ಹೊಳೆಯುತ್ತಿರುವ ಕಲ್ಲು ಕಂಡ್ರೂ ಅದೇನೊ ಖುಷಿ. ಅದೇ ಕೈಗೆ ವಜ್ರ ಸಿಕ್ಕಿದ್ರೆ, ಸ್ವರ್ಗಕ್ಕೆ ಮೂರೇ ಗೇಣು. ನಾವಿಲ್ಲಿ ವಜ್ರದ ಕನಸು ಕಾಣ್ತಿದ್ರೆ, ಮಧ್ಯಪ್ರದೇಶದ ಗ್ರಾಮವೊಂದರ ಜನಕ್ಕೆ ವಜ್ರವೇ ಸಿಗ್ತಿದೆ. ಅದ್ರ ವಿವರ ಇಲ್ಲಿದೆ.
ವಜ್ರ (Diamond) – ವೈಡೂರ್ಯ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮೈಮೇಲೆ ವಜ್ರದ ಆಭರಣ (Jewellery) ಹಾಕಿಕೊಂಡು ಸುತ್ತಾಡ್ಬೇಕು ಅಂತ ಹುಡುಗಿಯರು ಕನಸು ಕಾಣ್ತಾರೆ. ಇದನ್ನು ಪಡೆಯೋದು ಸುಲಭವಲ್ಲ. ಒಂದಿಷ್ಟು ಹಣ ಸುರಿದ್ರೆ ಮಾತ್ರ ವಜ್ರ ನಮ್ಮದಾಗುತ್ತೆ. ಯಾವುದೇ ಖರ್ಚಿಲ್ಲದೆ ಭೂಮಿಯಲ್ಲಿ ವಜ್ರ ಸಿಕ್ಕಿದ್ರೆ? ಶಿವರಾಜ್ ಕುಮಾರ್ (Shivarajkumar) ಮತ್ತು ಪ್ರಭುದೇವ್ ಅಭಿನಯದ ಕರಟಕ ದಮನಕ ಸಿನಿಮಾದಲ್ಲಿ ನೀವು ಭೂಮಿಯಲ್ಲಿ ಬಂಗಾರದ ನಾಣ್ಯ ಸಿಗೋದನ್ನು ನೋಡ್ಬಹುದು. ಆದ್ರೆ ಬೇರೆ ಉದ್ದೇಶದಿಂದ ಭೂಮಿಯೊಳಗೆ ಇವರೇ ನಾಣ್ಯ ಹಾಕಿರ್ತಾರೆ. ನಾಣ್ಯ ಸಿಗ್ತಿದೆ ಎಂಬ ವಿಷ್ಯಗೊತ್ತಾಗ್ತಿದ್ದಂತೆ ಜನರು ತಂಡ ತಂಡವಾಗಿ ಬಂದು ಭೂಮಿ ಅಗೆಯಲು ಶುರು ಮಾಡ್ತಾರೆ. ಇದು ಸಿನಿಮಾ ಕಥೆಯಾಯ್ತು. ಈಗ ನಾವು ಹೇಳ್ತಿರೋ ಊರಿನಲ್ಲಿ ನಿಜವಾಗ್ಲೂ ಭೂಮಿಯಲ್ಲಿ ನಮಗೆ ಕಲ್ಲು ಸಿಕ್ಕಂತೆ ಅವರಿಗೆ ಮಣ್ಣಿನಲ್ಲಿ ವಜ್ರ ಸಿಗುತ್ತದೆ. ಅಲ್ಲಿ – ಇಲ್ಲಿ ಭೂಮಿ ಅಗೆದಾಗ, ಅದೃಷ್ಟ ಜೊತೆಗಿದ್ರೆ ವಜ್ರ ಅವರದ್ದಾಗುತ್ತದೆ. ಅಲ್ಲಿನ ಜನರು ವಜ್ರಕ್ಕಾಗಿ ಸದಾ ಹುಡುಕಾಟ ನಡೆಸ್ತಾರೆ. ಅವರ ಸಾರ್ವಕಾಲಿಕ ಗುರಿ ವಜ್ರ.
