
ಮೈಸೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ನೈರುತ್ಯ ರೈಲ್ವೆಯು (SWR) ಮೈಸೂರಿನಿಂದ ಉತ್ತರ ಪ್ರದೇಶದ ವೀರಾಂಗಣ ಲಕ್ಷ್ಮೀಬಾಯಿ ಜಾನ್ಸಿ ರೈಲ್ವೆ ನಿಲ್ದಾಣಕ್ಕೆ ಏಕಮುಖ (ಒನ್-ವೇ) ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಿಲ್ದಾಣಗಳ ಮೂಲಕ ಸಾಗಲಿದ್ದು, ಉತ್ತರ ಭಾರತದತ್ತ ಪ್ರಯಾಣಿಸುವ ಜನರಿಗೆ ಭಾರಿ ಅನುಕೂಲವಾಗಲಿದೆ.
ರೈಲು ಸಂಚಾರದ ವೇಳಾಪಟ್ಟಿ:
ರೈಲು ಸಂಖ್ಯೆ: 06276 (ಮೈಸೂರು–ವೀರಾಂಗಣ ಲಕ್ಷ್ಮೀಬಾಯಿ ಜಾನ್ಸಿ ಒನ್-ವೇ ಸ್ಪೆಷಲ್ ಎಕ್ಸ್‌ಪ್ರೆಸ್)
ಹೊರಡುವ ದಿನ ಮತ್ತು ಸಮಯ: ಅಕ್ಟೋಬರ್ 23 ರಂದು ಮಧ್ಯಾಹ್ನ 2:00 ಗಂಟೆಗೆ ಮೈಸೂರು ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
ತಲುಪುವ ದಿನ ಮತ್ತು ಸಮಯ: ಅಕ್ಟೋಬರ್ 25 ರಂದು ಬೆಳಿಗ್ಗೆ 10:00 ಗಂಟೆಗೆ ವೀರಾಂಗಣ ಲಕ್ಷ್ಮೀಬಾಯಿ ಜಾನ್ಸಿ ನಿಲ್ದಾಣವನ್ನು ತಲುಪಲಿದೆ.
ಈ ವಿಶೇಷ ರೈಲು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸಲಿದೆ.
ಹಬ್ಬದ ಋತುವಿನಲ್ಲಿ ರೈಲುಗಳಲ್ಲಿ ಟಿಕೆಟ್ ಸಿಗದೆ ಪರದಾಡುತ್ತಿದ್ದ ಪ್ರಯಾಣಿಕರಿಗೆ, ವಿಶೇಷವಾಗಿ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ತೆರಳುವ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಈ ವಿಶೇಷ ರೈಲು ಸಂಚಾರದಿಂದ ದೊಡ್ಡ ಮಟ್ಟದ ನೆರವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.