ಮೂರ್ನಾಲ್ಕು ದಿನ ಸತತವಾಗಿ ಮಳೆ ಬಂದ್ರೆ ನಮಗೆ ತಲೆಬಿಸಿ ಶುರುವಾಗುತ್ತೆ. ಮಳೆಯ ಕಿರಿಕಿರಿ, ತುಂಬುವ ಹಳ್ಳಕೊಳ್ಳ, ಕೆರೆಯಾಗುವ ಬೆಂಗಳೂರು ರಸ್ತೆ… ಸಾಕಪ್ಪ ಸಾಕು ಎನ್ನಿಸುತ್ತೆ. ಹಾಗೆ, ಬಟ್ಟೆ ಒಣಗಿಸೋದು ಹೇಗೆ ಎಂಬ ಪ್ರಶ್ನೆ ಮೂಡುತ್ತೆ. ಹಾಗಿರುವಾಗ ವರ್ಷವಿಡಿ ಮಳೆಯಾಗುವ ಈ ಪ್ರದೇಶದ ಜನರ ಕಥೆ ಏನಾಗಿರಬೇಡ?
ಮಳೆಗಾಲ ಬಂತೆಂದರೆ ಭೂಮಿ ಹಸಿರಿನಿಂದ ಕಂಗೊಳಿಸುತ್ತದೆ. ಎಲ್ಲೆಡೆ ಹರಿಯುವ ನೀರು, ತಣ್ಣನೆಯ ವಾತಾವರಣ ಕಂಡುಬರುತ್ತದೆ. ಸಾಗರಗಳು, ಜಲಪಾತಗಳು, ಕೆರೆಗಳು ತುಂಬಿ ಪ್ರವಾಸಿಗರನ್ನು ಸೆಳೆಯುತ್ತವೆ. ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯವನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು. ಮಳೆ ಕೂಡ ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಒಂದು ಕಡೆ ಹೆಚ್ಚು ಮಳೆಯಾದರೆ ಇನ್ನೊಂದೆಡೆ ಕಡಿಮೆ ಮಳೆಯಾಗುತ್ತದೆ.
ಮಳೆಗಾಲ (Rainy) ನೋಡಲು ಎಷ್ಟು ಚಂದವೋ ಅಷ್ಟೇ ಕಷ್ಟ ಕೂಡ. ಏಕೆಂದರೆ ಮಳೆಗಾಲದಲ್ಲಿ ಆರೋಗ್ಯ (Health) ವನ್ನು ಕಾಪಾಡಿಕೊಳ್ಳುವುದು ಕಷ್ಟ. ನೀರಿನಿಂದಲೇ ಬರುವ ಅನೇಕ ರೋಗ ರುಜಿನಗಳು ಜನರನ್ನು ಅಸ್ವಸ್ಥರನ್ನಾಗಿಸುತ್ತೆ. ರಸ್ತೆಯ ಅಕ್ಕ ಪಕ್ಕದಲ್ಲಿ ಎಲ್ಲಿ ನೋಡಿದರೂ ಕೆಸರು ತುಂಬಿಹೋಗುತ್ತದೆ. ಅನೇಕ ಹಳ್ಳಿಗಳಲ್ಲಿ ಬ್ರಿಜ್ ವ್ಯವಸ್ಥೆಗಳು ಇಲ್ಲವಾದ್ದರಿಂದ ಮಳೆಗಾಲದಲ್ಲಿ ಜನರು ಪರದಾಡುತ್ತಾರೆ. ಇನ್ನು ಎಷ್ಟೋ ಹಳ್ಳಿಗಳು ಜಲಾವೃತವಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಹೆಚ್ಚಿನ ಗಾಳಿ ಮಳೆಯಿಂದಾಗ ಕೆಲವು ಕಡೆ ಮನೆಗಳು, ಗದ್ದೆ, ತೋಟಗಳು ಮುಳುಗಿಹೋಗುತ್ತವೆ. ಸಮುದ್ರದ ಅಂಚಿನಲ್ಲಿ ವಾಸಮಾಡುವ ಜನರು ಬೇರೆ ಊರುಗಳಿಗೆ ವಲಸೆ ಹೋಗುವುದನ್ನು ನಾವು ನೋಡಿದ್ದೇವೆ. ಚಂಡಮಾರುತ ಬಿರುಗಾಳಿ ಮುಂತಾದವುಗಳಿಗೆ ಸಿಕ್ಕಿದವರ ಬದುಕು ದುಸ್ತರವಾಗುತ್ತದೆ. ಮಳೆಗಾಲದಲ್ಲಿ ಇಂತಹ ಅನೇಕ ಸಮಸ್ಯೆಗಳು ಇರುತ್ತವೆ.
