ಲಂಡನ್‌ಗಿಂತ ದುಬಾರಿ ಮಹಾಕುಂಭ ಮೇಳ ಪ್ರಯಾಣ, ಬೆಂಗಳೂರಿನಿಂದ ವಿಮಾನ ದರ ಎಷ್ಟು?

Published : Jan 29, 2025, 09:09 AM IST
ಲಂಡನ್‌ಗಿಂತ ದುಬಾರಿ ಮಹಾಕುಂಭ ಮೇಳ ಪ್ರಯಾಣ, ಬೆಂಗಳೂರಿನಿಂದ ವಿಮಾನ ದರ ಎಷ್ಟು?

ಸಾರಾಂಶ

ಮಹಾಕುಂಭ ಮೇಳಕ್ಕ ತೆರಳುತ್ತಿರುವ ಭಕ್ತರ ಸಂಖ್ಯೆ ಹೆಜ್ಚಾಗಿದೆ. ಇದರಿಂದ ಬಸ್, ವಿಮಾನ ಸೇರಿದಂತೆ ಸಾರಿಗೆ ದರಗಳು ಕೂಡ ಹೆಚ್ಚಾಗಿದೆ. ಬೆಂಗಳೂರಿನಿಂದ ಹಾಗೂ ದೇಶದ ಪ್ರಮುಖ ನಗರಗಳಿಂದ ಇದೀಗ ಪ್ರಯಾಗರಾಜ್‌ಗೆ ತೆರಳಲು ವಿಮಾನ ದರ ಎಷ್ಟಾಗಿದೆ.

ಬೆಂಗಳೂರು(ಜ.29) ಮಹಾಕುಂಭ ಮೇಳದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಭಾರತೀಯ ರೈಲ್ವೇ ಈಗಾಗಲೇ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಇತ್ತ ಬಸ್, ವಿಮಾನ ಸೇರಿದಂತೆ ಹಲವು ಸಾರಿಗೆ ಸಂಪರ್ಕಗಳು ಲಭ್ಯವಿದೆ. ಆದರೆ ಮಹಾಕುಂಭ ಮೇಳಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇತ್ತ ವಿಮಾನ ಪ್ರಯಾಣ ದರಗಳು ಹೆಚ್ಚಾಗಿದೆ. ಸದ್ಯ ಬೆಂಗಳೂರಿನಿಂದ ಲಂಡನ್‌ಗೆ ತೆರಳುವುದು ಅಗ್ಗವಾಗಿದೆ. ಆದರೆ ಬೆಂಗಳೂರಿನಿಂದ ಹಾಗೂ ದೇಶದ ಪ್ರಮುಖ ನಗರಗಳಿಂದ ಪ್ರಯಾಗರಾಜ್ ತೆರಳುವ ವಿಮಾನ ಪ್ರಯಾಣ ದರ ದುಬಾರಿಯಾಗಿದೆ. ಇದು ಮಹಾಕುಂಭ ಮೇಳಕ್ಕೆ ತೆರಳುವ  ಭಕ್ತರಲ್ಲಿ ನಿರಾಸೆ ಮೂಡಿಸಿದೆ.

ವಿಮಾನ ಟಿಕೆಟ್ ದರ ಬರೋಬ್ಬರಿ 5 ರಿಂದ 6 ಪಟ್ಟು ಹೆಚ್ಚಿಸಲಾಗಿದೆ. ಸಮಯದ ಅಭಾವದಿಂದ ವಿಮಾನದ ಮೂಲಕ ಪ್ರಯಾಣಿಸಲು ಬಯಸುವ ಭಕ್ತರಿಗೆ ತೀವ್ರ ನಿರಾಸೆಯಾಗುತ್ತಿದೆ. ವಿಮಾನ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. 25 ಸಾವಿರ ರೂಪಾಯಿ ಇದ್ದ ಪ್ರಯಾಗರಾಜ್ ವಿಮಾನ ಪ್ರಯಾಣ ದರ ಇದೀಗ 60 ಸಾವಿರ ರೂಪಾಯಿಗೆ ಏರಿಕೆಯಾಗಿದೆ.  

