
ನಮ್ಮಲ್ಲಿ ಕೆಲವು ಹುಡುಗರಿಗೆ ಮದುವೆಯಾಗಲು ಹುಡುಗಿ ಸಿಗ್ತಿಲ್ಲ. ಪ್ರೀತಿಸೋಣ ಎಂದರೆ ಗೆಳತಿಯರಿಲ್ಲ. ಮಲೆನಾಡಿನ ಹವ್ಯಕ ಸಮುದಾಯದಲ್ಲಿ ಮದುವೆಯಾಗದೇ ಉಳಿದ ಗಂಡಸರ ದೊಡ್ಡ ಪಡೆಯೇ ಇದೆ. ಇದು ಇಡೀ ಭಾರತದ ಸ್ಥಿತಿ. ಒಂದು ವೇಳೆ ಒಬ್ಬ ಯುವಕ ಒಂದಕ್ಕಿಂತ ಹೆಚ್ಚು ಹೆಂಡತಿಯನ್ನೋ ಗರ್ಲ್‌ಫ್ರೆಂಡನ್ನೋ (Girlfriend) ಹೊಂದಿದ್ದರೆ ಅದು ವಂಚನೆ, ಅಪರಾಧ.
ಆದರೆ ನಾವೀಗ ಮಾತಾಡ್ತಿರೋದು ಬೇರಿನ್ನೊಂದು ದೇಶದ ಬಗ್ಗೆ. ಆ ದೇಶದ ಪುರುಷರು ಒಬ್ಬರಲ್ಲ, ಇಬ್ಬರಲ್ಲ ಐವರು ಗೆಳತಿಯರನ್ನು ಹೊಂದಬಹುದು. ಅದ್ಯಾವ ದೇಶ, ಅಲ್ಯಾಕೆ ಹಾಗೆ? ಇದು ಲಾತ್ವಿಯಾದ ಕತೆ. ಲಾತ್ವಿಯಾ ದೇಶ ಉತ್ತರ ಯುರೋಪಿನ ಬಾಲ್ಟಿಕ್ ಪ್ರದೇಶದಲ್ಲಿದೆ. ಅದರ ಜನಸಂಖ್ಯೆ ಮತ್ತು ಸಾಮಾಜಿಕ ರಚನೆ ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಅಲ್ಲಿನ ಯುವಜನತೆಯ ಸಂಬಂಧದ ಶೈಲಿ ಪ್ರಪಂಚದಾದ್ಯಂತ ಚರ್ಚೆಯ ವಿಷಯ.
ಜನಸಂಖ್ಯೆಯ ದೃಷ್ಟಿಯಿಂದ ಲಾತ್ವಿಯಾದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಪ್ರತಿ 100 ಮಹಿಳೆಯರಿಗೆ ಕೇವಲ 85ರಿಂದ 87 ಪುರುಷರು ಮಾತ್ರ ಇದ್ದಾರೆ. ಇದರಿಂದಾಗಿ ಸಂಬಂಧದ ಸಮತೋಲನ ಸಂಪೂರ್ಣವಾಗಿ ಬದಲಾಗಿದೆ. ಇಲ್ಲಿನ ಹುಡುಗಿಯರು ಶಿಕ್ಷಣ, ಉದ್ಯೋಗಗಳು ಮತ್ತು ವೃತ್ತಿಜೀವನದ ಬಗ್ಗೆ ಹಾಗೂ ಸಂಬಂಧಗಳ ಬಗ್ಗೆ ಸಾಕಷ್ಟು ಮುಕ್ತ ಮನಸ್ಸಿನವರೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಅವರು ಹೆಚ್ಚಾಗಿ ಬಹು ಸಂಗಾತಿಗಳನ್ನು ಹೊಂದಿರುತ್ತಾರೆ.
