ರೈಲ್ವೆ ಟಿಕೆಟ್ ಬುಕಿಂಗ್‌ಗೆ IRCTC ಆ್ಯಪ್ ಬಳಸೋ ಮುನ್ನ ಎಚ್ಚರ, ವಂಚಿಸಬಹುದು ಹುಷಾರು!

By Roopa Hegde  |  First Published Oct 9, 2024, 4:35 PM IST

ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿದೆ. ಮನೆಯಲ್ಲೇ ಕುಳಿತು ಟಿಕೆಟ್ ಬುಕ್ ಮಾಡಲು IRCTC ಅಪ್ಲಿಕೇಷನ್ ನೀಡಿದೆ. ಆದ್ರೆ ಇದನ್ನು ಬಳಸುವ ಮುನ್ನ ಜನರು ಎಚ್ಚರದಿಂದಿರಬೇಕು. ಅಪ್ಪಿತಪ್ಪಿ ಯಾಮಾರಿದ್ರೆ ಖಾಲಿ ಕೈ ನಿಮ್ಮದಾಗುತ್ತೆ.
 


ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಅಪ್ಲಿಕೇಷನನ್ನು ದೊಡ್ಡ ಸಂಖ್ಯೆಯಲ್ಲಿ ಜನರು ಬಳಕೆ ಮಾಡ್ತಾರೆ. ಇದು ಅನೇಕ ಸೇವೆಗಳನ್ನು ನೀಡುತ್ತೆಯಾದ್ರೂ ಪ್ರತಿ ದಿನ ಲಕ್ಷಾಂತರ ಮಂದಿ ಈ ಅಪ್ಲಿಕೇಷನ್ ಮೂಲಕ ರೈಲ್ವೆ ಟಿಕೆಟ್ ಬುಕ್ (Railway Ticket Book) ಮಾಡ್ತಾರೆ. ಹಾಗಾಗಿಯೇ ಹ್ಯಾಕರ್ ಗಳಿಗೆ ಇದು ಆಹಾರವಾಗಿದೆ. IRCTC ಬಳಸುವಾಗ ಪ್ರಯಾಣಿಕರು ಕಣ್ಣಲ್ಲಿ ಕಣ್ಣಿಟ್ಟು ಅಪ್ಲಿಕೇಷನ್ ಬಳಕೆ ಮಾಡ್ಬೇಕು. ಇಲ್ಲ ಅಂದ್ರೆ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗೋದ್ರಲ್ಲಿ ಡೌಟಿಲ್ಲ.  

ಈಗ ಫೇಕ್ IRCTC ಅಪ್ಲಿಕೇಷನ್ ಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಯಾವುದು ನಕಲಿ, ಯಾವುದು ಅಸಲಿ ಎಂಬುದನ್ನು ಪತ್ತೆ ಮಾಡೋದೇ ಕಷ್ಟವಾಗಿದೆ. ಒಂದೋ ಎರಡೋ ಅಲ್ಲ, ನಕಲಿ IRCTC ಅಪ್ಲಿಕೇಶನ್‌ಗಳ ಸಂಖ್ಯೆ ಸಾಕಷ್ಟಿದೆ. ಜಾಗತಿಕ ಸೈಬರ್ ಭದ್ರತಾ ಸಂಸ್ಥೆಯಾದ ಕ್ವಿಕ್ ಹಿಲ್ ಟೆಕ್ನಾಲಜೀಸ್‌ (Quick Hill Technologies) ಈ ಬಗ್ಗೆ ಎಚ್ಚರಿಕೆ ನೀಡಿದೆ.

