ಬೆಂಗಳೂರಿಗರಿಗೆ ಪ್ರವಾಸಕ್ಕೆ ಎಲ್ಲಿ ಹೋಗ್ಬೇಕು ಅನ್ನೋದೆ ದೊಡ್ಡ ಚಿಂತೆ. ಸಿಲಿಕಾನ್ ಸಿಟಿ ಹತ್ತಿರ, ಒಂದು ದಿನದ ಟ್ರಿಪ್ ಗೆ ಯಾವೆಲ್ಲ ಸ್ಥಳವಿದೆ ಅಂತ ಸರ್ಚ್ ಮಾಡುವ ಜನರ ಕಣ್ಣಿಗೆ ಈ ಗಿರಿಧಾಮ ಬಿದ್ದೇ ಬೀಳುತ್ತೆ. ಆದ್ರೆ ಹೆಸರು ಕೇಳಿದ್ರೂ ಜನಜಂಗುಳಿ ಅಂತ ಪ್ರಕೃತಿ ಸೌಂದರ್ಯ ಸವಿಯೋದನ್ನು ಮಿಸ್ ಮಾಡಿಕೊಳ್ತಿದ್ದಾರೆ.
ಇಡೀ ದಿನ ಅದೇ ವಾಹನಗಳ ಶಬ್ಧ, ಹೊಗೆ ತಿಂದು ಸುಸ್ತಾಗಿದೆ ಎನ್ನುವ ಸಿಲಿಕಾನ್ ಸಿಟಿ (Silicon City) ಜನರು ವಾರಾಂತ್ಯದಲ್ಲಿ ನೆಮ್ಮದಿ ಅರಸಿ ಹೊರಡ್ತಾರೆ. ಅವರ ವೀಕೆಂಡ್ ಸ್ಪಾಟ್ (weekend spot) ಲೀಸ್ಟ್ ನಲ್ಲಿ ಈ ಜಾಗ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ ಪ್ರಸಿದ್ಧ ಗಿರಿಧಾಮ (hill station) ಗಳಲ್ಲಿ ಈ ಬೆಟ್ಟ ಸೇರಿದೆ. ವಾರಾಂತ್ಯದಲ್ಲಿ ಜನಜಂಗುಳಿಯಿಂದ ತುಂಬಿರುವ ಈ ಜಾಗ, ತನ್ನ ಆಕರ್ಷಣೆ, ಸೌಂದರ್ಯವನ್ನು ಸ್ವಲ್ಪವೂ ಕಳೆದುಕೊಂಡಿಲ್ಲ.
ನಾವು ಹೇಳಿರೋದು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಜಾಗವಾದ ನಂದಿ ಹಿಲ್ಸ್ (Nandi Hills) ಬಗ್ಗೆ. ಬೆಂಗಳೂರಿನ ಅನೇಕರಿಗೆ ಈ ಸುಂದರ ಜಾಗದ ಬಗ್ಗೆ ಮಾಹಿತಿ ಇಲ್ಲ. ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು ಎನ್ನುವ ಕಾರಣಕ್ಕೆ ತಮ್ಮ ಟ್ರಿಪ್ ಕ್ಯಾನ್ಸಲ್ ಮಾಡಿ, ಅಧ್ಬುತ ಅನುಭವವನ್ನು ಮಿಸ್ ಮಾಡಿಕೊಳ್ತಿದ್ದಾರೆ. ಬೆಂಗಳೂರಿನಿಂದ ಕೇವಲ 61 ಕಿಲೋಮೀಟರ್ ದೂರದಲ್ಲಿ ಈ ನಂದಿ ಬೆಟ್ಟ ಇದೆ. ಎರಡು ಗಂಟೆ ಜರ್ನಿ ಮಾಡಿದ್ರೆ ನೀವು ನಂದಿ ಹಿಲ್ಸ್ ತಲುಪಬಹುದು. ಬಿಸಿಲೇರಿದ ಮೇಲೆ ನಂದಿ ಬೆಟ್ಟವನ್ನೇರಿದ್ರೆ ಪ್ರಯೋಜನವಿಲ್ಲ. ಬೆಳ್ಳಂಬೆಳಿಗ್ಗೆ ಸೂರ್ಯೋದಯವನ್ನು ಕಣ್ತುಂಬಿಕೊಳ್ಳೋದೇ ಅಲ್ಲಿನ ಮೊದಲ ವಿಶೇಷತೆ. ಅನೇಕರು ಆ ಸುಂದರ ಕ್ಷಣವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯಲು ನಿದ್ರೆಗೆಟ್ಟು, ಬೆಟ್ಟ ತಲುಪಿರ್ತಾರೆ. ಚಳಿಗಾಲದಲ್ಲಿ ನಂದಿ ಬೆಟ್ಟಕ್ಕೆ ಹೋಗುವ ದಾರಿಯೇ ಮಂಜಿನಿಂದ ಕೂಡಿರುತ್ತದೆ. ಮೋಡದ ಮಧ್ಯೆ ಸಂಚರಿಸುವ ನಿಮ್ಮ ಅನುಭವ ಅಧ್ಬುತವಾಗಿರುತ್ತದೆ. ಬಸ್, ಕಾರಿಗಿಂತ ನಂದಿಬೆಟ್ಟಕ್ಕೆ ಬೈಕ್ ಮೂಲಕ ಹೋಗೋದು ಒಳ್ಳೆಯದು. ಅನೇಕರು ರಸ್ತೆ ಮಾರ್ಗದ ಬದಲು ಚಾರಣವನ್ನು ಆಯ್ಕೆ ಮಾಡಿಕೊಳ್ತಾರೆ. ಇದು ಜೀವನದಲ್ಲಿ ಮರೆಯಲಾಗದ, ಸುಂದರ, ಅವಿಸ್ಮರಣೀಯ ಅನುಭವವನ್ನು ನೀಡುತ್ತದೆ.
