್ನು ಹೇಳುವಂತಿಲ್ಲ. ನೀವು ಮಾತನಾಡೋದನ್ನು ಅನ್ಯ ಪ್ರಯಾಣಿಕರು ಕೇಳಿಸಿಕೊಂಡರೆ ದೂರು ದಾಖಲಿಸುತ್ತಾರೆ. ಎಲ್ಲಾ ಪ್ರಯಾಣಿಕರ ದೃಷ್ಟಿಯಿಂದಲೇ ಮರುಕ್ಷಣವೇ ಅಂತಹ ವ್ಯಕ್ತಿಯನ್ನು ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಏಪ್ರಿಲ್ 4ರಂದು ಜಿಗ್ನೇಶ್ ಮಾಲನ್ ಮತ್ತು ಕಶ್ಯಪ್ ಕುಮಾರ್ ಎಂಬವರು ಆಕಾಶ್ ಏರ್‌ಲೈನ್ಸ್ QP-1334 ಸಂಖ್ಯೆಯ ವಿಮಾನದಲ್ಲಿ ಅಹಮದಾದಬಾದ್‌ಗೆ ಪ್ರಯಾಣಿಸುತ್ತಿದ್ದರು. ದೆಹಲಿಯ ಸೆಕಂಡರಿ ಲ್ಯಾಡರ್ ಪಾಯಿಂಟ್ ಚೆಕ್ಕಿಂಗ್ ವೇಳೆ ಇವರಿಬ್ಬರು ಕೋಪದಲ್ಲಿ ನೀವೇನು ಮಾಡಿಕೊಳ್ಳುತ್ತೀರಿ. ನಾನು ಬ್ಯಾಗ್‌ನಲ್ಲಿ ನ್ಯೂಕ್ಲಿಯರ್ ಬಾಂಬ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಹೀಗೆ ಹೇಳುತ್ತಿದ್ದಂತೆ ಇಬ್ಬರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. ಇಬ್ಬರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 5050(1)(ಬಿ) ಮತ್ತು 182 ಅಡಿಯಲ್ಲಿಮ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.