
ಪ್ರತಿ ದಿನ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಕಡಿಮೆ ದರ, ಆರಾಮದಾಯಕ ಜರ್ನಿ ಅನ್ನೋ ಕಾರಣಕ್ಕೆ ರೈಲು ಪ್ರಯಾಣ ಹಲವರ ಆದ್ಯತೆಯಾಗಿರುತ್ತದೆ. ಮೊದಲೇ ಟಿಕೆಟ್ ಬುಕ್ ಮಾಡಿಟ್ಟುಕೊಂಡರಾಯಿತು. ಯಾವುದೇ ಗೊಂದಲ, ಗಡಿಬಿಡಿಯಿಲ್ಲದೆ ರೈಲಿನಲ್ಲಿ ಸುಲವಾಗಿ ಪ್ರಯಾಣಿಸಬಹುದು. ಅದರಲ್ಲೂ ಹಬ್ಬದ ದಿನಗಳಲ್ಲಂತೂ ಬಸ್ಸಿನ ಟಿಕೆಟ್ ದರ ಗಗನಕ್ಕೇರುವ ಕಾರಣ ಬಹುತೇಕರು ರೈಲನ್ನೇ ಪ್ರಿಫರ್ ಮಾಡುತ್ತಾರೆ. ಸಾಲು ಸಾಲು ಹಬ್ಬಗಳು ಶುರುವಾಗಿರುವ ಕಾರಣ ಜನರು ಆಗಾಗ ಊರಿಗೆ ತೆರಳಬೇಕಾಗಿದೆ. ಬಸ್ ಫೇರ್ ಜಾಸ್ತಿ, ಟ್ರೈನ್‌ನಲ್ಲಿ ಹೋಗೋಣ ಅಂದ್ರೆ ಹಬ್ಬಗಳಿದ್ದಾಗ ರೈಲಿನಲ್ಲೂ ಟಿಕೆಟ್ ಬೇಗನೇ ಬುಕ್ ಆಗಿಬಿಡುತ್ತದೆ.
ಹಬ್ಬದ ಸೀಸನ್ ಸಮೀಪಿಸುತ್ತಿದ್ದಂತೆ, ದೃಢೀಕರಿಸಿದ ರೈಲು ಟಿಕೆಟ್‌ಗಳನ್ನು (Confirmed train ticket) ಪಡೆಯುವುದು ಸವಾಲಾಗಿ ಪರಿಣಮಿಸುತ್ತದೆ. ಆಗ ಪ್ರಯಾಣಿಕರಿಗೆ (Passengers) ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವುದು ಏಕೈಕ ಆಯ್ಕೆಯಾಗಿದೆ. ಆದರೂ, ತತ್ಕಾಲ್ ಟಿಕೆಟ್‌ಗಳೂ ಕೆಲವೊಮ್ಮೆ ಕನ್‌ಫರ್ಮ್ ಆಗುವುದಿಲ್ಲ. ಆಸನಗಳು ವೇಗವಾಗಿ ಭರ್ತಿಯಾಗುತ್ತವೆ. ನೀವು ಎಂದಾದರೂ ಈ ಪರಿಸ್ಥಿತಿಯನ್ನು ಎದುರಿಸಿದರೆ, ಚಿಂತಿಸಬೇಡಿ. ದೃಢೀಕರಿಸಿದ ತತ್ಕಾಲ್ ಟಿಕೆಟ್‌ಗಳನ್ನು ಸುಲಭವಾಗಿ ಪಡೆಯಲು ಕೆಲವೊಂದು ಸಿಂಪಲ್ ಟ್ರಿಕ್ಸ್ ಇಲ್ಲಿದೆ.
ರೈಲಿನಲ್ಲಿ RAC ಸೀಟು ಅಂದ್ರೇನು? ಫುಲ್ ಪೇಮೆಂಟ್ ಮಾಡಿದ್ರೂ ಇಬ್ರು ಸೀಟ್ ಶೇರ್ ಮಾಡ್ಕೋಬೇಕು ಯಾಕೆ?
ತತ್ಕಾಲ್ ಟಿಕೆಟ್ ಬುಕಿಂಗ್ಗಾಗಿ ಈ ಸರಳ ಟ್ರಿಕ್ ಬಳಸಿ:
ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ಸಮಸ್ಯೆಯೆಂದರೆ ಇಂಟರ್‌ನೆಟ್ ಸ್ಲೋ, ಬಫರಿಂಗ್ ಸಮಸ್ಯೆ. ಹೆಚ್ಚು ಜನರು ಒಂದೇ ಬಾರಿ ಸೈಟ್‌ನಲ್ಲಿ ಟಿಕೆಟ್ ಕಾಯ್ದರಿಸಲು ಯತ್ನಿಸುವ ಕಾರಣ ಹೀಗೆಲ್ಲಾ ಆಗುತ್ತದೆ. ನೀವು ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡುವ ಹೊತ್ತಿಗೆ ಎಲ್ಲಾ ಆಸನಗಳನ್ನು ಬುಕ್ ಆಗಿರುತ್ತವೆ. ಈ ಸಮಸ್ಯೆಯನ್ನು (Problem) ಪರಿಹರಿಸಲು ಮತ್ತು ಬುಕಿಂಗ್ ಸಮಯದಲ್ಲಿ ಅಮೂಲ್ಯ ಸಮಯವನ್ನು (Time) ಉಳಿಸಲು, ನೀವು IRCTC ತತ್ಕಾಲ್ ಆಟೊಮೇಷನ್ ಟೂಲ್ ಅನ್ನು ಬಳಸಬಹುದು. ಇದರಿಂದ ನೀವು ಸುಲಭವಾಗಿ ಕನ್ಫರ್ಮ್‌ಡ್ ಟಿಕೆಟ್ ಪಡೆಯಲು ಸಾಧ್ಯವಾಗುತ್ತದೆ.
IRCTC ತತ್ಕಾಲ್ ಆಟೋಮೇಷನ್ ಟೂಲ್ ಎಂದರೇನು?
IRCTC ತತ್ಕಾಲ್ ಆಟೋಮೇಷನ್ ಟೂಲ್, ಟಿಕೆಟ್ ಬುಕ್ಕಿಂಗ್ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ಉಚಿತ ಆನ್‌ಲೈನ್ ಸಾಧನವಾಗಿದೆ. ಹೆಸರು, ವಯಸ್ಸು ಮತ್ತು ಪ್ರಯಾಣದ ದಿನಾಂಕವನ್ನು (Travel date)ಪ್ರಯಾಣಿಕರ ವಿವರಗಳನ್ನು ತ್ವರಿತವಾಗಿ ಲೋಡ್ ಮಾಡಲು ನೆರವಾಗುವ ಮೂಲಕ ಇದು ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೆಚ್ಚು ಶೀಘ್ರವಾಗಿ ತತ್ಕಾಲ್ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ.
ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ದರ ಶೇಕಡಾ 25 ರಷ್ಟು ಕಡಿತ, ಇಲ್ಲಿದೆ ಹೊಸ ಬೆಲೆ ಪಟ್ಟಿ!
ತತ್ಕಾಲ್ ಆಟೋಮೇಷನ್‌ನಿಂದ ರೈಲು ಟಿಕೆಟ್ ತ್ವರಿತವಾಗಿ ಬುಕ್ ಮಾಡುವುದು ಹೇಗೆ?
1.Chrome ಬ್ರೌಸರ್‌ನಲ್ಲಿ IRCTC ತತ್ಕಾಲ್ ಆಟೊಮೇಷನ್ ಟೂಲ್‌ನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ
2.IRCTC ಖಾತೆಗೆ ಲಾಗ್ ಇನ್ ಆಗಿ.
3. ತತ್ಕಾಲ್ ಬುಕಿಂಗ್‌ನ್ನು ಪ್ರಾರಂಭಿಸುವ ಮೊದಲು, ಪ್ರಯಾಣಿಕರ ವಿವರ, ಪ್ರಯಾಣದ ದಿನಾಂಕ ಮತ್ತು ಪಾವತಿಯ ರೀತಿಯ ಮಾಹಿತಿಯನ್ನು ಭರ್ತಿ ಮಾಡಿಟ್ಟುಕೊಳ್ಳಿ
4. ಬುಕ್ಕಿಂಗ್ ಪ್ರಕ್ರಿಯೆಯಲ್ಲಿ, 'ಡೇಟಾವನ್ನು ಲೋಡ್ ಮಾಡಿ' ಎಂಬುದನ್ನು ಕ್ಲಿಕ್ ಮಾಡಿ
5. ಪ್ರಯಾಣಿಕರ ಮಾಹಿತಿ ಸೆಕೆಂಡುಗಳಲ್ಲಿ ಲೋಡ್ ಆಗುತ್ತದೆ
6. ತಕ್ಷಣ ಪಾವತಿಯನ್ನು ಮಾಡಲು ಮುಂದುವರಿಯಿರಿ. ಈ ಮೂಲಕ ನಿಮ್ಮ ತತ್ಕಾಲ್ ಟಿಕೆಟ್ ಸಲೀಸಾಗಿ ಬುಕ್ ಆಗುತ್ತದೆ.
ಈ ಟ್ರಿಕ್‌ನ್ನು ಅನುಸರಿಸುವ ಮೂಲಕ ನೀವು ಕೊನೆಯ ಕ್ಷಣದಲ್ಲಿ ಇಂಟರ್‌ನೆಟ್ ಸಮಸ್ಯೆ, ಎರರ್, ಬಫರಿಂಗ್ ಸಮಸ್ಯೆ. ಮಾಹಿತಿಯನ್ನು ದಾಖಲಿಸುವಷ್ಟರಲ್ಲಿ ಟೈಮ್ ಔಟ್ ಆಗುವುದು. ಹೀಗೆ ಹಲವು ಸಮಸ್ಯೆಗಳಿಂದ ತತ್ಕಾಲ್‌ನಲ್ಲಿ ಟಿಕೆಟ್ ಬುಕ್ ಆಗದೇ ಇರುವುದನ್ನು ತಪ್ಪಿಸಬಹುದು. ದೃಢೀಕರಿಸಿದ ತತ್ಕಾಲ್ ಟಿಕೆಟ್‌ನ್ನು ಪಡೆದುಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.