
ರಾಜಸ್ಥಾನ ರಾಜ್ಯವು ನಮ್ಮ ಭಾರತದ ಐತಿಹಾಸಿಕ ಸ್ಥಳಗಳ ಕನ್ನಡಿಯಾಗಿದೆ. ಇಲ್ಲಿ ಅರಮನೆ, ಕೋಟೆಗಳಂತಹ ಅದ್ಭುತವಾದ ಸ್ಥಳಗಳನ್ನು ಪರಿಶೀಲಿಸಬಹುದು. ಜನರು ಹೆಚ್ಚಾಗಿ ರಾಜಸ್ಥಾನಿಯ ಶ್ರೀಮಂತ ಸಂಸ್ಕೃತಿ, ಬಾಯೂರಿಸುವ ಸ್ಥಳೀಯ ಖಾದ್ಯಗಳು, ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸ ಯೋಜಿಸುತ್ತಾರೆ.
ಹೀಗೆ ರಾಜಸ್ಥಾನಕ್ಕೆ ಹೋದಾಗ ಅಲ್ಲಿನ ಅರಮನೆಗಳನ್ನು ನೋಡುವುದೇ ಪ್ರತಿಯೊಬ್ಬ ಪ್ರವಾಸಿಗನ ಕನಸಾಗಿರುತ್ತದೆ. ಏಕೆಂದರೆ ಇಲ್ಲಿನ ಅರಮನೆಗಳು, ಕೋಟೆಗಳು ತನ್ನ ವಿಶಿಷ್ಟವಾದ ವಾಸ್ತುಶಿಲ್ಪಗಳಿಂದ ಕಣ್ಣು ಕುಕ್ಕುವ ಸೌಂದರ್ಯವನ್ನು ಹೊಂದಿವೆ. ಹಾಗಾದರೆ ಆ ಪ್ಯಾಲೇಸ್ಗಳು ಯಾವುವು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ ಓದಿ.
ಲೇಕ್ ಪ್ಯಾಲೇಸ್, ಉದಯಪುರ
ಉದಯಪುರದ ಲೇಕ್ ಪ್ಯಾಲೇಸ್ ಅತ್ಯಂತ ಸುಂದರವಾದ ಅರಮನೆಗಳಲ್ಲಿ ಒಂದಾಗಿದೆ. ಈ ಅದ್ಭುತವನ್ನು ಮಹಾರಾಜ ಜಗತ್ ಸಿಂಗ್ IIರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಸರೋವರದ ಮಧ್ಯೆ ನೆಲೆಸಿರುವ ಈ ಪ್ಯಾಲೇಸ್ ಅಂದಿನ ಎಂಜಿನಿಯರ್ ಕೈಚಳಕ್ಕೆ ಅತ್ಯುತ್ತಮ ಉದಾಹರಣೆ.
ಈ ಲೇಕ್ ಪ್ಯಾಲೇಸ್ ಅನ್ನು 1743-1746 ರಲ್ಲಿ ನಿರ್ಮಿಸಲಾಯಿತು. ಈ ಅರಮನೆಯನ್ನು ರಾಜಕುಟುಂಬಿಕರು ತಮ್ಮ ಬೇಸಿಗೆಯ ಅರಮನೆಯಾಗಿ ಬಳಸುತ್ತಿದ್ದರು. ಈ ಭವ್ಯವಾದ ಅರಮನೆಯ ಸಂಕೀರ್ಣವು ಪಿಚೋಲಾ ಸರೋವರದಲ್ಲಿರುವ ಜಗ್ನಿವಾಸ್ ದ್ವೀಪದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಹರಡಿದೆ.
ಅಲ್ವಾರ್ನ ಈ ನೀಮ್ರಾನಾ ಕೋಟೆಯು ರಾಜಸ್ಥಾನದ ಮತ್ತೊಂದು ಭವ್ಯವಾದ ಕೋಟೆಯಾಗಿದೆ. ಇದು ಒಂದು ಕಾಲದಲ್ಲಿ ತನ್ನ ವೈಭವದ ಕಾರಣ ಬಹಳ ಪ್ರಸಿದ್ಧವಾಗಿತ್ತು. 1467ರಲ್ಲಿ ರಾಜಾ ದೂಪ್ ರಾಜ್ ಅವರು ಈ ಅರಮನೆಯನ್ನು ನಿರ್ಮಿಸಿದರು.
ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿರುವ ಈ ಅರಮನೆಯು ಅಲ್ವಾರ್ ನಗರದ ಭವ್ಯವಾದ ವಿಹಂಗಮ ನೋಟಗಳನ್ನು ನೀಡುತ್ತದೆ. ಪ್ರಸ್ತುತ ಇದು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಹೌದು, ಇದು ದೇಶದ ಅತ್ಯಂತ ಹಳೆಯ ಹೆರಿಟೇಜ್ ರೆಸಾರ್ಟ್ ಹೋಟೆಲ್ಗಳಲ್ಲಿ ಒಂದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.