ಲಾತ್ವಿಯಾದಲ್ಲಿ ನಾಲ್ಕು ಅಥವಾ ಐದು ಗೆಳತಿಯರನ್ನು ಹೊಂದಿರುವುದು ಸಾಮಾನ್ಯ. ಆದೊಂದು ಸಣ್ಣ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಅಲ್ಲಿನ ಸಮಾಜ ಅದನ್ನು ಕೀಳಾಗಿ ಕಾಣುವುದಿಲ್ಲ. ಲಾತ್ವಿಯಾದ ರಾಜಧಾನಿ ರಿಗಾವನ್ನು ಯುರೋಪಿನ ಅತ್ಯಂತ ಜನಪ್ರಿಯ ನೈಟ್‌ಲೈಫ್ ಮತ್ತು ಪಾರ್ಟಿ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರ ಬಾರ್‌ಗಳು, ಕ್ಲಬ್‌ಗಳು ಮತ್ತು ಕೆಫೆಗಳು ಯಾವಾಗಲೂ ಯುವಜನರಿಂದ ತುಂಬಿರುತ್ತವೆ.
ನೀವು ಅಲ್ಲಿಗೆ ಪ್ರವಾಸ ಹೋದರೆ, ಅಲ್ಲಿನ ಜನರು ಸಂಬಂಧಗಳ ಬಗ್ಗೆ ತುಂಬಾ ಮುಕ್ತ ಮನಸ್ಸಿನವರು ಮತ್ತು ಡೇಟಿಂಗ್ ಸಂಸ್ಕೃತಿ ಅಲ್ಲಿ ತುಂಬಾ ಪ್ರಬಲವಾಗಿದೆ ಎಂದು ನೀವು ಕಾಣಬಹುದು. ಲಾತ್ವಿಯಾದ ಈ ವಿಶಿಷ್ಟತೆಯು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಕೆಲವರು ಇದನ್ನು ರೋಮಾಂಚನಕಾರಿ ಎಂದು ಕರೆದರೆ, ಇನ್ನು ಹಲವರು ಇದನ್ನು ಸಾಂಸ್ಕೃತಿಕ ಮೌಲ್ಯಗಳ ಪತನ ಎಂದೂ ಪರಿಗಣಿಸುತ್ತಾರೆ.
ಲಾತ್ವಿಯಾ ತನ್ನ ದಟ್ಟವಾದ ಕಾಡುಗಳು ಮತ್ತು ಕಡಲತೀರಗಳಿಂದ ಚಂದ. ಹಾಡು ಕುಣಿತ ಫೇರ್‌ಗಳಂತಹ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳಿವೆ. ಆರ್ಟ್ ನೌವಿಯ ವಾಸ್ತುಶಿಲ್ಪ ಮತ್ತು ಯುನೆಸ್ಕೋ ಪಟ್ಟಿಗೆ ಸೇರಿದ ಹಳೆಯ ಪಟ್ಟಣ ಅದರ ರಾಜಧಾನಿ ರಿಗಾ. ಐಸ್ ಹಾಕಿ ಮತ್ತು ಬ್ಯಾಸ್ಕೆಟ್‌ಬಾಲ್‌ನಂತಹ ಕ್ರೀಡೆಗಳ ಬಗ್ಗೆ ಇಲ್ಲಿನ ಜನಕ್ಕೆ ತುಂಬಾ ಪ್ರೀತಿ. ಲಾತ್ವಿಯಾದ ಪ್ರಮುಖ ಆದಾಯದ ಮೂಲ ಸರ್ವಿಸ್ ಸೆಕ್ಟರ್. ಇದು ಅದರ ಜಿಡಿಪಿಯ 60% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಮಾಹಿತಿ ತಂತ್ರಜ್ಞಾನ, ಹಣಕಾಸು ಮತ್ತು ಸಾರಿಗೆ ಪ್ರಮುಖ ಉಪ ವಲಯಗಳು. ದೇಶ ಪ್ರಮುಖ ಸಾರಿಗೆ ಕೇಂದ್ರ. ಇದರ ಆರ್ಥಿಕತೆಗೆ ಎಕ್ಸ್‌ಪೋರ್ಟ್ ಮತ್ತೊಂದು ಗಮನಾರ್ಹ ಮೂಲ. ವಿಶೇಷವಾಗಿ ಮರ ಮತ್ತು ಮರದ ಉತ್ಪನ್ನಗಳು, ಯಂತ್ರೋಪಕರಣಗಳು ಮತ್ತು ಸಂಸ್ಕರಿತ ಆಹಾರ ರಫ್ತಾಗುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.