ಹಳಿಗಳ ಮೇಲೆ ದಿನವೂ ಸಂತೆ- ರೈಲು ಬರ್ತಿದ್ದಂಗೇ ಎಲ್ಲರೂ ಗಾಯಬ್​- ಮತ್ತೆ ವಾಪಸ್​! ಡಾ.ಬ್ರೋ ರೋಚಕ ವಿಡಿಯೋ

By Suchethana D  |  First Published Oct 26, 2024, 11:53 AM IST

ಹಳಿಗಳ ಮೇಲೆ ದಿನವೂ ಸಂತೆ ಮಾಡ್ತಾರೆ... ರೈಲು ಬರ್ತಿದ್ದಂಗೇ ಎಲ್ಲರೂ ಗಾಯಬ್ ಆಗ್ತಾರೆ... ಮತ್ತೆ ವಾಪಸ್ ಬರ್ತಾರೆ.... ನೈಜೇರಿಯಾದ ವಿಚಿತ್ರದ ಬಗ್ಗೆ ಡಾ.ಬ್ರೋ ವಿಡಿಯೋ ನೋಡಿ...
 


 ಡಾ.ಬ್ರೋ ಈಗ ಎಲ್ಲರ ಮನೆಮಾತಾಗಿರುವ ಯುವಕ. ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. 

ಇದೀಗ ನೈಜೇರಿಯಾಕ್ಕೆ ಭೇಟಿ ಕೊಟ್ಟಿರೋ ಡಾ.ಬ್ರೋ ಅಲ್ಲಿರುವ ವಿಚಿತ್ರ ಜನರ ಪರಿಚಯ ಮಾಡಿಸಿದ್ದಾರೆ. ಚರಂಡಿ ಮೇಲೆಯೇ ಜನರು ಹೇಗೆ ಬದುಕಿತ್ತಿದ್ದಾರೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ನೈಜೇರಿಯಾ ಮಕ್ಕಳಿಗೆ ಕನ್ನಡ ಕಲಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ರಾಷ್ಟ್ರಭಾಷೆ ಕನ್ನಡ ಎಂದು ಹೇಳುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಅ,ಆ,ಇ, ಈ ಎಂದು ಮಕ್ಕಳ ಬಾಯಲ್ಲಿ ಸ್ಪಷ್ಟವಾಗಿ ಹೇಳಿಸಿ ಅಬ್ಬಬ್ಬಾ ಹೀಗೂ ಸಾಧ್ಯನಾ ಎಂದು ತೋರಿಸಿಕೊಟ್ಟಿದ್ದಾರೆ. 

Tap to resize

Latest Videos

ಸ್ನೇಹಿತರಿಗೆ ವೈನ್​ ಕೊಟ್ಟು, ಶತ್ರುಗಳ ರುಂಡ ಚೆಂಡಾಡುವ 'ತಾಯಿ'ಯ ಪರಿಚಯಿಸಿದ ಡಾ.ಬ್ರೋ!

ಎಲ್ಲಕ್ಕಿಂತಲೂ ವಿಚಿತ್ರ ಎನಿಸಿದ್ದು, ನೈಜೇರಿಯಾದ ಟ್ರೈನ್​ ಮಾರ್ಕೆಟ್​. ಟ್ರೇನ್​ ಮಾರ್ಕೆಟ್​ ಅಂದ್ರೆ ಪ್ರತಿನಿತ್ಯವೂ ಹಳಿಗಳ ಮೇಲೆಯೇ ಇಲ್ಲಿ ಸಂತೆ ನಡೆಯುತ್ತದೆ. ಅದ್ಯಾವ ಪರಿಯ ಸಂತೆ ಎಂದ್ರೆ ನೂರಾರು ಮಂದಿ ಈ ಸಂತೆಗೆ ಬರ್ತಾರೆ. ಅಲ್ಲಿಯೇ ಗಾಡಿಗಳೂ ಓಡಾಡ್ತಾ ಇರುತ್ತವೆ. ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿ ರೈಲು ಬರುವಾಗ ಬಾಗಿಲು ಹಾಕುವುದು, ಐದು ನಿಮಿಷ ಅತ್ತಿತ್ತ ಕಡೆ ವಾಹನ ಸವಾರರು ಕಾಯುವುದು... ಎಲ್ಲವೂ ಮಾಮೂಲಿ. ಇದು ಇಲ್ಲದ ಕಡೆ ಎಷ್ಟೋ ಬಾರಿ ಅಪಘಾತಗಳೂ ಆಗಿರುವುದು ಉಂಟು. ರೈಲು ಗೇಟು ಇಲ್ಲದೇ ಇರುವುದಕ್ಕೆ ಜನರು ಆಕ್ರೋಶ ಪಡಿಸುವುದು ಉಂಟು. ಆದರೆ ನೈಜೇರಿಯಾದ ಈ ಟ್ರೈನ್​ ಮಾರ್ಕೆಟ್​ ನೋಡಿದ್ರೆ ಸುಸ್ತಾಗೋದು ಗ್ಯಾರೆಂಟಿ. 

ಹೌದು. ಹಳಿಗಳ ಮೇಲೆ ಪ್ರತಿನಿತ್ಯ ಸಂತೆ ನಡೆಯುತ್ತೆ. ದೂರದಿಂದ ಟ್ರೈನ್​ ಬರುವ ಶಬ್ದ ಆಗುತ್ತಲೇ ಸೆಕೆಂಡ್​ ಒಳಗೆಯೇ ಸಂತೆ ಗಾಯಬ್​ ಆಗುತ್ತೆ. ಮಾರುವವರು, ಕೊಳ್ಳುವವರು ಎಲ್ಲರೂ ಎಸ್ಕೇಪ್​  ಆಗುತ್ತಾರೆ. ಅಲ್ಲಿ ಏನೂ ಇಲ್ಲವೇನೋ ಎನ್ನುವಂತೆ  ಕಾಣಿಸುತ್ತದೆ. ರೈಲು ಅತ್ತ ಹೋದ ಮೇಲೆ ಮತ್ತೆ ರಪರಪ ಎಂದು ಎಲ್ಲರೂ ಮುತ್ತಿಗೆ ಹಾಕುತ್ತಾರೆ. ಪುನಃ ರೈಲು ಬಂದರೆ ಹೋಗುತ್ತಾರೆ. ಈ ರೈಲಿನ ಮುಂಭಾಗ ಸೇರಿದಂತೆ ಎಲ್ಲೆಂದರಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವುದು ನೋಡಿದರೆ, ಅಬ್ಬಬ್ಬಾ ಹೀಗೂ ಒಂದು ದೇಶ ಇರುತ್ತಾ ಎಂದು ಹುಬ್ಬೇರಿಸುವುದು ಗ್ಯಾರೆಂಟಿ. ಇವೆಲ್ಲಾ ಕುತೂಹಲದ ವಿಷಯವನ್ನು ಡಾ.ಬ್ರೋ ಹೇಳಿದ್ದು. ಅದರ ವಿಡಿಯೋ ಲಿಂಕ್​ ಈ ಕೆಳಗೆ ಇದೆ. 

ಅಂತರ್​ಧರ್ಮೀಯ ಪ್ರೇಮಿಗಳ ಕೌತುಕದ ಕಥೆ: ಗಂಟೆಗೊಮ್ಮೆ ಸ್ಮಾರಕಗಳ ಸಮಾಗಮ! ಡಾ.ಬ್ರೋ ಬಾಯಲ್ಲಿ ಕೇಳಿ...

click me!