ವಜ್ರ ಸಿಗ್ತಿರುವ ಊರು ಮಧ್ಯಪ್ರದೇಶದಲ್ಲಿದೆ. ಅದರ ಹೆಸರು ಪನ್ನಾ (Panna). ಇದನ್ನು ವಜ್ರದ ನಗರ ಎಂದೂ ಕರೆಯುತ್ತಾರೆ. ಈ ಊರಿನಲ್ಲಿ ಕೂಲಿ ಕಾರ್ಮಿಕರ ಅದೃಷ್ಟ ಒಂದೇ ದಿನದಲ್ಲಿ ಬದಲಾಗಿದೆ. ದಿನಕ್ಕೆ ನೂರು, ಇನ್ನೂರು ರೂಪಾಯಿ ಹಣ ಗಳಿಸ್ತಿದ್ದ ಜನರು ಒಂದೇ ದಿನ ಕೋಟ್ಯಾಧಿಪತಿಯಾಗಿದ್ದಾರೆ. ಇಲ್ಲಿ ವಜ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಅವುಗಳನ್ನು ಸರ್ಕಾರ ಕಾಲಕಾಲಕ್ಕೆ ಹರಾಜು ಮಾಡುತ್ತದೆ. ಅವುಗಳನ್ನು ಖರೀದಿಸಲು ಭಾರತ ಮತ್ತು ವಿದೇಶಗಳಿಂದ ವ್ಯಾಪಾರಿಗಳು ಬರುತ್ತಾರೆ.
undefined
ಮೂರೇ ನಿಮಿಷ: ಅಪ್ಪಿಕೊಳ್ಳೋಕೆ ಸಮಯದ ಮಿತಿ ಹೇರಿದ ಏರ್‌ಪೋರ್ಟ್
ಇಲ್ಲಿನ ಜನರು ಗಣಿಗಳನ್ನು ಖರೀದಿ ಮಾಡ್ತಾರೆ ಇಲ್ಲವೇ ಬಾಡಿಗೆಗೆ ಪಡೆಯುತ್ತಾರೆ. ನಂತ್ರ ಅಲ್ಲಿ ವಜ್ರದ ಹುಡುಕಾಟ ನಡೆಸ್ತಾರೆ. ಕೆಲವರಿಗೆ ಆರಂಭದಲ್ಲಿಯೇ ವಜ್ರ ಸಿಕ್ಕಿದ್ರೆ ಮತ್ತೆ ಕೆಲವರು ವರ್ಷಪೂರ್ತಿ ಹುಡುಕಿದ್ರೂ ವಜ್ರ ಸಿಗೋದಿಲ್ಲ. ಇನ್ನೊಂದಿಷ್ಟು ಮಂದಿ ಜೀವನ ಪರ್ಯಂತ ವಜ್ರಕ್ಕೆ ಹುಡುಕಾಟ ನಡೆಸಿ ವಿಫಲರಾಗಿದ್ದಾರೆ.
ಪನ್ನಾದ 80 ಕಿಲೋಮೀಟರ್ ದೂರ ಗಣಿಗಳಿವೆ. ಬಿಳಿ, ಬಣ್ಣ ರಹಿತ ಮತ್ತು ಕೋಕಾ ಕೋಲಾ ಬಣ್ಣದ ವಜ್ರಗಳು ಇಲ್ಲಿ ಕಂಡುಬರುತ್ತವೆ. ಇಲ್ಲಿ ಜನರು ಸಾಮಾನ್ಯವಾಗಿ ಗಣಿಗಳಲ್ಲಿ ವಜ್ರಗಳನ್ನು ಹುಡುಕುತ್ತಾರೆ ಮತ್ತು ಕೆಲವೊಮ್ಮೆ 2-3 ಕೋಟಿ ಮೌಲ್ಯದ ವಜ್ರಗಳನ್ನು ವಶಕ್ಕೆ ಪಡೆಯುತ್ತಾರೆ.
