ಮಾಲಿನ್ಯವೇ ಕಾಣಿಸುವ ನದಿಗಳ ಮಧ್ಯೆ ಮೇಘಾಲಯದಲ್ಲಿ ಇರೋ ಈ ನದಿ ಅತ್ಯಂತ ಸ್ವಚ್ಛವಾಗಿದ್ದು, ನದಿಯ ತಳವೂ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಮೇಘಾಲಯದ ಉಮನ್ ಗೋತ್ ನದಿಯನ್ನು ದೇಶದ ಅತ್ಯಂತ ಸ್ವಚ್ಛವಾದ ನದಿ ಎನ್ನುತ್ತಾರೆ. ನೀರು ಎಷ್ಟೊಂದು ಕ್ಲಿಯರ್ ಆಗಿರುತ್ತದೆ ಎಂದರೆ ಅಲ್ಲಿ ದೋಣಿ ಸಾಗಿದರೆ ಗಾಜಿನ ಮೇಲೆ ಓಡಾಡಿದಂತಹ ಅನುಭವವಾಗುತ್ತದೆ!
ಶಿಲ್ಲಾಂಗ್‌ನಿಂದ 45 ಕಿ.ಮೀ. ದೂರದಲ್ಲಿ, ಭಾರತ ಮತ್ತು ಬಾಂಗ್ಲಾದೇಶದ ಗಡಿ ಭಾಗದಲ್ಲಿ ಪೂರ್ವಿ ಅಯಂತಿಯ ಹಿಲ್ಸ್ ಜಿಲ್ಲೆಯ ದಾವಕಿ ಪ್ರಾಂತ್ಯದಲ್ಲಿದೆ ಈ ನದಿ ಹರಿಯುತ್ತದೆ. ಜನರು ಇದನ್ನು ಪರ್ವತಗಳಲ್ಲಿ ಅಡಗಿರುವ ಸ್ವರ್ಗವೆಂದೇ ಕರೆಯುತ್ತಾರೆ. ಇಲ್ಲಿ ನೆಲೆಸಿರುವ ಆದಿವಾಸಿಗಳ ತಮ್ಮ ಪೂರ್ವಜರಂತೆ ಇಡೀ ಪ್ರಾಂತ್ಯವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆದ್ಯತೆ ನೀಡುತ್ತಾರೆ.
ಫ್ರಿಡ್ಜ್‌ಗಿಂತಲೂ ಕೂಲ್ ಆಗಿರೋ ಊರಿದು...!
ದಾವಕಿ, ದಾರಂಗ್ ಮತ್ತು ಶೆನಾಂಗ್ ಡೆಂಗ್ ಎಂಬ ಮೂರು ಗ್ರಾಮಗಳಲ್ಲಿ ಉಮನ್ ಗೋತ್ ನದಿ ಹರಿಯುತ್ತದೆ. ಪ್ರತಿ ಗ್ರಾಮದ ಜನರು ಆ ನದಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತಾರೆ. ಇಲ್ಲಿನ ಹವಾಮಾನ ಮತ್ತು ಪ್ರವಾಸಿಗರ ಸಂಖ್ಯೆಯನ್ನು ಅವಲಂಬಿಸಿ, ಇಲ್ಲಿ ಕಮ್ಯುನಿಟಿ ಎಂದು ಆಚರಿಸುತ್ತಾರೆ. ಈ ದಿನ ಗ್ರಾಮದ ಪ್ರತಿಯೊಂದೂ ಮನೆಯಿಂದ ಒಬ್ಬೊಬ್ಬರು ಬಂದು ನದಿಯನ್ನು ಸ್ವಚ್ಛ ಮಾಡುತ್ತಾರೆ.
ಈ ಗ್ರಾಮದಲ್ಲಿ ಸುಮಾರು 300 ಮನೆಗಳಿವೆ. ಎಲ್ಲರೂ ಸೇರಿ ಇಲ್ಲಿ ಸ್ವಚ್ಛ ಕಾರ್ಯ ನೆರವೇರಿಸುತ್ತಾರೆ. ಒಂದು ವೇಳೆ ಯಾರಾದರೂ ಕಸ, ಕಡ್ಡಿ ಹಾಕಿ ಗಲೀಜು ಮಾಡಿದರೆ 5000 ರೂ. ದಂಡ ವಿಧಿಸಲಾಗುತ್ತದೆ. ಈ ಸುಂದರವಾದ ಗ್ರಾಮದಲ್ಲಿರೋ ನದಿ ನೋಡಲು ನೋಡಲು ನವೆಂಬರ್‌ನಿಂದ ಏಪ್ರಿಲ್‌ವರೆಗೆ ಅಧಿಕ ಪ್ರವಾಸಿಗರು ಬರುತ್ತಾರೆ.
ಮಳೆಗಾಲದಲ್ಲಿ ಬೋಟಿಂಗ್ ಇರುವುದಿಲ್ಲ. ಇನ್ನು ಉಮನ್ ಗೋತ್ ನದಿ ಇರುವ ಪ್ರದೇಶದ ಹತ್ತಿರದಲ್ಲಿಯೇ ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಮಾವುಲಿನ್ಗ್ ಗಾಂಗ್ ಸಹವಿದೆ.