
ಜಗತ್ತಿನ ಹಲವಾರು ದೇಶಗಳನ್ನು ಸುತ್ತಿ ಅಲ್ಲಿಯ ಕುತೂಹಲದ ಮಾಹಿತಿಗಳನ್ನು ಶೇರ್ ಮಾಡಿಕೊಳ್ಳುವ ಡಾ.ಬ್ರೋ ಖ್ಯಾತಿಯ ಗಗನ್ ಅವರು ಇದೀಗ ಚೀನಾದ ಕೆಲವೊಂದು ಮಾಹಿತಿಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈಚೆಗಷ್ಟೇ ಅವರು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ಚೀನಾದ ಮಹಾಗೋಡೆ (ಗ್ರೇಟ್ ವಾಲ್ ಆಫ್ ಚೀನಾ) ಬಗ್ಗೆ ತಿಳಿಸಿಕೊಟ್ಟಿದ್ದರು. ಕೇಬಲ್ ಕಾರಿನ ಮೇಲೆ ಹೋಗುತ್ತ 21 ಸಾವಿರ ಕಿಲೋ ಮೀಟರ್ ಇರುವ ಗೋಡೆಯ ವೀಕ್ಷಣೆ ಜೊತೆಗೆ ಒಂದಿಷ್ಟು ಮಾಹಿತಿ ನೀಡಿದ್ದರು. 2300 ವರ್ಷಗಳ ಹಿಂದೆ ಕಟ್ಟಿರುವ ಗೋಡೆಯ ಪರಿಚಯ ಮಾಡಿಸಿದ್ದ ಅವರು, ಈ ಗೋಡೆಯನ್ನು ಕಟ್ಟಲು ಶುರು ಮಾಡಿದ್ದು ಕ್ರಿಸ್ತ ಪೂರ್ವ 220ರಲ್ಲಿ. ನಂತರ ಬಂದ ರಾಜರು ಇದನ್ನು ಕಟ್ಟುತ್ತಾ ಬಂದರು. ಸದ್ಯ ಈ ಗೋಡೆ 8 ಸಾವಿರ ಕಿಲೋ ಮೀಟರ್ ಉಳಿದಿದೆ ಎಂಬ ಮಾಹಿತಿ ನೀಡಿದ್ದರು. ಗೋಡೆ ಕಟ್ಟುವ ಸಮಯದಲ್ಲಿ ಸುಮಾರು 10 ಲಕ್ಷದಷ್ಟು ಕಾರ್ಮಿಕರು ಸಾವನ್ನಪ್ಪಿದ್ದರು. ಆದರೆ ಹೀಗೆ ಸಾಯುವವರನ್ನು ಅಲ್ಲಿಯೇ ಇಟ್ಟು ಅದರ ಮೇಲೆಯೇ ಗೋಡೆ ಕಟ್ಟಿದ್ದಾರೆ ಎಂಬ ಭಯಾನಕ ವಿಷಯವನ್ನೂ ತಿಳಿಸಿದ್ದರು.