ಕೆಲ ದಿನಗಳ ಹಿಂದೆ ಕಾರ್ಮಿಕನೊಬ್ಬನಿಗೆ ಒಂದಯ ವಜ್ರ ಸಿಕ್ಕಿತ್ತು. ಅದ್ರ ಬೆಲೆ 80 ಲಕ್ಷ ರೂಪಾಯಿ. ಈ ವ್ಯಕ್ತಿ ಟ್ರ್ಯಾಕ್ಟರ್ ಡ್ರೈವರ್ ಆಗಿದ್ದರೂ ತನ್ನ ಗಣಿಯಲ್ಲಿ ವಜ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅನೇಕ ವರ್ಷಗಳಿಂದ ಆತ ವಜ್ರಕ್ಕಾಗಿ ಹುಡುಕಾಟ ನಡೆಸ್ತಾ ಇದ್ದ. ಗುತ್ತಿಗೆ ನವೀಕರಿಸಿದ ತಕ್ಷಣ ವಜ್ರ ಸಿಕ್ಕಿದೆ. ಉತ್ತಮ ಗುಣಮಟ್ಟದ ವಜ್ರಕ್ಕೆ ಬೇಡಿಕೆ ಹೆಚ್ಚಿದೆ.
ಇಲ್ಲಿನ ಮತ್ತೊಂದು ವಿಶೇಷ ಅಂದ್ರೆ ಗಣಿಗಳ ಗುತ್ತಿಗೆ ಕೇವಲ 200 ರೂಪಾಯಿಗೆ ಲಭ್ಯವಿದೆ. ಜನರು ವರ್ಷಕ್ಕೆ 200 ರೂಪಾಯಿ ನೀಡಿ ಭೂಮಿಯನ್ನು ಗುತ್ತಿಗೆ ಪಡೆದು ನಂತರ ವಜ್ರಗಳನ್ನು ಹುಡುಕುತ್ತಾರೆ. ಯಾವುದೇ ವ್ಯಕ್ತಿ ಭೂಮಿಯನ್ನು ಗುತ್ತಿಗೆ ಪಡೆಯಬಹುದು. ಫೋಟೋ, ಆಧಾರ್ ಕಾರ್ಡ್ ನೀಡಿ ಜಮೀನು ಪಡೆಯಬೇಕಾಗುತ್ತದೆ.
ಭಾರತದ ಈ ಬ್ಯುಸಿ ರೈಲು ನಿಲ್ದಾಣದಲ್ಲಿ 1ನೇ ಪ್ಲಾಟ್‌ಫಾರಂ ಇಲ್ಲ
ಕೆಲವರ ಗುತ್ತಿಗೆ ಹಣ ವ್ಯರ್ಥವಾಗಿದ್ದು, ಇಲ್ಲಿಯವರೆಗೂ ಒಂದೇ ಒಂದು ವಜ್ರ ಸಿಕ್ಕಿಲ್ಲ. ಮತ್ತೆ ಕೆಲವರು ಈವರೆಗೆ 20ಕ್ಕೂ ಹೆಚ್ಚು ವಜ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೆಲ ವಜ್ರದ ಬೆಲೆ 50 ಲಕ್ಷವಿದ್ರೆ ಮತ್ತೆ ಕೆಲವು 1-2 ಕೋಟಿ ಬೆಲೆ ಬಾಳುತ್ತವೆ. ಇಲ್ಲಿ ಸಿಕ್ಕ ವಜ್ರ ಮಾರಾಟ ಮಾಡೋದು ಕಷ್ಟವಲ್ಲ. ಪನ್ನಾ ಜಂಟಿ ಕಲೆಕ್ಟರೇಟ್‌ನಲ್ಲಿರುವ ಡೈಮಂಡ್ ಕಚೇರಿಯಲ್ಲಿ ಠೇವಣಿ ಮಾಡಬೇಕು. ಅದನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ. ಇದರ ನಂತರ ಸರ್ಕಾರ ಅದನ್ನು ಹರಾಜು ಮಾಡುತ್ತದೆ.