ಟಿಕೆಟ್‌ಗೆ 2 ಸಾವಿರ ಕೊಟ್ರೂ ಎಸಿ ರೈಲಿನಲ್ಲಿ ಬಂದ ವಿಶೇಷ ಅತಿಥಿಯಿಂದ ನಿದ್ದೆಯಿಲ್ಲದ ರಾತ್ರಿ ಕಳೆದ..!

Published : Mar 12, 2025, 02:29 PM ISTUpdated : Mar 12, 2025, 07:08 PM IST
ಟಿಕೆಟ್‌ಗೆ 2 ಸಾವಿರ ಕೊಟ್ರೂ ಎಸಿ ರೈಲಿನಲ್ಲಿ ಬಂದ ವಿಶೇಷ ಅತಿಥಿಯಿಂದ ನಿದ್ದೆಯಿಲ್ಲದ ರಾತ್ರಿ ಕಳೆದ..!

ಸಾರಾಂಶ

ಪ್ರಯಾಣದಲ್ಲಿ ಆರಾಮವನ್ನು ಬಯಸಿ ಬಿಹಾರದ ವ್ಯಕ್ತಿಯೊಬ್ಬರು ಎಸಿ ಬೋಗಿಯಲ್ಲಿ ಸೀಟು ಬುಕ್ ಮಾಡಿದ್ದಾರೆ. ಇದಕ್ಕಾಗಿ 2000 ರೂಪಾಯಿ ಮೊತ್ತದ ದುವಾರಿ ಟಿಕೆಟನ್ನು ಕೂಡ ಖರೀದಿ ಮಾಡಿದ್ದಾರೆ. ಆದರೆ ಅವರಿಗೆ ಅಲ್ಲಿ ಸಿಕ್ಕಿದ್ದೇನು?

ಸಾಮಾನ್ಯವಾಗಿ, ಜನರು ಯಾವುದಕ್ಕಾದರೂ ಒಳ್ಳೆ ಹಣ ನೀಡಿ ಖರೀದಿ ಮಾಡಿದಾಗ ಹಣಕ್ಕೆ ತಕ್ಕಂತೆ ಉತ್ತಮ ಸೇವೆ ಲಭ್ಯವಾಗುತ್ತದೆ ಎಂದು ಬಯಸುತ್ತಾರೆ. ಅದರಲ್ಲೂ ವಿಶೇಷವಾಗಿ ಪ್ರಯಾಣದ ಸಂದರ್ಭಗಳಲ್ಲಿ ಜನ ಆರಾಮವನ್ನು ಬಯಸಿ ಒಳ್ಳೆಯ ಮಟ್ಟದ ಟಿಕೆಟ್‌ಗಳನ್ನೇ ಖರೀದಿಸುತ್ತಾರೆ. ಒಳ್ಳೆಯ ಸೀಟುಗಳನ್ನು ಬುಕ್ ಮಾಡುತ್ತಾರೆ. ರೈಲಿನ ಪ್ರಯಾಣದಲ್ಲಿ ಎಸಿ ಹಾಗೂ ಸ್ಲೀಪರ್ ಬುಕ್ ಮಾಡಿದರೆ ಆರಾಮವಾಗಿ ಹೋಗಬಹುದು ಎಂದು ಭಾವಿಸುತ್ತಾರೆ. ಅದೇ ರೀತಿ ಪ್ರಯಾಣದಲ್ಲಿ ಆರಾಮವನ್ನು ಬಯಸಿ ಬಿಹಾರದ ವ್ಯಕ್ತಿಯೊಬ್ಬರು ಎಸಿ ಬೋಗಿಯಲ್ಲಿ ಸೀಟು ಬುಕ್ ಮಾಡಿದ್ದಾರೆ. ಇದಕ್ಕಾಗಿ 2000 ರೂಪಾಯಿ ಮೊತ್ತದ ದುವಾರಿ ಟಿಕೆಟನ್ನು ಕೂಡ ಖರೀದಿ ಮಾಡಿದ್ದಾರೆ. ಆದರೆ ಅವರಿಗೆ ಅಲ್ಲಿ ನೆಮ್ಮದಿಯ ಬದಲು ಸಿಕ್ಕಿದ್ದು ಇಲಿಗಳ ಕಾಟ. 

