
ಮನುಷ್ಯ ತಾನೇ ಶಕ್ತಿಶಾಲಿ, ತಾನೇ ಬುದ್ಧಿವಂತ ಎಂದು ಎಷ್ಟು ಬಾರಿ ಅಂದುಕೊಂಡರೂ ಕೂಡ ಕೆಲವೊಮ್ಮೆ ಪ್ರಕೃತಿಯ ಎದುರು ಆತ ನಿಸ್ಸಹಾಯಕನಾಗುತ್ತಾನೆ ಎನ್ನುವುದು ಸುಳ್ಳಲ್ಲ. ದೊಡ್ಡ ದೊಡ್ಡ ಬಿರುಗಾಳಿ, ಸುನಾಮಿ, ಭೂಕಂಪ ಬರಬೇಕಾಗಿಲ್ಲ. ಒಮ್ಮೊಮ್ಮೆ ಸಣ್ಣ ಸಣ್ಣ ಹುಳುಗಳು ಮನುಷ್ಯನನ್ನು ಸೋಲಿಸುತ್ತವೆ. ಆತ ಏನೂ ಮಾಡಲಾಗದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ.
ಮನೆಯಲ್ಲಿ ಒಂದು ಇರುವೆ ಬಂದರೆ ನಾವು ಅದನ್ನು ಹೊಸಕಿ ಹಾಕ್ತೆವೆ. ಅದರ ಬದಲಾಗಿ ಸಾಲು ಸಾಲು ಇರುವೆಗಳು ಬಂದು ಸಿಹಿ ಖಾದ್ಯಕ್ಕೆ ಮುತ್ತಿಕೊಂಡರೆ ನಮ್ಮಿಂದ ಅದನ್ನು ಓಡಿಸೋದು ಕಷ್ಟ. ಉತ್ತರ ಪ್ರದೇಶ (Uttar Pradesh) ದ ಉನ್ನಾವ್ ಜಿಲ್ಲೆಯ ರೂದವಾರಾ (Rudwara ) ಹಳ್ಳಿಯ ಜನರು ಕೂಡ ಇಂತಹುದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಳ್ಳಿಗೆ ಬೇರೆ ಊರುಗಳಿಂದ ಯಾರೂ ಬರ್ತಿಲ್ಲ. ಈ ಹಳ್ಳಿಯ ಗಂಡು ಮಕ್ಕಳಿಗೆ ಮದುವೆ ಭಾಗ್ಯವಿಲ್ಲ. ಈ ಎಲ್ಲ ಸಮಸ್ಯೆಗೆ ಮೂಲ ಕಾರಣ ನೊಣ. ಮನೆಯಲ್ಲಿ ಒಂದು ನೊಣ (Fly) ಬಂದು ಕುಳಿತ್ರೆ ನಮಗೆ ಹೇಸಿಗೆಯಾಗುತ್ತೆ. ಹೊಟೇಲ್ ಗೆ ಹೋದಾಗ ನೊಣ ಕಾಣಿಸಿಕೊಂಡ್ರೆ ಊಟ ಬಿಟ್ಟು ಬರೋರಿದ್ದಾರೆ. ಆದ್ರೆ ಈ ಹಳ್ಳಿಯಲ್ಲಿ ಒಂದಲ್ಲ ಎರಡಲ್ಲ ಕೋಟ್ಯಾಂತರ ನೊಣಗಳಿವೆ. ನೊಣಗಳ ಮಧ್ಯೆ ಇಲ್ಲಿನವರ ಜೀವನ ಸಾಗ್ತಿದೆ.
Unique Temple: ಇಲ್ಲಿರುವ ಸ್ವಯಂಭು ಶಿವ ದಿನಕ್ಕೆ ಐದು ಬಾರಿ ತನ್ನ ಬಣ್ಣ ಬದಲಿಸುತ್ತಾನೆ!
ನೊಣದಿಂದ ಊಟವಿಲ್ಲ, ನಿದ್ದೆಯಿಲ್ಲ : ನೊಣದ ಕಾರಣ ಈ ಹಳ್ಳಿ, ಜನ ಸಂಪರ್ಕದಿಂದ ದೂರವಿದೆ. ಈ ಹಳ್ಳಿ ಸುಮಾರು ಐದು ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿರುವ ನೊಣಗಳ ಇವರ ಬದುಕನ್ನು ದುಸ್ತರಗೊಳಿಸಿದೆ. ಇಲ್ಲಿನ ಜನರು ತಿಂಡಿ ತಿನಿಸುಗಳನ್ನು ಕೂಡ ಸೊಳ್ಳೆ ಪರದೆಯ ಒಳಗಡೆ ಕೂತು ತಿನ್ನುತ್ತಾರೆ. ಇಲ್ಲಿರುವ ಕೋಟ್ಯಂತರ ಸಂಖ್ಯೆಯ ನೊಣಗಳಿಂದ ಜನರು ಕಂಗಾಲಾಗಿದ್ದಾರೆ. ನೊಣದ ಕಾರಣದಿಂದ ಯಾರೂ ತಮ್ಮ ಮಗಳನ್ನು ಈ ಹಳ್ಳಿಗೆ ಮದುವೆ ಮಾಡಿ ಕೊಡಲು ಮುಂದೆ ಬರುತ್ತಿಲ್ಲ. ಹಾಗಾಗಿ ಗಂಡು ಮಕ್ಕಳಿಗೆ ಮದುವೆ ಇಲ್ಲದಂತಾಗಿದೆ. ಈಗಾಗಲೇ ಮದುವೆಯಾದ ಹೆಣ್ಣುಮಕ್ಕಳು ಕೂಡ ಗಂಡನ ಮನೆಯಲ್ಲಿರಲು ಒಪ್ಪುತ್ತಿಲ್ಲ. ಸಂಬಂಧಿಕರು ಕೂಡ ಈ ಹಳ್ಳಿಯತ್ತ ಸುಳಿಯುವುದಿಲ್ಲ.