ಮಳೆಗಾಲದಲ್ಲಿಯೂ ಒಣಗಿನಿಂತ ಪಶ್ಚಿಮ ಘಟ್ಟದ ಕಾಡು, ನದಿಗಳು: ಇದು ಅರಣ್ಯನಾಶದ ಮರುಹೊಡೆತ
ಬಟ್ಟೆಗಳು ಬೇಗ ಒಣಗದೇ ಇರುವುದು ಮಳೆಗಾಲದ ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಹಾಗೂ ಕಚೇರಿಗಳಿಗೆ ಹೋಗುವ ಉದ್ಯೋಗಿಗಳಿಗೆ ಇದರಿಂದ ತೊಂದರೆಯಾಗುತ್ತದೆ. ಇಂದು ನಾವು ಹೇಳಲಿರುವ ಈ ಸ್ಥಳದಲ್ಲಿ ಯಾವಾಗಲೂ ಮಳೆ ಸುರಿಯುತ್ತದೆ. ಅಂತಹ ಸ್ಥಳದಲ್ಲಿ ಅವರು ಹೇಗಿರುತ್ತಾರೆ, ಬಟ್ಟೆಗಳನ್ನು ಹೇಗೆ ಒಣಗಿಸುತ್ತಾರೆ ಎನ್ನುವ ಮಾಹಿತಿ ಇಲ್ಲಿದೆ.
ಇಲ್ಲಿ ಆಗುತ್ತೆ ಅತಿ ಹೆಚ್ಚು ಮಳೆ : ಮೇಘಾಲಯದ (Meghalaya) ಮೌಸಿನ್ರಾಮ್ (Mawsynram) ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶವಾಗಿದೆ. ಈ ಮೊದಲು ಹೆಚ್ಚು ಮಳೆಯಾಗುವ ಸ್ಥಳ ಚಿರಾಪುಂಜಿಯಾಗಿತ್ತು. ಆದರೆ ಈಗ ಚಿರಾಪುಂಜಿಯಿಂದ ಹದಿನೈದು ಕಿಲೋಮೀಟರ್ ದೂರವಿರುವ ಮೌಸಿನ್ರಾಮ್ ನಲ್ಲಿ ಹೆಚ್ಚು ಮಳೆಯಾಗುತ್ತದೆ. ಈ ಪ್ರದೇಶದಲ್ಲಿ ಮಳೆಗಾಲದಲ್ಲೊಂದೇ ಅಲ್ಲ ವರ್ಷವಿಡೀ ಮಳೆ ಸುರಿಯುತ್ತಲೇ ಇರುತ್ತದೆ. ಇದು ಜಗತ್ತಿನಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಗಿನ್ನೀಸ್ ದಾಖಲೆಯನ್ನು ಸೃಷ್ಟಿಸಿದೆ. ಹೆಚ್ಚು ಮಳೆ ಬೀಳುವ ಕಾರಣ ಇದನ್ನು ವಿಶ್ವದ ಅತ್ಯಂತ ಆರ್ದ್ರ ಸ್ಥಳ ಎಂದು ಕರೆಯುತ್ತಾರೆ.
Brahmaputra River: ಭಾರತದಲ್ಲಿರೋ ಒಂದೇ ಒಂದು ಪುರುಷ ನದಿ ಇದು!
