ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡಿ, KSRTC ಟೂರ್ ಪ್ಯಾಕೇಜ್‌ನಲ್ಲಿ ಒಮ್ಮೆ ನೋಡಿ 'ಜೋಗ'ದ ಗುಂಡಿ!

Published : Aug 06, 2026, 11:21 PM IST
Bengaluru Jog Falls KSRTC Tour Package

ಸಾರಾಂಶ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರಿನಿಂದ ಜೋಗ್‌ ಫಾಲ್ಸ್‌ಗೆ ಹೊಸ ವಾರಾಂತ್ಯದ ಪ್ಯಾಕೇಜ್ ಪ್ರವಾಸವನ್ನು ಆರಂಭಿಸಿದೆ. ಈ ಪ್ರವಾಸವು ಜೋಗ್‌ ಫಾಲ್ಸ್ ಜೊತೆಗೆ ವರದಹಳ್ಳಿ, ಇಕ್ಕೇರಿ, ಮತ್ತು ಕೆಳದಿಯಂತಹ ಐತಿಹಾಸಿಕ ಸ್ಥಳಗಳ ವೀಕ್ಷಣೆಯನ್ನು ಒಳಗೊಂಡಿದೆ. ಈ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಶುಕ್ರವಾರ ಮತ್ತು ಶನಿವಾರಗಳಂದು ಲಭ್ಯವಿರುತ್ತದೆ.

ಬೆಂಗಳೂರು (ಆ.06): ಪ್ರಕೃತಿ ಪ್ರಿಯರಿಗೆ ಹಾಗೂ ವಾರಾಂತ್ಯದ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಿಹಿ ಸುದ್ದಿ ನೀಡಿದೆ. ಕೆಎಸ್‌ಆರ್‌ಟಿಸಿಯ ಬೆಂಗಳೂರು ಕೇಂದ್ರ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ "ಬೆಂಗಳೂರು - ಜೋಗ್‌ ಫಾಲ್ಸ್" ಮಾರ್ಗದ ನೂತನ ವಾರಾಂತ್ಯದ ಪ್ಯಾಕೇಜ್ ಟೂರ್ ಅನ್ನು ದಿನಾಂಕ 08-08-2026 ರಿಂದ ಆರಂಭಿಸಲಾಗುತ್ತಿದೆ.

ಈ ಪ್ಯಾಕೇಜ್ ಪ್ರವಾಸವು ಶಿವಮೊಗ್ಗ ಮತ್ತು ಸಾಗರ ಮಾರ್ಗವಾಗಿ ಸಂಚರಿಸಲಿದ್ದು, ನಾನ್ ಎಸಿ ಸ್ಲೀಪರ್ (Non-A/C Sleeper) ವಾಹನದ ಮೂಲಕ ಕಾರ್ಯಾಚರಣೆಗೊಳ್ಳಲಿದೆ. ವಾರಾಂತ್ಯದ ದಿನಗಳಾದ ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಈ ಬಸ್ಸುಗಳು ಹೊರಡಲಿವೆ.

ಪ್ಯಾಕೇಜ್ ಟೂರ್‌ನಲ್ಲಿ ಏನೆಲ್ಲಾ ವೀಕ್ಷಿಸಬಹುದು? (840 ಕಿ.ಮೀ ಪ್ರಯಾಣ)

ಈ ಪ್ರವಾಸವು ಕೇವಲ ಜೋಗ್‌ ಫಾಲ್ಸ್ ವೀಕ್ಷಣೆಗೆ ಮಾತ್ರ ಸೀಮಿತವಾಗಿರದೆ, ಮಲೆನಾಡಿನ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳನ್ನೂ ಒಳಗೊಂಡಿದೆ:

  • ಸಾಗರ
  • ವರದಹಳ್ಳಿ
  • ವರದಮೂಲ
  • ಇಕ್ಕೇರಿ
  • ಕೆಳದಿ
  • ವಿಶ್ವಪ್ರಸಿದ್ಧ ಜೋಗ್‌ ಫಾಲ್ಸ್ (Jog Falls)
  • ಸಾಗರದಲ್ಲಿ ಶಾಪಿಂಗ್ ಸಮಯ

ಪ್ರಯಾಣದ ಸಮಯ ಮತ್ತು ವೇಳಾಪಟ್ಟಿ:

ರಾತ್ರಿ 10:30 (22:30): ಬೆಂಗಳೂರಿನಿಂದ ಸಾಗರಕ್ಕೆ ನಿರ್ಗಮನ.