ಇದೀಗ ಡಾ.ಬ್ರೋ ಚೀನಾದ ಇನ್ನೊಂದು ಇಂಟರೆಸ್ಟಿಂಗ್ ವಿಷಯವನ್ನು ತೆರೆದಿಟ್ಟಾರೆ. ಚೀನಾದ ತಂತ್ರಜ್ಞಾನದ ಬಗ್ಗೆ ಎಲ್ಲರಿಗೂ ಅರಿವು ಇದ್ದೇ ಇದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಿಯರದ್ದು ಎತ್ತಿದ ಕೈ. ಇದೀಗ ಇದೇ ತಂತ್ರಜ್ಞಾನದ ಕುರಿತು ಡಾ.ಬ್ರೋ ಕುತೂಹಲದ ಮಾಹಿತಿಯನ್ನು ತಿಳಿಸಿದ್ದಾರೆ. ಅದೇನೆಂದರೆ, ರಸ್ತೆಯಲ್ಲಿ ರೋಬೋಟ್ ಕಾರು ಓಡಾಡುತ್ತಿರುತ್ತದೆ. 360 ಡಿಗ್ರಿಯಲ್ಲಿ ಅದರ ಕಣ್ಣು ನೆಟ್ಟಿರುತ್ತದೆ. ಜನರು ರಸ್ತೆಯ ಮೇಲೆ ಏನಾದರೂ ಕಿತಾಪತಿ ಮಾಡಿದರೆ ನೇರವಾಗಿ ಅದು ಸಂಬಂಧಿತ ಇಲಾಖೆಯ ಕಣ್ಣಿಗೆ ಹೋಗಿ, ಕಿತಾಪತಿ ಮಾಡಿದವನ ಕಥೆ ಅಷ್ಟೇ. ತಲೆಹರಟೆ ಎನ್ನುವ ಮಾತೇ ಇಲ್ಲ ಅಲ್ಲಿ. ಈ ಬಗ್ಗೆ ಡಾ.ಬ್ರೋ ಮಾಹಿತಿ ನೀಡಿದ್ದಾರೆ.
ಅರೆರೆ! ಇಲ್ಲಿ ನಿಂತು ಡಾ.ಬ್ರೋ ಇದೇನ್ ಮಾಡ್ತಿದ್ದಾರೆ? ಚೀನಾದಲ್ಲಿ ನಕ್ಕು ನಗಿಸುವ ಆಟವಿದು!
ಚೀನಾದ ಬಡತನ ರೇಖೆ ಶೇಕಡಾ 1ಕ್ಕಿಂತಲೂ ಕಡಿಮೆ ಇದೆ. ಚೈನಾದಲ್ಲಿ ಇರುವ ಶೇಕಡಾ 99ರಷ್ಟು ಜನರು ಶ್ರೀಮಂತರೇ ಇದ್ದಾರೆ ಎಂಬ ಮಾಹಿತಿ ನೀಡಿದ ಡಾ.ಬ್ರೋ ಅಲ್ಲಿರುವ ಶ್ರೀಮಂತರು ಷಾಪಿಂಗ್ ಮಾಡುವ ಜಾಗವನ್ನು ತೋರಿಸಿದ್ದಾರೆ. ಚೀನಾ ಸಕತ್ ಅಭಿವೃದ್ಧಿ ಹೊಂದಿದೆ ಎಂದು ಇಲ್ಲಿ ಬಂದ ಮೇಲೆಯೇ ಗೊತ್ತಾಗಿದ್ದು ಎಂದಿದ್ದಾರೆ ಡಾ.ಬ್ರೋ. ಸೈಕಲ್ಗಾಗಿ ಒಂದು ರೋಡ್, ಸ್ಲೋ ಹೋಗುವ ಕಾರಿಗಾಗಿ ಇನ್ನೊಂದು ದಾರಿ ಹಾಗೂ ಫಾಸ್ಟ್ ಹೋಗುವ ಕಾರಿನವರಿಗಾಗಿ ಇನ್ನೊಂದು ದಾರಿ ಇರುವುದು ಚೀನಾ ವಿಶೇಷತೆ. ನಿಜ ಹೇಳಬೇಕೆಂದರೆ, ಬೆಂಗಳೂರು ಸೇರಿದಂತೆ ಕೆಲವೊಂದು ಮಹಾನಗರಗಳಲ್ಲಿಯೂ ಈ ವ್ಯವಸ್ಥೆ ಇದೆ. ಜನರು ಅದನ್ನು ಫಾಲೋ ಮಾಡುತ್ತಿಲ್ಲವಷ್ಟೇ. ಕೆಲ ವರ್ಷಗಳ ಹಿಂದೆ ಆಟೋಗಳ ಓಡಾಟಕ್ಕೆಂದೇ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಆಟೋ ಲೇನ್ ಮಾಡಲಾಗಿತ್ತು. ಆದರೆ ಇಲ್ಲಿಯವರ ಮನಸ್ಥಿತಿ ಗೊತ್ತಲ್ಲವೆ? ಆದರೆ ಚೀನಾದಲ್ಲಿ ಹಾಗೆಲ್ಲಾ ಮಾಡುವಂತಿಲ್ಲ. ಏಕೆಂದ್ರೆ ಅಲ್ಲಿರುವ ಪ್ರಜಾಪ್ರಭುತ್ವ ರಾಷ್ಟ್ರವಲ್ಲ, ಅಲ್ಲಿರುವುದು ಕಮ್ಯೂನಿಸ್ಟ್ ಸರ್ಕಾರ. ಸರ್ಕಾರದ ವಿರುದ್ಧ ಜನರು ಕಂ ಕಿಂ ಎನ್ನುವಂತಿಲ್ಲ!
