ರಾಮಮಂದಿರ ವೀಕ್ಷಣೆಗೆ ಅನುಕೂಲ ಆಗುವಂತೆ ಮೈಸೂರು-ಅಯೋಧ್ಯ-ಮೈಸೂರು ವಿಶೇಷ ರೈಲು ಸೇವೆಯನ್ನು ಫೆ.4ರಂದು ಆಯೋಜನೆ ಮಾಡಲಾಗಿದೆ.
ಮೈಸೂರು (ಜ.12): ಅಯೋಧ್ಯೆಯ ರಾಮ ಮಂದಿರ ವೀಕ್ಷಣೆಗೆ ಅನುಕೂಲ ಆಗುವಂತೆ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಿಂದ ಅಯೋಧ್ಯೆಗೆ ವಿಶೇಷ ರೈಲು ಆರಂಭಿಸಲಾಗಿದೆ. ಫೆ.4ರಂದು ಈ ವಿಷೇಷ ರೈಲು ಆಯೋಜನೆ ಮಾಡಲಾಗಿದ್ದು, ಪುನಃ ಅಲ್ಲಿಂದ ವಾಪಸ್ ಬರಲು ಕೂಡ ವ್ಯವಸ್ಥೆ ಮಾಡಲಾಗಿದೆ.
ಹಿಂದೂಗಳ ಆರಾಧ್ಯ ದೈವ ಎಂದೇ ಹೇಳಲಾಗುವ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ನಿರ್ಮಾಣವಾದ ಭವ್ಯ ರಾಮಮಂದಿರವನ್ನು ವೀಕ್ಷಣೆ ಮಾಡಲು ಈಗಾಘಲೇ ಬೆಂಗಳೂರಿನಿಂದ ರೈಲು ವ್ಯವಸ್ಥೆ ಆರಂಭಿಸಲಾಗಿದೆ. ಈಗ ಮೈಸೂರು ಜನತೆಗೂ ಅನುಕೂಲ ಆಗುವಂತೆ ಫೆ.4ರಂದು ಮೈಸೂರಿನಿಂದ ಅಯೋಧ್ಯೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಸ್ವತಃ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸದ ಪ್ರತಾಪ್ ಸಿಂಹ ಅವರು ಈ ರೈಲು ಸೇವೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಿಂದ ಅಯೋಧ್ಯೆಗೆ ವಿಶೇಷ ರೈಲು, ಅತೀ ಕಡಿಮೆ ದುಡ್ಡಿನಲ್ಲಿ ಹೋಗಿ ಬರ್ಬೋದು
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಿಂದ ಫೆ 4ರಂದು ಅಯೋಧ್ಯೆಗೆ ಲಕ್ಷಾಂತರ ತೆರಳುತ್ತಾರೆ. ನಾನು ಮತ್ತು ಶಾಸಕ ಶ್ರೀವತ್ಸರವರ ನೇತೃತ್ವದಲ್ಲಿ ಅನೇಕರು ತೆರಳುತ್ತಿದ್ದೇವೆ. ಮೈಸೂರಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಹೇಳಿದ್ದಾರೆ. ಆದರೆ, ಉಚಿತ ರೈಲು ಸೇವೆ ನೀಡಲಾಗುತ್ತದೆಯೇ ಎಂಬುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದ್ದರಿಂದ ಅಯೋಧ್ಯೆ ರೈಲಿಗೆ ಹೋಗುವವರು ಮುಂಗಡ ಟಿಕೆಟ್ ಕಾಯ್ದಿರಿಸುವ ಬಗ್ಗೆ ರಾಮ ಭಕ್ತರೇ ಮಾಹಿತಿ ತಿಳಿದುಕೊಳ್ಳಬೇಕು.ಇನ್ನು ಫೆ.4ರಂದು ಮಧ್ಯರಾತ್ರ 12.05ಕ್ಕೆ ಮೈಸೂರಿನಿಂದ ಅಯೋಧ್ಯೆ ಕಡೆಗೆ ರೈಲು ಹೊರಡಲಿದೆ.
ಮೈಸೂರಿನಿಂದ ಹೊರಡುವ ರೈಲು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ನಿಲ್ದಾಣದಲ್ಲಿ ಬೆಳಗ್ಗೆ 3.50ಕ್ಕೆ ತಲುಪಲಿದೆ. ಅಲ್ಲಿಂದ ಬೆಳಗ್ಗೆ 4ಕ್ಕೆ ಹೊರಟು, ತುಮಕೂರಿಗೆ ಬೆಳಗ್ಗೆ 5.18, ಅರಸೀಕೆರೆ ಜಂಕ್ಷನ್ ಬೆಳಗ್ಗೆ 7.00, ಕಡೂರು ಬೆಳಗ್ಗೆ 7.35, ಬೀರೂರು ಜಂಕ್ಷನ್ ಬೆಳಗ್ಗೆ 7.43ಕ್ಕೆ ಹೊರಟು ಫೆ.5 ರೈಲಿನಲ್ಲಿಯೇ ಕಳೆದು ಫೆ.6ರ ಮಧ್ಯಾಹ್ನ 12.15ಕ್ಕೆ ಆಯೋಧ್ಯ ಧಾಮ್ ನಿಲ್ದಾಣ ತಲುಪಲಿದೆ.
ಆಯೋಧ್ಯೆ ಶ್ರೀರಾಮನಿಗೆ ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಸರ್ಕಾರ: ಜ.22ರಂದು ವಿಶೇಷ ಪೂಜೆಗೆ ಆದೇಶ
ಇನ್ನು ಅಯೋಧ್ಯೆಯಿಂದ ಫೆ.7ರಂದು ಆಯೋಧ್ಯೆಯಿಂದ ರಾತ್ರಿ 9.20ಕ್ಕೆ ರೈಲು ಮೈಸೂರಿನತ್ತ ಪ್ರಯಾಣ ಆರಂಭಿಸಲಿದೆ. ಫೆ.8 ರಾತ್ರಿ 11 ಗಂಟೆಗೆ ಬೀರೂರು ಜಂಕ್ಷನ್‌ಗೆ ತಲುಪಲಿದೆ. ಕಡೂರು ರಾತ್ರಿ 11.7, ಅರಸೀಕೆರೆ ಜಂಕ್ಷನ್ 11.45, ತುಮಕೂರು ಮಧ್ಯರಾತ್ರಿ 1.40, ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ಬೆಳಗ್ಗೆ 4.00 ಗಂಟೆ ಹಾಗೂ ಕೊನೆಯದಾಗಿ ಫೆ.9ರ ಬೆಳಗ್ಗೆ 7 ಗಂಟೆಗೆ ಮೈಸೂರು ರೈಲು ನಿಲ್ದಾಣ ತಲುಪಲಿದೆ.