
ಈಗಿನ ದಿನಗಳಲ್ಲಿ ಪ್ರೈವಸಿ (Privacy) ಅನ್ನೋದು ದೊಡ್ಡ ಚಿಂತೆಯ ವಿಷ್ಯವಾಗಿದೆ. ಪ್ರವಾಸಕ್ಕೆ ಹೋಗುವ, ಹೊಟೇಲ್ ನಲ್ಲಿ ಉಳಿದುಕೊಳ್ಳುವ ಜನರ ಸಂಖ್ಯೆ ಹೆಚ್ಚಾದಂತೆ, ಪ್ರೈವಸಿ ಮಾಯವಾಗ್ತಿದೆ. ಜನರು ಇದನ್ನು ದುರುಪಯೋಗಪಡಿಸಿಕೊಳ್ತಿದ್ದಾರೆ. ಬೇರೆ ಬೇರೆ ಊರುಗಳಿಂದ ಬರುವ ಪ್ರವಾಸಿಗರ ಪ್ರೈವಸಿ ಹಾಳು ಮಾಡಿ, ಅವರ ಪ್ರೈವೆಟ್ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಹಣ ವಸೂಲಿ ಮಾಡಲಾಗ್ತಿದೆ. ಹೊಟೇಲ್ ರೂಮುಗಳಲ್ಲಿ ಎಲ್ಲೆಲ್ಲಿ ಕ್ಯಾಮರಾ ಅಡಗಿರುತ್ತೆ ಹೇಳೋಕೆ ಸಾಧ್ಯವಿಲ್ಲ. ಕ್ಯಾಮರಾ ಎಷ್ಟು ಚಿಕ್ಕದಿರುತ್ತೆ ಅಂದ್ರೆ ಅದನ್ನು ಪತ್ತೆ ಹಚ್ಚೋದು ಕಷ್ಟ. ಹೊಟೇಲ್ ಗೆ ಹೋದಾಗ ನೀವು ಮೊದಲು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಮಾರುಕಟ್ಟೆಯಲ್ಲಿ ಹಿಡನ್ ಕ್ಯಾಮರಾ (Hidden Camera) ಪತ್ತೆ ಮಾಡಲು ಸಾಕಷ್ಟು ಉಪಕರಣಗಳಿವೆ. ಆದ್ರೆ ಪ್ರತಿಯೊಬ್ಬರಿಗೂ ಅದನ್ನು ಖರೀದಿ ಮಾಡೋದು ಕಷ್ಟ. ನಿಮ್ಮ ಕೈನಲ್ಲಿರುವ ಸ್ಮಾರ್ಟ್ ಫೋನ್ (smart phone) ಮೂಲಕವೇ ನೀವು ಹೊಟೇಲ್ ನಲ್ಲಿರುವ ಹಿಡನ್ ಕ್ಯಾಮರಾ ಪತ್ತೆ ಮಾಡ್ಬಹುದು. ಹೊಟೇಲ್ ನ ಸ್ಮೋಕ್ ಡಿಟೆಕ್ಟರ್, ಏರ್ ಪ್ಯೂರಿಫೈರ್, ವಾಲ್ ಕ್ಲಾಕ್, ಫೋಟೋ ಪ್ರೇಮ್, ಕನ್ನಡಿಯಂತಹ ಜಾಗದಲ್ಲಿ ಹಿಡನ್ ಕ್ಯಾಮರಾ ಇರೋ ಅಪಾಯ ಇದೆ. ಮೊದಲು ಅನುಮಾನ ಇರುವ ಜಾಗದಲ್ಲಿ ಫೋನ್ ಫ್ಲಾಶ್ ಲೈಟ್ ಬಿಡಿ. ಫೋನ್ನಿಂದ ಹೊರಸೂಸುವ ಬಿಳಿ ಬೆಳಕು ಕ್ಯಾಮೆರಾವನ್ನು ಗುರುತಿಸಲು ಸಹಾಯ ಮಾಡುತ್ತದೆ. ಲೆನ್ಸ್ ಬೆಳಕನ್ನು ಇದು ಪ್ರತಿಬಿಂಬಿಸುತ್ತದೆ. ಏನಾದ್ರೂ ಅನುಮಾನ ಬಂದ್ರೆ ಹತ್ತಿರದಿಂದ ನೋಡಿ. ನೀವು ಹೊಟೇಲ್ ರೂಮ್ ಲೈಟ್ ಬಂದ್ ಮಾಡಿ. ಸ್ಪೈ ಕ್ಯಾಮರಾಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಕಡುಗೆಂಪು (IR)ಲೈಟ್ ಬಳಕೆ ಮಾಡಲಾಗುತ್ತದೆ. ಇದು ಕತ್ತಲೆಯಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಫ್ಲಾಶ್ ಲೈಟ್ ಗೆ ಕಾಣಿಸುತ್ತದೆ. ನೀವು ಲೈಟ್ ಬಂದ್ ಮಾಡಿ, ಫ್ಲಾಶ್ ಲೈಟ್ ಗಳನ್ನು ಸೂಕ್ಷ್ಮ ಪ್ರದೇಶದಲ್ಲಿ ಬಿಟ್ಟಾಗ ಸಣ್ಣ ಪಿಂಕ್ ಅಥವಾ ನೇರಳೆ ಬೆಳಕು ಕಾಣಿಸುತ್ತದೆ. ಹಾಗೆ ಕಾಣಿಸಿದಲ್ಲಿ ಅಲ್ಲಿ ಹಿಡನ್ ಕ್ಯಾಮರಾ ಇದೆ ಎಂದರ್ಥ.
