ವಿಶ್ವದಾದ್ಯಂತ ಅನೇಕ ನಿಗೂಢ ಪ್ರದೇಶಗಳಿವೆ. ಪ್ರತಿ ದೇವಸ್ಥಾನಗಳಲ್ಲೂ ಸಾಕಷ್ಟು ನಿಯಮಗಳಿರುತ್ತವೆ. ಅಲ್ಲಿಗೆ ಬರುವ ಭಕ್ತರು ಅದನ್ನು ಪಾಲನೆ ಮಾಡ್ಬೇಕು. ಕೆಲ ಪ್ರದೇಶ ಮಹಿಳೆಯರಿಗೆ ನಿಷಿದ್ಧವಾಗಿರುತ್ತದೆ. ಅದರ ಹಿಂದೆ ನಾನಾ ಕಾರಣವಿರುತ್ತದೆ.
ಮಹಿಳೆ ಪುರುಷನ ಸಮಾನವಾಗಿ ದುಡಿಯುತ್ತಿದ್ದಾಳೆ. ಎಲ್ಲ ಕ್ಷೇತ್ರದಲ್ಲೂ ಸಮಾನತೆ ಬೇಕೆಂಬ ಹೋರಾಟ ನಿರತರವಾಗಿ ನಡೆಯುತ್ತಿದ್ದರೂ ಆಕೆಗೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಸಮಾನತೆ ಇನ್ನೂ ಸಿಕ್ಕಿಲ್ಲ. ಸಂಪ್ರದಾಯ ವಿಷ್ಯದಲ್ಲಂತೂ ಈ ಸಮಾನತೆ ವಾದ ಪ್ರಯೋಜನಕ್ಕೆ ಬರೋದಿಲ್ಲ. ಸಂಪ್ರದಾಯ, ಆಚರಣೆ ವಿಚಾರದಲ್ಲಿ ಪುರುಷನಿಗೆ ನೀಡುವಷ್ಟು ಮಾನ್ಯತೆಯನ್ನು ಮಹಿಳೆಯರಿಗೆ ನೀಡೋದಿಲ್ಲ. ಆಕೆಯನ್ನು ಅನೇಕ ಕಡೆ ದೂರವಿಡ್ತಾರೆ. ಭಾರತದ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡುವಂತಿಲ್ಲ. ಇದನ್ನು ವಿರೋಧಿಸಿ ನಾನಾ ಹೋರಾಟ ನಡೆದಿದೆ. ಆದ್ರೆ ಪ್ರಯೋಜನ ಶೂನ್ಯ. ಭಾರತ ಮಾತ್ರವಲ್ಲ ವಿಶ್ವದ ಕೆಲ ದೇವಸ್ಥಾನಗಳಲ್ಲೂ ಮಹಿಳೆಯ ಪ್ರವೇಶವನ್ನು ನಿಷೇಧಿಸಲಾಗಿದೆ. ಅದ್ರಲ್ಲಿ ಜಪಾನ್ ಕೂಡ ಒಂದು. ಜಪಾನ್ ನಲ್ಲಿರುವ ಒಂದು ದೇವಸ್ಥಾನಕ್ಕೆ ಮಹಿಳೆಯರು ಕಾಲಿಡುವಂತಿಲ್ಲ. ಪುರುಷರು ಕೂಡ ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ಬೇಕು. ನಾವಿಂದು ಮಹಿಳೆಯರಿಗೆ ನಿಷೇಧವಿರುವ ಜಪಾನ್ ಆ ಪ್ರದೇಶ ಯಾವುದು ಎಂಬುದನ್ನು ತಿಳಿಯೋಣ.
ಇಡೀ ದ್ವೀಪ (Island) ಕ್ಕೆ ಹೋಗುವಂತಿಲ್ಲ ಮಹಿಳೆಯರು : ಜಪಾನ್ (Japan) ನಲ್ಲಿರುವ ಆ ದ್ವೀಪದ ಹೆಸರು ಓಕಿನೋಶಿಮಾ (Okinoshima) ದ್ವೀಪ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಮಾಡಿದೆ. ಇಲ್ಲಿ ಶಿಂಟೋ ಧರ್ಮದ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಈ ದ್ವೀಪ ಕೊರಿಯಾಕ್ಕೆ ಹತ್ತಿರದಲ್ಲಿದೆ. ಆದ್ರೆ ಜಪಾನ್ ಗಡಿ ಭಾಗದಲ್ಲಿ ಈ ದ್ವೀಪ ಬರುತ್ತದೆ.
ಸಾವಿರಾರು ವರ್ಷಗಳ ಹಿಂದಿನ ನಂಬಿಕೆಯ ಪ್ರಕಾರ, ಮಹಿಳೆಯರು ಇಲ್ಲಿಗೆ ಬರುವುದನ್ನು ನಿಷೇಧಿಸಲಾಗಿದೆ. ಲಿಂಗ ತಾರತಮ್ಯಕ್ಕಿಮತ ಮಹಿಳೆಯರ ರಕ್ಷಣೆಯ ದೃಷ್ಟಿಯಿಂದ ಇಲ್ಲಿಗೆ ಪ್ರವೇಶ ನಿಷೇಧಿಸಲಾಗಿದೆ ಎನ್ನಲಾಗುತ್ತದೆ. ಯಾಕೆಂದ್ರೆ ಇದು ಅತ್ಯಂತ ಅಪಾಯಕಾರಿ ದ್ವೀಪವಾಗಿದೆ.
