Travel Tips: ಗಿರಿಧಾಮದ ಪ್ರವಾಸದಲ್ಲಿ ಹಣ, ಸಮಯ ಎರಡೂ ಉಳಿಬೇಕಾ?

By Suvarna News  |  First Published Dec 28, 2022, 11:51 AM IST

ಪ್ಲಾನ್ ಮಾಡ್ದೆ ಪ್ರವಾಸಕ್ಕೆ ಹೋದಾಗ ಯಡವಟ್ಟುಗಳಾಗೋದು ಸಜಹ. ಪ್ರವಾಸದ ಖರ್ಚು ಹೆಚ್ಚಾಗುವುದಲ್ಲದೆ ನೋಡಬೇಕಾದ ಮುಖ್ಯ ಸ್ಥಳವೇ ಮಿಸ್ ಆಗಿರುತ್ತದೆ. ಯಾವುದೇ ಸಮಸ್ಯೆಯಿಲ್ಲದೆ ಕಡಿಮೆ ಬಜೆಟ್ ನಲ್ಲಿ ಹಿಲ್ ಸ್ಟೇಷನ್ ಸುತ್ತಬೇಕೆಂದ್ರೆ ಕೆಲ ವಿಷ್ಯ ತಿಳಿದಿರಬೇಕು.
 


 ಚಳಿಗಾಲದಲ್ಲಿ ಪ್ರವಾಸ ಮಾಡುವ ಮಜವೇ ಭಿನ್ನವಾಗಿರುತ್ತದೆ. ಬಹುತೇಕ ಜನರು ಈ ಋತುವಿನಲ್ಲಿ ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಕುಟುಂಬಸ್ಥರು, ಸ್ನೇಹಿತರು ಅಥವಾ ಸಂಗಾತಿ ಜೊತೆ ಹ್ಯಾಂಗ್ ಔಟ್ ಮಾಡಲು ಅದ್ಭುತವಾದ ಸ್ಥಳಗಳು ಸಾಕಷ್ಟಿದೆ.  ಈ ಚಳಿಗಾಲದಲ್ಲಿ ಜನರು ಗಿರಿಧಾಮಕ್ಕೆ ಹೋಗಲು ಇಷ್ಟಪಡುತ್ತಾರೆ. ಗಿರಿಧಾಮಗಳು ವರ್ಷವಿಡೀ ಪ್ರವಾಸಿಗರಿಂದ ಕಿಕ್ಕಿರಿದಿದ್ದರೂ  ಚಳಿಗಾಲದಲ್ಲಿ  ಹಿಮಪಾತವನ್ನು ಆನಂದಿಸಲು ಜನರು ಹೆಚ್ಚು ಆಸಕ್ತಿ ತೋರುತ್ತಾರೆ.

ಪ್ರವಾಸ (Tour) ಎಲ್ಲರಿಗೂ ಇಷ್ಟವಾಗುತ್ತದೆ. ಆದ್ರೆ ಕಚೇರಿ (Office) ಹಾಗೂ ಮನೆ ಕೆಲಸ ಬಿಟ್ಟು ಒಂದೆರಡು ವಾರಗಳ ಕಾಲ ಸುತ್ತಾಡಲು ಸಾಧ್ಯವಾಗುವುದಿಲ್ಲ. ಸಿಗುವ ಮೂರು – ನಾಲ್ಕು ದಿನಗಳಲ್ಲಿಯೇ ಅದ್ಭುತ ಜಾಗಗಳನ್ನು ನೋಡ್ಬೇಕು, ಕಡಿಮೆ ಖರ್ಚಿಯಲ್ಲಿ ಊರು ಸುತ್ತಿ ಬರಬೇಕೆಂದು ಜನರು ಬಯಸ್ತಾರೆ. ಕಡಿಮೆ ದಿನಗಳಲ್ಲಿ ಗಿರಿಧಾಮದ ಮೂಲೆ ಮೂಲೆ ನೋಡ್ತೇವೆ, ಸಂಪೂರ್ಣ ಆನಂದವನ್ನು ಪಡೆಯುತ್ತೇನೆ ಎನ್ನುವವರು ಕೆಲ ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಹಾಗೆ ಬಜೆಟ್ (Budget) ಪ್ರಯಾಣ ಮಾಡುವವರು ಕೂಡ ಪ್ರವಾಸದ ವೇಳೆ ಕೆಲ ತಪ್ಪುಗಳನ್ನು ತಪ್ಪಿಸಬೇಕು. ಗಿರಿಧಾಮಕ್ಕೆ ಭೇಟಿ ನೀಡಿದಾಗ ಹಣ ಉಳಿಯಬೇಕು, ಸಮಯ ಸಿಗಬೇಕು ಎನ್ನುವವರಿಗೆ ಕೆಲವೊಂದಿಷ್ಟು ಟಿಪ್ಸ್ ಇಲ್ಲಿದೆ.