ಚೀನಾದಲ್ಲಿಯೇ ಡಾ.ಬ್ರೋ. ಕುತೂಹಲದ ಆಟವೊಂದನ್ನು ಹಿಂದಿನ ವಿಡಿಯೋದಲ್ಲಿ ಪರಿಚಯಿಸಿದ್ದರು. ಇದು ಸಕತ್ ಇಂಟರೆಸ್ಟಿಂಗ್ ಆಗಿದೆ. ಮೊಳೆಗಳ ರೀತಿಯಲ್ಲಿ ಜೋಡಿಸಲಾಗಿದೆ. ಇದನ್ನು ಪ್ರೆಸ್ ಮಾಡಿದ್ರೆ ಎಲ್ಲಾ ಮೊಳೆಗಳೂ ಹಿಂದಕ್ಕೆ ಹೋಗುತ್ತವೆ. ನಂತರ ಅದರ ಮೇಲೆ ನೀವು ಗಟ್ಟಿಯಾಗಿ ಪ್ರೆಸ್ ಮಾಡಿ ನಿಂತರೆ ಸಾಕು, ಅದರ ಅಚ್ಚು ಒತ್ತುತ್ತದೆ. ಆಗ ಹಿಂಬದಿಯಿಂದ ನಿಮ್ಮ ದೇಹದ ಅಚ್ಚನ್ನು ನೋಡಬಹುದು. ಇದು ನೋಡಲು ಬಹಳ ಮಜವಾಗಿರುತ್ತದೆ. ಇದರಲ್ಲಿ ಹಲವಾರು ಮಂದಿ ತಮ್ಮ ಅಚ್ಚನ್ನು ನೋಡಿ ಖುಷಿ ಪಡುವುದನ್ನು ವಿಡಿಯೋದಲ್ಲಿ ನೋಡಬಹುದು. ಅದರಂತೆಯೇ ಡಾ. ಬ್ರೋ ಕೂಡ ತಮ್ಮ ಅಚ್ಚನ್ನು ಒತ್ತಿರುವುದನ್ನು ನೋಡಬಹುದು. ಇದೊಂದು ಫೇಮಸ್ ಆಟದ ಸಾಮಾನು ಎಂದು ಹೇಳಿರುವ ಡಾ.ಬ್ರೋ ತಮ್ಮ ಎಂದಿನ ಹಾಸ್ಯದ ಧಾಟಿಯಲ್ಲಿ ಇದರ ಮಾಹಿತಿ ನೀಡಿದ್ದರು.
10 ಲಕ್ಷ ಜನರ ಸಮಾಧಿ ಮೇಲೆ ಕಟ್ಟಿದ ಚೀನಾ ಮಹಾಗೋಡೆ: ಕುತೂಹಲದ ಮಾಹಿತಿ ಬಿಚ್ಚಿಟ್ಟ ಡಾ.ಬ್ರೋ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.