ಬರುವ ವರ್ಷಕ್ಕೆ ಈಗಲೇ ಮಾಡಿಕೊಳ್ಳಿ ಟ್ರಾವೆಲ್ ಪ್ಲಾನ್- ಇಲ್ಲಿದೆ ಗೈಡ್

By Suvarna News  |  First Published Dec 2, 2019, 1:33 PM IST

ಇನ್ನೇನು ವರ್ಷದ ಕಡೇ ಮಾಸಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದ ರೆಸ್ಯೂಲಷನ್ ಜೊತೆ ನಿಮಗೆ ಹತ್ತು ಹಲವು ಸ್ಥಳಗಳಿಗೆ ಭೇಟಿ ನೀಡುವ ಆಸೆಯೂ ಈರಬಹುದು. ಲಾಂಗ್ ವೀಕೆಂಡ್‌ನಲ್ಲಿ ಯಾವ ಪ್ಲೇಸ್ ಬೆಸ್ಟ್ ಅಂತ ನಾವು ನಿಮಗೆ ಹೇಳ್ತೀವಿ ಕೇಳಿ...


ಎಷ್ಟು ಬೇಗ ವರ್ಷ ಮುಗಿಯುತ್ತ ಬಂತಲ್ಲವೇ? ಅಂದುಕೊಂಡಷ್ಟು ಸುತ್ತಲಾಗಿಲ್ಲ. ಆದರೆ ಚಿಂತೆ ಬೇಡ, ಬರುವ ವರ್ಷವೂ ಹಲವಾರು ಲಾಂಗ್ ವೀಕೆಂಡ್‌ಗಳು ಸಿಗುತ್ತವೆ. ಆಗ ಟ್ರಾವೆಲ್ ಮಾಡಲು ಈಗಲಿಂದಲೇ ಪ್ಲ್ಯಾನ್ ಹಾಗೂ ಸಿದ್ಧತೆ ಮಾಡಿಟ್ಟುಕೊಂಡರೆ ಈ ವರ್ಷ ಯಾವ ಟ್ರಿಪ್ ಕೂಡಾ ಮಿಸ್ ಮಾಡಿಕೊಳ್ಳಬೇಕಾದ ಚಾನ್ಸೇ ಇಲ್ಲ. 

2020ರ ರಜೆ ಪಟ್ಟಿ ಇಲ್ಲಿದೆ ನೋಡಿ

Tap to resize

Latest Videos

undefined

ಜನವರಿ
ಹೊಸವರ್ಷದ ಮೊದಲ ದಿನ ಬುಧವಾರ ಬರುತ್ತದೆ. ಜನವರಿ 2 ಗುರು ಗೋವಿಂದ್ ಸಿಂಗ್ ಜಯಂತಿ(ಆಪ್ಶನಲ್ ಹಾಲಿಡೇ). ಹೀಗಾಗಿ, ಶುಕ್ರವಾರ ಒಂದು ರಜೆ ಹಾಕಿಕೊಂಡರೆ ಐದು ದಿನಗಳ ಪ್ರವಾಸ ಪೂರೈಸಬಹುದು. 
ಎಲ್ಲಿ ಹೋಗಬಹುದು?: ಜನವರಿಯಲ್ಲಿ ಗೋವಾ ಹವಾಮಾನ ಚೆನ್ನಾಗಿರುತ್ತದೆ. ರಾಜಸ್ಥಾನ ಕೂಡಾ ಕಂಫರ್ಟ್ ಎನಿಸುವಷ್ಟು ಚಳಿಯಿಂದ ಕೂಡಿದ್ದು, ಈ ಸಮಯದ ಟ್ರಿಪ್‌ಗೆ ಪರ್ಫೆಕ್ಟ್ ಆಗಿರುತ್ತದೆ. ಇನ್ನು ಅಂಡಮಾನ್ ಪ್ರವಾಸಕ್ಕೆ ಕೂಡಾ ಇದು ಸಕಾಲವೇ. ಇಲ್ಲಿ ನೀವು ವಾಟರ್ ಸ್ಪೋರ್ಟ್ಸ್ ಟ್ರೈ ಮಾಡಬಹುದು.

ಜೈಪುರದ ಅರಮನೆ ಪ್ರವಾಸಿಗರಿಗೆ ಮುಕ್ತ

ಫೆಬ್ರವರಿ
ಫೆಬ್ರವರಿ 21 ಮಹಾಶಿವರಾತ್ರಿ. ಇದು ಶುಕ್ರವಾರ ಬರುತ್ತದೆ. ಹಾಗಾಗಿ 3 ದಿನಗಳ ರಜೆ ಖಾತ್ರಿ. 
ಎಲ್ಲಿ ಹೋಗಬಹುದು?: ಫೆಬ್ರವರಿ ಕೂಡಾ ಗೋವಾಕ್ಕೆ ಹೋಗಲು ಸುಸಮಯ. ಇಲ್ಲಿನ ಮ್ಯಾಕ್ಲಿಯೋಗಂಜ್‌ನಲ್ಲಿ ಫೆಬ್ರವರಿ 24ರಂದು ಟಿಬೆಟನ್ ನ್ಯೂ ಇಯರ್ ಆಚರಿಸುತ್ತಾರೆ. ಇದರಲ್ಲಿ ಪಾಲ್ಗೊಳ್ಳುವಂತೆ ಯೋಜನೆ ರೂಪಿಸಬಹುದು.

