ಇನ್ಮುಂದೆ ಕ್ಲೀನ್ ಆಗಿರುತ್ತೆ ರೈಲಿನ ಬೆಡ್ ಶೀಟ್, ಮಹತ್ವದ ನಿರ್ಧಾರ ಕೈಗೊಂಡ ಇಲಾಖೆ

By Roopa Hegde  |  First Published Jan 8, 2025, 2:44 PM IST

ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಎಸಿ ಕೋಚ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸ್ವಚ್ಛತೆಗೆ ಆದ್ಯತೆ ನೀಡಿದೆ.  ಬೆಡ್ ರೋಲ್ ನೈರ್ಮಲ್ಯದ ಕೆಲಸ ಶುರುವಾಗಿದೆ. 
 


ರೈಲು ಪ್ರಯಾಣಿಕ (Train passenger)ರಿಗೆ ಮತ್ತೊಂದು ಖುಷಿ ಸುದ್ದಿ ಇದೆ. ಇನ್ಮುಂದೆ ಎಸಿ ಕೋಚ್ (AC coach) ನಲ್ಲಿರುವ ಬೆಡ್ ಶೀಟ್ ಕ್ಲೀನ್ ಇರೋದಿಲ್ಲ ಎನ್ನುವ ಕಾರಣಕ್ಕೆ ನಿಮ್ಮ ಜೊತೆ ಬೆಡ್ ಶೀಟ್ ತೆಗೆದುಕೊಂಡು ಹೋಗ್ಬೇಕಾಗಿಲ್ಲ. ರೈಲ್ವೆ ಇಲಾಖೆ (Railway Department) ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳಲು ಮಹತ್ವದ ಹೆಜ್ಜೆ ಇಟ್ಟಿದೆ. ರೈಲು ಪ್ರಯಾಣಿಕರು, ಎಸಿ ಕೋಚ್‌ಗಳಲ್ಲಿ ಕ್ಲೀನ್ ಬೆಡ್‌ರೋಲ್‌ (Bedroll)ಗಳನ್ನು ಪಡೆಯಲಿದ್ದಾರೆ. ಈ ಹಿಂದೆ ರೈಲಿನ ಎಸಿ ಕೋಚ್‌ಗಳಲ್ಲಿ ಸಿಗುವ ಬೆಡ್ ರೋಲ್ ಗಳನ್ನು ತಿಂಗಳಿಗೊಮ್ಮೆ ತೊಳೆಯಲಾಗ್ತಾ ಇತ್ತು. ಆದ್ರೀಗ 15 ದಿನಗಳಿಗೊಮ್ಮೆ ಬೆಡ್ ರೋಲ್ ತೊಳೆಯಲು ರೈಲ್ವೆ ಇಲಾಖೆ ಮುಂದಾಗಿದೆ. 

ಬೆಡ್ ಶೀಟ್ ಮತ್ತು ದಿಂಬಿನ ಕವರ್ ಗಳ ಸ್ವಚ್ಛತೆಗೆ ವಿಶೇಷ ಗಮನ  ನೀಡಲು ಇಲಾಖೆ ನಿರ್ಧರಿಸಿದೆ. ಹೊದಿಕೆಗಳು ಕೊಳಕಾಗಿರುತ್ವೆ, ಅದನ್ನು ಬಳಕೆ ಮಾಡೋದು ಕಷ್ಟ ಎಂದು ಪ್ರಯಾಣಿಕರು ಅನೇಕ ಬಾರಿ ದೂರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಇಲಾಖೆ ಈಗ 15 ದಿನಕ್ಕೊಮ್ಮೆ ಬೆಡ್ ಶೀಟ್ ಕ್ಲೀನ್ ಮಾಡುವ ತೀರ್ಮಾನ ಕೈಗೊಂಡಿದೆ.  ರೈಲ್ವೆ ಸಚಿವ ವೈಷ್ಣವ್, ಲೋಕಸಭೆಯಲ್ಲಿ ರೈಲ್ವೆಯ ಎಸಿ ಕೋಚ್ ನಲ್ಲಿ ಬಳಸುವ ಬೆಡ್ ರೋಲ್ ಗಳನ್ನು ತಿಂಗಳಿಗೊಮ್ಮೆ ತೊಳೆಯುತ್ತಾರೆ ಎಂಬ ಮಾಹಿತಿ ನೀಡಿದ್ದರು.  ಇದು ರೈಲ್ವೆ ಇಲಾಖೆಯ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರಲು ಕಾರಣವಾಗಿತ್ತು.  ಒಂದು ತಿಂಗಳಿಗೊಮ್ಮೆ ಬೆಡ್ ಶೀಟ್ ಕ್ಲೀನ್ ಮಾಡೋದಾದ್ರೆ ಎಷ್ಟೊಂದು ಜನ ಇದನ್ನು ಬಳಸ್ತಾರೆ, ಬೆಡ್ ರೋಲ್ ಕ್ಲೀನ್ ಇರಲು ಹೇಗೆ ಸಾಧ್ಯ ಎಂದು ಪ್ರಯಾಣಿಕರು ಪ್ರಶ್ನಿಸಿದ್ದರು. ಇದ್ರಿಂದ ಪ್ರಯಾಣಿಕರ ಆರೋಗ್ಯ ಹದಗೆಡುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಟೀಕೆಗಳ ನಂತ್ರ ರೈಲ್ವೆ ಸಚಿವಾಲಯ ದೃಢ ನಿರ್ಧಾರ ತೆಗೆದುಕೊಂಡಿದೆ. 

Tap to resize

Latest Videos

ಎಂಎಸ್‌ಐಎಲ್‌ ಟೂರ್‌ ಪ್ಯಾಕೇಜ್‌; ಕೇವಲ ₹20,000ಕ್ಕೆ 18 ದಿನಗಳ ಉತ್ತರ ಭಾರತ ಪ್ರವಾಸ

15 ದಿನಗಳಿಗೊಮ್ಮೆ ಬೆಡ್ ಶೀಟ್, ದಿಂಬಿನ ಕವರ್ ಸ್ವಚ್ಛಗೊಳಿಸಲು ಮುಂದಾಗಿರುವ ರೈಲ್ವೆ ಇಲಾಖೆ, ಗುವಾಹಟಿಯ ರೈಲ್ವೆ ಲಾಂಡ್ರಿಯಲ್ಲಿ ಕೆಲಸ ಶುರು ಮಾಡಿದೆ. ಇಲಾಖೆ ಹೇಳಿದಂತೆ ಮಾಡಿದ್ರೆ ಪ್ರಯಾಣಿಕರು  ಸ್ವಚ್ಛ ಹೊದಿಕೆಯನ್ನು ಪಡೆಯಲಿದ್ದಾರೆ. ಆರಾಮದಾಯಕವಾಗಿ ಪ್ರಯಾಣ ಬೆಳೆಸಲು ಅವರಿಗೆ ಸಹಾಯವಾಗಲಿದೆ.  ಭಾರತೀಯ ರೈಲ್ವೆಯ ಎಸಿ ಕೋಚ್ ಪ್ರಯಾಣಿಕರಿಗೆ ಬೆಡ್ ರೋಲ್ ಸೌಲಭ್ಯ ಒದಗಿಸಲಾಗುತ್ತದೆ. ಇದ್ರಲ್ಲಿ ಎರಡು ಹೊದಿಕೆ, ಒಂದು ರಗ್, ದಿಂಬು ಮತ್ತು ಸಣ್ಣ ಟವೆಲ್ ನೀಡಲಾಗುತ್ತದೆ. ಇದಕ್ಕೆ ರೈಲ್ವೆ ಹೆಚ್ಚುವರಿ ಹಣ ಪಡೆಯುವುದಿಲ್ಲ.  ಆದ್ರೆ ಗರೀಬ್ ರಥ ರೈಲಿನಲ್ಲಿ ಬೆಡ್ ರೋಲ್‌ಗೆ ಹೆಚ್ಚುವರಿ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ. 

ಊಬರ್ ಡ್ರೈವರ್‌ಗೆ ಮಕ್ಕಳಾಡುವ ನಕಲಿ 500 ರೂ. ಕೊಟ್ಟ ಪ್ರವಾಸಿಗ; ಮುಂದಾಗಿದ್ದೇನು ನೋಡಿ..

ಗುವಾಹಟಿಯ ರೈಲ್ವೆ ಲಾಂಡ್ರಿಯಲ್ಲಿ ರಗ್ ಹಾಗೂ ಬೆಡ್ ಶೀಟ್ ಗಳನ್ನು ಅತ್ಯಂತ ವೇಗವಾಗಿ ಸ್ವಚ್ಛಗೊಳಿಸಲಾಗುತ್ತದೆ. ಒಂದು ಹೊದಿಕೆ ಸ್ವಚ್ಛಗೊಳಿಸಲು 45 ನಿಮಿಷ ಬೇಕು.  ಹೊದಿಕೆಯನ್ನು ಮೊದಲು 80 ರಿಂದ 90 ಡಿಗ್ರಿ ತಾಪಮಾನದಲ್ಲಿ ತೊಳೆಯಲಾಗುತ್ತದೆ. ನಂತ್ರ ಅದನ್ನು ಒಣಗಿಸಲಾಗುತ್ತದೆ. ಒಂದು ಬೆಡ್ ರೋಲ್ ಸ್ವಚ್ಛಗೊಳಿಸಲು ಸುಮಾರು 23.58 ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಪ್ರತಿ ದಿನ ಬೆಡ್ ರೋಲ್ ಕ್ಲೀನ್ ಮಾಡಲಾಗ್ತಿದೆ ಎಂದು ಗುವಾಹಟಿ ಕೋಚಿಂಗ್ ಡಿಪೋ ಮ್ಯಾನೇಜರ್ ಸುದರ್ಶನ್ ಭಾರದ್ವಾಜ್ ಹೇಳಿದ್ದಾರೆ. ಒಂದು ಬೆಡ್ ಶೀಟ್ ಕ್ಲೀನ್ ಮಾಡಲು  ಸುಮಾರು 45 ರಿಂದ 60 ನಿಮಿಷ ಅಗತ್ಯವಿದೆ ಎಂದು ಭಾರದ್ವಾಜ್ ಮಾಹಿತಿ ನೀಡಿದ್ದಾರೆ. ಈ ಕೆಲಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳಲಾಗಿದೆ. ಶೇಕಡಾ 60ರಷ್ಟು ಮಹಿಳೆಯರು ಕೆಲಸ ಮಾಡ್ತಿದ್ದು, ಮಹಿಳಾ ಸಬಲೀಕರಣಕ್ಕೆ ಇದು ನೆರವಾಗಿದೆ. 

click me!