Tap to resize

Latest Videos

ಗಿರಿಧಾಮ (Hill Station) ಕ್ಕೆ ಹೋಗುವ ಮುನ್ನ ಇದನ್ನು ನೆನಪಿಡಿ :    

ನಿಮ್ಮ ವಾಸ ಹಾಗೂ ಪ್ರಯಾಣದ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿ :  ಬಜೆಟ್ ಪ್ರವಾಸ ಬಯಸುವವರು ಮೊದಲೇ ಹೋಟೆಲ್ (Hotel) ಬುಕ್ ಮಾಡಬೇಕು. ಆಗ ನಿಮಗೆ ಅಗ್ಗದ ಬೆಲೆಗೆ ಹೋಟೆಲ್ ರೂಮ್ ಸಿಗುತ್ತದೆ. ಹೋಟೆಲ್ ರೂಮ್ ಬುಕ್ ಮಾಡುವಾಗ ಬರೀ ರೂಮಿಗೆ ಆದ್ಯತೆ ನೀಡಬೇಡಿ. ಹಿಲ್ ಸ್ಟೇಷನ್, ಬೀಚ್ ಅಥವಾ ಮಾಲ್ ಇರುವ ರಸ್ತೆ ಅಥವಾ ಮಾರುಕಟ್ಟೆಗಳ ನಡುವೆ ಇರುವ ಹೋಟೆಲ್ ಕೊಠಡಿಗಳು ದುಬಾರಿಯಾಗಿರುತ್ತವೆ. ಜನಸಂದಣಿ ಇರುವ ಸ್ಥಳಗಳಿಂದ ಸ್ವಲ್ಪ ದೂರದಲ್ಲಿರುವ ಹೋಟೆಲ್‌ಗಳನ್ನು ಬುಕ್ ಮಾಡಿದ್ರೆ ಒಳ್ಳೆಯದು. ಇದು ಸ್ವಲ್ಪ ಕಡಿಮೆ ಬೆಲೆಗೆ ನಿಮಗೆ ಸಿಗುತ್ತದೆ.  ಹೊಟೇಲ್ ದೂರವಿದ್ರೆ ಸುತ್ತಾಟ ಕಷ್ಟ ಎಂಬ ಕಾರಣಕ್ಕೆ ಕೆಲವರು ಜನನಿಬಿಡ ಪ್ರದೇಶದಲ್ಲಿ ರೂಮ್ ಮಾಡ್ತಾರೆ. ನೀವಿರುವ ಸ್ಥಳದಿಂದ 2 ರಿಂದ 3 ಕಿಲೋಮೀಟರ್ ದೂರದಲ್ಲಿ ಮಾರುಕಟ್ಟೆ ಇದ್ದರೆ ನಿಮ್ಮ ಓಡಾಟ ಹೆಚ್ಚು ಕಷ್ಟವಾಗುವುದಿಲ್ಲ. ಆದ್ರೆ ಅದಕ್ಕಿಂತ ಹೆಚ್ಚು ದೂರವಿರುವ ಹೊಟೇಲ್ ಆಯ್ಕೆ ಮಾಡಬೇಡಿ. ನಿಮ್ಮದೇ ಸ್ವಂತ ವಾಹನವಿದ್ರೆ ಸಮಯ ಹಾಳು. ಟ್ಯಾಕ್ಸಿ ಬುಕ್ ಮಾಡ್ಬೇಕು ಎನ್ನುವವರಿಗೆ ಸಮಯದ ಜೊತೆ ಹಣ ಕೂಡ ಹಾಳು. 

