ಅಪರೂಪದ ಹೊಯ್ಸಳರ ದೇಗುಲ ಶಿಥಿಲ, ಜೀರ್ಣೋದ್ಧಾರಕ್ಕೆ 85 ಲಕ್ಷ ಕೊಟ್ರೂ ಕೆಲಸ ಮಾಡದ ಅಧಿಕಾರಿಗಳು!

By Kannadaprabha NewsFirst Published Aug 12, 2024, 5:15 PM IST
Highlights

ಅಭಿವೃದ್ಧಿ ಕಾಣದ ಯೋಗಾ ನರಸಿಂಹಸ್ವಾಮಿ ದೇವಾಲಯ, 85 ಲಕ್ಷ ವೆಚ್ಚದ ಜೀರ್ಣೋದ್ಧಾರಕ್ಕೆ ಅನುಮೋದನೆ ಸಿಕ್ಕರೂ ಕೆಲಸ ಮಾತ್ರ ಆಗಿಲ್ಲ. ದ್ವಿಕುಟಾಚಲ ದೇವಾಲಯವಾಗಿರುವ ಇಲ್ಲಿ 12 ಅಡಿ ಎತ್ತರದ ಯೋಗಾ ನರಸಿಂಹ ಸ್ವಾಮಿ ವಿಗ್ರಹವು ಬಲ್ಲಾಳನ ಕಾಲದಲ್ಲಿ ನಿರ್ಮಾಣವಾಗಿದೆ.

ಎಚ್.ಆರ್‌. ಗೌತಮ್ ಶರ್ಮಾ

ಹಳೇಬೀಡು (ಆ.12): ಹೊಯ್ಸಳರ ಇತಿಹಾಸದಲ್ಲಿ ದ್ವಾರಸಮುದ್ರ ಹೊಯ್ಸಳರ ರಾಜಧಾನಿಯಾಗಿ ಮೆರೆದಂಥ ಭೂಮಿ. ಈ ಹಳೇಬೀಡಿನಲ್ಲಿ ಸುಮಾರು 100ಕ್ಕೂ ಹೆಚ್ಚು ದೇವಾಲಯಗಳು ಇವೆ. ಹಳೇಬೀಡು ಹೋಬಳಿ ರಾಜನಸಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನರಸೀಪುರ ಗ್ರಾಮದಲ್ಲಿ ಇತಿಹಾಸವುಳ್ಳ ನರಸೀಪುರ ಯೋಗಾ ನರಸಿಂಹಸ್ವಾಮಿ ದೇವಾಲಯ ನಿರ್ವಹಣೆ ಕೊರತೆಯಿಂದಾಗಿ ಶಿಥಿಲಗೊಂಡಿದೆ.