ಬೆಳಿಗ್ಗೆ 05:30 - 07:00: ಸಾಗರದ ಹೋಟೆಲ್‌ನಲ್ಲಿ ಫ್ರೆಶ್ ಅಪ್ ಮತ್ತು ವಿಶ್ರಾಂತಿ.

ಬೆಳಿಗ್ಗೆ 07:00 - 07:15: ಬೆಳಗಿನ ಉಪಹಾರ.

ಬೆಳಿಗ್ಗೆ 07:15 - ಮಧ್ಯಾಹ್ನ 12:30: ವರದಹಳ್ಳಿ, ವರದಮೂಲ, ಇಕ್ಕೇರಿ ಹಾಗೂ ಕೆಳದಿ ತಾಣಗಳ ಭೇಟಿ.

ಮಧ್ಯಾಹ್ನ 12:45 - 01:15: ಮಧ್ಯಾಹ್ನದ ಊಟ (ಸಾಗರದಲ್ಲಿ).

ಮಧ್ಯಾಹ್ನ 01:30 - ಸಂಜೆ 06:15: ಸಾಗರದಿಂದ ನಿರ್ಗಮಿಸಿ, ವಿಶ್ವಪ್ರಸಿದ್ಧ ಜೋಗ್‌ ಫಾಲ್ಸ್ ವೀಕ್ಷಣೆ.

ಸಂಜೆ 07:00 - ರಾತ್ರಿ 08:45: ಸಾಗರದಲ್ಲಿ ಶೋಪಿಂಗ್ ಹಾಗೂ ರಾತ್ರಿ ಊಟ.

ರಾತ್ರಿ 10:00 (22:00): ಸಾಗರದಿಂದ ನಿರ್ಗಮನ.

ಬೆಳಿಗ್ಗೆ 05:00: ಮರುದಿನ ಬೆಳಿಗ್ಗೆ ಬೆಂಗಳೂರು ತಲುಪುವುದು.

ಟಿಕೆಟ್ ದರ ಮತ್ತು ಸೌಲಭ್ಯಗಳು:

ವಯಸ್ಕರಿಗೆ (Adults): ₹3,300/-

ಮಕ್ಕಳಿಗೆ (6 ರಿಂದ 12 ವರ್ಷ): ₹3,000/-

ಟಿಕೆಟ್ ದರದಲ್ಲಿ ಏನೆಲ್ಲಾ ಸೇರಿದೆ?

ಈ ಟಿಕೆಟ್ ದರದಲ್ಲಿ ಬಸ್ ಪ್ರಯಾಣದ ದರ (ಬಿ.ಇ.ಎಸ್ ಶುಲ್ಕ ಹಾಗೂ ಜಿಎಸ್‌ಟಿ ಸೇರಿ), ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ, ಗೈಡ್ ಶುಲ್ಕ (ದಿನಕ್ಕೆ ₹500), ಜೋಗ್‌ ಫಾಲ್ಸ್ ಪ್ರವೇಶ ಶುಲ್ಕ (₹10), ಟೋಲ್ ಫೀ (₹63) ಮತ್ತು ಮುಂಗಡ ಶುಲ್ಕ (₹20) ಸಂಪೂರ್ಣವಾಗಿ ಸೇರಿದೆ. ಪ್ರಯಾಣಿಕರು ಊಟ ಅಥವಾ ಪ್ರವೇಶ ದರಕ್ಕೆ ಹೆಚ್ಚುವರಿಯಾಗಿ ಹಣ ನೀಡುವ ಅಗತ್ಯವಿರುವುದಿಲ್ಲ.

ಬುಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಸಾರ್ವಜನಿಕರು ಈ ಪ್ರವಾಸದ ಸೌಲಭ್ಯ ಪಡೆಯಲು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಅಥವಾ www.ksrtc.karnataka.gov.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು: 080-26252625, 7760990100, 7760990560, 7760990287.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಲು ಪ್ರಯಾಣಿಕರ ಗಮನಕ್ಕೆ: ಹಳಿ ನಿರ್ವಹಣೆ ನಿಮಿತ್ತ ಬೆಂಗಳೂರಿನ ಹಲವು ರೈಲುಗಳ ಸಂಚಾರ ಭಾಗಶಃ ರದ್ದು!
ಹೋಟೆಲ್‌ಗಳಲ್ಲಿ ಸಾಂಪ್ರದಾಯಿಕ ಕೀಗಳ ಬದಲಿಗೆ ಕೀ ಕಾರ್ಡ್‌ಗಳನ್ನೇ ಏಕೆ ಬಳಸುತ್ತಾರೆ?