Madikeri Glass Skywalk Bridge: ಕರ್ನಾಟಕದ ಮೊದಲ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಆರಂಭ, ಪ್ರವಾಸಿಗರ ದಂಡು

By Gowthami K  |  First Published Jun 17, 2023, 6:45 PM IST

ಕೊಡಗಿನ ಪ್ರವಾಸೋದ್ಯಮಕ್ಕೆ ಇದೀಗ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಹೊಸ ಸೇರ್ಪಡೆಯಾಗಿದೆ. ಖಾಸಗಿಯಾಗಿ ಆರಂಭವಾಗಿರುವ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಇಡೀ ದಕ್ಷಿಣ ಭಾರತದ ಗಮನ ಸೆಳೆಯುತ್ತಿದೆ.


ಮಡಿಕೇರಿ (ಜೂ.17): ಸುಂದರ ಪ್ರಾಕೃತಿಕ ಸೌಂದರ್ಯದ ಮೂಲಕ ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ಕೊಡಗಿನ ಪ್ರವಾಸೋದ್ಯಮಕ್ಕೆ ಇದೀಗ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಹೊಸ ಸೇರ್ಪಡೆಯಾಗಿದೆ. ಖಾಸಗಿಯಾಗಿ ಆರಂಭವಾಗಿರುವ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಇಡೀ ದಕ್ಷಿಣ ಭಾರತದ ಗಮನ ಸೆಳೆಯುತ್ತಿದೆ. ಮಡಿಕೇರಿ ಹೊರವಲಯದ ಉಡೋತ್‌ನಲ್ಲಿ 31 ಮೀಟರ್‌ ಉದ್ದದ 2 ಮೀಟರ್‌ ಅಗಲದ 78 ಅಡಿ ಎತ್ತರದಲ್ಲಿರುವ ಈ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಎಲ್ಲರ ಗಮನ ಸೆಳೆಯುತ್ತಿದೆ. ಸುಮಾರು 5 ಟನ್‌ ಭಾರ ಹೊರುವ ಸಾಮರ್ಥ್ಯದ ಈ ಬ್ರಿಡ್ಜ್‌ನಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದಾಗಿದೆ.

Interesting Facts : ಮಧ್ಯರಾತ್ರಿ 12 ಗಂಟೆಗೆ ಹೌರಾ ಸೇತುವೆ ಬಂದ್ ಆಗೋದೇಕೆ?

Tap to resize

Latest Videos

undefined

ಕೊಡಗಿನ ಈ ಸ್ವಾಭಾವಿಕ ಪ್ರಕೃತಿಯ ಸೌಂದರ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಅದರಲ್ಲೂ ಇಲ್ಲಿನ ವೀಕ್ಷಣಾ ಸ್ಥಳಗಳಂತೂ ಮನಮೋಹಕವಾಗಿದೆ. ಅದರ ಸಾಲಿಗೆ ಸದ್ಯ ಬೆಟ್ಟದ ಇಕ್ಕೆಲಗಳ ನಡುವೆ ಖಾಸಗಿಯವರಿಂದ ನಿರ್ಮಾಣವಾಗಿರುವ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಸೇರಿದೆ. ಹಸಿರ ಪ್ರಕೃತಿಯ ನಡುವೆ ಪಾರದರ್ಶಕ ಗಾಜಿನ ಮೇಲೆ ನಡೆಯುವ ರೋಮಾಂಚಕ ಅನುಭವ ನೀಡುತ್ತಿದೆ. ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್‌ ಪೊನ್ನಣ್ಣ ಅವರಿಂದ ಈ ಬ್ರಿಡ್ಜ್‌ ಜೂನ್ 12ರಂದು ಲೋಕಾರ್ಪಣೆಗೊಂಡಿದೆ. ಕೊಡಗಿನ ಪ್ರವಾಸೋದ್ಯಮಕ್ಕೆ ಖಾಸಗಿಯವರ ಇಂತಹ ಕೊಡುಗೆ ಬಗ್ಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಪ್ರವೇಶ ಶುಲ್ಕ 200 ರೂ ಇದ್ದು, 15 ನಿಮಿಷಗಳಷ್ಟೇ ಇಲ್ಲಿರಬಹುದು.

ದಕ್ಷಿಣ ಭಾರತದ ಎರಡನೇ  ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ಕೊಡಗಿನದ್ದಾಗಿದೆ. ದಕ್ಷಿಣ ಭಾರತದ ಮೊದಲ ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌  ಕೇರಳದಲ್ಲಿದೆ. ಇಲ್ಲಿನ ವಯನಾಡಿನ ತೊಲ್ಲಾಯಿರಂ ಕಂಡಿಯಲ್ಲಿ ಈ ಬ್ರಿಡ್ಜ್‌ ನಿರ್ಮಾಣವಾಗಿದೆ. ನೆಲದಿಂದ 100 ಅಡಿ ಎತ್ತರದಲ್ಲಿ ಇದರ ನಿರ್ಮಾಣವಾಗಿದೆ. ಖಾಸಗಿ ರೆಸಾರ್ಟ್ ಜಾಗದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಬಿಹಾರ ಆಯ್ತು, ಈಗ ಗುಜರಾತಲ್ಲೂ ಉದ್ಘಾಟನೆಗೆ ಮುನ್ನವೇ ಕುಸಿದ ಸೇತುವೆ: ಭ್ರಷ್ಟಾಚಾರ ಆರೋಪ

ಇನ್ನು ಭಾರತದಲ್ಲಿ ಮೊದಲ  ಗ್ಲಾಸ್‌ ಸ್ಕೈ ವಾಕ್‌ ಬ್ರಿಡ್ಜ್‌ ನಿರ್ಮಾಣಗೊಂಡಿದ್ದು, ಸಿಕ್ಕಿಂನ ಪೆಲ್ಲಿಂಗ್‌ನಲ್ಲಿಈ  ಸ್ಕೈವಾಕ್ ಸಮುದ್ರ ಮಟ್ಟದಿಂದ 7200 ಅಡಿ ಎತ್ತರದಲ್ಲಿದೆ ಮತ್ತು ಇದರ ಇನ್ನೊಂದು ಪಾರ್ಶ್ವ ಭಾಗದಲ್ಲಿ 137 ಅಡಿ ಎತ್ತರದ ಭವ್ಯವಾದ ಚೆನ್ರೆಜಿಗ್ ಪ್ರತಿಮೆ ಇದೆ. ಇದು ಸಿಕ್ಕಿಂನ ನಾಲ್ಕನೇ ಅತಿ ಎತ್ತರದ ಪ್ರತಿಮೆಯಾಗಿದೆ.

ಭಾರತದ ಎರಡನೇ ಗಾಜಿನ ಸೇತುವೆಯು ಬಿಹಾರದ ರಾಜ್‌ಗಿರ್‌ನಲ್ಲಿರುವ ಸುಂದರವಾದ ಐದು ಬೆಟ್ಟಗಳಲ್ಲಿದೆ. ಬಿಹಾರ ರಾಜ್ಯಕ್ಕೆ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಇದನ್ನು ನಿರ್ಮಿಸಲಾಗಿದೆ. ಅದ್ಭುತವಾದ ಗಾಜಿನ ಸೇತುವೆಯನ್ನು 2022 ರಲ್ಲಿ ಪೂರ್ಣಗೊಳಿಸಲಾಯಿತು.

click me!