ಬಾಹ್ಯಾಕಾಶದಿಂದ ಮಹಾಕುಂಭ ಮೇಳೆ ಹೇಗೆ ಕಾಣಿಸುತ್ತಿದೆ? ಭಕ್ತರ ಮನ ಗೆದ್ದ ನಾಸಾ ತೆಗೆದ ಚಿತ್ರ

ಮೌನಿ ಅಮವಾಸ್ಯೆ ಹಿನ್ನಲೆಯಲ್ಲಿ ದೇಶದ ಮೂಲೆ ಮೂಲೆಯಿಂದ ಪ್ರಯಾಗ್‌ರಾಜ್‌ಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ.ಇಂದು(ಜ.29) ಒಂದೇ ದಿನ ಪ್ರಯಾಗರಾಜ್‌ನಲ್ಲಿ 10 ಕೋಟಿಗೂ ಅಧಿಕ ಭಕ್ತರು ಜಮಾಯಿಸುವ ಸಾಧ್ಯತೆ ಇದೆ. ಪ್ರಯಾಗರಾಜ್ ತೆರಳಲು ಮಾತ್ರವಲ್ಲ, ಪ್ರಯಾಗರಾಜ್‌ನಿಂದ ಬೆಂಗಳೂರು ಸೇರಿದಂತೆ ಇತರ ಪ್ರಮುಖ ನಗರಗಳ ವಿಮಾನ ದರ ಕೂಡ ಭಾರಿ ಏರಿಕೆಯಾಗಿದೆ. ಬೆಂಗಳೂರಿನಿಂದ ಪ್ರಯಾಗರಾಜ್‌ಗೆ ತೆರಳಲು ವಿಮಾನದ ಕನಿಷ್ಠ ದರ 29,000 ರೂಪಾಯಿ. ಇನ್ನು ಪ್ರಯಾಗರಾಜ್‌ನಿಂದ ಬೆಂಗಳೂರಿಗೆ ಮರಳಲು ವಿಮಾನ ಟಿಕೆಟ್ ದರ 45 ಸಾವಿರ ರೂಪಾಯಿ.  

ಮಹಾಕುಂಭ ಮೇಳಕ್ಕೆ ತೆರಳಲು ವಿಮಾನ ಟಿಕೆಟ್ ದರ(ಜನವರಿ 29ರ ಪ್ರಕಾರ)
ಬೆಂಗಳೂರು to ಪ್ರಯಾಗ್ ರಾಜ್ - 29,000 
ಪ್ರಯಾಗ್ ರಾಜ್ to ಬೆಂಗಳೂರು - 40,000

ದೆಹಲಿ to ಪ್ರಯಾಗ್ ರಾಜ್ - 20,000
ಪ್ರಯಾಗ್ ರಾಜ್ to ದೆಹಲಿ - 34,000

ಹೈದರಾಬಾದ್ to ಪ್ರಯಾಗ್ ರಾಜ್ - 29,000
ಪ್ರಯಾಗ್ ರಾಜ್ to ಹೈದರಾಬಾದ್ - 41,000

ಚೆನ್ನೈ to ಪ್ರಯಾಗ್ ರಾಜ್ - 50,000
ಪ್ರಯಾಗ್ ರಾಜ್ to ಚೆನ್ನೈ - 60,000

ಮೌನಿ ಅಮಾಸ್ಯೆ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಅಮೃತ ಸ್ನಾನಕ್ಕೆ ಧಾವಿಸಿದ ಕಾರಣ ನೂಕು ನುಗ್ಗಲು ಸಂಭವಿಸಿದೆ. ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 40ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಈ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸದ್ಯ ಸಂಪೂರ್ಣ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸತತವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಮೂರು ಬಾರಿ ಕರೆ ಮಾಡಿರುವ ಮೋದಿ, ಪರಿಸ್ಥಿತಿ ನಿಯಂತ್ರಣಕ್ಕೆ ಎಲ್ಲಾ ನೆರವು ನೀಡಿದ್ದಾರೆ.

ಮಹಾಕುಂಭ ಮೇಳದ ಕಾಲ್ತುಳಿತ ಪರಿಸ್ಥಿತಿ ನಿಯಂತ್ರಣ, ಸಾಧುಗಳಿಂದ ಅಮೃತ ಸ್ನಾನ ರದ್ದು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!