ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಐತಿಹಾಸಿಕ ಮೈಲಿಗಲ್ಲು!

By Kannadaprabha News  |  First Published Jul 29, 2024, 2:32 PM IST

ಅದಾನಿ   ಅಂಗಸಂಸ್ಥೆ  ಎಎಎಚ್ಎಲ್  ನಿರ್ವಹಿಸುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2024-25ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ.


ಮಂಗಳೂರು (ಜು.29): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರಮಾಣ ಶೇ.21ರಷ್ಟು ಏರಿಕೆಯಾಗಿದೆ.ಅದಾನಿ ಎಂಟರ್‌ಪ್ರೈಸಸ್‌ನ ಅಂಗಸಂಸ್ಥೆಯಾದ ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಎಚ್ಎಲ್) ನಿರ್ವಹಿಸುತ್ತಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2024-25ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ.

2023-24ರ ಮೊದಲ ತ್ರೈಮಾಸಿಕದಲ್ಲಿ 457,859 ಪ್ರಯಾಣಿಕರಿಗೆ ಹೋಲಿಸಿದರೆ ವಿಮಾನ ನಿಲ್ದಾಣ ತನ್ನ ಟರ್ಮಿನಲ್‌ಗಳ ಮೂಲಕ 552,689 ಪ್ರಯಾಣಿಕರೊಂದಿಗೆ ಪ್ರಯಾಣಿಕರ ದಟ್ಟಣೆಯಲ್ಲಿ ಶೇ. 21 ಹೆಚ್ಚಳ ಸಾಧಿಸಿದೆ. ಇದರಲ್ಲಿ 393,598 ದೇಶೀಯ ಪ್ರಯಾಣಿಕರು ಮತ್ತು 159,091 ಅಂತಾರಾಷ್ಟ್ರೀಯ ಪ್ರಯಾಣಿಕರು ಒಳಗೊ೦ಡಿದ್ದಾರೆ.

Tap to resize

Latest Videos

ಕಮಲಾ ಗೆದ್ದರೆ ಅಮೆರಿಕದ ಸಾವು, ಮೂರನೇ ವಿಶ್ವಯುದ್ಧ ಖಚಿತ: ಅಧ್ಯಕ್ಷ ಅಭ್ಯರ್ಥಿ ಸ್ಫೋಟಕ ಹೇಳಿಕೆ

ದುಬೈ ಅತ್ಯಂತ ಜನಪ್ರಿಯ ಅಂತಾರಾಷ್ಟ್ರೀಯ ತಾಣವಾಗಿ ಹೊರಹೊಮ್ಮಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಬುಧಾಬಿ, ಬಹ್ರೇನ್, ದಮ್ಮಾಮ್, ದುಬೈ, ದೋಹಾ, ಜೆಡ್ಡಾ, ಕುವೈತ್ ಮತ್ತು ಮಸ್ಕತ್ ಸೇರಿದಂತೆ ಎಂಟು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆಗಳನ್ನು ಒದಗಿಸುತ್ತಿದೆ. ದೇಶೀಯವಾಗಿ, ಈ ವಿಮಾನ ನಿಲ್ದಾಣ ಬೆಂಗಳೂರು, ಚೆನ್ನೈಗೆ ಹಾರಾಟ ಏರ್ಪಡಿಸಿದೆ.

ಅಯೋಧ್ಯೆ ಮಸೀದಿ ಜಮೀನು ನನ್ನದು ಎಂದು ಮಹಿಳೆ ದೂರು, ಸುಪ್ರೀಂ ಕೋರ್ಟಿಗೆ ಹೋಗಲು ನಿರ್ಧಾರ

ಬೀದರ್- ಬೆಂಗಳೂರು ವಿಮಾನಯಾನ ಪುನರಾಂಭಕ್ಕೆ ಮನವಿ
ಬೀದರ್– ಬೆಂಗಳೂರು ನಾಗರಿಕ ವಿಮಾನಯಾನ ಪುನರಾರಂಭಿಸುವಂತೆ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ಬೀದರ್ ಸಂಸದ ಸಾಗರ ಈಶ್ವರ ಖಂಡ್ರೆ ಮನವಿ ಸಲ್ಲಿಸಿದರು.

ಕಳೆದ ಡಿಸೆಂಬರ್‌ನಿಂದ ಸ್ಥಗಿತಗೊಂಡಿರುವ ಬೀದರ್ - ಬೆಂಗಳೂರು ನಾಗರಿಕ ವಿಮಾನಯಾನ ಪುನರಾರಂಭಿಸುವ ಕುರಿತು ಬೀದರ್‌ ಸಂಸದರಾದ ಸಾಗರ ಈಶ್ವರ ಖಂಡ್ರೆ ಗುರುವಾರ ದೆಹಲಿಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀರಾಮ ಮೋಹನ ನಾಯ್ಡು ಕಿಂಜರಾಪು ಅವರನ್ನು ಭೇಟಿಯಾಗಿ ಚರ್ಚಿಸಿದರು.

ಉಡಾನ್ ಯೋಜನೆಯಡಿ ಬೀದರ್‌ನಿಂದ ನಾಗರಿಕ ವಿಮಾನಯಾನ ಪ್ರಾರಂಭವಾಗಿತ್ತು. ಆದರೆ ಸೇವಾ ಪೂರೈಕೆದಾರ ಸಂಸ್ಥೆಗಳು, ತಮಗೆ ಉಡಾನ್ ಸಬ್ಸಿಡಿ ನಿಲ್ಲಿಸಿರುವ ಕಾರಣ ವಿಮಾನ ಸೇವೆ ಸ್ಥಗಿತಗೊಳಿಸಿದ್ದು ಮತ್ತೆ ಸಬ್ಸಿಡಿ ನೀಡುವುದಾದರೆ ಸೇವೆ ಒದಗಿಸಲು ಸಂಸ್ಥೆಗಳು ಸಿದ್ಧವಿರುವ ಬಗ್ಗೆ ಸಂಸದ ಸಾಗರ ಖಂಡ್ರೆ ಸಚಿವರ ಗಮನಕ್ಕೆ ತಂದಿದ್ದು, ಇದಕ್ಕೆ ಸಚಿವರು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಸಾಗರ ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!