ಮಾರ್ಚ್
ಮಾರ್ಚ್ 10ಕ್ಕೆ ಹೋಳಿ ಹಬ್ಬವಿದೆ. ಇದು ಮಂಗಳವಾರ ಬರುತ್ತದೆ. ಸೋಮವಾರವೊಂದು ರಜೆ ತೆಗೆದುಕೊಂಡರೆ ಮತ್ತೆ ನಾಲ್ಕು ದಿನದ ಪ್ರವಾಸ ಹೊರಡಬಹುದು.
ಎಲ್ಲಿ ಹೋಗಬಹುದು?: ವೃಂದಾವನಕ್ಕೆ ಯೋಜನೆ ರೂಪಿಸಿ. ಏಕೆಂದರೆ ಇಲ್ಲಿ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇಂಥದೊಂದು ಭರ್ಜರಿ ಹೋಳಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ.

ಏಪ್ರಿಲ್
ಏಪ್ರಿಲ್ 2 ರಾಮನವಮಿ. ಗುರುವಾರ ಬರುತ್ತದೆ. ಅಂದು ಆಪ್ಶನಲ್ ಹಾಲಿಡೇ ತೆಗೆದುಕೊಂಡು, ಶುಕ್ರವಾರ ರಜೆ ತೆಗೆದುಕೊಂಡರೆ, ಏ.6 ಮಹಾವೀರ ಜಯಂತಿ ಪ್ರಯುಕ್ತ ರಜೆ ಇರುತ್ತದೆ. ಹಾಗಾಗಿ ಐದು ದಿನಗಳ ರಜೆ ಸಿಗುತ್ತದೆ. 
ಇದಲ್ಲದಿದ್ದಲ್ಲಿ, ಏ.10ರಂದು ಗುಡ್ ಫ್ರೈಡೇ ಇದೆ. ಅದಕ್ಕಾಗಿ ರಜೆ ಇದ್ದೇ ಇರುತ್ತದೆ. ಅಂದರೆ ಮೂರು ದಿನ ರಜೆ ಪಕ್ಕಾ. ವೀಕೆಂಡ್ ಟ್ರಿಪ್ ಪ್ಲ್ಯಾನ್ ಮಾಡಲಡ್ಡಿಯಿಲ್ಲ.

ಎಲ್ಲಿ ಹೋಗಬಹುದು?: ಈ ಸಮಯದಲ್ಲಿ ಹಿಲ್‌ ಸ್ಟೇಶನ್‌ಗಳ ಹವಾಮಾನ ಬಹಳ ಚೆನ್ನಾಗಿರುತ್ತದೆ. ಹಾಗಾಗಿ, ಡಾರ್ಜಿಲಿಂಗ್ ಅಥವಾ ಸಿಕ್ಕಿಂ ಪ್ರವಾಸ ಮಾಡಬಹುದು. ದೂರ ಎಂದಾದಲ್ಲಿ ಊಟಿಯತ್ತಲೂ ಹೊರಡಬಹುದು.

ಮೇ
ಮೇ 1 ಕಾರ್ಮಿಕರ ದಿನ ಪ್ರಯುಕ್ತ ರಜೆ. ಇದು ಶುಕ್ರವಾರ ಬರುತ್ತದೆ. ಮೂರು ದಿನ ರಜೆ ಸಿಗುತ್ತದೆ. ಇನ್ನು ಮೇ 7 ಗುರುವಾರದಂದು ಬುದ್ಧ ಪೂರ್ಣಿಮೆ. ಶುಕ್ರವಾರ ಒಂದು ರಜೆ ತೆಗೆದುಕೊಂಡರೆ ನಾಲ್ಕು ದಿನ ರಜೆಯಾಗುತ್ತದೆ. ಮೇ 25 ಈದ್ ಉಲ್ ಫಿತರ್. ಇದು ಸೋಮವಾರ ಬರುತ್ತದೆ. ಆಗಲೂ ಮತ್ತೆ ಮೂರು ದಿನ ರಜೆ ಖಾತ್ರಿ. 
ಎಲ್ಲಿ ಹೋಗಬಹುದು?: ಹಿಮಾಚಲ ಪ್ರದೇಶದ ಕಡೆ ಪಯಣಕ್ಕೆ ಮೇ ಉತ್ತಮ ಸಮಯ. ಹತ್ತಿರದಲ್ಲೇ ಎಲ್ಲಾದರೂ ಹೇಳಬೇಕೆಂದಲ್ಲಿ ಕೂರ್ಗ್ ಹೋಂ ಸ್ಟೇಗಳಲ್ಲಿ ಉಳಿದು ಊರು ಸುತ್ತಬಹುದು. ಅಥವಾ ಚಿಕ್ಕಮಗಳೂರಿನ ಗುಡ್ಡಗಳ ಮೇಲೆ ಚಾರಣ ನಡೆಸಬಹುದು.

ವಾರಣಾಸಿಯಲ್ಲಿ ನೋಡ್ಲಿಕ್ಕೆ ನೂರಿದೆ

ಆಗಸ್ಟ್
ಓಣಂ ಆಗಸ್ಟ್ 31ರಂದು ಅಂದರೆ ಸೋಮವಾರ ಬರುತ್ತದೆ. ಆಪ್ಶನಲ್ ಹಾಲಿಡೆ ಇದ್ದರೆ ಬಳಸಿಕೊಂಡು ಮೂರು ದಿನ ಫ್ರವಾಸ ಹೊರಡಬಹುದು.
ಎಲ್ಲಿ ಹೋಗಬಹುದು?: ಓಣಂ ಸಮಯಕ್ಕೆ ಕೇರಳಕ್ಕಲ್ಲದೆ ಮತ್ತೆಲ್ಲಿಗೆ ಹೋದೀರಿ? ಮಳೆಯಲ್ಲಿ ಮಿಂದ ಗೋವಾವನ್ನೂ ನೋಡಬಹುದು.

ಅಕ್ಟೋಬರ್
ಅಕ್ಟೋಬರ್ 2 ಗಾಂಧಿ ಜಯಂತಿ. ರಾಷ್ಟ್ರೀಯ ರಜೆ ಇರುತ್ತದೆ. ಇದು ಶುಕ್ರವಾರ ಬರುತ್ತದೆ. ಶನಿವಾರ, ಭಾನುವಾರ ಸೇರಿಸಿಕೊಂಡು ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ.
ಎಲ್ಲಿ ಹೋಗಬಹುದು?: ಚಲಿಗಾಲವನ್ನು ವೆಲ್‌ಕಂ ಮಾಡಲು ಪಶ್ಚಿಮ ಘಟ್ಟಗಳತ್ತ ಹೋದರೆ ಚೆನ್ನಾಗಿರುತ್ತದೆ. ಹಂಪಿ, ಬಾದಾಮಿ, ಐಹೊಳೆ ಸುತ್ತಿ ಇತಿಹಾಸದಲ್ಲಿ ಮಿಂದೆದ್ದು ಕೂಡಾ ಬರಬಹುದು.

ನವೆಂಬರ್
ನವೆಂಬರ್ 30 ಗುರುನಾನಕ್ ಜಯಂತಿ. ಸೋಮವಾರ ಬರುತ್ತದೆ. ಕೆಲವೆಡೆ ಅಂದು ಆಪ್ಶನಲ್ ಹಾಲಿಡೆ ಬಳಸಿಕೊಳ್ಳಲು ಅವಕಾಶವಿರುತ್ತದೆ. ಇದ್ದರೆ ಉಪಯೋಗಿಸಿಕೊಳ್ಳಿ.
ಎಲ್ಲಿ ಹೋಗಬಹುದು?: ಮುನ್ನಾರ್, ಥೆಕ್ಕಾಡ್, ಲಮಹಟ್ಟಾ ಅಥವಾ ಪಶ್ಚಿಮ ಬಂಗಾಳದ ತೀರ ಪ್ರದೇಶಗಳಿಗೆ ಭೇಟಿ ನೀಡಲು ಕೂಡಾ ಈ ಸಮಯ ಸೂಕ್ತ. 

ಡಿಸೆಂಬರ್
ಕ್ರಿಸ್ಮಸ್ 2020ರಲ್ಲಿ ಶುಕ್ರವಾರ ಬರುತ್ತದೆ. ಹಾಗಾಗಿ, ಹೊಸವರ್ಷವನ್ನು ವೆಲ್‌ಕಂ ಮಾಡಲು ನೀವು ಹೊಸ ಜಾಗಕ್ಕೆ ಹೋಗಬಹುದು.
ಎಲ್ಲಿ ಹೋಗಬಹುದು?: ಹೊಸ ವರ್ಷಾಚರಣೆಯನ್ನು ಗೋವಾದಲ್ಲಿ ನೋಡುವುದು ಚೆಂದ. ಥೈಲ್ಯಾಂಡ್‌ಗೆ ಕೂಡಾ ಹಾರಿ ಸಂಭ್ರಮದ ನ್ಯೂ ಇಯರ್‌ಗೆ ಸಾಕ್ಷಿಯಾಗಬಹುದು.

click me!