ಕಾಶಿ, ಪುರಿ,ಆಯೋಧ್ಯೆ ಸೇರಿ 6 ಪುಣ್ಯಕ್ಷೇತ್ರ ಯಾತ್ರೆಗೆ ಕೈಗೆಟುಕುವ ದರದ ಪ್ಯಾಕೇಜ್ ಘೋಷಿಸಿದ ರೈಲ್ವೇ !

By Suvarna NewsFirst Published Jun 10, 2023, 12:38 PM IST
Highlights

ಭಾರತೀಯ ರೈಲ್ವೇ 6 ಪುಣ್ಯಕ್ಷೇತ್ರ ಯಾತ್ರೆಗೆ ವಿಶೇಷ ಪ್ಯಾಕೇಜ್ ಘೋಷಿಸಿದೆ. ಕಾಶಿ, ಪುರಿ, ಆಯೋಧ್ಯೆ, ಪ್ರಯಾಗರಾಜ್ ಸೇರಿದಂತೆ 6 ಕ್ಷೇತ್ರಗಳ 9 ದಿನದ ಯಾತ್ರೆಗೆ ಅಗ್ಗದ ದರದಲ್ಲಿ ಪ್ಯಾಕೇಜ್ ಘೋಷಿಸಲಾಗಿದೆ.

ನವದೆಹಲಿ(ಜೂ.10): ಭಾರತೀಯ ರೈಲ್ವೇ ಇಲಾಖೆ ಈಗಾಗಲೇ ಹಲವು ಪ್ಯಾಕೇಜ್ ಟೋರ್ ಘೋಷಣೆ ಮಾಡಿದೆ. ಆಯೋಧ್ಯೆ ಟೂರ್ ಸೇರಿದಂತೆ ಹಲವು ತೀರ್ಥ ಕ್ಷೇತ್ರ ಯಾತ್ರೆ, ಹನಿಮೂರ್ ಸೇರಿದಂತೆ ಇತರ ಟೂರ್ ಘೋಷಿಸಿದೆ. ಇದೀಗ ಕೈಗೆಟುಕುವ ದರಲ್ಲಿ 6 ಪವಿತ್ರ ಕ್ಷೇತ್ರಗಳ ಯಾತ್ರೆಗೆ ಟೂರ್ ಘೋಷಿಸಿದೆ. 9 ದಿನಗಳ ಈ ಯಾತ್ರೆಯಲ್ಲಿ ಕಾಶಿ, ಪುರಿ, ಆಯೋಧ್ಯೆ, ಪ್ರಯಾಗರಾಜ್ ಸೇರಿದಂತೆ 6 ಪುಣ್ಯಕ್ಷೇತ್ರಗಳ ದರ್ಶನ ಪಡೆಯಲು ಸಾಧ್ಯವಿದೆ. ಐಆರ್‌ಟಿಸಿ ಪುಣ್ಯ ಕ್ಷೇತ್ರ ಯಾತ್ರೆ ಯೋಜನೆಯಡಿಯಲ್ಲಿ ಅಗ್ಗದ ದರ ಟೂರ್ ಘೋಷಿಸಿದೆ.