ಸೀಟುಗಳ ಮೇಲೆ ಮೂಷಿಕದ ಓಡಾಟ
ರೈಲು ಬುಕ್ ಮಾಡುವ ವೇಳೆ ಅವರು ತಮ್ಮ ಪ್ರಯಾಣ ಇಷ್ಟು ತ್ರಾಸದಾಯಕವಾಗಿರುತ್ತದ ಎಂದು ಊಹೆಯೂ ಮಾಡಿರಲಿಲ್ಲ, ಇಲಿಗಳು ಅವರ ಸೀಟುಗಳು ನೀರಿನ ಬಾಟಲ್ ಹಾಗೂ ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಓಡಾಡಿ ಭಯ ಹುಟ್ಟಿಸಿವೆ. ಎಸಿ ಕೋಚ್‌ನಲ್ಲಿ ಇಲಿಗಳಿಂದ ಆದ ಭಯಾನಕ ಅನುಭವವನ್ನು ಹಾಗೂ ಅದರ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣ ರೆಡಿಟ್‌ ಹಾಗೂ ಟ್ವಿಟ್ಟರ್‌ನಲ್ಲಿ ನಲ್ಲಿ ಹಂಚಿಕೊಂಡಿದ್ದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬಾಗಿಲಲ್ಲಿ ನೇತಾಡುವವರನ್ನೆಲ್ಲಾ ರೈಲಿನ ಒಳಗಟ್ಟಿದ ಶ್ವಾನ: ವೀಡಿಯೋ ಸಖತ್ ವೈರಲ್

ರೈಲ್ವೆ ಪ್ರಯಾಣಿಕನ ತೀವ್ರ ಆಕ್ರೋಶ
ಈ ವೀಡೀಯೋ ಈಗ ವೈರಲ್ ಆಗಿದ್ದು, ಅವರ ಸೀಟಿನ ಮೂಲೆಯಲ್ಲಿ ಇಲಿಯೊಂದು ಓಡಾಡುತ್ತಾ ಕಣ್ಣು ಪಿಳಿಪಿಳಿ ಬಿಟ್ಟುಕೊಂಡುನೋಡುತ್ತಿದೆ. ನೀರಿನ ಬಾಟಲ್ ಸೇರಿದಂತೆ ಲಗೇಜ್‌ಗಳ ಮೇಲೆ ಇಲಿ ಓಡಾಡಿದೆ. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ತಾವು ಪ್ರಯಾಣಿಸುತ್ತಿದ್ದ ರೈಲಿನ ಪಿಎನ್ಆರ್ ನಂಬರ್‌ ಹಾಕಿ 2000  ಸಾವಿರ ಮೊತ್ತದ ಟಿಕೆಟ್‌ಗೆ ಇದೆಂಥಾ ಸೇವೆ ಎಂದು ರೈಲ್ವೆಗೆ ಪೋಸ್ಟ್ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. 

