Indian Railways Rules: ಭಾರತೀಯ ರೈಲ್ವೆಯ ಕೆಲವು ನಿಯಮಗಳು ಅಚ್ಚರಿ ಮೂಡಿಸುತ್ತವೆ. ಲೋಕೋ ಪೈಲಟ್‌ಗಳು ಕರ್ತವ್ಯದ ವೇಳೆ ಎಳನೀರು ಕುಡಿಯುವಂತಿಲ್ಲವೇ ಎಂಬ ಪ್ರಶ್ನೆಗೆ ರೈಲ್ವೆ ಸಚಿವರು ಉತ್ತರಿಸಿದ್ದಾರೆ.
ನವದೆಹಲಿ: ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಗೆ ಕುಡಿಯುವ ನೀರು ಸೇರಿದಂತೆ ಬಗೆ ಬಗೆಯ ಆಹಾರ ಸವಿಯಲು ಸಿಗುತ್ತದೆ. ಈ ಹಿನ್ನೆಲೆ ಎಲ್ಲಾ ವರ್ಗದ ಜನರು ರೈಲು ಪ್ರಯಾಣಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಸೇರಿದಂತೆ ಸಿಬ್ಬಂದಿ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಕೆಲವು ರೈಲು ನಿಯಮಗಳು ನಿಮಗೆ ಆಶ್ವರ್ಯವನ್ನುಂಟು ಮಾಡುತ್ತವೆ. ಇಂತಹವುದೇ ವಿಚಿತ್ರ ನಿಯಮದ ಬಗ್ಗೆ ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ್, ಶುಕ್ರವಾರ ರಾಜ್ಯಸಭೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಆಲ್ಕೋಹಾಲ್ ಅಲ್ಲದ ಯಾವುದೇ ಪಾನೀಯ ಸೇವಿಸಲು ನಿರ್ಬಂಧವಿಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಎಂಡಿಎಂಕೆ ಸದಸ್ಯರಾದ ವಾಯಿಕೋ ಮತ್ತು ದ್ರುಮಕ ಸದಸ್ಯ ಎಂ.ಷಣ್ಮುಗನ್ ಈ ಕುರಿತ ಪ್ರಶ್ನೆಯೊಂದನ್ನು ಕೇಳಿದ್ದರು. ಲೋಕೋ ಪೈಲಟ್‌ಗಳು ಸೇವೆ ಸಮಯದಲ್ಲಿ ಸಾಫ್ಟ್ ಡ್ರಿಂಕ್, ಹಣ್ಣು, ಕಫ್ ಸಿರಪ್, ಎಳನೀರು ಸೇವನೆ ಮಾಡದಂತೆ ದಕ್ಷಿಣ ರೈಲ್ವೆಯಿಂದ ಯಾವುದಾದರೂ ನೋಟಿಸ್ ಜಾರಿ ಮಾಡಲಾಗಿದೆಯಾ ಎಂದು ಮೇಲ್ಮನೆಯಲ್ಲಿ ಪ್ರಶ್ನೆ ಮಾಡಿದ್ದರು.
