ಸರ್ಕಾರಿ ಶಾಲೆ, ಸರ್ಕಾರಿ ಕಚೇರಿ, ಸರ್ಕಾರಿ ಹೊಟೇಲ್ ಎಲ್ಲದರ ಬಗ್ಗೆ ನಿರ್ಲಕ್ಷ್ಯ ಜಾಸ್ತಿ. ಹೊಟೇಲ್ ವಿಚಾರ ಬಂದಾಗ ನಾವು ಸರ್ಕಾರಿ ಹೊಟೇಲ್ ಸರ್ಚ್ ಮಾಡೋಕೆ ಹೋಗಲ್ಲ. ಇದೇ ನಾವು ಮಾಡೋ ಮೊದಲ ತಪ್ಪು. ಕಡಿಮೆ ಖರ್ಚಿನಲ್ಲಿ ಪ್ರವಾಸ ಎಂಜಾಯ್ ಮಾಡೋಕೆ ಇದಕ್ಕಿಂತ ಬೆಸ್ಟ್ ಐಡಿಯಾ ಬೇರೊಂದಿಲ್ಲ.
ಪ್ರವಾಸಕ್ಕೆ ಹೋಗುವ ಮೊದಲು ನಾವೆಲ್ಲ ಆಲೋಚನೆ ಮಾಡೋದು ಉಳಿದುಕೊಳ್ಳೋದು ಎಲ್ಲಿ ಎನ್ನುವ ಬಗ್ಗೆ. ಸಾಮಾನ್ಯವಾಗಿ ಹೊಟೇಲ್ ಬುಕ್ ಮಾಡಿಯೇ ನಾವು ಪ್ರವಾಸಕ್ಕೆ ಹೊರಡುತ್ತೇವೆ. ಹೊಟೇಲ್ ಬುಕ್ಕಿಂಗ್ ಹಬ್ಬ, ವರ್ಷದ ಕೊನೆಯ ಸಮಯದಲ್ಲಿ ಕಷ್ಟ. ಜೊತೆಗೆ ಬೆಲೆಯೂ ದುಬಾರಿ. ಇಷ್ಟೆಲ್ಲ ಗೊತ್ತಿದ್ರೂ ನಾವು ಖಾಸಗಿ ಹೊಟೇಲ್ ನತ್ತ ನಮ್ಮ ಚಿತ್ತ ಹರಿಸ್ತೇವೆಯೇ ವಿನಃ ಸರ್ಕಾರಿ ಹೊಟೇಲ್ ಬಗ್ಗೆ ಗಮನ ನೀಡೋದಿಲ್ಲ.
ನಮ್ಮ ವೀಕ್ಷಣಾ ಸ್ಥಳಕ್ಕೆ ಹೊಟೇಲ್ (Hotel) ಹತ್ತಿರವಾಗಿರಬೇಕು, ಎಲ್ಲ ಸೌಲಭ್ಯ ಬೇಕು ಎನ್ನುವ ಕಾರಣಕ್ಕೆ ನಾವು ಖಾಸಗಿ ಹೊಟೇಲ್ ನತ್ತ ಮುಖ ಮಾಡ್ತೇವೆ. ಆದ್ರೆ ಸರ್ಕಾರಿ (Govt) ಹೊಟೇಲ್ ಕೂಡ ನಿಮಗೆ ಈ ಎಲ್ಲ ಸೌಲಭ್ಯ ನೀಡುತ್ತದೆ. ಸಣ್ಣಪುಟ್ಟ ಸಮಸ್ಯೆಗಳು ಎಲ್ಲ ಕಡೆ ಇರೋದೆ. ನೀವು ಪ್ರವಾಸಿ (Tourist) ಸ್ಥಳಗಳನ್ನು ಆನಂದಿಸಲು ಬಯಸಿದ್ದು, ಸಣ್ಣಪುಟ್ಟ ಕೊರತೆಗಳನ್ನು ನಿರ್ಲಕ್ಷ್ಯ ಮಾಡ್ತಿರಿ ಎಂದಾದ್ರೆ ನಿಮಗೆ ಸರ್ಕಾರಿ ಹೊಟೇಲ್ ಬೆಸ್ಟ್. ಅದೇ ನೀವು ಉಳಿದುಕೊಳ್ಳುವ ಸ್ಥಳ ಸುವ್ಯವಸ್ಥಿತವಾಗಿರಬೇಕೆಂದು ಬಯಸ್ತಿದ್ದರೆ ಸರ್ಕಾರಿ ಹೊಟೇಲ್ ಬುಕ್ ಮಾಡುವ ಬದಲು ಎರಡು ಬಾರಿ ಪರಿಶೀಲಿಸಿಕೊಳ್ಳಿ.
25 ಲಕ್ಷ ರೂ. ವ್ಯಯಿಸಿ, 18 ದೇಶಗಳ ದಾಟಿ ಎಸ್‌ಯುವಿಯಲ್ಲಿ ಕೆನಡಾದಿಂದ ಭಾರತಕ್ಕೆ ಬಂದ ಕಾರುಪ್ರಿಯ!
ಸರ್ಕಾರಿ ಹೊಟೇಲ್ ಎಂದ್ರೇನು? : ನಮ್ಮ ದೇಶದಲ್ಲಿ, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರಿ ಇಲಾಖೆಗಳನ್ನು ರಚಿಸಲಾಗಿದೆ. ಹೆಚ್ಚಿನ ರಾಜ್ಯಗಳಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಸಹ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಡೆಸುತ್ತದೆ. ಖಾಸಗಿ ಹೊಟೇಲ್‌ಗಳ ಸಂಖ್ಯೆ ಹೆಚ್ಚಿರದಿದ್ದ ಮತ್ತು ಪ್ರವಾಸಿಗರಿಗೆ ಉತ್ತಮ ವಸತಿ ಸೌಕರ್ಯಗಳನ್ನು ಒದಗಿಸುವ ಅಗತ್ಯವಿದ್ದ ಕಾರಣ ಸರ್ಕಾರಿ ಹೊಟೇಲ್ ಶುರುವಾಗಿತ್ತು. ಈಗ ಖಾಸಗಿ ಹೋಟೆಲ್ ಗಳ ಸಂಖ್ಯೆ ಹೆಚ್ಚಿರುವ ಕಾರಣ ಸರ್ಕಾರಿ ಹೋಟೆಲ್ ಗಳ ಬೇಡಿಕೆಯಲ್ಲಿ ಕೊಂಚ ಇಳಿಕೆಯಾಗಿದೆ. ಆದರೆ ವೈಶಿಷ್ಟ್ಯತೆಗಳ ವಿಷಯದಲ್ಲಿ ಈ ಹೋಟೆಲ್ ಗಳು ಇತರೆ ಖಾಸಗಿ ಹೋಟೆಲ್ ಗಳಿಗಿಂತ ಕಡಿಮೆಯೇನಿಲ್ಲ.
ಅತ್ಯುತ್ತಮ ಸರ್ಕಾರಿ ಹೊಟೇಲ್ : ನಮ್ಮ ರಾಜ್ಯವನ್ನು ಹೊರತುಪಡಿಸಿ ಬೇರೆ ರಾಜ್ಯಗಳಲ್ಲೂ ಸಾಕಷ್ಟು ಅತ್ಯುತ್ತಮ ಸರ್ಕಾರಿ ಹೊಟೇಲ್ ಗಳಿವೆ.
ಗೋವಾ : ಪ್ರವಾಸಿಗರ ಸ್ವರ್ಗ ಗೋವಾ. ಇಲ್ಲಿಗೆ ಪ್ರತಿದಿನ ಸಾವಿರಾರು ಬಂದಿ ಬರ್ತಿರುತ್ತಾರೆ. ಗೋವಾದ ಫರ್ಮಗುಡಿ ರೆಸಿಡೆನ್ಸಿ ಸರ್ಕಾರಿ ಹೊಟೇಲ್ ಆಗಿದೆ. ಅಲ್ಲಿ ನೀವು ಆರಾಮವಾಗಿ ತಂಗಬಹುದು. ಫರ್ಮಗುಡಿ ರೆಸಿಡೆನ್ಸಿಯಲ್ಲಿ ಒಳಾಂಗಣ ಮತ್ತು ಹೊರಾಂಗಣ ರೆಸ್ಟೋರೆಂಟ್ ನೋಡಬಹುದು. ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ ನೀವು ರೂಮ್ ಬುಕ್ ಮಾಡಬಹುದು. ಡಬಲ್ ಬೆಡ್ ರೂಮ್‌ಗೆ ಸೀಸನ್‌ನಲ್ಲಿ ಒಂದು ದಿನಕ್ಕೆ 1500 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಆಫ್ ಸೀಸನ್‌ನಲ್ಲಿ 1100 ರೂಪಾಯಿ ಚಾರ್ಜ್ ಮಾಡಲಾಗುತ್ತದೆ.
ಹೋಟೆಲ್ ಆನಂದ್ ಭವನ : ಉದಯಪುರದಲ್ಲಿರುವ ಆನಂದ್ ಭವನ್ ಹೊಟೇಲ್ ಸರ್ಕಾರಿ ಹೊಟೇಲ್ ಆಗಿದೆ. ಇಲ್ಲಿ 1900 ರೂಪಾಯಿಗೆ ನೀವ ಡಬಲ್ ಬೆಡ್ ರೂಮ್ ಬುಕ್ ಮಾಡಬಹುದು.
ಶಿಮ್ಲಾ ಪೀಟರ್‌ಹೋಫ್ ಹೋಟೆಲ್ : ಶಿಮ್ಲಾಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಸಾಕಷ್ಟಿದೆ. ಕಡಿಮೆ ಖರ್ಚಿನಲ್ಲಿ ಶಿಮ್ಲಾ ಟೂರ್ ಮುಗಿಸಬೇಕು ಎನ್ನುವವರು ಪೀಟರ್ ಹೋಫ್ ಹೊಟೇಲ್ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಕೇವಲ 2700 ರೂಪಾಯಿಗೆ ಡಬಲ್ ಬೆಡ್ ರೂಮ್ ಲಭ್ಯವಿದೆ.
ಒಂಟಿಯಾಗಿ ರೈಲಲ್ಲಿ ಪ್ರಯಾಣಿಸೋ ಮಹಿಳೆಯರಿಗೆ ಸಿಗುತ್ತೆ ಈ ಸೌಲಭ್ಯ
ಸರ್ಕಾರಿ ಹೊಟೇಲ್ ಬುಕ್ ಮಾಡೋದು ಹೇಗೆ? : ನಿಮಗೆ ಹಿಮಾಚಲ ಪ್ರದೇಶದಿಂದ ಹಿಡಿದು ಕರ್ನಾಟಕ, ಕೇರಳ ಸೇರಿದಂತೆ ಎಲ್ಲ ರಾಜ್ಯದಲ್ಲಿ ಸರ್ಕಾರಿ ಹೊಟೇಲ್ ಸಿಗುತ್ತದೆ. ನೀವು ಪ್ರವಾಸಕ್ಕೆ ಹೋಗುವ ಮುನ್ನ ಒಮ್ಮೆ ಸರ್ಕಾರಿ ಹೊಟೇಲ್ ಬಗ್ಗೆ ಗಮನ ಹರಿಸಿ. ಈ ಹೋಟೆಲ್‌ಗಳನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು.