ಪ್ರಯಾಣ ಬೆಳೆಸುವುದು ಅನೇಕರಿಗೆ ಅನಿವಾರ್ಯ. ದೂರದ ಪ್ರಯಾಣ ಬೋರ್ ತರಿಸುತ್ತದೆ. ಆ ಸಮಯ ಸಂತೋಷವಾಗಿರಬೇಕು, ಸಮಯ ಸರಿದಿದ್ದು ತಿಳಿಯಬಾರದು ಎಂದ್ರೆ ಕೆಲ ಟ್ರಿಕ್ಸ್ ಪಾಲನೆ ಮಾಡ್ಬೇಕು.
ಅನೇಕ ಬಾರಿ ನಾವು ದೂರದ ಪ್ರಯಾಣ ಬೆಳೆಸಬೇಕಾಗುತ್ತದೆ. ಬಸ್ ನಲ್ಲಿ, ರೈಲಿನಲ್ಲಿ ಇಲ್ಲವೆ ವಿಮಾನದಲ್ಲಿ ದೀರ್ಘ ಪ್ರಯಾಣ ಬೆಳೆಸುವುದು ಎಲ್ಲರಿಗೂ ಬೇಸರ ತರುವ ವಿಷ್ಯ. ಒಂದೇ ಕಡೆ ತುಂಬಾ ಸಮಯ ಕುಳಿತುಕೊಳ್ಳುವುದು ಕಷ್ಟದ ಕೆಲಸ. ಹಾಗೆಯೇ ಸಮಯ ಹೋಗೋದಿಲ್ಲ. ಅನವಶ್ಯಕ ಚಿಂತೆ ನಮ್ಮನ್ನು ಕಾಡುತ್ತದೆ. ಪ್ರಯಾಣ ಮುಗಿದ್ರೆ ಸಾಕು, ಗಮ್ಯಸ್ಥಾನ ತಲುಪಿದ್ರೆ ಸಾಕು ಅನ್ನಿಸುತ್ತದೆ. ಯಾವಾಗ್ಲೂ ಪ್ರಯಾಣ ಸುಖಕರವಾಗಿರಬೇಕು ಹಾಗೆ ಬೋರ್ ಆಗ್ಬಾರದು ಎಂದಾದ್ರೆ ಪ್ರಯಾಣದ ವೇಳೆ ಕೆಲ ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದು ನಾವು ದೀರ್ಘ ಪ್ರಯಾಣ ಆರಾಮದಾಯಕವಾಗಿರಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ದೀರ್ಘ ಪ್ರಯಾಣ (Travel) ಸುಖಕರವಾಗಿರಲು ಹೀಗೆ ಮಾಡಿ:
ನಿಮ್ಮ ನೆಚ್ಚಿನ ಆಹಾರ (Food) ಬ್ಯಾಗ್ (Bag) ನಲ್ಲಿರಲಿ : ನೀವು ದೀರ್ಘಕಾಲ ಪ್ರಯಾಣಿಸುತ್ತಿದ್ದರೆ ನಿಮ್ಮ ನೆಚ್ಚಿನ ಆಹಾರವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುವುದು ಒಳ್ಳೆಯದು. ಏಕೆಂದರೆ ಕೆಲವೊಮ್ಮೆ ಹೊರಗಿನ ಆಹಾರವು ನಿಮಗೆ ಸರಿಹೊಂದುವುದಿಲ್ಲ ಮತ್ತು ಕೆಲವೊಮ್ಮೆ ಅದರ ರುಚಿ ನಿಮಗೆ ಇಷ್ಟವಾಗದೆ ಹೋಗಬಹುದು. ಇದರಿಂದಾಗಿ ನೀವು ಹಸಿವಿನಲ್ಲಿ ಇರಬೇಕಾಗುತ್ತದೆ. ನಿಮಗಿಷ್ಟದ ಆಹಾರವನ್ನು ನೀವು ಬ್ಯಾಗ್ ನಲ್ಲಿಟ್ಟುಕೊಂಡರೆ ಬೇಕಾದಾಗ ಸೇವನೆ ಮಾಡ್ಬಹುದು. ಬಿಸ್ಕತ್, ಬ್ರೆಡ್ ಹೀಗೆ ಹಾಳಾಗದ ಆಹಾರವನ್ನು ಜೊತೆಯಲ್ಲಿಟ್ಟುಕೊಂಡು ಹೋಗಬೇಕು. ಸಮಯಕ್ಕೆ ಸರಿಯಾಗಿ ನಾವು ತಲುಪಬೇಕಾದ ಜಾಗ ತಲುಪದೆ ಇರಬಹುದು. ದಾರಿ ಮಧ್ಯೆ ಅನೇಕ ಸಮಸ್ಯೆ ಕಾಡಬಹುದು. ಆ ಸಂದರ್ಭದಲ್ಲಿ ಆಹಾರ ಸಿಗುವುದು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಜೊತೆ ಸಣ್ಣ ಪುಟ್ಟ ಆಹಾರವಿದ್ರೆ ಒಳ್ಳೆಯದು.
ನಿಮ್ಮ ಸಂಗಾತಿಯಾಗಿ ಪುಸ್ತಕ (Book) ನಿಮ್ಮ ಜೊತೆಗಿರಲಿ : ಪುಸ್ತಕ ಒಂದೊಳ್ಳೆ ಸಂಗಾತಿ. ನಮಗೆ ಬೇಸರ ಬಂದಾಗ ಅದನ್ನು ಓದಬಹುದು. ಪ್ರಯಾಣದ ವೇಳೆ ಸಮಯ ವ್ಯರ್ಥವಾಗ್ತಿದೆ ಎನ್ನುವವರು ನೀವಾಗಿದ್ದರೆ ಹಾಗೆ ಆ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದ್ದರೆ ಪುಸ್ತಕ ತೆಗೆದುಕೊಂಡು ಹೋಗಲು ಮರೆಯಬೇಡಿ. ನಿಮಗಿಷ್ಟವಾದ ಪುಸ್ತಕ ನಿಮ್ಮ ಜೊತೆಗಿದ್ದರೆ ಸಮಯ (Time) ಸರಿದಿದ್ದು ತಿಳಿಯುವುದಿಲ್ಲ. ಪುಸ್ತಕ ಓದುವ ಹವ್ಯಾಸ ಇಲ್ಲ ಎನ್ನುವವರು ಅವರಿಗಿಷ್ಟವಾಗುವ ಹವ್ಯಾಸದ ವಸ್ತುಗಳನ್ನು ತೆಗೆದುಕೊಂಡು ಹೋಗ್ಬಹುದು. ಹಾಡು ಕೇಳುವ ಹವ್ಯಾಸವಿದ್ದರೆ ಹೆಡ್ ಫೋನ್ ಮರೆಯದೆ ತೆಗೆದುಕೊಂಡು ಹೋಗಿ.
Travel Tips : ಗಿಜಿಗಿಜಿ ಜೀವನಕ್ಕೆ ಶಾಂತಿ ಬೇಕೆಂದ್ರೆ ಇಲ್ಲಿಗೆ ಹೋಗಿ
ಮೊದಲೇ ಫೋನ್ ನಲ್ಲಿ ಸಿನಿಮಾ ಡೌನ್ಲೋಡ್ ಮಾಡಲು ಮರೆಯಬೇಡಿ : ನೀವು ಹೋಗುವ ಕಡೆಯಲ್ಲೆಲ್ಲ ನೆಟ್ವರ್ಕ್ ಬರುತ್ತೆ ಎನ್ನಲು ಸಾಧ್ಯವಿಲ್ಲ. ಹಾಗೆ ಆ ಸಮಯದಲ್ಲಿ ಸಿನಿಮಾ ಡೌನ್ಲೋಡ್ ಮಾಡ್ತಾ ಕುಳಿತುಕೊಳ್ಳುವುದು ಒಳ್ಳೆಯ ಪ್ಲಾನ್ ಅಲ್ಲ. ದೀರ್ಘ ಪ್ರಯಾಣವಿದೆ ಎಂದಾದ್ರೆ ನೀವು ಮೊದಲೇ ವೀಕ್ಷಣೆ ಮಾಡ್ಬೇಕು ಎಂದುಕೊಂಡಿರುವ ಸಿನಿಮಾಗಳನ್ನು ಡೌನ್ಲೋಡ್ ಮಾಡಿರಿ. ಸಿನಿಮಾ ಮಾತ್ರ ಆಗ್ಬೇಕೆಂದೇನೂ ಇಲ್ಲ, ನಿಮಗೆ ಆಸಕ್ತಿಯಿರುವ ವಿಡಿಯೋವನ್ನು ನೀವು ಡೌನ್ಲೋಡ್ ಮಾಡಬಹುದು. ಅದನ್ನು ಪ್ರಯಾಣದ ವೇಳೆ ವೀಕ್ಷಿಸಬಹುದು. ಮೊಬೈಲ್ ನಲ್ಲಿ ಗೇಮ್ ಆಡುವ ಹವ್ಯಾಸವಿದ್ದರೆ ನೀವು ಅದನ್ನು ಕೂಡ ಡೌನ್ಲೋಡ್ ಮಾಡಿಟ್ಟುಕೊಳ್ಳಬಹುದು.
ಇಲ್ಲಿ ಒಂದೇ ರಾತ್ರಿಗಾಗಿ ಮದ್ವೆ ನಡೆಯುತ್ತೆ… ಮರುದಿನ ಪತಿ -ಪತ್ನಿ ಬೇರೆಯಾಗ್ತಾರೆ
ಪ್ರಯಾಣದಲ್ಲಿ ನಿಮ್ಮ ಜೊತೆಗಿರಲಿ ಸ್ನೇಹಿತರು ಅಥವಾ ಕುಟುಂಬದ ಸದಸ್ಯರು : ಒಂಟಿ ಪ್ರಯಾಣಕ್ಕಿಂತ ಜೊತೆಯಲ್ಲಿ ಮತ್ತೊಬ್ಬರಿದ್ದರೆ ಸಮಯ ಸರಿದಿದ್ದು ತಿಳಿಯುವುದಿಲ್ಲ. ನಿಮಗೆ ಸಾಧ್ಯ ಎಂದಾದ್ರೆ ನಿಮ್ಮ ಜೊತೆ ನಿಮ್ಮ ಸ್ನೇಹಿತರು ಅಥವಾ ಕುಟುಂಬಸ್ಥರನ್ನು ನೀವು ಕರೆದುಕೊಂಡು ಹೋಗಬಹುದು. ಇದ್ರಿಂದ ನಿಮ್ಮ ಬೇಸರ ಕಡಿಮೆಯಾಗುತ್ತದೆ. ಪ್ರಯಾಣದ ವೇಳೆ ಅವರ ಜೊತೆ ನೀವು ಒಂದಿಷ್ಟು ಹರಟೆ ಹೊಡೆಯಬಹುದು.
ನಿದ್ರೆಗೆ ವ್ಯವಸ್ಥೆ : ಕೆಲವರು ಪ್ರಯಾಣ ಶುರು ಮಾಡ್ತಿದ್ದಂತೆ ನಿದ್ರೆಗೆ ಜಾರುತ್ತಾರೆ. ನೀವು ಬಸ್ ಅಥವಾ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ನಿದ್ರೆಗೆ ಬೇಕಾದ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಿ.