ಜನರ ಕ್ರೇಜ್ ಬದಲಾಗಿದೆ. ಜೀವನದಲ್ಲಿ ಹೊಸ ಹೊಸ ಪ್ರಯತ್ನಕ್ಕೆ ಕೈ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಕ್ಕೆ ಹೋಗಿ ಅಲ್ಲಿನ ವಿಡಿಯೋ ಪೋಸ್ಟ್ ಮಾಡೋದು ಈಗ ಕಾಮನ್ ಆದ್ರೂ ಈತನ ಸ್ಟೈಲ್ ಸ್ವಲ್ಪ ಚೇಂಜ್ ಇದೆ.
ಈಗ ನಮ್ಮೆಲ್ಲರ ಜೀವನ ಐಷಾರಾಮಿಯಾಗಿದೆ. ನಾವು ಕಾರ್, ಬೈಕ್, ಬಸ್, ಟ್ರೈನ್, ವಿಮಾನದಲ್ಲಿ ಪ್ರಯಾಣ ಬೆಳೆಸ್ತೇವೆ. ಪರಿಸರ ಸ್ನೇಹಿ ಸೈಕಲ್ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ವ್ಯಾಯಾಮ ದೃಷ್ಟಿಯಿಂದ ಕೆಲವರು ಸೈಕಲ್ ಬಳಸಿದ್ರೆ ಬಡತನದ ಕಾರಣಕ್ಕೆ ಕೆಲವೇ ಕೆಲವು ಮಂದಿ ಸೈಕಲ್ ತುಳಿಯುತ್ತಿದ್ದಾರೆ. ಸೈಕಲ್ ಮೇಲೆ ಒಂದು ಕಿಲೋಮೀಟರ್ ಸಂಚರಿಸೋದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಈ ವ್ಯಕ್ತಿ ಎಲ್ಲರಿಗಿಂತ ಭಿನ್ನವಾಗಿ ನಿಂತಿದ್ದಾರೆ. ಇವರು ಸೈಕಲ್ ನಲ್ಲಿ ಅವರ ಊರು ಸುತ್ತಿಲ್ಲ. ಭಾರತದಿಂದ ಆಸ್ಟ್ರೇಲಿಯಾಕ್ಕೆ ಸೈಕಲ್ ಪ್ರಯಾಣ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾವು ಹೋಗುವ ಊರಿನ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಈ ವ್ಯಕ್ತಿ ಎಲ್ಲರ ಅಚ್ಚುಮೆಚ್ಚು. ಅವರ ಸಾಧನೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಅಷ್ಟಕ್ಕೂ ಸೈಕಲ್ ಮೂಲಕ ಆಸ್ಟ್ರೇಲಿಯಾಕ್ಕೆ ಹೋಗ್ತಿರೋ ವ್ಯಕ್ತಿ ಯಾರು ಎನ್ನುವ ವಿವರ ಇಲ್ಲಿದೆ.
ಈತನ ಹೆಸರು ಜೆರ್ರಿ ಚೌಧರಿ (Jerry Choudhary). ಜುಂಜುನುವಿನ ಬುಡಾನಿಯಾ ಗ್ರಾಮದ ನಿವಾಸಿ. ಚೌಧರಿ ಐದು ದೇಶಗಳಿಗೆ ಸೈಕಲ್ (Cycle) ನಲ್ಲಿ ಪ್ರಯಾಣಿಸಲು ಹೊರಟಿದ್ದಾರೆ. ಈ ವಿಶಿಷ್ಟ ಪ್ರಯಾಣದ ಮೂಲಕ ಅವರು ಆರೋಗ್ಯ (Health) ವಾಗಿರಲು ಮತ್ತು ಪರಿಸರವನ್ನು ಉಳಿಸಲು ಜನರಿಗೆ ಸಂದೇಶವನ್ನು ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಜೆರ್ರಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಅವರು ನವೆಂಬರ್ 3, 2021 ರಂದು ಕಾಶ್ಮೀರದ ಲಾಲ್ ಚೌಕ್‌ನಿಂದ ಪ್ರಯಾಣವನ್ನು ಪ್ರಾರಂಭಿಸಿ, ಸುಮಾರು ನಾಲ್ಕು ಸಾವಿರ ಕಿಲೋಮೀಟರ್ ಪ್ರಯಾಣಿಸಿದ ನಂತರ ಜನವರಿ 5, 2022 ರಂದು ಕನ್ಯಾಕುಮಾರಿ ತಲುಪಿದ್ದರು.
ಮೈಸೂರಿನಿಂದ ಅಯೋಧ್ಯೆಗೆ ವಿಶೇಷ ರೈಲು ಆರಂಭ: ಕಡಿಮೆ ಖರ್ಚಿನಲ್ಲಿ ಶ್ರೀರಾಮ ದರ್ಶನ ಮಾಡಿ
ಜೆರ್ರಿ ಇದೀಗ ಭಾರತದಿಂದ ಆಸ್ಟ್ರೇಲಿಯಾಕ್ಕೆ ಸೈಕಲ್ ಮೂಲಕ ರೋಚಕ ಪಯಣ ಆರಂಭಿಸಿದ್ದಾರೆ. ಕಾಲಕಾಲಕ್ಕೆ ಅವರು ಇದಕ್ಕೆ ಸಂಬಂಧಿಸಿದ ನವೀಕರಣಗಳನ್ನು ಬಳಕೆದಾರರೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಅವರು ತಮ್ಮ ಪ್ರಯಾಣದ ಒಂದು ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಜೆರ್ರಿ ತಾವು ಹಾದುಹೋಗುವ ದೇಶಗಳ ಸಂಸ್ಕೃತಿಗಳು ಮತ್ತು ನೈಸರ್ಗಿಕ ಸೌಂದರ್ಯವನ್ನು (Natural Beauty) ಇನ್ಸ್ಟಾಗ್ರಾಮ್ (Instagram) @jerrychoudhary ಮತ್ತು ಯುಟ್ಯೂಬ್ (YouTube) ನಲ್ಲಿ ಹಂಚಿಕೊಳ್ತಿದ್ದಾರೆ.
ಜೆರ್ರಿ ಈಗ ಎಲ್ಲಿದ್ದಾರೆ? : ಈಗಾಗಲೇ ಜೆರ್ರಿ ಪ್ರಯಾಣ ಶುರುವಾಗಿದ್ದು ಅವರು ಕಾಂಬೋಡಿಯಾದಲ್ಲಿದ್ದಾರೆ. ಶೀಘ್ರದಲ್ಲೇ ವಿಯೆಟ್ನಾಂ ತಲುಪಲಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ. ಅವರು ಸೇತುವೆಯ ಮೇಲೆ ನಿಂತಿದ್ದು, ಕೆಳಗೆ ಬೃಹತ್ ಮೆಕಾಂಗ್ ನದಿ ಹರಿಯುತ್ತಿರುವುದನ್ನು ತೋರಿಸಿದ್ದಾರೆ. ಇನ್ನು ಮೂರು ತಿಂಗಳು ನಾನು ವಿಯೆಟ್ನಾಂನಲ್ಲಿ ಆರಾಮವಾಗಿ ಇರಬಹುದು ಎಂದು ಜೆರ್ರಿ ಹೇಳಿದ್ದಾರೆ. ಮೆಕಾಂಗ್ ನದಿಯು ಪ್ರಪಂಚದ ದೊಡ್ಡ ನದಿಗಳಲ್ಲಿ ಒಂದಾಗಿದೆ. ಮೆಕಾಂಗ್ ನದಿ ಆರು ದೇಶಗಳ ಮೂಲಕ ಹರಿಯುತ್ತದೆ. ಚೀನಾ, ಮ್ಯಾನ್ಮಾರ್, ಥೈಲ್ಯಾಂಡ್, ಲಾವೊ ಪಿಡಿಆರ್, ಕಾಂಬೋಡಿಯಾ ಮತ್ತು ವಿಯೆಟ್ನಾಂ.
ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಭಾಷೆ ಸಮಸ್ಯೆ ಆಗಾಗ ಕಾಡುತ್ತದೆ ಎಂದಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿ ಪ್ರಯಾಣದ ವೇಳೆಯೂ ಅವರಿಗೆ ಭಾಷೆ ಸ್ವಲ್ಪ ತೊಂದರೆ ನೀಡಿತ್ತಂತೆ. ಜನರ ಭಾಷೆಯನ್ನು ಅರ್ಥ ಮಾಡಿಕೊಂಡು ಅದಕ್ಕೆ ಪ್ರತಿಕ್ರಿಯೆ ನೀಡಲು ಸಮಸ್ಯೆ ಆಗಿತ್ತು ಎಂದು ಜೆರ್ರಿ ಹೇಳಿದ್ದರು.
ಬೌದ್ಧರ ನಾಡಾದ ಥೈಲ್ಯಾಂಡ್‌ನ ರಾಜರ ಹೆಸರೆಲ್ಲ ರಾಮನೇ! ಇಲ್ಲಿನ ಆಯುತಾಯಕ್ಕೂ ಅಯೋಧ್ಯೆಗೂ ಉಂಟು ನಂಟು!
ಭಾರತದ ಹೆದ್ದಾರಿ ಬಗ್ಗೆಯೂ ಮಾತನಾಡಿದ್ದ ಅವರು, ಸೈಕಲ್ ಓಡಿಸಲು ಹೆದ್ದಾರಿಯಲ್ಲಿ ಟ್ರ್ಯಾಕ್ ಇಲ್ಲ ಎಂದಿದ್ದರು. ಈಗ ವಿಯೆಟ್ನಾಂ ವಿಡಿಯೋಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಒಳ್ಳೆಯದು. ಸುರಕ್ಷಿತ ಪ್ರಯಾಣ ನಿಮ್ಮದಾಗಲಿ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅದ್ಭುತ ಸಾಹಸ. ಫೋಟೋಗಳನ್ನು ಪೋಸ್ಟ್ ಮಾಡುತ್ತಿರಿ ಎಂದಿದ್ದಾರೆ.