Latest Videos

undefined

ಹಬ್ಬಕ್ಕೆ ವಿಮಾನದಲ್ಲೇ ಹೋಗಿ, 1000 ರೂ.ಉಳಿಸಿ – ಇಲ್ಲಿದೆ ಭರ್ಜರಿ ಆಫರ್

ಫೇಸ್ಬುಕ್ (Facebook) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಪ್ಲಿಕೇಷನ್ ಲಿಂಕ್ ಬರುತ್ತದೆ. ಅನೇಕ ಬಾರಿ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸ್ಸೇಜ್ ಬಂದಿರುತ್ತದೆ. IRCTC ಹೊಸ ಆಫರ್ ನೀಡ್ತಿದೆ, ಬಂಪರ್ ಬಹುಮಾನ ಸಿಗ್ತಿದೆ, ಇಂದೇ ಕೊನೆ ದಿನ, ಈ ಕ್ಯೂಆರ್ ಕೋಡ್ ಬಳಸಿ ಆಫರ್ ಪಡೆಯಿರಿ ಹೀಗೆ ಅನೇಕ ಜಾಹೀರಾತುಗಳು ಮೊಬೈಲ್ ಗೆ ಬರುತ್ತವೆ. ಹೆಚ್ಚಿನ ಲಾಭದ ಆಸೆಗೆ ಗ್ರಾಹಕರು ಅದ್ರ ಮೇಲೆ ಕ್ಲಿಕ್ ಮಾಡ್ತಾರೆ. ಇಲ್ಲವೆ ನಕಲಿ IRCTC ಅಪ್ಲಿಕೇಷನ್ ಓಪನ್ ಮಾಡ್ತಾರೆ. ಅಲ್ಲಿ ಬ್ಯಾಂಕ್ ಖಾತೆ, ಸ್ಥಳ ಸೇರಿದಂತೆ ಅನೇಕ ಮಹತ್ವದ ವಿಷ್ಯಗಳನ್ನು ದಾಖಲಿಸ್ತಾರೆ. ಇದನ್ನು ಇಟ್ಕೊಂಡು ಹ್ಯಾಕರ್ಸ್ ಆರಾಮವಾಗಿ ನಿಮ್ಮ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡ್ತಾರೆ. 

IRCTC ನಕಲಿ ಅಪ್ಲಿಕೇಷನ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ? : ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಪ್ಲೇ ಸ್ಟೋರ್ ನಿಂದಲೇ IRCTCಯ Rail Connect ಅಪ್ಲಿಕೇಷನ್ ಡೌನ್ಲೋಡ್ ಮಾಡ್ಬೇಕು. ಒಂದ್ವೇಳೆ ನಿಮಗೆ ಇದ್ರಲ್ಲಿ ಅನುಮಾನವಿದ್ರೆ http://irctc.co.in ವೆಬ್ಸೈಟ್ ನಲ್ಲಿರುವ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿ , ನಿಮ್ಮ ಅನುಮಾನವನ್ನು ಬಗೆಹರಿಸಿಕೊಳ್ಳಬಹುದು. IRCTCಅ ಅಪ್ಲಿಕೇಷನ್ ನಿಮಗೆ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಪ್ಲೇ ಸ್ಟೋರ್ ನಂತಹ ಅಧಿಕೃತ ಪ್ಲೇ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದೆ. ವಾಟ್ಸ್ ಅಪ್ ಅಥವಾ ಮೆಸ್ಸೇಜ್ ಮೂಲಕ ಬಂದ IRCTC ಲಿಂಕ್ ನಕಲಿಯಾಗಿರುತ್ತದೆ. ಯಾವುದೇ ಸರ್ಕಾರಿ ಕಂಪನಿ ಅಪ್ಲಿಕೇಷನ್ ಡೌನ್ಲೋಡ್ ಮಾಡಲು ಲಿಂಕ್ ಕಳುಹಿಸುವುದಿಲ್ಲ. ಪ್ರತಿ ಬಾರಿ IRCTC ಅಪ್ಲಿಕೇಷನ್ ಬಳಸುವ ವೇಳೆಯೂ ನೀವು ಯುಆರ್ ಎಲ್ ಗಮನಿಸಬೇಕು. ತಪ್ಪಿಲ್ಲದೆ ಯುಆರ್ ಎಲ್ ನಮೂದಿಸಬೇಕು. ಹಾಗೆಯೇ ಸೋಶಿಯಲ್ ಮೀಡಿಯಾ ಅಥವಾ ಮೊಬೈಲ್ ಸಂಖ್ಯೆಗೆ ಬರುವ ಯಾವುದೇ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಬಾರದು. ನಿಮಗೆ ತಿಳಿಯದ ಆಪ್ ಡೌನ್ಲೋಡ್ ಮಾಡಬಾರದು.

ಅಮೆರಿಕದ ರಸ್ತೆಗಳ ಬೋರ್ಡ್‌ ಮೇಲೆ 'Kiss and Ride' ಎಂಬ ಪದ ಯಾಕಿರುತ್ತೆ?

ಬರೀ  IRCTC ಅಪ್ಲಿಕೇಷನ್ ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಎಲ್ಲ ಸರ್ಕಾರಿ ಅಪ್ಲಿಕೇಷನ್, ಬ್ಯಾಂಕ್ ಆಪ್ ಗಳನ್ನು ನಕಲಿ ಮಾಡಲಾಗ್ತಿದೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದ್ರೂ ಜನರು ಮೋಸ ಹೋಗ್ತಿದ್ದಾರೆ. ಸದ್ಯ ಎಐ ಟೂಲ್ ಬಳಸಿ ಜನರನ್ನು ಮೋಸಗೊಳಿಸಲಾಗ್ತಿದೆ. 

click me!