Latest Videos

ದ್ವಿಕುಟಾಚಲ ದೇವಾಲಯವಾಗಿರುವ ಇಲ್ಲಿ 12 ಅಡಿ ಎತ್ತರದ ಯೋಗಾ ನರಸಿಂಹ ಸ್ವಾಮಿ ವಿಗ್ರಹವು ಬಲ್ಲಾಳನ ಕಾಲದಲ್ಲಿ ನಿರ್ಮಾಣವಾಗಿದೆ. ಇದರ ಬಲ ಭಾಗದ ಅಂಗಳದಲ್ಲಿ ಲಕ್ಷ್ಮೀನಾರಾಯಣ ದೇವಾಲಯ ಹೊಂದಿತ್ತು. ಇದರ ಶಿಲಾ ಶಾಸನಗಳ ಬಗ್ಗೆ ಜರ್ಮನಿಯ ಮಹಿಳಾ ತಜ್ಞರು ಇದನ್ನು ಪತ್ತೆ ಹಚ್ಚಿದರು. ಆ ದೇವಾಲಯ ಕಾಲಕ್ರಮೇಣ ಬಿದ್ದುಹೋಗಿದೆ. ಅದರ ವಿಗ್ರಹ ಹೊರಭಾಗದಲ್ಲಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 1995ನೇ ಸಾಲಿನಲ್ಲಿ ಸ್ಥಳೀಯ ಮತ್ತು ಹೊರ ಭಕ್ತರ ಸಹಕಾರದಿಂದ ದೇವಾಲಯವನ್ನು ಅಲ್ಪ ಪ್ರಮಾಣದಲ್ಲಿ ಜೀರ್ಣೋದ್ಧಾರ ಮಾಡಿದ್ದರು. ಇಲ್ಲಿಯ ಇತಿಹಾಸದ ಯೋಗಾನರಸಿಂಹ ಸ್ವಾಮಿ ದೇವಾಲಯವನ್ನು ಉಳಿಸಲೇಬೇಕು ಎಂದು ಗ್ರಾಮಸ್ಥರು ಹಾಗೂ ಕೆಲವರು ಸೇರಿಕೊಂಡು ಸಲ್ಲಿಸಿದ ಮನವಿಗೆ ಮೈಸೂರಿನ ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯಿಂದ ಸುಮಾರು ರು. 55 ಲಕ್ಷದ ವೆಚ್ಚದಲ್ಲಿ ದೇವಾಲಯದ ರಿಪೇರಿಗೆ ಸರ್ಕಾರ ಅನುಮೋದನೆ ನೀಡಿದೆ. ಆದರೆ ಇಲ್ಲಿವರೆಗೂ ಕೆಲಸವಾಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ ಬಳಿಕ ಬೇಲೂರು ದೇಗುಲಕ್ಕೆ ಯುನೆಸ್ಕೋ ನಿರ್ದೇಶಕರ ಟೀಂ ಭೇಟಿ

ಈ ದೇವಾಲಯಕ್ಕೆ ಸರಿಯಾದ ರಸ್ತೆಯೂ ಇಲ್ಲದೆ ಗುಂಡಿಗಳಿಂದ ಕೂಡಿದೆ. ಸಾಮಾನ್ಯವಾಗಿ ಪ್ರವಾಸಿಗರು ಬರುವುದೇ ಕಡಿಮೆ. ಹಳೇಬೀಡು ಮತ್ತು ರಾಜನಸಿರಿಯೂರು ಸಾಗುವ ಮಧ್ಯದಲ್ಲಿ ಬಿದರಿ ಕೋಡಿ ಎಂಬ ಸ್ಥಳದಿಂದ ಸುಮಾರು 1.5 ಕಿಲೋಮೀಟರ್ ದೂರ ಕ್ರಮಿಸಿದರೆ ಹೊಯ್ಸಳರ ಕಾಲದ ದೇವಾಲಯ ನೋಡಬಹುದು. ಇದರ ಚಿತ್ರಕಲೆ ತುಂಬಾ ವರ್ಣಮಯವಾಗಿದೆ. ದೇವಾಲಯದ ಮುಂಭಾಗದಲ್ಲಿ ಅಲಂಕಾರ ಮಂಟಪವು ಸಹ ಇದೆ. ಈ ದೇಗುಲ ತುಂಬಾ ಶಕ್ತಿಪೀಠವಾದ ಸ್ಥಳವಾಗಿದೆ. ಇಲ್ಲಿಯ ಸ್ಥಳೀಯರು ಹೇಳುವ ಪ್ರಕಾರ ದೇವರಿಂದ ನಮಗೆ ಅಪ್ಪಣೆಯ ಪುಷ್ಪ ಪ್ರಸಾದ ನೀಡಿದರೆ ನಮ್ಮ ಕೆಲಸ ಸುಸೂತ್ರವಾಗುತ್ತದೆ ಎಂಬ ಭಕ್ತಿ ಇಲ್ಲಿನ ಜನರಲ್ಲಿದೆ. ಪ್ರತಿ ಶನಿವಾರ 12 ಗಂಟೆಯಿಂದ ಸಂಜೆ 5ರವರೆಗೂ ದೇವಾಲಯವೂ ತೆರೆದಿರುತ್ತದೆ. ಈ ದೇವಾಲಯದಲ್ಲಿ ಪ್ರತಿ ಶನಿವಾರದ ಪೂಜೆ ಮಾತ್ರ ವೈಖಾನಸ ಆಗಮ ಪ್ರಕಾರವೇ ನಡೆದುಕೊಂಡು ಬಂದಿದೆ.