ಇಂಜಿನ್‌ನಲ್ಲಿ ಬಿಸಿಯಾದ ವಾತಾವರಣವಿದ್ದು, ಲೋಕೋಪೈಲಟ್‌ಗಳಿಗೆ ಪದೇ ಪದೇ ಬಾಯಾರಿಕೆ ಆಗುತ್ತಿರುತ್ತದೆ. ಅದು ಬೇಸಿಗೆಯಲ್ಲಿ ಬಾಯಾರಿಕೆ ಅಧಿಕವಾಗಿರುತ್ತದೆ. ಒಂದು ವೇಳೆ ಇಂತಹ ನಿಯಮಗಳಿದ್ದರೆ ಅದು ಅಮಾನವೀಯತೆ ಎಂದು ಬೇಸರ ಹೊರ ಹಾಕಿದ್ದರು. ಮೇಲ್ಮನೆ ಸದಸ್ಯರ ಪ್ರಶ್ನೆಗೆ ಕೇಂದ್ರ ಸಚಿವರು ಲಿಖಿತ ರೂಪದಲ್ಲಿ ಉತ್ತರವನ್ನು ನೀಡಿದ್ದರು. ಮದ್ಯ ರಹಿತ ಯಾವುದೇ ಪದಾರ್ಥಅಥವಾ ಪಾನೀಯವನ್ನು ಕರ್ತವ್ಯದ ಅವಧಿಯಲ್ಲಿ ಸೇವಿಸಬಹುದು. ಇದಕ್ಕೆ ಯಾವುದೇ ನಿಬಂಧನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸಿಬ್ಬಂದಿ ಸೇವಿಸಬೇಕಾದ ಪಾನೀಯಗಳ ನಿಯಮದಲ್ಲಿ ಮಾರ್ಪಾಡುಗೊಳಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಇದನ್ನೂ ಓದಿ: ಡೋಂಟ್ ವರಿ, ಇನ್ಮುಂದೆ ಎಲ್ಲರಿಗೂ ಸಿಗುತ್ತೆ ಕನ್ಫರ್ಮ್ ಟಿಕೆಟ್; ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ
ಹೊಸ ರೈಲು ಮತ್ತು ಮಾರ್ಗಕ್ಕೆ ಅನುಮೋದನೆ ನೀಡುವ ಮೊದಲು ಪರಿಶೀಲನೆ ನಡೆಯಬೇಕಿದೆ. ಅತ್ಯಧಿಕ ಬಳಕೆಗಾಗಿ ಕಡಿಮೆ ಬೆಲೆಯನ್ನು ನಿಗದಿ ಮಾಡಬೇಕಾಗುತ್ತದೆ. ರೈಲು ದರ ಕಡಿಮೆಯಾದ್ರೆ ಪ್ರಯಾಣಿಕರು ಸಂಖ್ಯೆ ಹೆಚ್ಚಾಗುತ್ತದೆ ಎಂದು ಸಂಸದೀಯ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಶುಕ್ರವಾರ ಸಂಸದೀಯ ಸಮಿತಿ ತನ್ನ ವರದಿಯನ್ನು ಲೋಕಸಭೆಗೆ ಸಲ್ಲಿಕೆ ಮಾಡಿದೆ. ಕಳೆದ ವರ್ಷ ಸುವಿಧಾ ಎಕ್ಸ್‌ಪ್ರೆಸ್ ರೈಲಿನಿಂದಾಗಿ ನೈಋತ್ಯ ರೈಲ್ವೆ ವಲಯ ನಷ್ಟವನ್ನು ಅನುಭವಿಸಿದೆ ಎಂದು ಹೇಳಿದೆ. ಹಾಗಾಗಿ ಸುವಿಧಾ ಎಕ್ಸ್‌ಪ್ರೆಸ್ ಮಾದರಿ ರೈಲುಗಳ ಚಾಲನೆ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕೆಂದು ವರದಿ ಸದನಕ್ಕೆ ತಿಳಿಸಿದೆ.
ಸುವಿಧಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಕೆಲವು ತಿದ್ದುಪಡಿಗಳನ್ನು ಮಾಡೋದು ಅನಿವಾರ್ಯವಾಗಿದೆ. ಟಿಕೆಟ್‌ಗಳ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಮೂಲಕ ಫ್ಲೆಕ್ಸಿ-ಫೇರ್ (ಬೇಡಿಕೆ ಆಧಾರಿತ ದರ ಹೆಚ್ಚಳ) ಕೆಲಸ ಮಾಡುತ್ತದೆ ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ. ರೈಲ್ವೇ ದರವನ್ನು ಕಡಿಮೆ ಮಾಡುವ ಮೂಲಕ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಸಲಹೆ ನೀಡಿದೆ.
ಇದನ್ನೂ ಓದಿ: ರೈಲಿನಲ್ಲಿ ರಾತ್ರಿ ಮರೆತೂ ಈ 8 ಕೆಲಸ ಮಾಡ್ಬೇಡಿ, ಇಲ್ಲಾಂದ್ರೆ ಪಶ್ಚಾತ್ತಾಪ ಪಡ್ತೀರಿ!