Travel Tips: ವಿದೇಶಿ ಪ್ರಯಾಣದ ವೇಳೆ ಎಷ್ಟು ಕ್ಯಾಶ್ ಕೈಯಲ್ಲಿರ್ಬೇಕು?

By Suvarna News  |  First Published Jun 7, 2023, 1:18 PM IST

ವಿದೇಶಿ ಪ್ರವಾಸಕ್ಕೆ ಹೋಗುವ ವೇಳೆ ಒಂದಿಷ್ಟು ಖುಷಿ, ಒಂದಿಷ್ಟು ಪ್ರಶ್ನೆಗಳು ನಮ್ಮನ್ನು ಕಾಡುತ್ವೆ. ಎಷ್ಟು ಹಣ ತೆಗೆದುಕೊಂಡು ಹೋಗ್ಬೇಕು ಎಂಬ ಗೊಂದಲವಿರುತ್ತದೆ. ನಮ್ಮಿಷ್ಟದಂತೆ ನಗದನ್ನು ಬ್ಯಾಗಿಗೆ ತುಂಬಿದ್ರೆ ಮುಂದೆ ಕಷ್ಟವಾಗ್ಬಹುದು. 
 


ಈಗಿನ ದಿನಗಳಲ್ಲಿ ಜನರ ಅಚ್ಚುಮಚ್ಚಿನ ರಜಾ ತಾಣಗಳು ವಿದೇಶಗಳಾಗ್ತಿವೆ. ರಜೆ ಬಂದ್ರೆ ಸಾಕು, ವಿದೇಶಕ್ಕೆ ಹಾರುವ ಜನರು ಅನೇಕರಿದ್ದಾರೆ. ವಿದೇಶಕ್ಕೆ ಪ್ರಯಾಣ ಬೆಳೆಸುವ ವೇಳೆ ಅಲ್ಲಿನ ವಾತಾವರಣ, ಅಲ್ಲಿನ ಪ್ರವಾಸಿ ತಾಣ, ಅಲ್ಲಿ ವಾಸಕ್ಕೆ ವ್ಯವಸ್ಥೆ ಸೇರಿದಂತೆ ಅನೇಕ ಸಂಗತಿಗಳನ್ನು ನಾವು ಗಮನಿಸಬೇಕಾಗುತ್ತದೆ. ಅಲ್ಲಿನ ಕಾನೂನು ಬೇರೆ ಇರುವ ಕಾರಣ, ಅದ್ರ ಬಗ್ಗೆ ಸ್ವಲ್ಪ ಮಾಹಿತಿ ಇದ್ರೆ ವಿದೇಶಕ್ಕೆ ಹೋದಾಗ ಸಮಸ್ಯೆ ಆಗುವುದಿಲ್ಲ. ವಿದೇಶಕ್ಕೆ ಹೋಗುವ ಜನರು ಎಷ್ಟು ನಗದನ್ನು ತೆಗೆದುಕೊಂಡು ಹೋಗ್ಬಹುದು ಎಂಬುದನ್ನು ಕೂಡ ತಿಳಿದಿರಬೇಕು. ನಾವಿಂದು ಇದ್ರ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳೋದೇನು? : ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ನೇಪಾಳ (Nepal) ಹಾಗೂ ಭೂತಾನ್ ಹೊರತುಪಡಿಸಿ ವಿದೇಶಕ್ಕೆ ತೆರಳಿದ ವ್ಯಕ್ತಿ, ಭಾರತಕ್ಕೆ ವಾಪಸ್ ಬರುವ ವೇಳೆ 25 ಸಾವಿರ ರೂಪಾಯಿ ನಗದನ್ನು ತೆಗೆದುಕೊಂಡು ಬರಬಹುದು. ಹಾಗಂತ ನೀವು ವಿದೇಶಿ ಕರೆನ್ಸಿ (Currency) ಹಾಗೂ ಬೇರೆ ಬೇರೆ ವಿಧದಲ್ಲಿ ಹಣದ ವಹಿವಾಟು ಮಾಡಬಾರದು ಎಂಬುದು ಇದರ ಅರ್ಥವಲ್ಲ. ಬೇರೆ ಬೇರೆ ದೇಶದಲ್ಲಿ ಇದ್ರ ನಿಯಮ ಭಿನ್ನವಾಗಿದೆ. 

Tap to resize

Latest Videos

Sun Set ಆನಂದಿಸಲು ಈ ಸ್ಥಳಗಳಿಗೆ ಹೋಗ್ಲೇಬೇಕು…!

ಫ್ರಾನ್ಸ್ (France) :  ಫ್ರಾನ್ಸ್ ನಲ್ಲಿ ನೀವು 10,000 ಯುರೋಗಳಿಗಿಂತ ಕಡಿಮೆ ಹಣವನ್ನು ಸಾಗಿಸಬಹುದು. ಈ ಮಿತಿಯವರೆಗೆ ನಗದು ಸಾಗಿಸಲು ಯಾವುದೇ ತೊಂದರೆ ಇಲ್ಲ. ಅದಕ್ಕಿಂತ ಹೆಚ್ಚು ಹಣವನ್ನು ತೆಗೆದುಕೊಂಡು ಹೋಗುವವರಿದ್ದರೆ ಮೊದಲೇ ಅನುಮತಿ ಪಡೆಯಬೇಕು.

