
ನವದೆಹಲಿ: ಭಾರತದಲ್ಲಿ ಪ್ರತಿನಿತ್ಯ ಕೋಟ್ಯಂತರ ಜನರು ರೈಲು ಪ್ರಯಾಣ ಮಾಡುತ್ತಾರೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೈಲುಗಳ ಸಂಚರಿಸುತ್ತವೆ. ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುವ ಕಾರಣ ಎಲ್ಲಾ ಪ್ರಯಾಣಿಕರಿಗೆ ಎಲ್ಲಾ ಸಮಯದಲ್ಲಿಯೂ ಖಾತ್ರಿ/ಕನ್ಫರ್ಮ್ ಟಿಕೆಟ್‌ಗಳು ಸಿಗಲ್ಲ. ಹಬ್ಬ ಸೇರಿದಂತೆ ರಜಾದಿನದ ವೇಳೆ ಜನರಲ್ ಕೋಚ್‌ಗಳಲ್ಲಿ ಕಾಲಿಡಲು ಸಹ ಜಾಗವಿರದಷ್ಟು ಜನಸಂದಣಿ ಇರುತ್ತದೆ. 30 ರಿಂದ 40 ದಿನಗಳ ಮುಂಚೆಯೇ ಪ್ರಯಾಣದ ಪ್ಲಾನ್ ಮಾಡಿಕೊಂಡ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಸಿಗುತ್ತದೆ. ಕನ್ಫರ್ಮ್ ಟಿಕೆಟ್ ಇದ್ರೆ ಮಾತ್ರ ರೈಲು ಪ್ರಯಾಣ ಸುಂದರ ಮತ್ತು ಆರಾಮದಾಯಕವಾಗಿರುತ್ತದೆ. ಇದೀಗ ಟಿಕೆಟ್ ಬುಕ್ಕಿಂಗ್ ಸಂಬಂಧ ಭಾರತೀಯ ರೈಲ್ವೆ ಹೊಸ ಮತ್ತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರದಿಂದ ಎಲ್ಲರಿಗೂ ಕನ್ಫರ್ಮ್ ಟಿಕೆಟ್ ಸಿಗುತ್ತೆ ಎಂದು ವರದಿಯಾಗಿದೆ.
ದೀರ್ಘ ಪ್ರಯಾಣಕ್ಕೆ ರೈಲು ಮಾರ್ಗ ಉತ್ತಮ ಆಯ್ಕೆಯಾಗಿರೋದರಿಂದ ದೀಪಾವಳಿ, ಹೋಳಿ, ಯುಗಾದಿ, ರಂಜಾನ್, ಕ್ರಿಸ್ಮಸ್ ಸೇರಿದಂತೆ ವಿಶೇಷ ದಿನಗಳಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಹಾಗಾಗಿ ಭಾರತೀಯ ರೈಲ್ವೆ ವಿಶೇಷ ದಿನಗಳಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲಾಗುತ್ತದೆ. ಈ ಕಾರಣದಿಂದಲೇ ರೈಲ್ವೆಯನ್ನು ಭಾರತೀಯರ ಲೈಫ್‌ಲೈನ್ ಎಂದು ಕರೆಯಲಾಗುತ್ತದೆ.
ಇತ್ತೀಚೆಗಷ್ಟೇ ಹೋಳಿ ಹಬ್ಬದ ಸಂದರ್ಭದಲ್ಲಿಯೂ ಕೂಡ ರೈಲ್ವೆ ಇಲಾಖೆಯಿಂದ ಹಲವು ವಿಶೇಷ ರೈಲುಗಳನ್ನು ಓಡಿಸಲಾಗಿತ್ತು. ಇದೀಗ ರೈಲ್ವೇ ಇಲಾಖೆಯು ರೈಲುಗಳ ನಿಯಮವನ್ನು ಬದಲಾಯಿಸಿದೆ. ಈ ನಿಯಮದ ಬದಲಾವಣೆಯಿಂದ ವೇಟಿಂಗ್ ಟಿಕೆಟ್ ಪಡೆಯುವ ಪ್ರಯಾಣಿಕರಿಗೆ ಲಾಭವಾಗಲಿದೆ. ಅದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರೈಲು ವಿದ್ಯುತ್‌ನಿಂದ ಚಲಿಸುತ್ತಿದ್ರೂ ಜನರೇಟರ್ ಏಕೆ ಅಳವಡಿಸುತ್ತಾರೆ? ರಹಸ್ಯ ತಿಳಿದರೆ ನೀವು ಆಶ್ಚರ್ಯಚಕಿತರಾಗ್ತೀರಿ!