ಪುಣ್ಯಕ್ಷೇತ್ರ ದರ್ಶನ
ಪುಣ್ಯಕ್ಷೇತ್ರ ಯಾತ್ರೆಯಲ್ಲಿ ಪುರಿಯ ಜಗನ್ನಾಥ ಮಂದಿರ, ಕೋನಾರ್ಕ್‌ನ ಸೂರ್ಯ ದೇವಾಯ ದರ್ಶನ ಹಾಗೂ ಸಮುದ್ರ ಕಿನಾರೆ ಭೇಟಿ, ಗಯಾದಲ್ಲಿರುವ ವಿಷ್ಣುಪಾದಾ ದೇವಸ್ಥಾನ ದರ್ಶನ, ವಾರಣಾಸಿಯಲ್ಲಿ ಕಾಶಿ ವಿಶ್ವನಾಥನ ಮಂದಿರ, ಕಾಶಿ ವಿಶಾಲಾಕ್ಷಿ ಕಾರಿಡಾರ್, ಅನ್ನಪೂರ್ಣ ದೇವಿ ಮಂದಿರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಇಷ್ಟೇ ಅಲ್ಲ ಆಯೋಧ್ಯೆ ಗಂಗಾ ಆರತಿ, ಆಯೋಧ್ಯೆ ರಾಮಜನ್ಮಭೂಮಿ, ಹುನುಮಾನ್ ಗಿರಿ, ಸರಯೂ ನದಿ ತಟದಲ್ಲಿ ಗಂಗಾ ಆರತಿ ದರ್ಶನ, ಪ್ರಯಾಗ್‌ರಾಜ್‌ನಲ್ಲಿ ತ್ರೀವೇಣಿ ಸಂಗಮ, ಹನುಮಾನ್ ಮಂದಿರ, ಶಂಕರ್ ವಿಮನ್ ಮಂಟಪ ದರ್ಶಿಸಲು ಈ ಪ್ಯಾಕೇಜ್‌ನಲ್ಲಿ ಅವಕಾಶವಿದೆ.

Latest Videos

ಡೈನಿಂಗ್‌ನಿಂದ ಮಿನಿ ಲೈಬ್ರೆರಿವರೆಗೆ: ಭಾರತ್ ಗೌರವ್‌ ಪ್ರವಾಸಿ ರೈಲೊಳಗೆ ಏನೇನಿದೆ ನೋಡಿ?

ಪುಣ್ಯಕ್ಷೇತ್ರ ರೈಲು ಸೌಲಭ್ಯ
ಐಆರ್‌ಟಿಸಿ ಪುಣ್ಯಕ್ಷೇತ್ರ ಯಾತ್ರೆಯಲ್ಲಿ ರೈಲ್ವೇ ಇಲಾಖೆ ಕೆಲ ಸೌಲಭ್ಯವನ್ನು ಕಲ್ಪಿಸಲಿದೆ. ಪ್ರಯಾಣದಲ್ಲಿ ಸಸ್ಯಾಹಾರಿ ಆಹಾರ ನೀಡಲಾಗುತ್ತದೆ. ಬೆಳಗಿನ ತಿಂಡಿ, ಊಟ, ಸಂಜೆ ವೇಳೆ ಲುಘು ಉಪಹಾರ, ರಾತ್ರಿ ಭೋಜನ ಒಳಗೊಂಡಿರುತ್ತದೆ. ಪ್ರಯಾಣಿಕರಿಗೆ ಪ್ರಯಾಣ ವಿಮೆ, ಅನುಭವಿ ಮಾರ್ಗದರ್ಶಕರ ನೆರವು, ಪ್ರಯಾಣದ ನಡುವೆ ಹಾಗೂ ದೇವಸ್ಥಾನ ದರ್ಶನದನ ಯಾವುದೇ ತುರ್ತು ಸೇವೆಯೂ ಲಭ್ಯವಿದೆ.

ಪ್ರಯಾಣದ ಟಿಕೆಟ್ ದರ
ಪುಣ್ಯ ಕ್ಷೇತ್ರ ಯಾತ್ರೆ ಟಿಕೆಟ್ ಬುಕ್ ಮಾಡಲು ಇಚ್ಚಿಸುವ ಯಾತ್ರಿಕರು ಎಕಾನಮಿ, ಸ್ಟಾಂಡರ್ಟ್ ಅಥವಾ ಕಂಫರ್ಟ್, ಸ್ಲೀಪರ್ ಕ್ಲಾಸ್ ಟಿಕೆಟ್ ಲಭ್ಯವಿದೆ. ಪ್ರತಿ ವ್ಯಕ್ತಿಗೆ 15,075 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ 14,070 ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು ಸ್ಟಾಂಡರ್ಡ್ 3AC ಟಿಕೆಟ್ ಬೆಲೆ 31,0260 ರೂಪಾಯಿ(ವಯಸ್ಕರಿಗೆ) ಮಕ್ಕಳಿಗೆ 29,845 ರೂಪಾಯಿ.  