ರೈಲುಗಳು ಗಂಟೆಗಟ್ಟಲೇ ನಿಂತರೂ ಇಂಜಿನ್ ಯಾಕೆ ಆಫ್ ಮಾಡಲ್ಲ?
ನಂದಿ ಹಿಲ್ಸ್ ಕುಟುಂಬಸ್ಥರು, ಸ್ನೇಹಿತರಿಗೆ ಸಮಯ ಕಳೆಯಲು ಅತ್ಯುತ್ತಮ ಜಾಗವಾಗಿದೆ. ನೀವು ಇಡೀ ದಿನವನ್ನು ಇಲ್ಲಿ ಆರಾಮವಾಗಿ ಕಳೆಯಬಹುದು. ನೋಡಲು ಸಾಕಷ್ಟು ಸುಂದರ ಸ್ಥಳಗಳು ಇಲ್ಲಿವೆ. ವಿಶ್ರಾಂತಿಗೂ ಅವಕಾಶವಿದೆ. ಕುಟುಂಬಸ್ಥರ ಜೊತೆ ಸಣ್ಣ ಪಿಕ್ನಿಕ್ ಮಾಡ್ಬೇಕು ಎನ್ನುವವರು ನಂದಿ ಹಿಲ್ಸ್ ಆಯ್ಕೆ ಮಾಡಿಕೊಳ್ಳಬಹುದು.
ಬರೀ ಫ್ಯಾಮಿಲಿಗೆ ಮಾತ್ರವಲ್ಲ ಸಾಹಸಿಗಳಿಗೆ ಹೇಳಿ ಮಾಡಿಸಿದ ಜಾಗ ನಂದಿ ಬೆಟ್ಟ. ನೀವು ಟ್ರಕ್ಕಿಂಗ್, ಸೈಕ್ಲಿಂಗ್ ಹಾಗೂ ಪ್ಯಾರಾಗೈಡಿಂಗ್ ನಲ್ಲಿ ಆಸಕ್ತಿ ಹೊಂದಿದ್ದರೆ ಖಂಡಿತಾ ನಂದಿ ಬೆಟ್ಟಕ್ಕೆ ಭೇಟಿ ನೀಡಿ. ಇಲ್ಲಿ ಈ ಎಲ್ಲ ಸಾಹಸಕ್ಕೆ ಅವಕಾಶವಿದೆ. ನೀವು ಇಡೀ ದಿನವನ್ನು ಈ ಸಾಹಸದ ಮೂಲಕ ಎಂಜಾಯ್ ಮಾಡ್ಬಹುದು.
ನಂದಿ ಬೆಟ್ಟ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ . ಇದು ಅರ್ಕಾವತಿ ನದಿ, ಪೊನ್ನಯ್ಯರ್ ನದಿ, ಪಾಲಾರ್ ನದಿ, ಪಾಪಾಗ್ನಿ ನದಿ ಮತ್ತು ಪೆನ್ನಾ ನದಿಯ ಮೂಲವಾಗಿದೆ. ಟಿಪ್ಪು ಡ್ರಾಪ್ ನಂದಿ ಬೆಟ್ಟದ ಐತಿಹಾಸಿಕ ಸ್ಥಳ. ಈ ಸ್ಥಳವು ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದೆ. ಸಮುದ್ರ ಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಟಿಪ್ಪು ಡ್ರಾಪ್ ಅತ್ಯಂತ ಅದ್ಭುತವಾದ ನೋಟವನ್ನು ನೀಡುತ್ತದೆ. ಇದು ಟಿಪ್ಪು ಸುಲ್ತಾನನ ಆಳ್ವಿಕೆಗೆ ಸಾಕ್ಷಿಯಾಗಿದೆ. ಆ ಸಮಯದಲ್ಲಿ ಕೈದಿಗಳನ್ನು ಬಂಡೆಯ ಕೆಳಗೆ ತಳ್ಳಲಾಗ್ತಿತ್ತು. ಹಾಗಾಗಿಯೇ ಆ ಬಂಡೆಗೆ ಟಿಪ್ಪು ಡ್ರಾಪ್ (Tipu Drop) ಎಂದೇ ಹೆಸರು ಬಂದಿದೆ.
ಮಲಗುವ ನಿಯಮ ಬದಲಿಸಿದ ರೈಲು, ಟೈಂ ತಪ್ಪಿದ್ರೆ ಪ್ರಯಾಣಿಕರಿಗೆ ಶಿಕ್ಷೆ
ಇನ್ನು ಇಲ್ಲಿ ಭೋಗ ನಂದೀಶ್ವರ ದೇವಾಲಯ (Bhoga Nandishwara Temple) ವಿದೆ. ಈ ದೇವಾಲಯವು ಸಾಕಷ್ಟು ಹಳೆಯದು. ಅನೇಕ ಧಾರ್ಮಿಕ ನಂಬಿಕೆಗಳು ಈ ದೇವಾಲಯದೊಂದಿಗೆ ಸಂಬಂಧ ಹೊಂದಿವೆ. ಇದನ್ನು ಸುಮಾರು 9 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ನಂದಿ ಹಿಲ್ಸ್ ಇನ್ನೊಂದು ವಿಶೇಷ ಅಂದ್ರೆ 1986 ರಲ್ಲಿ ನಂದಿ ಹಿಲ್ಸ್‌ನಲ್ಲಿ ಭಾರತ ಆಯೋಜಿಸಿದ ಮೊದಲ ಸಾರ್ಕ್ ಶೃಂಗಸಭೆ ನಡೆದಿತ್ತು.