ಎಲ್ಲೆಂದರಲ್ಲಿ ಕಾಣುವ ನೊಣಗಳ ಕಾರಣದಿಂದ ಇಲ್ಲಿನ ಜನರಿಗೆ ಊಟ, ನಿದ್ದೆಯನ್ನು ಕೂಡ ಸರಿಯಾಗಿ ಮಾಡಲಾಗುತ್ತಿಲ್ಲ. ಊಟಕ್ಕೆ ಕುಳಿತ ತಕ್ಷಣ ನೂರಾನು ನೊಣಗಳು ತಟ್ಟೆಯ ಮೇಲೆ ಬಂದು ಕೂರುತ್ತವೆ. ನೊಣಗಳ ಕಾಟದಿಂದ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಹಳ್ಳಿಯ ಜನರು ಹೇಳುತ್ತಾರೆ. ಎಷ್ಟೋ ಬಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಇದರ ಕಡೆ ನಿರ್ಲಕ್ಷ್ಯ ತೋರಿಸುತ್ತಾರೆ ಎಂಬುದು ಹಳ್ಳಿಗರ ಬೇಸರವಾಗಿದೆ.
ಭಾರತದಲ್ಲಿ ಮಾನ್ಸೂನ್ ವಿಸಿಟ್‌ಗೆ ಬೆಸ್ಟ್ ಪ್ಲೇಸ್ ಯಾವುದು, AI ಸಜೆಶನ್ಸ್ ಹೀಗಿದೆ
ಕೋಳಿ ಫಾರ್ಮ್ ನಿಂದ ನೊಣಗಳು ಹುಟ್ಟುತ್ತಿವೆಯಾ? : ರೂದವಾರಾ ಹಳ್ಳಿಯಲ್ಲಿ ಕೋಳಿ ಫಾರ್ಮ್ ಆರಂಭವಾದಾಗಿನಿಂದ ಇಲ್ಲಿ ನೊಣಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪವಿದೆ. ಕೋಳಿ ಫಾರ್ಮ್ ನಿಂದ ಬರುವ ಕೊಳೆತ ವಾಸನೆ ಹಾಗೂ ಹೊಲಸಿನಿಂದ ಇಲ್ಲಿ ನೊಣಗಳು ಉತ್ಪತ್ತಿಯಾಗುತ್ತಿವೆ. ಇಲ್ಲಿರುವ ನೊಣಗಳ ಕಾರಣದಿಂದ ಅಡುಗೆ ಮಾಡುವುದು ಕೂಡ ಬಹಳ ಕಷ್ಟವಾಗಿದೆ.
ದಿವ್ಯ ನಿರ್ಲಕ್ಷ್ಯ ತೋರುವ ಅಧಿಕಾರಿಗಳು : ಎನ್ಒಸಿ ಇಲ್ಲದೇ ಅಕ್ರಮವಾಗಿ ಇಲ್ಲಿ ಕೋಳಿ ಫಾರ್ಮ್ ನಡೆಸಲಾಗುತ್ತಿದೆ. ಮೇಲಧಿಕಾರಿಗಳ ಅನುಮತಿ ಪಡೆಯದೇ ಕಳೆದ ಐದು ವರ್ಷದಿಂದ ಕೋಳಿ ಫಾರ್ಮ್ ನಡೆಯುತ್ತಿದ್ದರೂ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲೆಲ್ಲ ಕೋಳಿ ಫಾರ್ಮ್ ಅವರು ಹಳ್ಳಿಯಲ್ಲಿ ಔಷಧಿಗಳನ್ನು ಸಿಂಪಡಿಸುತ್ತಿದ್ದರು. ಆದರೆ ಈಗ ಅವರು ಅದನ್ನು ಕೂಡ ನಿಲ್ಲಿಸಿದ್ದಾರೆ. ಆದ್ದರಿಂದಲೇ ನೊಣಗಳು ವಿಪರೀತವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.