Asianet Suvarna News Asianet Suvarna News

ರೈಲುಗಳು ಗಂಟೆಗಟ್ಟಲೇ ನಿಂತರೂ ಇಂಜಿನ್ ಯಾಕೆ ಆಫ್ ಮಾಡಲ್ಲ?

ರೈಲುಗಳು ಗಂಟೆಗಟ್ಟಲೇ ನಿಂತರೂ ಇಂಜಿನ್ ಆಫ್ ಮಾಡದಿರಲು ಹಲವು ತಾಂತ್ರಿಕ ಕಾರಣಗಳಿವೆ. ಆ ಕಾರಣಗಳು ಏನು ಎಂಬುದರ ಮಾಹಿತಿ ಇಲ್ಲಿದೆ.

Why not turned off railway engines despite long idling mrq
Author
First Published Oct 2, 2024, 12:14 PM IST | Last Updated Oct 2, 2024, 12:14 PM IST

ಬೆಂಗಳೂರು: ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಟ್ರಾಫಿಕ್ ಸಿಗ್ನಲ್‌ನಲ್ಲಿ ವಾಹನ ನಿಲ್ಲಿಸಿದಾಗ ಬಹುತೇಕರ ಇಂಜಿನ್ ಆಫ್ ಮಾಡುತ್ತಾರೆ. ಎರಡು ನಿಮಿಷಕ್ಕಿಂತ ಹೆಚ್ಚಿನ ಸಿಗ್ನಲ್ ಇದ್ದರೆ ವಾಹನದ ಇಂಜಿನ್ ಆಫ್ ಮಾಡೋದರಿಂದ ಇಂಧನ ಉಳಿಸೋದರ ಜೊತೆಯಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಬಹುದು. ನೀವು ರೈಲು ಪ್ರಯಾಣಿಕರಾಗಿದ್ದರೆ ಈ ಒಂದು ವಿಷಯ ನಿಮ್ಮ ಗಮನಕ್ಕೆ ಖಂಡಿತ ಬಂದಿರುತ್ತದೆ. ರೈಲುಗಳು ಗಂಟೆಗಟ್ಟಲೇ ನಿಂತಿದ್ದರೂ ಇಂಜಿನ್ ಆಫ್ ಮಾಡಿರಲ್ಲ. ಇಂಜಿನ್ ಆಫ್ ಮಾಡಿದ್ರೆ ಇಂಧನ ಉಳಿಸಬಹುದಲ್ಲವಾ ಎಂದು ನೀವು ಊಹಿಸಿರಬಹುದು. ಇಂಜಿನ್ ಆಫ್ ಮಾಡದಿರುವ ಹಿಂದಿನ ಕಾರಣವೇ ಬೇರೆಯಾಗಿರುತ್ತದೆ. 

ರೈಲುಗಳ ಇಂಜಿನ್ ಯಾಕೆ ಬಂದ್ ಮಾಡಲ್ಲ ಎಂಬುದಕ್ಕೆ ತಾಂತ್ರಿಕ ತಜ್ಞರು ಹಲವು ಕಾರಣಗಳನ್ನು ನೀಡುತ್ತಾರೆ. ಇಂಜಿನ್ ಆರಂಭ ಮಾಡಲು ಹೆಚ್ಚು ಇಂಧನದ ಜೊತೆ ಸಮಯ ಬೇಕಾಗುತ್ತದೆ. ಪದೇ ಪದೇ ಆಫ್ ಮಾಡಿ ಇಂಜಿನ್ ಆರಂಭಿಸಲು ಸಮಯದ ಜೊತೆಯಲ್ಲಿ ಅಧಿಕ ಇಂಧನ ಬೇಕಾಗುತ್ತದೆ. ರೈಲಿನ ಡೀಸೆಲ್ ಇಂಜಿನ್ ಬಿಸಿಯಾಗಲು ಅರ್ಧ ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಂಜಿನ್ ಬಿಸಿಯಾಗಲು ಅರ್ಧ ಗಂಟೆವರೆಗೂ ಇಂಧನ ಸುಡುತ್ತದೆ. ಇಂಜಿನ್ ಆರಂಭವಾಗಲು ತಗಲುವ ಇಂಧನದಲ್ಲಿ ರೈಲು ಅಂದಾಜು 8 ಗಂಟೆ ಚಲಿಸುತ್ತದೆ. ಈ ಕಾರಣದಿಂದ ಗಂಟೆಗಟ್ಟಲೇ ನಿಂತಲೂ ಲೋಕೋಪೈಲಟ್‌ಗಳು ರೈಲಿನ ಇಂಜಿನ್ ಬಂದ್ ಮಾಡೋದಿಲ್ಲ. 