ಮೇಘಾಲಯದ ಮೌಸಿನ್ರಾಮ್ ನಲ್ಲಿ ವರ್ಷಕ್ಕೆ 11, 802 ಮಿಲಿಮೀಟರ್ ಮಳೆಯಾಗುತ್ತದೆ. ಹವಾಮಾನ ಇಲಾಖೆಯ ಅಂಕಿಅಂಶದ ಪ್ರಕಾರ 1974ರಿಂದ 2022 ರ ವರೆಗಿನ ವರದಿಯ ಅನ್ವಯ ಚಿರಾಪುಂಜಿಯಲ್ಲಿ ಮೌಸಿನ್ರಾಮ್ ಗಿಂತ 500 ಮಿಲಿಮೀಟರ್ ಕಡಿಮೆ ಮಳೆಯಾಗುತ್ತಿದೆ. ಈ ಕಾರಣದಿಂದ ಚಿರಾಪುಂಜಿ ಈಗ ಅತಿ ಹೆಚ್ಚು ಮಳೆಬರುವ ಪ್ರದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 2014ರ ಜುಲೈ ತಿಂಗಳಿನಲ್ಲಿ ಚಿರಾಪುಂಜಿಯಲ್ಲಿ 26, 470 ಮಿಲಿಮೀಟರ್ ಮಳೆಯಾಗಿದೆ. ಜುಲೈ ತಿಂಗಳಿನಲ್ಲಿ ಮೌಸಿನ್ರಾಮ್ ನಲ್ಲಿ ಇಷ್ಟು ಮಳೆಯಾಗಲಿಲ್ಲ. ಆದರೆ ಪೂರ್ತಿ ಒಂದು ವರ್ಷದ ಮಳೆಯನ್ನು ಆಧಾರವಾಗಿಟ್ಟುಕೊಂಡರೆ ಮೌಸಿನ್ರಾಮ್ ನಲ್ಲೇ ಹೆಚ್ಚು ಮಳೆಯಾಗಿರುವುದು ಕಂಡುಬಂದಿದೆ. ಮೌಸಿನ್ರಾಮ್ ನಲ್ಲಿ ಹೆಚ್ಚು ಮಳೆ ಸುರಿಯುವ ಕಾರಣ ಇಲ್ಲಿನ ಜನರು ಕೃಷಿಚಟುವಟುಕೆಗಳನ್ನು ಕೂಡ ಸರಿಯಾಗಿ ನಡೆಸಲು ಆಗುವುದಿಲ್ಲ. ಹಾಗಾಗಿ ಇಲ್ಲಿಗೆ ಆಹಾರ ಉತ್ಪನ್ನಗಳು ಸುತ್ತಮುತ್ತಲ ಪ್ರದೇಶದಿಂದ ಬರುತ್ತದೆ. ಮೌಸಿನ್ರಾಮ್ ನಲ್ಲಿ ಕೊಡೆ, ರೇನ್ ಕೋಟ್ ಮುಂತಾದವುಗಳನ್ನು ತೆಗೆದುಕೊಂಡು ಮನೆಯಿಂದ ಹೊರಗಡೆ ಹೊರಟರೂ ಮೈ ಒದ್ದೆಯಾಗುವಷ್ಟು ಮಳೆ ಸುರಿಯುತ್ತದೆ.
ಹೀಗೆ ಬಟ್ಟೆ ಒಣಗಿಸಿಕೊಳ್ತಾರೆ ಇಲ್ಲಿನ ಜನರು : ಸದಾ ಮಳೆ ಬೀಳುವ ಕಾರಣ, ಬಿಸಿಲಿನಲ್ಲಿ ಬಟ್ಟೆ ಒಣಗಿಸಿಕೊಳ್ಳೋದು ಅಸಾಧ್ಯ. ಹಾಗಾಗಿ ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಡ್ರೈಯರ್ ಇದ್ದೇ ಇರುತ್ತದೆ. ಡ್ರೈಯರ್ ಸಹಾಯದಿಂದ ಜನರು ಬಟ್ಟೆಯನ್ನು ಒಣಗಿಸಿಕೊಳ್ಳುತ್ತಾರೆ. ಇಲ್ಲವೆ ಮನೆಯ ಒಳಗೆ ಅಷ್ಟಪಟ್ಟು ಬಟ್ಟೆಗಳನ್ನು ಒಣಗಿಸಿಕೊಳ್ತಾರೆ.