ಆಸನಗಳಿದ್ದಷ್ಟೇ ಟಿಕೆಟ್ ವಿತರಣೆ
ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಸಂದಣಿಯಿಂದಾಗಿ ಕಾಲ್ತುಳಿತದಂತಹ ಪ್ರಕರಣಗಳು ಸಂಭವಿಸುತ್ತಿವೆ. ದೆಹಲಿಯ ಕಾಲ್ತುಳಿತದ ಪ್ರಕರಣದಿಂದ ಎಚ್ಚೆತ್ತಿರುವ ಭಾರತೀಯ ರೈಲ್ವೆ ಕೆಲವು ನಿಯಮಗಳಲ್ಲಿ ಬದಲಾವಣೆ ತರಲು ಮುಂದಾಗಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಈಗ ರೈಲ್ವೆ ಇಲಾಖೆಯಿಂದ ಆಸನಗಳಿರುವ ಸಂಖ್ಯೆಯಷ್ಟೇ ಟಿಕೆಟ್‌ಗಳನ್ನು ನೀಡಲಾಗುವುದು. ಇದರಿಂದಾಗಿ ಪ್ರಯಾಣಿಕರ ಸಂಖ್ಯೆಯನ್ನು ನಿಯಂತ್ರಿಸಬಹುದು ಎಂದು ಹೇಳಿದ್ದಾರೆ. ರೈಲು ಟಿಕೆಟ್ ಕನ್ಫರ್ಮ್ ಇದ್ರೆ ಮಾತ್ರ ನಿಲ್ದಾಣಕ್ಕೆ ಎಂಟ್ರಿ ಕೊಡಬಹುದು. ಈ ಹೊಸ ನಿಯಮದಿಂದ ರೈಲು ಟಿಕೆಟ್ ಕನ್ಫರ್ಮ್ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಸನಗಳು ಫುಲ್ ಆಗ್ತಿದಂತೆ ಟಿಕೆಟ್ ವಿತರಣೆ ನಿಲ್ಲಿಸಲಾಗುತ್ತದೆ. ಹಾಗಾಗಿ ವೇಟಿಂಗ್ ಟಿಕೆಟ್ ಹಿಡಿದು ಕಾಯುವ ಪರಿಸ್ಥಿತಿಗಳು ದೂರವಾಗಲಿವೆ. ಇದರ ಪರಿಶೀಲನೆಗಾಗಿ ರೈಲ್ವೆ ಸಿಬ್ಬಂದಿಗೆ ಹೊಸ ವಿನ್ಯಾಸದ ಕಾರ್ಡ್‌ಗಳು ಮತ್ತು ಸಮವಸ್ತ್ರಗಳನ್ನು ರೈಲ್ವೇಯಿಂದ ತಯಾರಿಸಲಾಗುತ್ತಿದೆ ಎಂದು ವರದಿಯಾಗಿದೆ.
ರೈಲ್ವೆ ಸ್ವಾವಲಂಬಿ
ಭಾರತದ ರೈಲ್ವೆ ಸ್ವಾವಲಂಬಿಯಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದ ನಂತರ, ರೈಲ್ವೇ ತನ್ನ ಸ್ವಂತ ಆದಾಯದಿಂದ ತನ್ನ ಖರ್ಚುಗಳನ್ನು ಪೂರೈಸುತ್ತಿದೆ ಮತ್ತು ಕಾಲಾನಂತರದಲ್ಲಿ ಅದು ಬಲಗೊಳ್ಳುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ರೈಲ್ವೆ ಆದಾಯ ಗಣನೀಯವಾಗಿ ಹೆಚ್ಚಿದೆ. 10 ವರ್ಷಗಳಲ್ಲಿ, 34,000 ಕಿಲೋಮೀಟರ್ ರೈಲ್ವೆ ಹಳಿಗಳನ್ನು ಹಾಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್ ರೈಲನ್ನು ಬಿರಿಯಾನಿಗೆ ಹೋಲಿಸಿದ ಸಂಸದೆ; ಅದಕ್ಕೂ ಇದಕ್ಕಿರೋ ಸಂಬಂಧ ಏನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.