ಬೆಂಗಳೂರಿನ ಟ್ರಾಫಿಕ್‌ ಜಾಮ್‌ ಮೀರಿಸಿದ ಮುಳ್ಯಯನಗಿರಿ ಪ್ರವಾಸಿಗರು

By Sathish Kumar KH  |  First Published Jul 2, 2023, 10:06 PM IST

ವಾರಾಂತ್ಯದಲ್ಲಿ ಮುಳ್ಳಯ್ಯಗಿರಿಯಲ್ಲಿ ಮಂಜುಕವಿದ ವಾತಾವರಣ ಮತ್ತು ಮೋಡಗಳನ್ನು ನೋಡಲು ಸಾವಿರಾರು ಪ್ರವಾಸಿಗರು ಬೇಟಿ ನೀಡಿದ ಹಿನ್ನೆಲೆ ಮುಳ್ಳಯ್ಯನಗಿರಿ ಕಿರಿದಾದ ಮಾರ್ಗದಲ್ಲಿ ಸುಮಾರು 2 ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜು.02): ಮುಗಿಲು ನೋಡಲು ನೂಕು- ನುಗ್ಗಲು ಯಾಕೆ? ಎಂಬ ಕನ್ನಡದ ಗಾದೆಯನ್ನು ನಾವು ಕೇಳಿದ್ದೇವೆ. ಆದರೂ, ವಾರಾಂತ್ಯದಲ್ಲಿ ಮುಳ್ಳಯ್ಯಗಿರಿಯಲ್ಲಿ ಮಂಜುಕವಿದ ವಾತಾವರಣ ಮತ್ತು ಮೋಡಗಳನ್ನು ನೋಡಲು ಸಾವಿರಾರು ಪ್ರವಾಸಿಗರು ಬೇಟಿ ನೀಡಿದ ಹಿನ್ನೆಲೆ ಮುಳ್ಳಯ್ಯನಗಿರಿ ಕಿರಿದಾದ ಮಾರ್ಗದಲ್ಲಿ ಸುಮಾರು 2 ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

Tap to resize

Latest Videos

undefined

ಎಲ್ಲಿ ನಿಂತರೂ ಆಕಾಶ ಕಂಡೇ ಕಾಣುತ್ತದೆ, ಆದರೂ ನೂಕು ನುಗ್ಗಲು ಮಾಡಿಕೊಂಡು ನೋಡುವುದರಲ್ಲಿ ಅರ್ಥವಿಲ್ಲದ ಕಾರಣ ನಮ್ಮ ಹಿರಿಯರು ಮುಗಿಲು ನೋಡಲು ನೂಕು- ನುಗ್ಗಲು ಯಾಕೆ? ಎಂಬ ಗಾದೆಯನ್ನು ಸೃಷ್ಟಿಸಿದ್ದಾರೆ. ಆದರೆ, ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ಮೋಡಗಳು ಹಾಗೂ ಮಂಜು ಕವಿದ ವಾತಾವರಣ ನೋಡಲು ಕಿರಿದಾದ ದಾರಿಯಲ್ಲಿ ಒಂದೇ ದಿನ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಹೋಗಿದ್ದಾರೆ. ಇದನ್ನು ಮುಗಿಲು ನೋಡಲು ನೂಕುನುಗ್ಗಲು ಎನ್ನಬಹುದಲ್ಲವೇ?. . ವಾರಾಂತ್ಯ ದಿನವಾದ ಶನಿವಾರ ಮತ್ತು ಭಾನುವಾರ ಮುಳ್ಳಯ್ಯನಗಿರಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿದ್ದು, ಇದರಿಂದ ವಾಹನಗಳ ಸಂಖ್ಯೆ ಹಾಗೂ ವಿಪರೀತ ವಾಹನಗಳ ಸಂಚಾರದಿಂದಾಗಿ ಬೆಂಗಳೂರು ಟ್ರಾಫಿಕ್‌ ಜಾಮ್‌ ಅನ್ನೂ ಮೀರಿಸುವಂತೆ ಗಿರಿ ಶ್ರೇಣಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. 