ಕನ್ನಡಿಗರಾಗಿ ಜೀವನದಲ್ಲಿ ನೀವು ನೋಡಲೇಬೇಕಾದ ಏಳು ಅದ್ಭುತಗಳಿವು, ಹೇಳಿದ್ದು ನಾವಲ್ಲ ನೀವು!
ಈ ದ್ವೀಪದ ಇತಿಹಾಸ (History) : ಶಿಂಟೋ (Shinto) ಧರ್ಮದ ಧಾರ್ಮಿಕ ಸ್ಥಳ ಇದಾಗಿದ್ದು, ಇಲ್ಲಿ 17 ನೇ ಶತಮಾನದ ದೇವಾಲಯವಿದೆ. ದಂತಕಥೆಯ ಪ್ರಕಾರ, ನಾವಿಕರ ಸುರಕ್ಷತೆಗಾಗಿ ಮೊದಲು ಇಲ್ಲಿ ಪ್ರಾರ್ಥನೆ (Prayer) ಗಳನ್ನು ಸಲ್ಲಿಸಲಾಯಿತು. ಒಕಿತ್ಸು ದೇವಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಪೂಜೆಯ ವೇಳೆಯೂ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಲಾಗುತ್ತದೆ.
ಭಕ್ತರು ಪಾಲನೆ ಮಾಡ್ಬೇಕು ಈ ನಿಯಮ : ದೇವಸ್ಥಾನಕ್ಕೆ ಬರುವ ಮೊದಲು ಸ್ನಾನ ಮಾಡ್ಬೇಕಾಗುತ್ತದೆ. ದ್ವೀಪವನ್ನು ಹೊಕ್ಕ ನಂತ್ರ ನಿಶ್ಚಿತ ಸಮಯಕ್ಕೆ ಅವರು ದ್ವೀಪವನ್ನು ಬಿಡಬೇಕು. ದ್ವೀಪದಿಂದ ಯಾವುದೇ ವಸ್ತುವನ್ನು ಅವರು ತೆಗೆದುಕೊಂಡು ಹೋಗುವ ಹಾಗಿಲ್ಲ. ಹಾಗೆಯೇ ದ್ವೀಪದಲ್ಲಿ ತಮಗಾದ ಅನುಭವವನ್ನು ಅವರು ಯಾರ ಬಳಿಯೂ ಹಂಚಿಕೊಳ್ಳುವಂತಿಲ್ಲ.
ದ್ವೀಪದಲ್ಲಿದೆ ಚಿನ್ನ – ಬೆಳ್ಳಿ ಆಭರಣ : ಈ ದ್ವೀಪದಲ್ಲಿ ಏನಿದೆ ಎಂಬುದನ್ನು ಅಲ್ಲಿಗೆ ಹೋದವರು ಹೇಳುವಂತಿಲ್ಲ. ವರದಿ ಪ್ರಕಾರ ದ್ವೀಪದಲ್ಲಿ ಅನೇಕ ಬೆಲೆ ಬಾಳುವ ವಸ್ತುಗಳಿವೆ. ಚಿನ್ನ, ಬೆಳ್ಳಿಯಿಂದ ಮಾಡಿದ ವಿಗ್ರಹಗಳು ಸಾಕಷ್ಟಿವೆಯಂತೆ. ಆದ್ರೆ ದ್ವೀಪದಿಂದ ಹೊರಗೆ ಹೋಗುವಾಗ ವ್ಯಕ್ತಿ ಬರಿಗೈನಲ್ಲಿ ಹೋಗೋದು ಅನಿವಾರ್ಯ.
ಪುರುಷರು ಅನುಸರಿಸಬೇಕು ಈ ಪದ್ಧತಿ : ಇಲ್ಲಿಗೆ ಬರುವ ಮೊದಲು ಪುರುಷರು ಕೊರಿಯಾ ಜಲಸಂಧಿಯ ನೀರಿನಲ್ಲಿ ಸ್ನಾನ ಮಾಡಬೇಕು. ನಂತ್ರ ಬೆತ್ತಲೆಯಾಗಿಯೇ ಅವರು ದ್ವೀಪಕ್ಕೆ ಬರಬೇಕು. ನಂತ್ರ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಬೇಕು.
ತಾಜ್ ಮಹಲ್ ಮ್ಯಾಜಿಕಲ್ ಸೌಂದರ್ಯ ಕಣ್ತುಂಬಿಕೊಳ್ಳಲು ಮೆಹತಾಬ್ ಬಾಗ್‌ಗೆ ಭೇಟಿ ನೀಡಿ
ಎಷ್ಟು ಜನರಿಗೆ ಅವಕಾಶ : ದ್ವೀಪಕ್ಕೆ ಜನರು ಮನಸೋಇಚ್ಛೆ ಬರುವಂತಿಲ್ಲ. ಪ್ರತಿ ವರ್ಷ 200 ಜನರನ್ನು ಮಾತ್ರ ಈ ದ್ವೀಪಕ್ಕೆ ಹೋಗಲು ಆಯ್ಕೆ ಮಾಡಲಾಗುತ್ತದೆ. ಮೇ 27 ರಂದು ಮಾತ್ರ ಇಲ್ಲಿ ಪೂಜೆ ಮಾಡಲಾಗುತ್ತದೆ. ರಕ್ಷಣೆ ಮಾತ್ರವಲ್ಲದೆ ಸ್ನಾನ ಹಾಗೂ ಬೆತ್ತಲೆ ಪ್ರವೇಶದ ಕಾರಣಕ್ಕೂ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಜನರು ನಂಬಿದ್ದಾರೆ.