ಕೇವಲ 10 ಗಂಟೆ ಕ್ಯಾಬ್ ಓಡಿಸಿ ಗಳಿಸಿದ್ದು ಇಷ್ಟೊಂದಾ? ಆಸ್ಟ್ರೇಲಿಯಾದಲ್ಲಿ ಭಾರತೀಯ ಚಾಲಕನ ಶಾಕಿಂಗ್ ಸಂಪಾದನೆ
ಕೋಣೆಯಲ್ಲಿ ಗುಪ್ತ ಕ್ಯಾಮೆರಾಗಳನ್ನು ಪತ್ತೆಹಚ್ಚಲು ನಿಮಗೆ ಸಹಾಯ ಮಾಡುವ ಹಲವಾರು ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ಗಳು ಆಪ್ ಸ್ಟೋರ್ನಲ್ಲಿ ಲಭ್ಯವಿದೆ. ಅದನ್ನು ನೀವು ಡೌನ್ಲೋಡ್ ಮಾಡ್ಕೊಂಡು ಬಳಕೆ ಮಾಡಬಹುದು. ಡಿಟೆಕ್ಟಿಫೈ, ಹಿಡನ್ ಐಆರ್ ಕ್ಯಾಮೆರಾ ಡಿಟೆಕ್ಟರ್, ಹಿಡನ್ ಸ್ಪೈ ಕ್ಯಾಮೆರಾ ಫೈಂಡರ್ ಪ್ರೊ ಮತ್ತು ಇತರ ಅಪ್ಲಿಕೇಶನ್ಗಳ ಲಾಭ ಪಡೆದುಕೊಳ್ಳಿ. ಈ ಅಪ್ಲಿಕೇಶನ್ಗಳು ಕ್ಯಾಮೆರಾಗಳು ಮತ್ತು ಅವುಗಳ ಇನ್ಫ್ರಾರೆಡ್ ಲೈಟ್ ಅನ್ನು ಹೆಚ್ಚು ಎಫೆಕ್ವಿವ್ ಮಾಡುತ್ತೆ. ಹಿಡನ್ ಕ್ಯಾಮರಾ ಬಗ್ಗೆ ಇವು ಸೂಚನೆ ನೀಡುತ್ತವೆ.
ರಾಜಸ್ಥಾನದ ಈ ಜನಾಂಗದಲ್ಲಿ ಮದುವೆಗೂ ಮುನ್ನ Live in Relationship ಕಾಮನ್, ಮಗು ಆದ್ರೇನೆ ಮದುವೆ!
ವೈಫೈ ಚೆಕ್ ಮಾಡಿ
ಈಗಿನ ಸ್ಪೈ ಕ್ಯಾಮರಾಗಳು ವೈಫೈ ಕನೆಕ್ಟ್ ಆಗಿರುತ್ತವೆ. ಲೈವ್ ವಿಡಿಯೋ ರೆಕಾರ್ಡ್ ಮಾಡಲು ಕೆಲ ಡಿವೈಸ್ ಗಳು ವೈಫೈ ಕನೆಕ್ಷನ್ ಕೇಳುತ್ತವೆ. ನೀವು ಹೊಟೇಲ್ ವೈಫೈ ಚೆಕ್ ಮಾಡ್ಬಹುದು. ಹೊಟೇಲ್ ವೈಫೈ ಜೊತೆ ಯಾವೆಲ್ಲ ಡಿವೈಸ್ ಕನೆಕ್ಟ್ ಆಗಿದೆ ಅಂತ ಚೆಕ್ ಮಾಡಿ. ಐಪಿ ಕ್ಯಾಮರಾ ಅಥವಾ ಕ್ಯಾಮ್ (Cam) ಹೆಸರಿನ ಯಾವುದೇ ಡಿವೈಸ್ ಕನೆಕ್ಟ್ ಆಗಿದ್ದರೆ ನೀವು ಎಚ್ಚೆತ್ತುಕೊಳ್ಳಿ. ಹೊಟೇಲ್ ನಲ್ಲಿ ಸ್ಪೈ ಕ್ಯಾಮರಾ ಹಾಕಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.