ಜಿರಳೆ ಓಡಿಸುವ ಸ್ಪ್ರೇ ಹೊಡೆದ ಅಧಿಕಾರಿಗಳು
ಕೆಲ ವರದಿಗಳ ಪ್ರಕಾರ ಈ ವ್ಯಕ್ತಿ ಅತ್ತಿತ್ತ ಓಡುತ್ತಿದ್ದ ಇಲಿಗಳ ಹಾವಳಿ ತಡೆಯಲಾಗದೇ 139 ಸಂಖ್ಯೆಯ ರೈಲ್ವೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಹೀಗಾಗಿ ಮುಂದಿನ ನಿಲ್ದಾಣದಲ್ಲಿ ರೈಲಿಗೆ ಹತ್ತಿದ್ದ ರೈಲ್ವೆ ಸಿಬ್ಬಂದಿ ಆ ಬೋಗಿಯಲ್ಲಿ ಜಿರಳೆಯನ್ನು ಓಡಿಸುವ ಕ್ರಿಮಿನಾಶಕ ಸಿಂಪಡಿಸಿದ್ದಾರೆ. ಆದರೆ ಈ ಸ್ಪ್ರೇಯಿಂದ ಇಲಿಯನ್ನು ಓಡಿಸಲು ಸಾಧ್ಯವಾಗಿಲ್ಲ. ಹಾಗೆಯೇ ರೈಲ್ವೆ ಸಿಬ್ಬಂದಿ ಇವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಇನ್ನು ಪ್ರತಿಕ್ರಿಯಿಸಿಲ್ಲ, 'ಎಸಿ ಟೈಯರ್ 2 ಸೀಟಿಗೆ 2 ಸಾವಿರಕ್ಕೂ ಹೆಚ್ಚು ಹಣ ಪಾವತಿಸಿದ್ದೆ ಆದರೆ  ಅದಕ್ಕೆ ಪ್ರತಿಯಾಗಿ ಇಲಿಗಳು ಮತ್ತು ನಿದ್ದೆಯಿಲ್ಲದ ರಾತ್ರಿ ಸಿಕ್ಕಿದೆ ಎಂದು  ಅವರು ತಮ್ಮ ಪೋಸ್ಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ರೈಲ್ವೆ ಪೊಲೀಸ್‌: ವೈರಲ್ ವೀಡಿಯೋ

ನೆಟ್ಟಿಗರಿಂದಲೂ ಆಕ್ರೋಶ
ನಂತರ ಇಲಿ ಓಡಾಡುತ್ತಿರುವ ಈ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ರೀಪೋಸ್ಟ್‌ ಆಗಿ ವೈರಲ್ ಆಗುತ್ತಿದ್ದು, ಜನರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಈ  ಘಟನೆ ಸಿಟ್ಟು ತರಿಸುತ್ತಿದೆ ಎಂದು ಹೇಳಿದರೆ ಮತ್ತೆ ಕೆಲವರು ಭಾರತೀಯ ರೈಲ್ವೆಗೆ ಈ ಘಟನೆ ಎಲ್ಲಾ ಸಾಮಾನ್ಯ ಎಂದಿದ್ದಾರೆ. ಇದು ಆರೋಗ್ಯದ ದೊಡ್ಡ ಅಪಾಯ ಮತ್ತು ನೈರ್ಮಲ್ಯ ವೈಫಲ್ಯ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಆನಂದಿಸಿ, ರೈಲ್ವೆಗಳು ಈಗ ಸಾಕುಪ್ರಾಣಿಗಳನ್ನು ಸಹ ಒದಗಿಸುತ್ತವೆ ಎಂದು ಮತ್ತೊಬ್ಬರು  ವ್ಯಂಗ್ಯ ಮಾಡಿದ್ದಾರೆ.  ಒಟ್ಟಿನಲ್ಲಿ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Indian Railways: ಗುಟ್ಕಾ ಪ್ರಿಯರಿಗಾಗಿ ವರ್ಷಕ್ಕೆ 1,200 ಕೋಟಿ ರೂ. ಖರ್ಚು ಮಾಡ್ತಿರೋ ರೈಲ್ವೆ ಇಲಾಖೆ!
ಚೀನಾದಲ್ಲಿ ಡ್ರೋನ್​ ಹಾರಿಸಲು ಹೋಗಿ ಚೀನಿ ಬೆಡಗಿ ಜೊತೆ Bigg Boss ಪ್ರತಾಪನ ಡ್ಯುಯೆಟ್​!