ವಿದ್ಯುತ್ ಚಾಲಿತ ರೈಲಿನ ಇಂಜಿನ್ ಸಹ ಪದೇ ಪದೇ ಬಂದ್ ಮಾಡೋದಿಲ್ಲ. ಒಮ್ಮೆ ರೈಲು ಚಲಿಸಲು ಆರಂಭಿಸಿದ್ರೆ, ಯಾವುದೇ ಕ್ಷಣದಲ್ಲಿ ಸಿಗ್ನಲ್ ಸಿಕ್ಕರೂ ಹೋಗಲು ಸಿದ್ಧರಾಗಿರಬೇಕು. ಈ ಕಾರಣದಿಂದಲೂ ಲೋಕೋಪೈಲಟ್ ಇಂಜಿನ್ ಆಫ್ ಮಾಡಲ್ಲ. ಪದೇ ಪದೇ ಇಂಜಿನ್ ಆನ್/ಆಫ್ ಮಾಡೋದರಿಂದ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತವೆ. ಇಂಜಿನ್‌ನಲ್ಲಿರುವ ಯಂತ್ರೋಪಕರಣಗಳು ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ಇಂಜಿನ್‌ಗಳನನ್ನು ಚಾಲನೆಯಲ್ಲಿ ಇಡುವುದನ್ನು ನಿರ್ವಹಣೆಯ ಭಾಗವೆಂದು ಪರಿಗಣಿಸಲಾಗುತ್ತದೆ. ಎಂಜಿನ್ ಘಟಕಗಳಿಗೆ ಅಗತ್ಯವಿರುವ ಕನಿಷ್ಠ ತಾಪಮಾನವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. 

ಈ ಟಿಪ್ಸ್ ಅನುಸರಿಸಿದ್ರೆ ರೈಲಿನಲ್ಲಿ ಸೀನಿಯರ್ ಸಿಟಿಜನ್ಸ್‌ಗೆ ಸರಳವಾಗಿ ಸಿಗುತ್ತೆ ಕೆಳಗಿನ ಸೀಟ್‌

ಇಂಜಿನ್ ಆಫ್ ಮಾಡದಿರಲು ಮತ್ತೊಂದು ಕಾರಣ ಏನೆಂದ್ರೆ ಏರ್ ಸಿಸ್ಟಮ್ ಅನ್ನು ಇಂಜಿನ್‌ನಲ್ಲಿ ಇರಿಸುವುದು ಮತ್ತು ಅದರ ಹಿಂದಿನ ರೈಲು ಚಾರ್ಜ್ ಆಗುವುದು. ಆ ಗಾಳಿ ಇಲ್ಲದಿದ್ದರೆ ರೈಲಿನ ಬ್ರೇಕ್ ವಿಫಲವಾಗಬಹುದು. ರೈಲಿನಿಂದ ಗಾಳಿಯನ್ನು ಬಿಡುಗಡೆ ಮಾಡಿದ ನಂತರ, ರೈಲಿನ ಏರ್ ಸಿಸ್ಟಮ್ ಸಂಪೂರ್ಣವಾಗಿ ಚಾರ್ಜ್ ಆಗಲು 30 ನಿಮಿಷದಿಂದ ಒಂದು ಗಂಟೆಯವರೆಗೂ ಸಮಯ ತೆಗೆದುಕೊಳ್ಳುತ್ತದೆ. ಎಂಜಿನ್ ಸ್ವಿಚ್ ಆಫ್ ಮಾಡುವುದರಿಂದ ಈ ಸಮಯದ ಉಳಿತಾಯವಾಗುತ್ತದೆ. 

ಪ್ರತಿ ಸಿಗ್ನಲ್ ಅಥವಾ ನಿಲ್ದಾಣದಲ್ಲಿ ಇಂಜಿನ್ ಆಫ್/ ಆನ್ ಮಾಡಿದ್ರೆ ರೈಲು ನಿಗಧಿತ ಗುರಿ ತಲುಪಲು ಹಲವು ದಿನಗಳೇ ಬೇಕಾಗುತ್ತದೆ. ಕೆಲವು ಕಡೆ ಗೂಡ್ಸ್ ರೈಲುಗಳ ಗಂಟೆಗಟ್ಟಲೇ ನಿಂತರೂ ಲೋಕೋ ಪೈಲಟ್‌ಗಳು ಇಂಜಿನ್ ಆಫ್ ಮಾಡಲ್ಲ. ಯಾವುದೇ ಸಮಯದಲ್ಲಿ ಸಿಗ್ನಲ್ ಸಿಕ್ಕರೂ ರೈಲು ಚಲಿಸಲು ಸಿದ್ಧವಾಗಿರಬೇಕು.

ಭಾರತೀಯ ರೈಲ್ವೆ ಸೂಪರ್ ಆ್ಯಪ್, ಒಂದರಲ್ಲಿಯೇ ಪ್ರಯಾಣಿಕರಿಗೆ ಸಿಗುತ್ತೆ ಎಲ್ಲಾ ಸೇವೆ

Latest Videos
Follow Us:
Download App:
  • android
  • ios