ಸಾವಿನ ದವಡೆಯಲ್ಲಿದ್ದ ಮಕ್ಕಳಿಗೆ ಮರುಜನ್ಮ ನೀಡಿ, ಪ್ರಾಣಬಿಟ್ಟ ಮಹಾತಾಯಿ

ಅಡ್ಡಾದಿಡ್ಡಿ ಗಾಡಿ ನಿಲ್ಲಿಸಿದ ಪ್ರವಾಸಿಗರು:  ಇನ್ನು ಮುಳ್ಳಯ್ಯನಗಿರಿಗೆ ಕೇವಲ ಎರಡು ದಿನಗಳಲ್ಲಿ 1,273 ಬೈಕ್, 4,571 ಕಾರು ಹಾಗೂ 283 ಟಿಟಿ ವಾಹನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು. ಜೊತೆಗೆ, ರಾಜ್ಯ, ಹೊರರಾಜ್ಯದಿಂದ ಬಂದಿದ್ದ ಸಾವಿರಾರು ಪ್ರವಾಸಿಗರು ಎಲ್ಲೆಂದರಲ್ಲಿ ಗಾಡಿಗಳನ್ನ ಪಾರ್ಕ್ ಮಾಡಿದ್ದು, ಇದರಿಂದ ಬರುವ ಮತ್ತು ಹೋಗುವ ವಾಹನಗಳಿಗೆ ದಾರಿಯೇ ಇಲ್ಲದಂತಾಗಿತ್ತು. ಇನ್ನು ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್‌ ಆದರೂ ಒಂದು ಗಂಟೆಯಲ್ಲಿ ಮುಂದಕ್ಕೆ ಹೋಗಬಹುದು. ಆದರೆ, ಇಂದು ಮುಳ್ಳಯ್ಯನಗಿರಿಯಲ್ಲಿ ಸುಮಾರು 2 ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂದಿದ್ದವು. 

ಮಳೆ, ಮಂಜು ನೋಡಲು ಮುಗಿಬಿದ್ದ ಜನ:  ಮುಳ್ಳಯ್ಯನಗಿರಿ ಗಿರಿಪ್ರದೇಶದಲ್ಲಿ ಮಳೆ ಇಲ್ಲ. ಆದರೆ, ಸಾಕಷ್ಟು ಮಂಜು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಎರಡು ಅಡಿ ದೂರದಲ್ಲಿರುವವರು ಕಾಣದಂತಹಾ ಮಂಜು ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿಪ್ರದೇಶದಲ್ಲಿ ಆವರಿಸಿದೆ. ಈ ಪ್ರಕೃತಿ ಸೌಂದರ್ಯವನ್ನ ಕಂಡ ಪ್ರವಾಸಿಗರು ಸೆಲ್ಫಿ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಎಲ್ಲೆಂದರಲ್ಲಿ ಗಾಡಿಗಳನ್ನ ನಿಲ್ಲಿಸುತ್ತಿರೋದ್ರಿಂದ ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ಪ್ರವಾಸಿಗರ ಮಧ್ಯೆಯೇ ಅಲ್ಲಲ್ಲೇ ಸಣ್ಣಪುಟ್ಟ ಜಗಳಗಳು ಕೂಡ ನಡೆಯುತ್ತಿದ್ದವು. 

ಮೌಢ್ಯಾಚರಣೆ ವಿರೋಧಿ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಎಷ್ಟುಬಾರಿ ಹೋಗಿದ್ದಾರೆ?

ವೀಕೆಂಡ್‌ನಲ್ಲಿ ಹೋಗೋ ಮುನ್ನ ಎಚ್ಚರ: ಇನ್ನು ಮುಳ್ಳಯ್ಯನಗಿರಿ ಪರ್ವತ ಶ್ರೇಣಿಗೆ (Mullayanagiri peak) ಮಳೆಗಾಲ ಆರಂಭದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವುದು ಸಹಜವಾಗಿದೆ. ಆದರೆ, ವಾರಾಂತ್ಯದ ದಿನಗಳಲ್ಲಿ ರಜೆ ಇರುವುದರಿಂದ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೀವು ಕೂಡ ವಾರಾಂತ್ಯದಲ್ಲಿ, ಗಿರಿಧಾಮಕ್ಕೆ ಭೇಟಿ ನೀಡುವುದಿದ್ದರೆ ಮತ್ತೊಮ್ಮೆ ಆಲೋಚಿಸಿ. ಕಾರಣ, ಇಲ್ಲಿಗೆ ಬಂದರೆ ಬಹುತೇಕ ಒಂದು ದಿನದ ಸಂಪೂರ್ಣ ಪ್ರವಾಸ ಮುಳ್ಳಯ್ಯನಗಿರಿಗೆ ಸೀಮಿತ ಆಗಬಹುದು. ಆದ್ದರಿಂದ, ವೀಕೆಂಡ್‌ ದಿನದಲ್ಲಿ ಈ ಸ್ಥಳಕ್ಕೆ ಹೋಗುವ ಮುನ್ನ ಸಮಯದ ಬಗ್ಗೆ ಆಲೋಚನೆ ಮಾಡಿ ಪ್ರವಾಸ ಕೈಗೊಳ್ಳಿ ಎಂದು ಟ್ರಾಫಿಕ್‌ ಜಾಮ್‌ ಅನುಭವಿಸಿದ ಪ್ರವಾಸಿಗರು ಹೇಳಿದ್ದಾರೆ. 

click me!