ಈ ದೇವಾಲಯದ ಹತ್ತಿರ ಅಗ್ರಹಾರ ಎಂಬ ಗ್ರಾಮವಿತ್ತು ಎಂದು ಉಲ್ಲೇಖವಿದೆ. ಇದರ ಜೊತೆಗೆ ಈ ಭಾಗದಲ್ಲಿ ಹೆಚ್ಚು ಕಬ್ಬನ್ನು ಬೆಳೆಯುತ್ತಿದ್ದರು. ಇಲ್ಲಿನ ಕಬ್ಬಿನ ಹಾಲನ್ನು ಆಂಧ್ರಪ್ರದೇಶದ ತಿರುಪತಿಗೆ ಕಳಿಸುವ ವಾಡಿಕೆ ಇತ್ತು. ಅಲ್ಲಿಂದ ಲಡ್ಡು ಪ್ರಸಾದ ಪ್ರತಿ ಶನಿವಾರ ಇಲ್ಲಿಗೆ ಬರುತ್ತಿತ್ತು ಎಂಬುದು ಶಾಸನದಲ್ಲಿ ಉಲ್ಲೇಖವಾಗಿದೆ. ಈ ದೇವಾಲಯದ ಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಿ ತಕ್ಷಣವೇ ಉಳಿಸಿ ಕಾಯಕಲ್ಪ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಲಾಲ್‌ಬಾಗ್‌ ಫ್ಲವರ್‌ ಶೋ ,ಗುಡ್ ನ್ಯೂಸ್ ನೀಡಿದ ನಮ್ಮ ಮೆಟ್ರೋ, ಪೇಪರ್ ಟಿಕೆಟ್ ಎಲ್ಲಿ ಸಿಗಲಿದೆ?

ಈ ದೇವಾಲಯಕ್ಕೆ ನಮ್ಮ ತಾತನ ಕಾಲದಿಂದ ಪೂಜೆಯನ್ನು ಮಾಡುತ್ತಾ ಬಂದಿದ್ದೇವೆ. ಇದು ವೈಖಾನಸ ಆಗಮ ಪ್ರಕಾರ ಪ್ರತಿ ಶನಿವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರಗೆ ತೆರೆದಿರುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷವಾದ ಪೂಜೆ, ಅಭಿಷೇಕ, ವಿಶೇಷ ಪುಷ್ಪ ಅಲಂಕಾರ ಇರುತ್ತದೆ. ಈ ದೇವಾಲಯಕ್ಕೆ ಮನೆ ಒಕ್ಕಲು ಬಾರಿ ಕಡಿಮೆ, ಶಿವಮೊಗ್ಗ , ಬೆಂಗಳೂರು ಹಾಗೂ ಗೋಣಿಬೀಡು ಮೂರು ಸ್ಥಳದ ಮನೆದೇವರ ಹೊಂದಿರುವ ಕುಟುಂಬ ವರ್ಗದವರು ಈ ದೇವಾಲಯಕ್ಕೆ ಅಪಾರ ಭಕ್ತರು ಇದ್ದು ದೇವರು ನೀಡಿದ ಭಕ್ತಿ ಪ್ರಸಾದ 100% ಕೆಲಸವಾಗುತ್ತದೆ.

ನರಸಿಂಹ ಪ್ರಸಾದ್, ಅರ್ಚಕ

ನಮ್ಮ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಬರುವ ನರಸೀಪುರ ಗ್ರಾಮ ಪ್ರಖ್ಯಾತ ಸ್ಥಳವಾಗಿದ್ದು ಈ ದೇವಾಲಯಕ್ಕೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುವುದು ಸಾಮಾನ್ಯವಾಗಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ತಕ್ಷಣವೇ ಈ ದೇವಾಲಯ ಜೀರ್ಣೋದ್ಧಾರ ಮಾಡಬೇಕು.

ಸುಮಲತಾ ಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷೆ

click me!