ಪ್ರಯಾಣದಲ್ಲಿ ಆರೋಗ್ಯ ಚೆನ್ನಾಗಿರಬೇಕೆಂದರೆ ಹೀಗೆ ಮಾಡಿ

ಸಾರಿಗೆ ವೆಚ್ಚ ಹೀಗೆ ಕಡಿಮೆ ಮಾಡಿ : ಬಜೆಟ್‌ನಲ್ಲಿ ಪ್ರಯಾಣಿಸಲು ರೈಲು ಅಥವಾ ಬಸ್‌ ಆಯ್ಕೆ ಮಾಡಿಕೊಳ್ಳಬಹುದು. ಆದ್ರೆ ನೀವು ಗಿರಿಧಾಮ ತಲುಪಿದ ನಂತ್ರ ಅಲ್ಲಿ ಸುತ್ತಾಡಲು ಬಸ್ ಆಯ್ಕೆ ಮಾಡಿಕೊಂಡರೆ ಅದು ಸಮಯ ತೆಗೆದುಕೊಳ್ಳುತ್ತದೆ. ಸ್ಥಳೀಯ ಬಸ್ ನಲ್ಲಿ ನೀವು ಪ್ರಯಾಣ ಬೆಳೆಸುವುದಾದ್ರೆ ಕಡಿಮೆ ಸಮಯದಲ್ಲಿ ಜಾಸ್ತಿ ಸ್ಥಳ ವೀಕ್ಷಣೆ ಮಾಡಬಹುದಾದ ಬಸ್ ಆಯ್ಕೆ ಮಾಡಿಕೊಳ್ಳಿ. ಒಂದ್ವೇಳೆ ನೀವು ಟ್ಯಾಕ್ಸಿ ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಅದರಲ್ಲೂ ಬುದ್ಧಿವಂತಿಕೆ ಮುಖ್ಯ. ಯಾಕೆಂದ್ರೆ ಟ್ಯಾಕ್ಸಿಯಲ್ಲಿ ನೀವು ಎಲ್ಲ ಸ್ಥಳವನ್ನು ನೋಡಬಹುದು. ಆದ್ರೆ ನಿಮ್ಮ ಬಜೆಟ್ ಗೆ ಇದು ದುಬಾರಿಯಾಗಬಹುದು. ಟ್ಯಾಕ್ಸಿ ಪ್ರಯಾಣ ಅಗತ್ಯವೆನಿಸಿದ್ರೆ ಕಡಿಮೆ ದರದಲ್ಲಿ ಓಡಾಡಲು ಪ್ರಯತ್ನಿಸಿ. 

ಪ್ರಪಂಚದ ವಿವಿಧ ದೇಶಗಳಲ್ಲಿವೆ ವಿಚಿತ್ರ ರೀತಿಯಲ್ಲಿ ಸ್ವಾಗತಿಸೋ ಸಂಪ್ರದಾಯ

ಅನೇಕ ಕಡೆ ಬೈಕ್ ಅಥವಾ ಸ್ಕೂಟಿ ಬಾಡಿಗೆಗೆ ಸಿಗುತ್ತದೆ. ನೀವು ಗಿರಿಧಾಮಗಳಲ್ಲಿ ದ್ವಿಚಕ್ರವಾಹನ ಓಡಿಸಬಲ್ಲಿರಿ ಎಂದಾದ್ರೆ ಇದನ್ನು ಬಾಡಿಗೆಗೆ ಪಡೆಯಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚು ಸ್ಥಳಗಳನ್ನು ನೋಡಲು ಇದು ಒಳ್ಳೆಯ ಆಯ್ಕೆ.   
   

click me!