ಇತ್ತೀಚೆಗೆ ರೈಲ್ವೇ ಇಲಾಖೆ ಶ್ರೀ ರಾಮಾಣಯ ಯಾತ್ರೆ ಟೂರ್ ರೈಲು ಸೇವೆ ಆರಂಭಿಸಿದೆ. ಈ ರೈಲು  17 ದಿನಗಳ ಕಾಲ 7500 ಕಿ.ಮೀ ಸಂಚರಿಸಿ, ಅಯೋಧ್ಯೆ, ಹಂಪಿ ಸೇರಿ​ದಂತೆ ಶ್ರೀ ರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸ್ಥಳಗಳಿಗೆ ಯಾತ್ರಿ​ಕ​ರನ್ನು ಕರೆ​ದೊ​ಯ್ಯ​ಲಿ​ದೆ. ದಿಲ್ಲಿ​ಯಿಂದ ಹೊರ​ಡು​ವ ರೈಲಿಗೆ ರಾಮಜನ್ಮಭೂಮಿ ಅಯೋಧ್ಯೆ ಮೊದಲ ನಿಲ್ದಾಣವಾಗಿದೆ. ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ ಹಾಗೂ ನಂದಿಗ್ರಾಮದಲ್ಲಿರುವ ಭರತ ಮಂದಿರದ ಜತೆಗಿರುವ ಹನುಮಾನ್‌ ದೇಗುಲವನ್ನು ಸಹ ಯಾತ್ರಾರ್ಥಿಗಳು ವೀಕ್ಷಿಸಬಹುದಾಗಿದೆ. ಆ ಬಳಿಕ ರೈಲು ಸೀತೆಯ ಜನ್ಮ​ಸ್ಥಳ ಬಿಹಾರದ ಸೀತಾಮಢಿಗೆ ತೆರಳಲಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ನೇಪಾಳದಲ್ಲಿರುವ ಜನಕಪುರದಲ್ಲಿರುವ ರಾಮ-ಜಾನಕಿ ದೇಗುಲಕ್ಕೂ ತೆರಳಬಹುದಾಗಿದೆ.

ಇದಾದ ಬಳಿಕ ವಾರಾಣಸಿ, ಪ್ರಯಾಗ್‌ರಾಜ್‌, ಶೃಂಗ್ವೆರ್‌ಪುರ ಮತ್ತು ಚಿತ್ರಕೂಟಕ್ಕೆ ರಸ್ತೆ ಮುಖಾಂತರವಾಗಿ ತೆರಳಬಹುದು. ಈ ಮೂರು ನಗರಗಳಲ್ಲಿ ಪ್ರಯಾಣಿಕರಿಗೆ ರಾತ್ರಿ ತಂಗಲು ಅವಕಾಶವಿರಲಿದೆ. ಕೊನೆಗೆ ನಾಶಿಕ್‌, ಕರ್ನಾಟಕದ ಹಂಪಿ ಹಾಗೂ ತಮಿಳುನಾಡಿನ ರಾಮೇಶ್ವರಂಗೆ ಭೇಟಿ ನೀಡ​ಲಿದೆ. ಕೊನೆಗೆ 17ನೇ ದಿನಕ್ಕೆ ದೆಹಲಿಗೆ ರೈಲು ಬಂದು ಸೇರಲಿದೆ.17 ದಿನಗಳ ಈ ರಾಮಯಾತ್ರೆಗೆ ಒಬ್ಬ ವ್ಯಕ್ತಿಗೆ ಐಆರ್‌ಸಿಟಿಸಿ 82,950 ರು. ದರ ನಿಗದಿ ಮಾಡಿದೆ.

click me!