ಇಟಲಿ (Italy) – ಸ್ಪೇನ್ (Spain) : ಯುರೋಪಿನ ದೇಶವಾಗಿರುವ ಇಟಲಿ ಹಾಗೂ ಸ್ಪೇನ್ ಪ್ರವಾಸಿಗರ ಅಚ್ಚುಮೆಚ್ಚಿನ ದೇಶಗಳಲ್ಲಿ ಒಂದಾಗಿದೆ. ವಿಶ್ವದ ಮೂಲೆ ಮೂಲೆಯಿಂದ ಈ ದೇಶದ ಸೌಂದರ್ಯ ಸವಿಯಲು ಜನರು ಇಲ್ಲಿಗೆ ಬರ್ತಾರೆ. ನೀವು ಅಲ್ಲಿಗೆ ಪ್ರಯಾಣ ಬೆಳೆಸುವ ವೇಳೆ 10 ಸಾವಿರ ಯುರೋವನ್ನು ಮಾತ್ರ ಕೊಂಡೊಯ್ಯಲು ಅನುಮತಿಸಲಾಗುತ್ತದೆ.

ಪ್ರಪಂಚ ಕೊನೆಗೊಳ್ಳುವ ವಿಶ್ವದ ಕೊನೆಯ ಮಾರ್ಗವಿದು! ತಪ್ಪಿಯೂ ಒಬ್ರೇ ಹೋಗ್ಬೇಡಿ

ಅಮೆರಿಕಾ : ಅಮೆರಿಕಾಕ್ಕೆ ಪ್ರಯಾಣ ಬೆಳೆಸುವ ವೇಳೆ ನೀವು 3000 ಡಾಲರ್ ನಗದನ್ನು ಕೊಂಡೊಯ್ಯಲು ಅನುಮತಿ ನೀಡಲಾಗುತ್ತದೆ. 

ಕೆನಡಾ : ಒಂದ್ವೇಳೆ ನೀವು 10 ಸಾವಿರ ಕೆನಡಾ ಡಾಲರ್ ಗಿಂತ ಹೆಚ್ಚು ನಗದನ್ನು ಕೊಂಡೊಯ್ಯುವುದಾದ್ರೆ ಮೊದಲೇ ಅನುಮತಿ ಪಡೆಯಬೇಕಾಗುತ್ತದೆ. 

ಬ್ರಿಟನ್  : ಬ್ರಿಟನ್ ಗೆ ಪ್ರಯಾಣ ಬೆಳೆಸುವ ವೇಳೆ ನೀವು 10 ಸಾವಿರ ಪೌಂಡ್ ಮಾತ್ರ ತೆಗೆದುಕೊಂಡು ಹೋಗಲು ಅನುಮತಿಯಿದೆ. 

ಹೆಚ್ಚಿಗೆ ನಗದು ತೆಗೆದುಕೊಂಡ್ರೆ ಏನಾಗುತ್ತೆ? : ಎಲ್ಲಾ ದೇಶಗಳೂ ಅದರದೇ ನಿಯಮ ಪಾಲನೆ ಮಾಡುತ್ತದೆ. ನೀವು ಹೆಚ್ಚಿನ ನಗದನ್ನು ತೆಗೆದುಕೊಂಡು ಹೋದಾಗ ನಗದು ವಶಕ್ಕೆ ಪಡೆಯಬಹುದು. ಭಾರೀ ದಂಡ ವಿಧಿಸಬಹುದು. ಕೆಲ ಸಂದರ್ಭದಲ್ಲಿ ಬಂಧಿಸಿ, ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಹಾಗಾಗಿ ನೀವು 80-20ರ ನಿಯಮ ಪಾಲನೆ ಮಾಡುವುದು ಒಳ್ಳೆಯದು. 80 – 20 ಅಂದ್ರೆ ಶೇಕಡಾ 20ರಷ್ಟು ನಗದು ಹಾಗೂ ಶೇಕಡಾ 80ರಷ್ಟು ಹಣ ಕಾರ್ಡಿನಲ್ಲಿಡುವುದು.

ವಿದೇಶದಲ್ಲಿ ಯಾವ ಕ್ರೆಡಿಟ್ ಕಾರ್ಡ್ ಬಳಸಬೇಕು? : ವಿದೇಶಿ ಪ್ರಯಾಣದ ವೇಳೆ ನಗದು ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಾಗುತ್ತದೆ. ಆದ್ರೆ ದೊಡ್ಡ ಮಟ್ಟದ ನಗದು ತೆಗೆದುಕೊಂಡು ಹೋಗುವುದು ಸುರಕ್ಷಿತವೂ ಅಲ್ಲ. ಹಾಗಾಗಿ ನೀವು ಕ್ರೆಡಿಟ್ ಕಾರ್ಡ್ ಬಳಸುವುದು ಉತ್ತಮ ಮಾರ್ಗವಾಗಿದೆ. ಅಂತರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಎಲ್ಲ ದೇಶದಲ್ಲೂ ಮಾನ್ಯವಾಗುತ್ತದೆ. ಬ್ಯಾಂಕ್ ನಿಮಗೆ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುತ್ತದೆ. ಪಾವತಿ ವೇಳೆ ವಿದೇಶಿ ಕರೆನ್ಸಿಗೆ ಪರಿವರ್ತನೆಯಾಗುವ ಕಾರಣ ಅದಕ್ಕೆ ನೀವು ಶುಲ್ಕ ಪಾವತಿ ಮಾಡಬೇಕಾಗುತ್ತದೆ. 
 

click me!